HOME » NEWS » Sports » CRICKET INDIA VS AUSTRALIA A GROUP OF FANS REMOVED FROM SCG STANDS AFTER RACIALLY ABUSING INDIA PLAYERS VB

India vs Australia: ಸಿಡ್ನಿಯಲ್ಲಿ ಬುಮ್ರಾ, ಸಿರಾಜ್​ಗೆ ಜನಾಂಗೀಯ ನಿಂದನೆ: ದೂರು ದಾಖಲಿಸಿದ ಟೀಂ ಇಂಡಿಯಾ

ಎಸ್‌ಸಿಜಿ ಮೈದಾನದ ಸ್ಟಾೃಂಡ್‌ನಿಂದ ಕುಡುಕ ಪ್ರೇಕ್ಷಕ, ಸಿರಾಜ್ ಅವರನ್ನು ಮಂಗ ಎಂದು ನಿಂದಿಸಿದ್ದಾನೆ. ಭಾರತದ ಒಟ್ಟಾರೆ ನಾಲ್ವರು ಆಟಗಾರರು ನಿಂದನೆಗೆ ಗುರಿಯಾಗಿದ್ದಾರೆ ಎಂದೂ ಹೇಳಲಾಗಿದೆ.

news18-kannada
Updated:January 10, 2021, 10:58 AM IST
India vs Australia: ಸಿಡ್ನಿಯಲ್ಲಿ ಬುಮ್ರಾ, ಸಿರಾಜ್​ಗೆ ಜನಾಂಗೀಯ ನಿಂದನೆ: ದೂರು ದಾಖಲಿಸಿದ ಟೀಂ ಇಂಡಿಯಾ
Mohammed Siraj and Jasprit Bumrah
  • Share this:
ಸಿಡ್ನಿ ಕ್ರಿಕೆಟ್ ಗ್ರೌಂಡ್​ನಲ್ಲಿ ನಡೆಯುತ್ತಿರುವ ಭಾರತ-ಆಸ್ಟ್ರೇಲಿಯಾ ನಡುವಣ ಮೂರನೇ ಟೆಸ್ಟ್​ ಪಂದ್ಯದಲ್ಲಿ ಜನಾಂಗೀಯ ನಿಂದನೆಯ ಆರೋಪ ಕೇಳಿ ಬಂದಿದೆ. ಪಂದ್ಯದ 3ನೇ ದಿನದಾದ ಆಸ್ಟ್ರೇಲಿಯಾ ತಂಡದ 2ನೇ ಇನ್ನಿಂಗ್ಸ್ ಬ್ಯಾಟಿಂಗ್​ ​ವೇಳೆ ಘಟನೆ ನಡೆದಿದೆ. ಸಿಡ್ನಿ ಮೈದಾನದಲ್ಲಿದ್ದ ಅಭಿಮಾನಿಗಳು ಟೀಂ​ ಇಂಡಿಯಾ ಬೌಲರ್​​ಗಳಾದ ಮೊಹಮ್ಮದ್ ಸಿರಾಹ್ ​ಮತ್ತು ಜಸ್​ಪ್ರಿತ್​ ಬೂಮ್ರಾ ಅವರನ್ನ ನಿಂದಿಸಿದ್ದಾರೆ. ಬಿಸಿಸಿಐ ಈ ಬಗ್ಗೆ ದೂರು ದಾಖಲಿಸಿದ ಬೆನ್ನಲ್ಲೆ ಐಸಿಸಿ ತನಿಖೆ ನಡೆಸಲು ಮುಂದಾಗಿದೆ ಎಂದು ತಿಳಿದುಬಂದಿದೆ.

ಘಟನೆ ವರದಿಯಾದ ತಕ್ಷಣ, ಐಸಿಸಿ ಕಾರ್ಯಪ್ರವೃತ್ತವಾಗಿದ್ದು, ಆರೋಪಿಗಳನ್ನು ಕಂಡು ಹಿಡಿಯಲು ಪ್ರಯತ್ನಿಸುತ್ತಿದೆ ಎಂದು ಆಸಿಸ್ ಪತ್ರಿಕೆ 'ಸಿಡ್ನಿ ಮಾರ್ನಿಗ್ ಹೆರಾಲ್ಡ್' ವರದಿ ಮಾಡಿದೆ. ಸಿಡ್ನಿ ಕ್ರಿಕೆಟ್ ಮೈದಾನದ ಪಿಚ್ ನಿರ್ವಾಹಕರು, ನ್ಯೂ ಸೌತ್ ವೇಲ್ಸ್ ಅಧಿಕಾರಿಗಳು ಹಾಗೂ ಐಸಿಸಿ, ಘಟನೆಗೆ ಕಾರಣವಾದ ಜನರನ್ನು ಪತ್ತೆಹಚ್ಚಲು ಕೆಲಸ ಮಾಡುತ್ತಿವೆ. ಬೌಂಡರಿ ಬಳಿ ನಿಂತಿದ್ದ ಓರ್ವ ಸಿಬ್ಬಂದಿ ಸಹ ನಿಂದನೆ ಬಗ್ಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

India vs Australia: ಆಸ್ಟ್ರೇಲಿಯಾ 312 ರನ್​ಗೆ ಡಿಕ್ಲೇರ್: ಭಾರತಕ್ಕೆ ಗೆಲ್ಲಲು 407 ರನ್ಸ್ ಟಾರ್ಗೆಟ್

ಎಸ್‌ಸಿಜಿ ಮೈದಾನದ ಸ್ಟಾೃಂಡ್‌ನಿಂದ ಕುಡುಕ ಪ್ರೇಕ್ಷಕ, ಸಿರಾಜ್ ಅವರನ್ನು 'ಮಂಗ' ಎಂದು ನಿಂದಿಸಿದ್ದಾನೆ. ಭಾರತದ ಒಟ್ಟಾರೆ ನಾಲ್ವರು ಆಟಗಾರರು ನಿಂದನೆಗೆ ಗುರಿಯಾಗಿದ್ದಾರೆ ಎಂದೂ ಹೇಳಲಾಗಿದೆ. ಈ ಘಟನೆ 2007-08ರ ಆಸೀಸ್ ಪ್ರವಾಸದ ಮಂಕಿಗೇಟ್ ಪ್ರಕರಣವನ್ನು ನೆನಪಿಸಿದೆ. ಆಗ ಸಿಡ್ನಿ ಟೆಸ್ಟ್‌ನಲ್ಲೇ ಆಯಂಡ್ರ್ಯೋ ಸೈಮಂಡ್ಸ್‌ರನ್ನು ಹರ್ಭಜನ್ ಸಿಂಗ್ 'ಮಂಕಿ' ಎಂದು ನಿಂದಿಸಿದ್ದರು ಎಂಬ ಆರೋಪ ಎದುರಾಗಿತ್ತು. ಬಳಿಕ ಬಜ್ಜಿ ಆರೋಪಮುಕ್ತಗೊಂಡಿದ್ದರು.

ಪ್ರೇಕ್ಷಕರ ಗ್ಯಾಲರಿಯಿಂದ ಕೆಲವರು ಜನಾಂಗೀಯ ನಿಂದನೆ ಮಾಡುತ್ತಿರುವುದನ್ನು ಬೌಲರ್‌ಗಳು ನಾಯಕ ಅಜಿಂಕ್ಯ ರಹಾನೆ ಗಮನಕ್ಕೆ ತಂದರು. ಬಳಿಕ ಭಾರತ ತಂಡ ಈ ರೀತಿಯ ವರ್ತನೆ ಮರುಕಳಿಸಬಾರದು ಎಂದು ಅಧಿಕೃತವಾಗಿ ದೂರು ದಾಖಲಿಸಿತು ಎಂದು ಬೆಳವಣಿಗೆಗೆ ಹತ್ತಿರದ ಮೂಲಗಳು ಸುದ್ದಿ ಸಂಸ್ಥೆಗೆ ತಿಳಿಸಿವೆ. ಟೀಂ​ ಇಂಡಿಯಾ ಈ ಬಗ್ಗೆ ದೂರು ನೀಡಿದ ಬೆನ್ನಲ್ಲೇ ಪಂದ್ಯದ ರೆಫರಿ ಡೇವಿಡ್​ ಬೂನ್​ ಕೂಡ ಭಾರತದ ಡ್ರೆಸ್ಸಿಂಗ್​ ರೂಮ್​ಗೆ ತೆರಳಿ ಚರ್ಚಿಸಿದ್ದಾರೆ.

India vs Australia: ಭಾರತಕ್ಕೆ ಶಾಕ್ ಮೇಲೆ ಶಾಕ್: ಮತ್ತೊಬ್ಬ ಆಟಗಾರ ಸರಣಿಯಿಂದ ಔಟ್

"ಕಳೆದ ಎರಡು ದಿನಗಳಿಂದ ಭಾರತೀಯ ಜೋಡಿ (ಬುಮ್ರಾ-ಸಿರಾಜ್​)ಯನ್ನು ಪಂದ್ಯ ವೀಕ್ಷಣೆಗೆ ಬಂದಿರುವ ಸಾರ್ವಜನಿಕರು ಜನಾಂಗೀಯವಾಗಿ ನಿಂದಿಸುತ್ತಿದ್ದಾರೆ ಎಂದು ಬಿಸಿಸಿಐ ಆಧಿಕಾರಿಗಳು ಆರೋಪಿಸಿದ್ದಾರೆಂದು" ಆಸ್ಟ್ರೇಲಿಯನ್​ ಪತ್ರಿಕೆ 'ದ ಡೈಲಿ ಟೆಲಿಗ್ರಾಫ್​' ವರದಿ ಮಾಡಿದೆ. ಅಲ್ಲದೆ "ಇದು ಅಸಹನೀಯ ವರ್ತನೆ. ಈ ಕಾಲದಲ್ಲೂ ಜನಾಂಗೀಯಯ ನಿಂದನೆ ಮಾಡುತ್ತಿರುವುದನ್ನು ನಂಬಲು ಸಾಧ್ಯವಾಗದೇ ಇರುವುದು" ಎಂದು ಮೈಕ್‌ ಹಸ್ಸಿ ಹೇಳಿದ್ದಾರೆ.
Published by: Vinay Bhat
First published: January 10, 2021, 10:58 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories