news18-kannada Updated:January 16, 2021, 8:10 AM IST
India vs Australia
ಗಬ್ಬಾ (ಜ. 16): ಇಲ್ಲಿನ ಗಬ್ಬಾ ಕ್ರೀಡಾಂಗಣದಲ್ಲಿ ಸಾಗುತ್ತಿರುವ ಬಾರ್ಡರ್ – ಗವಾಸ್ಕರ್ ಟ್ರೋಫಿಯ ಭಾರತ ವಿರುದ್ಧದ ನಾಲ್ಕನೇ ಅಂತಿಮ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತನ್ನ ಮೊದಲ ಇನ್ನಿಂಗ್ಸ್ನಲ್ಲಿ 369 ರನ್ಗೆ ಆಲೌಟ್ ಆಗಿದೆ. ಮಾರ್ನಸ್ ಲಾಬುಶೇನ್ ಅವರ ಶತಕ ಹಾಗೂ ನಾಯಕ ಟಿಮ್ ಪೈನ್ ಅವರ ಅರ್ಧಶತಕದ ನೆರವಿನಿಂದ ಕಾಂಗರೂ ಪಡೆ ಉತ್ತಮ ಮೊತ್ತ ಸಂಪಾದಿಸಿದೆ. ಈ ನಡುವೆ ಭಾರತದ ಅನಾನುಭವಿ ಬೌಲರ್ಗಳು ಭರ್ಜರಿ ಪ್ರದರ್ಶನ ತೋರಿದ್ದಾರೆ. ಅದರಲ್ಲೂ ಪದಾರ್ಪಣೆ ಪಂದ್ಯದಲ್ಲಿ ಟಿ. ನಟರಾಜನ್ ಹಾಗೂ ವಾಷಿಂಗ್ಟನ್ ಸುಂದರ್ ತಲಾ 3 ವಿಕೆಟ್ ಕಿತ್ತು ಮಿಂಚಿದ್ದಾರೆ.
ನಿನ್ನೆ ಶುಕ್ರವಾರ ಮೊದಲ ದಿನದಾಟದ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 274 ರನ್ ಕಲೆಹಾಕಿದ್ದ ಆಸ್ಟ್ರೇಲಿಯಾ ಪರ ನಾಯಕ ಟಿಮ್ ಪೈನ್(38) ಹಾಗೂ ಕಾಮೆರನ್ ಗ್ರೀನ್(28) ಇಂದಿಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದರು. ಅದರಂತೆ ಬ್ಯಾಟಿಂಗ್ ಮುಂದುವರೆಸಿದ ಈ ಜೋಡಿ ಉತ್ತಮ ಜೊತೆಯಾಟ ಆಡಿತು. 98 ರನ್ಗಳ ಕಾಣಿಕೆ ನೀಡಿದರು.
IPL 2021: CSK ತಂಡದಿಂದ ಹೊರಬೀಳಲಿದ್ದಾರೆ ಈ 5 ಆಟಗಾರರು..!
104 ಎಸೆತಗಳಲ್ಲಿ 50 ರನ್ ಗಳಿಸಿ ಪೈನ್ ಔಟ್ ಆದರೆ, ಗ್ರೀನ್ 107 ಎಸೆತಗಳಲ್ಲಿ 47 ರನ್ಗೆ ನಿರ್ಗಮಿಸಿದರು. ಬಳಿಕ ಬಂದ ಬ್ಯಾಟ್ಸ್ಮನ್ಗಳು ಹೆಚ್ಚುಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ. ಪ್ಯಾಟ್ ಕಮಿನ್ಸ್ 2 ರನ್ಗೆ ಠಾಕೂರ್ ಬೌಲಿಂಗ್ನಲ್ಲಿ ಔಟ್ ಆದರೆ, ನೇಥನ್ ಲ್ಯಾನ್ 24 ಹಾಗೂ ಜೋಶ್ ಹ್ಯಾಜ್ಲೆವುಡ್ 11 ರನ್ಗೆ ಔಟ್ ಆಗುವ ಮೂಲಕ ಆಸ್ಟ್ರೇಲಿಯಾ 115.2 ಓವರ್ನಲ್ಲಿ 369 ರನ್ಗೆ ಸರ್ವಪತನ ಕಂಡಿತು.
Virat Kohli: ಕಿಂಗ್ ಕೊಹ್ಲಿಯನ್ನು ಗುಣಗಾನ ಮಾಡಿದ RCB ತಂಡದ ಆಟಗಾರ..!
ಮಿಚೆಲ್ ಸ್ಟಾರ್ಕ್ 20 ರನ್ ಗಳಿಸಿ ಅಜೇಯರಾಗಿ ಉಳಿದರು. ಭಾರತ ಪರ ಟಿ. ನಟರಾಜನ್, ಶಾರ್ದೂಲ್ ಠಾಕೂರ್ ಹಾಗೂ ವಾಷಿಂಗ್ಟನ್ ಸುಂದರ್ ತಲಾ 3 ವಿಕೆಟ್ ಕಿತ್ತರೆ, ಮೊಹಮ್ಮದ್ ಸಿರಾಜ್ ತಲಾ 1 ವಿಕೆಟ್ ಪಡೆದರು.
Published by:
Vinay Bhat
First published:
January 16, 2021, 8:08 AM IST