HOME » NEWS » Sports » CRICKET INDIA VS AUSTRALIA 4TH TEST AT BRISBANE DAY 1 AUSTRALIA LOST 2 WICKETS EARLY VB

India vs Australia: ಆಸ್ಟ್ರೇಲಿಯಾದ 2 ಪ್ರಮುಖ ವಿಕೆಟ್ ಪತನ: ಭಾರತ ಪರ ನಟರಾಜನ್, ಸುಂದರ್ ಪದಾರ್ಪಣೆ

ಭಾರತ ಪರ ಇಬ್ಬರು ಆಟಗಾರರು ಟೆಸ್ಟ್​ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದಾರೆ. ಯಾರ್ಕರ್ ಕಿಂಗ್ ಟಿ. ನಟರಾಜನ್ ಹಾಗೂ ವಾಷಿಂಗ್ಟನ್ ಸುಂದರ್ ಚೊಚ್ಚಲ ಟೆಸ್ಟ್​ ಪಂದ್ಯವನ್ನು ಆಡುತ್ತಿದ್ದಾರೆ.

news18-kannada
Updated:January 15, 2021, 8:34 AM IST
India vs Australia: ಆಸ್ಟ್ರೇಲಿಯಾದ 2 ಪ್ರಮುಖ ವಿಕೆಟ್ ಪತನ: ಭಾರತ ಪರ ನಟರಾಜನ್, ಸುಂದರ್ ಪದಾರ್ಪಣೆ
India vs Australia
  • Share this:
ಬ್ರಿಸ್ಬೇನ್ (ಜ. 15): ಇಲ್ಲಿನ ದಿ ಗಬ್ಬಾ ಕ್ರಿಕೆಟ್ ಗ್ರೌಂಡ್​ನಲ್ಲಿ ಆರಂಭವಾಗಿರುವ ಭಾರತ ವಿರುದ್ಧದ ಅಂತಿಮ ನಾಲ್ಕನೇ ಟೆಸ್ಟ್​ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಆರಂಭದಲ್ಲೇ ಪ್ರಮುಖ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಮೊಹಮ್ಮದ್ ಸಿರಾಜ್ ಬೌಲಿಂಗ್​ನ ಮೊದಲ ಓವರ್​ನಲ್ಲೆ ಡೇವಿಡ್ ವಾರ್ನರ್(1) ಔಟ್ ಆದರೆ, ಮಾರ್ಕಸ್ ಹ್ಯಾರಿಸ್ 5 ರನ್ ಗಳಿಸಿ ಶಾರ್ದೂಲ್ ಠಾಕೂರ್​ಗೆ ವಿಕೆಟ್ ಒಪ್ಪಿಸಿದರು. ಸದ್ಯ ಕ್ರೀಸ್​ನಲ್ಲಿ ಮಾರ್ನಸ್ ಲಾಬುಶೇನ್ ಹಾಗೂ ಸ್ಟೀವ್ ಸ್ಮಿತ್ ಇದ್ದು ಎಚ್ಚರಿಕೆಯಿಂದ ಬ್ಯಾಟ್ ಬೀಸುತ್ತಿದ್ದಾರೆ.

ನಾಲ್ಕನೇ ಟೆಸ್ಟ್​ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಟಿಮ್ ಪೈನ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಭಾರತ ಪರ ಇಬ್ಬರು ಆಟಗಾರರು ಟೆಸ್ಟ್​ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದಾರೆ. ಯಾರ್ಕರ್ ಕಿಂಗ್ ಟಿ. ನಟರಾಜನ್ ಹಾಗೂ ವಾಷಿಂಗ್ಟನ್ ಸುಂದರ್ ಚೊಚ್ಚಲ ಟೆಸ್ಟ್​ ಪಂದ್ಯವನ್ನು ಆಡುತ್ತಿದ್ದಾರೆ. ಇನ್ನೂ ಶಾರ್ದೂಲ್ ಠಾಕೂರ್ ಹಾಗೂ ಮಯಾಂಕ್ ಅಗರ್ವಾಲ್ ಕೂಡ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

Sophie Devine: 9 ಸೂಪರ್ ಸಿಕ್ಸ್, 7 ಭರ್ಜರಿ ಬೌಂಡರಿ: ಸೋಫಿ ಸಿಡಿಲಬ್ಬರಕ್ಕೆ ಟಿ20 ದಾಖಲೆ ಉಡೀಸ್..!




ಭಾರತ ತಂಡ: ರೋಹಿತ್ ಶರ್ಮಾ, ಶುಭ್ಮನ್ ಗಿಲ್, ಚೇತೇಶ್ವರ್ ಪೂಜಾರ, ಅಜಿಂಕ್ಯಾ ರಹಾನೆ (ನಾಯಕ), ಮಯಾಂಕ್ ಅಗರ್ವಾಲ್, ರಿಷಭ್ ಪಂತ್ (ವಿಕೆಟ್-ಕೀಪರ್), ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ನವ್​ದೀಪ್ ಸೈನಿ, ಮೊಹಮ್ಮದ್ ಸಿರಾಜ್, ಟಿ. ನಟರಾಜನ್.

ಆಸ್ಟ್ರೇಲಿಯಾ ತಂಡ: ಡೇವಿಡ್‌ ವಾರ್ನರ್‌, ಮಾರ್ಕಸ್‌ ಹ್ಯಾರಿಸ್, ಮಾರ್ನಸ್‌ ಲಾಬುಶೇನ್, ಸ್ಟೀವ್ ಸ್ಮಿತ್, ಮ್ಯಾಥ್ಯೂ ವೇಡ್‌, ಕ್ಯಾಮರೊನ್ ಗ್ರೀನ್, ಟಿಮ್ ಪೈನ್(ನಾಯಕ- ವಿಕೆಟ್ ಕೀಪರ್), ಪ್ಯಾಟ್‌ ಕಮಿನ್ಸ್‌, ಮಿಚೆಲ್‌ ಸ್ಟಾರ್ಕ್‌, ಜೋಶ್‌ ಹೇಝಲ್‌ವುಡ್‌, ನಾಥನ್ ಲಿಯಾನ್.

ಈಗಾಗಲೇ ಸರಣಿ 1-1 ಸಮಬಲ ಸ್ಥಿತಿಯಲ್ಲಿದ್ದು, ಭಾರತ ಈ 4ನೇ ಟೆಸ್ಟ್‌ ಪಂದ್ಯವನ್ನು ಡ್ರಾ ಮಾಡಿಕೊಂಡರೂ ಬಾರ್ಡರ್‌-ಗವಾಸ್ಕರ್‌ ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಳ್ಳಲಿದೆ. ಆದರೆ ಈ ಟ್ರೋಫಿ ಆಸ್ಟ್ರೇಲಿಯಕ್ಕೆ ಸಿಗಬೇಕಾದರೆ ಅದು ಗೆಲ್ಲುವುದು ಅನಿವಾರ್ಯ.

IPL 2021: ಮುಂಬೈ ಇಂಡಿಯನ್ಸ್ ಈ ಮೂವರನ್ನು ಕೈ ಬಿಡುವುದು ಬಹುತೇಕ ಖಚಿತ..!

ಸಿಡ್ನಿಯಲ್ಲಿ ಆಸೀಸ್‌ ಪಡೆಗೆ ಗೆಲ್ಲುವ ಉತ್ತಮ ಅವಕಾಶ ವೊಂದಿತ್ತು. ಆದರೆ, ಭಾರತ ಶಿಸ್ತು ಹಾಗೂ ಕೆಚ್ಚೆದೆಯ ಆಟದ ಮೂಲಕ ಪಂದ್ಯವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಹನುಮಾ ವಿಹಾರಿ ಹಾಗೂ ಆರ್. ಅಶ್ವಿನ್ ತಂಡಕ್ಕೆ ನೆರವಾದರು. ಹೀಗಾಗಿ ಉಭಯ ತಂಡಗಳಿಗೆ ಈ ಪಂದ್ಯ ಮಹತ್ವದ್ದಾಗಿದೆ.
Published by: Vinay Bhat
First published: January 15, 2021, 8:34 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories