HOME » NEWS » Sports » CRICKET INDIA VS AUSTRALIA 4TH TEST AT BRISBANE DAY 1 AUS 154 3 AT TEA VB

India vs Australia: ಲಾಬುಶೇನ್ ಅರ್ಧಶತಕ: ಟೀ ವಿರಾಮದ ವೇಳಗೆ ಆಸ್ಟ್ರೇಲಿಯಾ 154-3

ಭಾರತ ಪರ ಇಬ್ಬರು ಆಟಗಾರರು ಟೆಸ್ಟ್​ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದಾರೆ. ಯಾರ್ಕರ್ ಕಿಂಗ್ ಟಿ. ನಟರಾಜನ್ ಹಾಗೂ ವಾಷಿಂಗ್ಟನ್ ಸುಂದರ್ ಚೊಚ್ಚಲ ಟೆಸ್ಟ್​ ಪಂದ್ಯವನ್ನು ಆಡುತ್ತಿದ್ದಾರೆ.

news18-kannada
Updated:January 15, 2021, 10:24 AM IST
India vs Australia: ಲಾಬುಶೇನ್ ಅರ್ಧಶತಕ: ಟೀ ವಿರಾಮದ ವೇಳಗೆ ಆಸ್ಟ್ರೇಲಿಯಾ 154-3
Marnus Labuschagne
  • Share this:
ಬ್ರಿಸ್ಬೇನ್ (ಜ. 15): ಇಲ್ಲಿನ ದಿ ಗಬ್ಬಾ ಕ್ರಿಕೆಟ್ ಗ್ರೌಂಡ್​ನಲ್ಲಿ ಆರಂಭವಾಗಿರುವ ಭಾರತ ವಿರುದ್ಧದ ಅಂತಿಮ ನಾಲ್ಕನೇ ಟೆಸ್ಟ್​ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಆರಂಭದಲ್ಲೇ ಪ್ರಮುಖ ವಿಕೆಟ್ ಕಳೆದುಕೊಂಡಿತಾದರು ನಂತರದಲ್ಲಿ ಚೇತರಿಕೆ ಕಂಡಿದೆ. ಮಾರ್ನಸ್ ಲಾಬುಶೇನ್ ಅರ್ಧಶತಕ ಸಿಡಿಸಿ ತಂಡಕ್ಕೆ ಆಸರೆಯಾಗಿದ್ದು, ಟೀ ವಿರಾಮದ ವೇಳೆಗೆ ಆಸ್ಟ್ರೇಲಿಯಾ 3 ವಿಕೆಟ್ ನಷ್ಟಕ್ಕೆ 154 ರನ್ ಬಾರಿಸಿದೆ. ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಟಿಮ್ ಪೈನ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು...

ಮೊದಲ ಇನ್ನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ಮೊಹಮ್ಮದ್ ಸಿರಾಜ್ ಬೌಲಿಂಗ್​ನ ಮೊದಲ ಓವರ್​ನಲ್ಲೆ ಡೇವಿಡ್ ವಾರ್ನರ್(1) ಔಟ್ ಆದರೆ, ಮಾರ್ಕಸ್ ಹ್ಯಾರಿಸ್ 5 ರನ್ ಗಳಿಸಿ ಶಾರ್ದೂಲ್ ಠಾಕೂರ್​ಗೆ ವಿಕೆಟ್ ಒಪ್ಪಿಸಿದರು.

ಬಳಿಕ ಒಂದಾದ ಮಾರ್ನಸ್ ಲಾಬುಶೇನ್ ಹಾಗೂ ಸ್ಟೀವ್ ಸ್ಮಿತ್ ಎಚ್ಚರಿಕೆಯಿಂದ ಬ್ಯಾಟ್ ಬೀಸಿದರು. ಕ್ರೀಸ್ ಕಚ್ಚಿ ನಿಂತ ಈ ಜೋಡಿ ಅರ್ಧಶತಕದ ಜೊತೆಯಾಟ ಆಡಿತು. ಕಳೆದ ಪಂದ್ಯದಲ್ಲಿ ಭರ್ಜರಿ ಆಟ ಪ್ರದರ್ಶಿಸಿದ್ದ ಸ್ಮಿತ್ ಈ ಬಾರಿ ಕೂಡ ಅದೇ ಲಯದಲ್ಲಿ ಬ್ಯಾಟ್ ಬೀಸುತ್ತಿದ್ದರು. ಆದರೆ, ಇವರ ಆಟಕ್ಕೆ ಬ್ರೇಕ್ ಹಾಕಿದ್ದು ವಾಷಿಂಗ್ಟನ್ ಸುಂದರ್.

ಶ್ರೀಶಾಂತ್ ಗುರಾಯಿಸಿದ್ದಕ್ಕೆ ಮುಟ್ಟಿ ನೋಡುವಂತಹ ಉತ್ತರ ಕೊಟ್ಟ ಯಶಸ್ವಿ ಜೈಸ್ವಾಲ್: ಇಲ್ಲಿದೆ ವಿಡಿಯೋ

ಹೌದು, ತನ್ನ ಚೊಚ್ಚಲ ಟೆಸ್ಟ್​ ಪಂದ್ಯದಲ್ಲೇ ವಿಶ್ವ ಶ್ರೇಷ್ಠ ಬ್ಯಾಟ್ಸ್​ಮನ್​ ಸ್ಟೀವ್ ಸ್ಮಿತ್ ಅವರನ್ನು ಔಟ್ ಮಾಡಿ ಡ್ರೀಮ್ ಡೆಬ್ಯೂ ಮಾಡಿದರು. ಸುಂದರ್ ಸ್ಪಿನ್ ಮೋಡಿಗೆ 77 ಎಸೆತಗಳಲ್ಲಿ 36 ರನ್ ಗಳಿಸಿದ್ದ ಸ್ಮಿತ್ ಪೆವಿಲಿನ್ ಸೇರಬೇಕಾಯಿತು.

ನಂತರ ಮಾರ್ನಸ್ ಹಾಗೂ ಮ್ಯಾಥ್ಯೂ ವೇಡ್ ತಂಡಕ್ಕೆ ಆಸರೆಯಾಗಿ ನಿಂತಿದ್ದಾರೆ.

Sophie Devine: 9 ಸೂಪರ್ ಸಿಕ್ಸ್, 7 ಭರ್ಜರಿ ಬೌಂಡರಿ: ಸೋಫಿ ಸಿಡಿಲಬ್ಬರಕ್ಕೆ ಟಿ20 ದಾಖಲೆ ಉಡೀಸ್..!

ಭಾರತ ಪರ ಇಬ್ಬರು ಆಟಗಾರರು ಟೆಸ್ಟ್​ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದಾರೆ. ಯಾರ್ಕರ್ ಕಿಂಗ್ ಟಿ. ನಟರಾಜನ್ ಹಾಗೂ ವಾಷಿಂಗ್ಟನ್ ಸುಂದರ್ ಚೊಚ್ಚಲ ಟೆಸ್ಟ್​ ಪಂದ್ಯವನ್ನು ಆಡುತ್ತಿದ್ದಾರೆ. ಇನ್ನೂ ಶಾರ್ದೂಲ್ ಠಾಕೂರ್ ಹಾಗೂ ಮಯಾಂಕ್ ಅಗರ್ವಾಲ್ ಕೂಡ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

ಭಾರತ ತಂಡ: ರೋಹಿತ್ ಶರ್ಮಾ, ಶುಭ್ಮನ್ ಗಿಲ್, ಚೇತೇಶ್ವರ್ ಪೂಜಾರ, ಅಜಿಂಕ್ಯಾ ರಹಾನೆ (ನಾಯಕ), ಮಯಾಂಕ್ ಅಗರ್ವಾಲ್, ರಿಷಭ್ ಪಂತ್ (ವಿಕೆಟ್-ಕೀಪರ್), ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ನವ್​ದೀಪ್ ಸೈನಿ, ಮೊಹಮ್ಮದ್ ಸಿರಾಜ್, ಟಿ. ನಟರಾಜನ್.

ಆಸ್ಟ್ರೇಲಿಯಾ ತಂಡ: ಡೇವಿಡ್‌ ವಾರ್ನರ್‌, ಮಾರ್ಕಸ್‌ ಹ್ಯಾರಿಸ್, ಮಾರ್ನಸ್‌ ಲಾಬುಶೇನ್, ಸ್ಟೀವ್ ಸ್ಮಿತ್, ಮ್ಯಾಥ್ಯೂ ವೇಡ್‌, ಕ್ಯಾಮರೊನ್ ಗ್ರೀನ್, ಟಿಮ್ ಪೈನ್(ನಾಯಕ- ವಿಕೆಟ್ ಕೀಪರ್), ಪ್ಯಾಟ್‌ ಕಮಿನ್ಸ್‌, ಮಿಚೆಲ್‌ ಸ್ಟಾರ್ಕ್‌, ಜೋಶ್‌ ಹೇಝಲ್‌ವುಡ್‌, ನಾಥನ್ ಲಿಯಾನ್.

ಈಗಾಗಲೇ ಸರಣಿ 1-1 ಸಮಬಲ ಸ್ಥಿತಿಯಲ್ಲಿದ್ದು, ಭಾರತ ಈ 4ನೇ ಟೆಸ್ಟ್‌ ಪಂದ್ಯವನ್ನು ಡ್ರಾ ಮಾಡಿಕೊಂಡರೂ ಬಾರ್ಡರ್‌-ಗವಾಸ್ಕರ್‌ ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಳ್ಳಲಿದೆ. ಆದರೆ ಈ ಟ್ರೋಫಿ ಆಸ್ಟ್ರೇಲಿಯಕ್ಕೆ ಸಿಗಬೇಕಾದರೆ ಅದು ಗೆಲ್ಲುವುದು ಅನಿವಾರ್ಯ.

IPL 2021: ಮುಂಬೈ ಇಂಡಿಯನ್ಸ್ ಈ ಮೂವರನ್ನು ಕೈ ಬಿಡುವುದು ಬಹುತೇಕ ಖಚಿತ..!

ಸಿಡ್ನಿಯಲ್ಲಿ ಆಸೀಸ್‌ ಪಡೆಗೆ ಗೆಲ್ಲುವ ಉತ್ತಮ ಅವಕಾಶ ವೊಂದಿತ್ತು. ಆದರೆ, ಭಾರತ ಶಿಸ್ತು ಹಾಗೂ ಕೆಚ್ಚೆದೆಯ ಆಟದ ಮೂಲಕ ಪಂದ್ಯವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಹನುಮಾ ವಿಹಾರಿ ಹಾಗೂ ಆರ್. ಅಶ್ವಿನ್ ತಂಡಕ್ಕೆ ನೆರವಾದರು. ಹೀಗಾಗಿ ಉಭಯ ತಂಡಗಳಿಗೆ ಈ ಪಂದ್ಯ ಮಹತ್ವದ್ದಾಗಿದೆ.
Published by: Vinay Bhat
First published: January 15, 2021, 10:24 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories