India vs Australia: ಸಿಡ್ನಿ ಟೆಸ್ಟ್​ನಲ್ಲಿ ಹೊಸ ದಾಖಲೆ ಬರೆಯುವ ವಿಶ್ವಾಸದಲ್ಲಿ ಮೂವರು ಆಟಗಾರರು

ಆಸ್ಟ್ರೇಲಿಯಾ ಸ್ಪಿನ್ನರ್ ನಾಥನ್ ಲಿಯಾನ್ ಕೂಡ 3ನೇ ಟೆಸ್ಟ್​ನಲ್ಲಿ ಹೊಸ ಇತಿಹಾಸ ಬರೆಯುವ ಸನಿಹದಲ್ಲಿದ್ದಾರೆ. ಟೆಸ್ಟ್​ ಕ್ರಿಕೆಟ್​ನಲ್ಲಿ 394 ವಿಕೆಟ್ ಉರುಳಿಸಿರುವ ಲಿಯಾನ್ 400 ವಿಕೆಟ್ ಸಾಧಕರ ಪಟ್ಟಿಗೆ ಎಂಟ್ರಿ ಕೊಡಲು ಕೇವಲ 6 ವಿಕೆಟ್​ಗಳ ಅವಶ್ಯಕತೆಯಿದೆ.

india vs australia

india vs australia

  • Share this:
    ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೂರನೇ ಪಂದ್ಯವು ಗುರುವಾರದಿಂದ ಆರಂಭವಾಗಲಿದೆ. ಈಗಾಗಲೇ ಉಭಯ ತಂಡಗಳು 1-1 ರ ಸಮಬಲ ಸಾಧಿಸಿದ್ದು, ಹೀಗಾಗಿ ಮೂರನೇ ಪಂದ್ಯವು ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ. ಅದರಲ್ಲೂ ಟೀಮ್ ಇಂಡಿಯಾಗೆ ರೋಹಿತ್ ಶರ್ಮಾ ಅವರ ಆಗಮನ ಬಲ ಹೆಚ್ಚಿಸಿದರೆ, ಅತ್ತ ಆಸ್ಟ್ರೇಲಿಯಾ ಬಳಗಕ್ಕೆ ಡೇವಿಡ್ ವಾರ್ನರ್ ಎಂಟ್ರಿ ಕೊಟ್ಟಿದ್ದಾರೆ. ಹೀಗಾಗಿ ಸಿಡ್ನಿ ಮೈದಾನದಲ್ಲಿ ರೋಚಕ ಹೋರಾಟವನ್ನು ನಿರೀಕ್ಷಿಸಬಹುದು.

    ಇನ್ನು ಈ ಪಂದ್ಯದ ಮೂಲಕ ಮೂವರು ಮಹತ್ವದ ದಾಖಲೆ ಬರೆಯುವ ನಿರೀಕ್ಷೆಯಿದೆ. ಟೀಮ್ ಇಂಡಿಯಾ ಆರಂಭಿಕರಾಗಿ ಕಣಕ್ಕಿಳಿಯಲಿರುವ ಆಸ್ಟ್ರೇಲಿಯಾ ವಿರುದ್ಧ ಒಂದು ಸಿಕ್ಸ್ ಸಿಡಿಸಿದರೆ ಅಪರೂಪದ ದಾಖಲೆಯೊಂದು ನಿರ್ಮಾಣವಾಗಲಿದೆ. ಏಕೆಂದರೆ ಹಿಟ್​ಮ್ಯಾನ್ ಇದುವರೆಗೆ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ (ಮೂರು ಮಾದರಿ ಕ್ರಿಕೆಟ್​ನಲ್ಲಿ) ಒಟ್ಟು 99 ಸಿಕ್ಸರ್ ಸಿಡಿಸಿದ್ದಾರೆ. ಸಿಡ್ನಿ ಮೈದಾನದಲ್ಲಿ ಆಸೀಸ್​ ವಿರುದ್ಧ 65ನೇ ಪಂದ್ಯದಲ್ಲಿ ಒಂದು ಸಿಕ್ಸ್ ಬಾರಿಸಿದರೆ ತಂಡವೊಂದರ ವಿರುದ್ಧ 100 ಸಿಕ್ಸರ್ ಬಾರಿಸಿದ ಅಪರೂಪದ ದಾಖಲೆ ಹಿಟ್​ಮ್ಯಾನ್ ಪಾಲಾಗಲಿದೆ.

    ಹಾಗೆಯೇ 3ನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಪರ ಡೇವಿಡ್ ವಾರ್ನರ್ ಕಣಕ್ಕಿಳಿಯುವುದು ಬಹುತೇಕ ಖಚಿತ. ಅದರಲ್ಲೂ ಸಿಡ್ನಿ ಮೈದಾನದಲ್ಲಿ ವಾರ್ನರ್ ಅತ್ಯುತ್ತಮ ಫಾರ್ಮ್ ಪ್ರದರ್ಶಿಸಿದ್ದಾರೆ. ಇಲ್ಲಿಯವರೆಗೆ ಈ ಮೈದಾನದಲ್ಲಿ ಆಡಿದ 8 ಪಂದ್ಯಗಳಿಂದ ವಾರ್ನರ್ ಕಲೆಹಾಕಿರುವುದು ಬರೋಬ್ಬರಿ 732 ರನ್​ಗಳು. ಅದರಲ್ಲಿ 4 ಶತಕಗಳು ಮೂಡಿ ಬಂದಿರುವುದು ವಿಶೇಷ.

    ಮೂರನೇ ಟೆಸ್ಟ್​ನಲ್ಲಿ ಮತ್ತೊಂದು ಶತಕ ಮೂಡಿಬಂದರೆ ಒಂದೇ ಮೈದಾನದಲ್ಲಿ ಅತೀ ಹೆಚ್ಚು ಶತಕ ದಾಖಲಿಸಿದ ಆಸ್ಟ್ರೇಲಿಯಾ ಬ್ಯಾಟ್ಸ್​ಮನ್ ಎನಿಸಿಕೊಳ್ಳಲಿದ್ದಾರೆ. ಈ ದಾಖಲೆ ಸದ್ಯ ಡೇವಿಡ್‌ ಬೂನ್‌ ಹಾಗೂ ಗ್ರೆಗ್‌ ಚಾಪೆಲ್‌ ಹೆಸರಿನಲ್ಲಿದ್ದು, ಈ ರೆಕಾರ್ಡ್​ ಮುರಿಯುವ ವಿಶ್ವಾಸದಲ್ಲಿದ್ದಾರೆ ಎಡಗೈ ದಾಂಡಿಗ ವಾರ್ನರ್.

    ಇನ್ನು ಆಸ್ಟ್ರೇಲಿಯಾ ಸ್ಪಿನ್ನರ್ ನಾಥನ್ ಲಿಯಾನ್ ಕೂಡ 3ನೇ ಟೆಸ್ಟ್​ನಲ್ಲಿ ಹೊಸ ಇತಿಹಾಸ ಬರೆಯುವ ಸನಿಹದಲ್ಲಿದ್ದಾರೆ. ಟೆಸ್ಟ್​ ಕ್ರಿಕೆಟ್​ನಲ್ಲಿ 394 ವಿಕೆಟ್ ಉರುಳಿಸಿರುವ ಲಿಯಾನ್ 400 ವಿಕೆಟ್ ಸಾಧಕರ ಪಟ್ಟಿಗೆ ಎಂಟ್ರಿ ಕೊಡಲು ಕೇವಲ 6 ವಿಕೆಟ್​ಗಳ ಅವಶ್ಯಕತೆಯಿದೆ. ಹೀಗಾಗಿ ಈ ದಾಖಲೆಗೂ ಸಿಡ್ನಿ ಟೆಸ್ಟ್ ಸಾಕ್ಷಿಯಾಗುವ ನಿರೀಕ್ಷೆಯಿದೆ.
    Published by:zahir
    First published: