ಇಲ್ಲಿನ ಸಿಡ್ನಿ ಕ್ರಿಕೆಟ್ ಗ್ರೌಂಡ್ನಲ್ಲಿ ನಡೆಯುತ್ತಿರುವ ಬಾರ್ಡರ್ ಗವಾಸ್ಕರ್ ಟ್ರೋಫಿಯ ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಮೂರನೇ ಟೆಸ್ಟ್ ಪಂದ್ಯ ಕುತೂಹಲ ಘಟ್ಟದತ್ತ ಸಾಗುತ್ತಿದೆ. ಆಸ್ಟ್ರೇಲಿಯಾವನ್ನು 338 ರನ್ಗೆ ಆಲೌಟ್ ಮಾಡಿ ಮೊದಲ ಇನ್ನಿಂಗ್ಸ್ ಆರಂಭಿಸಿರುವ ಭಾರತ 150 ರನ್ ಆಗುವ ಹೊತ್ತಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಆದರೆ, ಸದ್ಯ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ ಅರ್ಧಶತಕದತ್ತ ಸಾಗಿ ತಂಡಕ್ಕೆ ಆಸರೆಯಾಗಿದ್ದರೆ, ಇವರಿಗೆ ರಿಷಭ್ ಪಂತ್ ಉತ್ತಮ ಸಾತ್ ನೀಡುತ್ತಿದ್ದಾರೆ. ಇತ್ತ ಆಸ್ಟ್ರೇಲಿಯಾ ಬೌಲರ್ಗಳು ಭಾರತದ ವಿಕೆಟ್ಗಾಗಿ ಹಾತೊರೆಯುತ್ತಿದ್ದಾರೆ.
ಸ್ಟೀವ್ ಸ್ಮಿತ್(131) ಅವರ ಆಕರ್ಷಕ ಶತಕ, ಮಾರ್ನಸ್ ಲಾಬುಶೇನ್ ಅವರ 91 ರನ್ ಹಾಗೂ ವಿಲ್ ಪುಕೋವ್ಸ್ಕಿ ಅವರ 62 ರನ್ಗಳ ನೆರವಿನಿಂದ ಆಸ್ಟ್ರೇಲಿಯಾ 338 ರನ್ ಗಳಿಸಿತು. ಭಾರತ ಪರ ರವೀಂದ್ರ ಜಡೇಜಾ 4 ವಿಕೆಟ್ ಕಿತ್ತು ಮಿಂಚಿದರು.
BBL 10: ಅದ್ಭುತ ಅತ್ಯಾದ್ಭುತ...ಮ್ಯಾಕ್ಸ್ ಫೀಲ್ಡಿಂಗ್ಗೆ ನಿಬ್ಬೆರಗಾದ ಪ್ರೇಕ್ಷಕರು..!
It is Lunch on Day 3 and #TeamIndia are 180-4. In the first session, India added 84 runs for the loss of two wickets. #AUSvIND
Details - https://t.co/lHRi0Qef30 pic.twitter.com/q4iz6Cs2sZ
— BCCI (@BCCI) January 9, 2021
ಹೀಗೆ ಭಾರತ ತಂಡ ಎರಡನೇ ದಿನದಾಟದ ಅಂತ್ಯಕ್ಕೆ 45 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು 96 ರನ್ ಗಳಿಸಿತ್ತು. ಕ್ರೀಸ್ನಲ್ಲಿ ಚೇತೇಶ್ವರ್ ಪೂಜಾರ(9) ಹಾಗೂ ಅಜಿಂಕ್ಯಾ ರಹಾನೆ(5) ಇದ್ದರು. ಇಂದು ಮೂರನೇ ದಿನ ಬ್ಯಾಟಿಂಗ್ ಮುಂದುವರೆಸಿದ ಈ ಜೋಡಿ ಜೊತೆಯಾಟ ಯಶಸ್ವಿಯಾಗಲಿಲ್ಲ. ನಾಯಕ ರಹಾನೆ 70 ಎಸೆತಗಳಲ್ಲಿ 22 ರನ್ ಗಳಿಸಿ ಔಟ್ ಆದರು. ಹನುಮ ವಿಹಾರಿ 4 ರನ್ ಗಳಿಸಿರುವಾಗ ರನೌಟ್ಗೆ ಬಲಿಯಾದರು.
IPL 2021: ಐಪಿಎಲ್ ಹರಾಜಿಗೂ ಮುನ್ನ ಆಟಗಾರರನ್ನು ಉಳಿಸಿಕೊಳ್ಳಲು ಡೆಡ್ ಲೈನ್ ಫಿಕ್ಸ್..!
ಸದ್ಯ ಪೂಜಾರ, ರಿಷಭ್ ಪಂತ್ ಜೊತೆಯಾಗಿದ್ದು ಉತ್ತಮ ಇನ್ನಿಂಗ್ಸ್ ಕಟ್ಟುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ