ಸಿಡ್ನಿ(ಜ. 09): ಇಲ್ಲಿನ ಸಿಡ್ನಿ ಕ್ರಿಕೆಟ್ ಗ್ರೌಂಡ್ನಲ್ಲಿ ನಡೆಯುತ್ತಿರುವ ಬಾರ್ಡರ್ ಗವಾಸ್ಕರ್ ಟ್ರೋಫಿಯ ಮೂರನೇ ಟೆಸ್ಟ್ ಪಂದ್ಯ ಕುತೂಹಲ ಘಟ್ಟದತ್ತ ಸಾಗುತ್ತಿದೆ. ಆಸ್ಟ್ರೇಲಿಯಾವನ್ನು 338 ರನ್ಗೆ ಆಲೌಟ್ ಮಾಡಿ ಮೊದಲ ಇನ್ನಿಂಗ್ಸ್ ಮಾಡಿದ ಭಾರತ 244 ರನ್ಗೆ ಆಲೌಟ್ ಆಗುವ ಮೂಲಕ 94 ರನ್ಗಳ ಹಿನ್ನಡೆ ಅನುಭವಿಸಿತು. ಆಸ್ಟ್ರೇಲಿಯಾ ಸ್ಟೀವ್ ಸ್ಮಿತ್(131) ಅವರ ಆಕರ್ಷಕ ಶತಕ, ಮಾರ್ನಸ್ ಲಾಬುಶೇನ್ ಅವರ 91 ರನ್ ಹಾಗೂ ವಿಲ್ ಪುಕೋವ್ಸ್ಕಿ ಅವರ 62 ರನ್ಗಳ ನೆರವಿನಿಂದ 338 ರನ್ ಗಳಿಸಿತು. ಭಾರತ ಚೇತೇಶ್ವರ್ ಪೂಜಾರ ಹಾಗೂ ಶುಭ್ಮನ್ ಗಿಲ್ ಅವರ ಅರ್ಧಶತಕದ ನೆರವಿನಿಂದ 244 ರನ್ಗೆ ಸರ್ವಪತನ ಕಂಡಿತು.
ಅಲ್ಪ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಆಸ್ಟ್ರೇಲಿಯಾ ಉತ್ತಮ ಮೊತ್ತದತ್ತ ದಾಪುಗಾಲಿಡುತ್ತಿದೆ. ಎರಡನೇ ಇನ್ನಿಂಗ್ಸ್ನಲ್ಲಿ ಡೇವಿಡ್ ವಾರ್ನರ್(13) ಮತ್ತೆ ವೈಫಲ್ಯ ಅನುಭವಿಸಿದರೆ, ವಿಲ್ ಪುಕೋವ್ಸ್ಕಿ 10 ರನ್ಗೆ ನಿರ್ಗಮಿಸಿದರು. ಬಳಿಕ ಒಂದಾದ ಮಾರ್ನಸ್ ಲಾಬುಶೇನ್(47*) ಹಾಗೂ ಸ್ಟೀವ್ ಸ್ಮಿತ್(29*) ಅರ್ಧಶತಕದ ಜೊತೆಯಾಟ ಆಡಿ ನಾಳೆಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
IPL 2021: ಹರಾಜಿಗೂ ಮುನ್ನ ಸ್ಟಾರ್ ಕನ್ನಡಿಗನನ್ನ ಕೈಬಿಡಲು ಮುಂದಾದ ಕಿಂಗ್ಸ್ ಇಲೆವೆನ್ ಪಂಜಾಬ್?
Beautiful punch from Puc for four.
Live #AUSvIND: https://t.co/KwwZDwbdzO pic.twitter.com/iUPRnMnsnO
— cricket.com.au (@cricketcomau) January 9, 2021
ಇದಕ್ಕೂ ಮುನ್ನ ಭಾರತ ತಂಡ ನಿನ್ನೆ ಎರಡನೇ ದಿನದಾಟದ ಅಂತ್ಯಕ್ಕೆ 45 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು 96 ರನ್ ಗಳಿಸಿತ್ತು. ಕ್ರೀಸ್ನಲ್ಲಿ ಚೇತೇಶ್ವರ್ ಪೂಜಾರ(9) ಹಾಗೂ ಅಜಿಂಕ್ಯಾ ರಹಾನೆ(5) ಇದ್ದರು. ಇಂದು ಮೂರನೇ ದಿನ ಬ್ಯಾಟಿಂಗ್ ಮುಂದುವರೆಸಿದ ಈ ಜೋಡಿ ಜೊತೆಯಾಟ ಯಶಸ್ವಿಯಾಗಲಿಲ್ಲ. ನಾಯಕ ರಹಾನೆ 70 ಎಸೆತಗಳಲ್ಲಿ 22 ರನ್ ಗಳಿಸಿ ಔಟ್ ಆದರು. ಹನುಮ ವಿಹಾರಿ 4 ರನ್ ಗಳಿಸಿರುವಾಗ ರನೌಟ್ಗೆ ಬಲಿಯಾದರು.
IPL 2021: 14ನೇ ಆವೃತ್ತಿಯ ಐಪಿಎಲ್ ಬಾರತದಲ್ಲೋ? ಅಥವಾ ಯುಎಇನಲ್ಲೋ?: ಹೊರಬಿತ್ತು ಮಾಹಿತಿ
ಈ ಸಂದರ್ಭ ಪೂಜಾರ ಜೊತೆಯಾದ ರಿಷಭ್ ಪಂತ್ ಎಚ್ಚರಿಕೆಯ ಇನ್ನಿಂಗ್ಸ್ ಕಟ್ಟಿದರು. 200ರ ಅಂಚಿಗೆ ತಂಡದ ಮೊತ್ತವನ್ನು ತಂದಿಟ್ಟ ಈ ಜೋಡಿ ಅರ್ಧಶತಕದ ಜೊತೆಯಾಟ ಆಡಿತು. ರಿಷಭ್ ಪಂತ್ ಅನಗತ್ಯ ಹೊಡೆತಕ್ಕೆ ಮಾರುಹೋಗಿ 67 ಎಸೆತಗಳಲ್ಲಿ 36 ರನ್ಗೆ ಔಟ್ ಆದರು.
Stumps on Day 3 of the 3rd Test.
Australia 338 & 103/2, lead India (244) by 197 runs.
Scorecard - https://t.co/tqS209srjN #AUSvIND pic.twitter.com/QuuisLrasN
— BCCI (@BCCI) January 9, 2021
ಭಾರತ 100.4 ಓವರ್ನಲ್ಲಿ 244 ರನ್ಗೆ ಆಲೌಟ್ ಆಯಿತು. ಆಸ್ಟ್ರೇಲಿಯಾ ಪರ ಪ್ಯಾಟ್ ಕಮಿನ್ಸ್ 4 ವಿಕೆಟ್ ಕಿತ್ತರೆ, ಜೋಶ್ ಕ್ಯಾಜ್ಲೆವುಡ್ 2 ಹಾಗೂ ಮಿಚೆಲ್ ಸ್ಟಾರ್ಕ್ 1 ವಿಕೆಟ್ ಪಡೆದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ