ಸಿಡ್ನಿ (ಜ. 08): ಇಲ್ಲಿನ ಸಿಡ್ನಿ ಕ್ರಿಕೆಟ್ ಗ್ರೌಂಡ್ನಲ್ಲಿ ಸಾಗುತ್ತಿರುವ ಭಾರತ ವಿರುದ್ಧದ ಬಾರ್ಡರ್ – ಗವಾಸ್ಕರ್ ಟ್ರೋಫಿಯ ಮೂರನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಉತ್ತಮ ಮೊತ್ತದತ್ತ ದಾಪುಗಾಲಿಡುತ್ತಿದೆ. ಕಳಪೆ ಫಾರ್ಮ್ನಲ್ಲಿದ್ದ ಸ್ಟೀವ್ ಸ್ಮಿತ್ ಭರ್ಜರಿ ಕಮ್ಬ್ಯಾಕ್ ಮಾಡಿ ಶತಕದ ಅಂಚಿನಲ್ಲಿದ್ದಾರೆ. ಮಾರ್ನಸ್ ಲಾಬುಶೇನ್ ಬ್ಯಾಟ್ನಿಂದ ಅಮೋಘ ಇನ್ನಿಂಗ್ಸ್ ಮೂಡಿಬಂದಿದೆ . ನಿನ್ನೆ ಮೊದಲ ದಿನದಾಟದ ಅಂತ್ಯಕ್ಕೆ 55 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 166 ರನ್ ಗಳಿಸಿದ್ದ ಕಾಂಗರೂ ಪಡೆ ಇಂದು 250ರ ಗಡಿ ದಾಟಿ 300ರತ್ತ ಸಾಗುತ್ತಿದೆ.
ನಿನ್ನೆ ಮಳೆಯ ನಡುವೆ ನಡೆದ ಮೊದಲ ದಿನದಾಟ ಉಭಯ ತಂಡಗಳಿಗೆ ಸಮಬಲವಾಗಿತ್ತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯ ಆರಂಭದಲ್ಲಿ ಡೇವಿಡ್ ವಾರ್ನರ್(5) ವಿಕೆಟ್ ಕಳೆದುಕೊಂಡಿತು. ನಂತರ ಜೊತೆಯಾದ ಮಾರ್ನಸ್ ಲಾಬುಶೇನ್ ಹಾಗೂ ಪುಕೋವ್ಸ್ಕಿ ಎಚ್ಚರಿಕೆಯಿಂದ ಇನ್ನಿಂಗ್ಸ್ ಕಟ್ಟಲು ಹೊರಟರು. ಈ ಜೋಡಿ ತಂಡಕ್ಕೆ 100 ರನ್ಗಳ ಕಾಣಿಕೆ ನೀಡಿತು.
India vs Australia, 3rd Test: ವಿಲ್-ಲಾಬುಶೇನ್ ಅರ್ಧಶತಕ: ಮೊದಲ ದಿನದಾಟದ ಅಂತ್ಯಕ್ಕೆ ಆಸೀಸ್ 166-2
ವಿಲ್ ಪುಕೋವ್ಸ್ಕಿ 110 ಎಸೆತಗಳಲ್ಲಿ 62 ರನ್ ಬಾರಿಸಿ ನವ್ದೀಪ್ ಸೈನಿ ಬೌಲಿಂಗ್ನಲ್ಲಿ ಔಟ್ ಆದರು. ಬಳಿಕ ಸ್ಟೀವ್ ಸ್ಮಿತ್ ಜೊತೆಯಾದ ಲಾಬುಶೇನ್ ಮತ್ತೊಂದು ಅಮೋಘ ಇನ್ನಿಂಗ್ಸ್ ಕಟ್ಟಿದರು. ಲಾಬುಶೇನ್ 67 ರನ್ ಬಾರಿಸಿ ಹಾಗೂ ಸ್ಮಿತ್ 31 ರನ್ ಗಳಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದರು.
ಇಂದು ಇನ್ನಿಂಗ್ಸ್ ಮುಂದುವರೆಸಿದ ಈ ಜೋಡಿ ಅದೇ ಲಯದಲ್ಲಿ ಬ್ಯಾಟ್ ಬೀಸಿತು. ಶತಕದ ಜೊತೆಯಾಟ ಆಡಿತು. 196 ಎಸೆತಗಳಲ್ಲಿ ಎದುರಿಸಿದ ಲಾಬುಶೇನ್ 11 ಬೌಂಡರಿ ಬಾರಿಸಿ 91 ರನ್ ಗಳಿಸಿ ಜಡೇಜಾ ಬೌಲಿಂಗ್ನಲ್ಲಿ ಔಟ್ ಆದರು. ಇದರ ಬೆನ್ನಲ್ಲೆ ಮ್ಯಾಥ್ಯೂ ವೇಡ್ 13 ರನ್ಗೆ ಬ್ಯಾಟ್ ಕೆಳಗಿಟ್ಟರೆ, ಕಾಮೆರಾನ್ ಗ್ರೀನ್ ಸೊನ್ನೆ ಸುತ್ತಿದರು. ನಾಯಕ ಟಿಮ್ ಪೈನ್ ಆಟ ಕೇವಲ 1 ರನ್ಗೆ ಅಂತ್ಯವಾಯಿತು. ಸದ್ಯ ಶತಕದ ಹೊಸ್ತಿಲಲ್ಲಿ ಸ್ಮಿತ್ ಇದ್ದರೆ ಪ್ಯಾಟ್ ಕಮಿನ್ಸ್ ಸಾಥ್ ನೀಡುತ್ತಿದ್ದಾರೆ.
IPL 2021: ಐಪಿಎಲ್ ಹರಾಜಿಗೆ ಡೇಟ್ ಫಿಕ್ಸ್..!
ಭಾರತ ಪರ ಜಸ್ಪ್ರೀತ್ ಬುಮ್ರಾ ಹಾಗೂ ರವೀಂದ್ರ ಜಡೇಜಾ ತಲಾ 2 ವಿಕೆಟ್ ಕಿತ್ತರೆ, ಮೊಹಮ್ಮದ್ ಸಿರಾಜ್ ಹಾಗೂ ನವ್ದೀಪ್ ಸೈನಿ ತಲಾ 1 ವಿಕೆಟ್ ಪಡೆದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ