HOME » NEWS » Sports » CRICKET INDIA VS AUSTRALIA 3RD TEST AT SYDNEY DAY 4 ASHWIN GETS STEVE SMITH AGAIN VB

India vs Australia: ಬೃಹತ್ ಮುನ್ನಡೆಯುತ್ತ ಆಸ್ಟ್ರೇಲಿಯಾ: ವಿಕೆಟ್ ಕೀಳಲು ಟೀಂ ಇಂಡಿಯಾ ಪರದಾಟ

ಸದ್ಯ ಆಸ್ಟ್ರೇಲಿಯಾ 5 ವಿಕೆಟ್ ಕಳೆದುಕೊಂಡಿದ್ದು ತಂಡದ ಮೊತ್ತ 200ರ ಗಡಿ ದಾಟಿದ್ದರೆ, 300ಕ್ಕೂ ಅಧಿಕ ರನ್​ಗಳ ಮುನ್ನಡೆ ಸಾಧಿಸಿದೆ.

news18-kannada
Updated:January 10, 2021, 8:13 AM IST
India vs Australia: ಬೃಹತ್ ಮುನ್ನಡೆಯುತ್ತ ಆಸ್ಟ್ರೇಲಿಯಾ: ವಿಕೆಟ್ ಕೀಳಲು ಟೀಂ ಇಂಡಿಯಾ ಪರದಾಟ
India vs Australia
  • Share this:
ಸಿಡ್ನಿ (ಜ. 10): ಇಲ್ಲಿನ ಸಿಡ್ನಿ ಕ್ರಿಕೆಟ್ ಗ್ರೌಂಡ್​ನಲ್ಲಿ ನಡೆಯುತ್ತಿರುವ ​ ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಬಾರ್ಡರ್ – ಗವಾಸ್ಕರ್ ಟೆಸ್ಟ್​ ಸರಣಿಯ ಮೂರನೇ ಪಂದ್ಯ ಕುತೂಹಲ ಘಟ್ಟದತ್ತ ಸಾಗುತ್ತಿದೆ. ಭಾರತವನ್ನು 244 ರನ್​ಗೆ ಆಲೌಟ್ ಮಾಡಿ ತನ್ನ ಎರಡನೇ ಇನ್ನಿಂಗ್ಸ್​ ಮುಂದುವರೆಸಿರುವ ಕಾಂಗರೂ ಪಡೆಯ ಮೊತ್ತ 200 ಗಡಿ ದಾಟಿದ್ದು ಬೃಹತ್ ಮುನ್ನಡೆಯತ್ತ ದಾಪುಗಾಲಿಡುತ್ತಿದೆ. ಇತ್ತ ಟೀಂ ಇಂಡಿಯಾ ಬೌಲರ್​ಗಳು ಆಸೀಸ್ ಬ್ಯಾಟ್ಸ್​ಮನ್​ಗಳನ್ನು ಪೆವಿಲಿಯನ್​ಗೆ ಅಟ್ಟಲು ಹರಸಾಹಸ ಪಡುತ್ತಿದ್ದಾರೆ.

ಮೂರನೇ ಟೆಸ್ಟ್​ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು 338 ರನ್​ಗೆ ಆಲೌಟ್ ಮಾಡಿ ಮೊದಲ ಇನ್ನಿಂಗ್ಸ್ ಮಾಡಿದ ಭಾರತ 244 ರನ್​ಗೆ ಆಲೌಟ್ ಆಗುವ ಮೂಲಕ 94 ರನ್​ಗಳ ಹಿನ್ನಡೆ ಅನುಭವಿಸಿತು. ಆಸ್ಟ್ರೇಲಿಯಾ ಸ್ಟೀವ್ ಸ್ಮಿತ್(131) ಅವರ ಆಕರ್ಷಕ ಶತಕ, ಮಾರ್ನಸ್ ಲಾಬುಶೇನ್ ಅವರ 91 ರನ್ ಹಾಗೂ ವಿಲ್ ಪುಕೋವ್​ಸ್ಕಿ ಅವರ 62 ರನ್​ಗಳ ನೆರವಿನಿಂದ 338 ರನ್ ಗಳಿಸಿತು. ಭಾರತ ಚೇತೇಶ್ವರ್ ಪೂಜಾರ ಹಾಗೂ ಶುಭ್ಮನ್ ಗಿಲ್ ಅವರ ಅರ್ಧಶತಕದ ನೆರವಿನಿಂದ 244 ರನ್​ಗೆ ಸರ್ವಪತನ ಕಂಡಿತು.

India vs Australia: 3ನೇ ಟೆಸ್ಟ್​ನಲ್ಲಿ ಸಂಕಷ್ಟದಲ್ಲಿರುವ ಟೀಂ ಇಂಡಿಯಾಕ್ಕೆ ಒಂದಲ್ಲ ಎರಡು ದೊಡ್ಡ ಶಾಕ್

ಅಲ್ಪ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್​ ಆರಂಭಿಸಿರುವ ಆಸ್ಟ್ರೇಲಿಯಾ ಉತ್ತಮ ಮೊತ್ತದತ್ತ ಸಾಗುತ್ತಿದೆ. ಡೇವಿಡ್ ವಾರ್ನರ್(13) ಮತ್ತೆ ವೈಫಲ್ಯ ಅನುಭವಿಸಿದರೆ, ವಿಲ್ ಪುಕೋವ್​ಸ್ಕಿ 10 ರನ್​ಗೆ ನಿನ್ನೆಯೆ ನಿರ್ಗಮಿಸಿದ್ದರು. ಮೂರನೇ ದಿನದಾಟದ ಅಂತ್ಯಕ್ಕೆ ಆಸ್ಟ್ರೇಲಿಯಾ ತನ್ನ ಎರಡನೇ ಇನ್ನಿಂಗ್ಸ್​ನಲ್ಲಿ 29 ಓವರ್​ಗೆ 2 ವಿಕೆಟ್ ಕಳೆದುಕೊಂಡು 103 ರನ್ ಗಳಿಸಿತ್ತು. 197 ರನ್​ಗಳ ಮುನ್ನಡೆ ಸಾಧಿಸಿತ್ತು. ಮಾರ್ನಸ್ ಲಾಬುಶೇನ್(47*) ಹಾಗೂ ಸ್ಟೀವ್ ಸ್ಮಿತ್(29*) ಅರ್ಧಶತಕದ ಜೊತೆಯಾಟ ಆಡಿ ಬ್ಯಾಟಿಂಗ್ ಕಾಯ್ದುಕೊಂಡಿದ್ದರು.





ಇಂದು ಇನ್ನಿಂಗ್ಸ್​ ಮುಂದುವರೆಸಿದ ಈ ಜೋಡಿ ದೊಡ್ಡ ಜೊತೆಯಾಟ ಆಡಲು ಸಾಧ್ಯವಾಗಲಿಲ್ಲ. 118 ಎಸೆತಗಳಲ್ಲಿ 73 ರನ್ ಗಳಿಸಿ ಲಾಬುಶೇನ್ ಔಟ್ ಆದರು. ಮ್ಯಾಥ್ಯೂ ವೇಡ್ ಬಂದ ಬೆನ್ನಲ್ಲೆ 4 ರನ್​ಗೆ ನಿರ್ಗಮಿಸಿದರು. ಈ ನಡುವೆ ಸ್ಮಿತ್ ಆಕರ್ಷಕ ಅರ್ಧಶತಕ ಪೂರೈಸಿದರು. ಕ್ಯಾಮೆರನ್ ಗ್ರೀನ್ ಜೊತೆಯಾದ ಸ್ಮಿತ್ 60 ರನ್​ಗಳ ಕಾಣಿಕೆ ನೀಡಿದರು. 167 ಎಸೆತಗಳಲ್ಲಿ ಎದುರಿಸಿದ ಸ್ಮಿತ್ 8 ಬೌಂಡರಿ, 1 ಸಿಕ್ಸರ್ ಸಿಡಿಸಿ 81 ರನ್​ ಗಳಿಸಿ ಔಟ್ ಆದರು.

IPL 2021: ಹರಾಜಿಗೂ ಮುನ್ನ ಸ್ಟಾರ್ ಕನ್ನಡಿಗನನ್ನ ಕೈಬಿಡಲು ಮುಂದಾದ ಕಿಂಗ್ಸ್ ಇಲೆವೆನ್ ಪಂಜಾಬ್​?

ಸದ್ಯ ಆಸ್ಟ್ರೇಲಿಯಾ 5 ವಿಕೆಟ್ ಕಳೆದುಕೊಂಡಿದ್ದು ತಂಡದ ಮೊತ್ತ 200ರ ಗಡಿ ದಾಟಿದ್ದರೆ, 300ಕ್ಕೂ ಅಧಿಕ ರನ್​ಗಳ ಮುನ್ನಡೆ ಸಾಧಿಸಿದೆ. ಗ್ರೀನ್ ಜೊತೆಗೆ ನಾಯಕ ಟಿಮ್ ಪೈನ್ ಕ್ರೀಸ್​ನಲ್ಲಿದ್ದಾರೆ.
Published by: Vinay Bhat
First published: January 10, 2021, 8:13 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories