India vs Australia T20 Live Score: ಮ್ಯಾಕ್ಸ್​ವೆಲ್- ವೇಡ್ ಸ್ಫೋಟಕ ಆಟ

IND vs AUS 3rd T20 Live, India vs Australia Live Score: ಟಿ-20 ಕ್ರಿಕೆಟ್​ನಲ್ಲಿ ಸೋಲಿಲ್ಲದ ಸರದಾರನಾಗಿ ಮೆರೆಯುತ್ತರುವ ಭಾರತ ತನ್ನ ದಾಖಲೆಯನ್ನ ಮುಂದುವರೆಸುತ್ತಾ ನೋಡಬೇಕಿದೆ.

IND vs AUS 3rd T20 Live Score Updates

IND vs AUS 3rd T20 Live Score Updates

 • Share this:
  ಸಿಡ್ನಿ (ಡಿ. 08): ಇಲ್ಲಿನ ಸಿಡ್ನಿ ಕ್ರಿಕೆಟ್ ಗ್ರೌಂಡ್​ನಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ಅಂತಿಮ ಟಿ-20 ಪಂದ್ಯ ನಡೆಯುತ್ತಿದೆ. ಕೊಹ್ಲಿ ಪಡೆ ಸರಣಿ ಕ್ಲೀನ್​ಸ್ವೀಪ್ ಮಾಡುವತ್ತ ಚಿತ್ತ ನೆಟ್ಟಿದ್ದರೆ, ಇತ್ತ ಕಾಂಗರೂ ಪಡೆ ಕನಿಷ್ಠ ಕೊನೆಯ ಪಂದ್ಯವನ್ನಾದರೂ ಗೆದ್ದು ಪ್ರತಿಷ್ಠೆ ಉಳಿಸಿಕೊಳ್ಳುವ ಪ್ಲ್ಯಾನ್ ಮಾಡಿಕೊಂಡಿದೆ. ಟಿ-20 ಕ್ರಿಕೆಟ್​ನಲ್ಲಿ ಸೋಲಿಲ್ಲದ ಸರದಾರನಾಗಿ ಮೆರೆಯುತ್ತರುವ ಭಾರತ ತನ್ನ ದಾಖಲೆಯನ್ನ ಮುಂದುವರೆಸುತ್ತಾ ನೋಡಬೇಕಿದೆ. ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.

  ಬ್ಯಾಟಿಂಗ್ ಆರಂಭಿಸಿರುವ ಆಸ್ಟ್ರೇಲಿಯಾ ತಂಡ ಆರಂಭದಲ್ಲೇ ಆಘಾತ ಅನುಭವಿಸಿತಾದರೂ ನಂತರದಲ್ಲಿ ಚೇತರಿಕೆ ಕಂಡಿದೆ. ಇಂಜುರಿಯಿಂದ ಕಮ್​ಬ್ಯಾಕ್ ಮಾಡಿದ ನಾಯಕ ಆ್ಯರೋನ್ ಫಿಂಚ್ ಶೂನ್ಯಕ್ಕೆ ನಿರ್ಗಮಿಸಿದರು. ಈ ಸಂದರ್ಭ ಒಂದಾದ ಮ್ಯಾಥ್ಯೂ ವೇಡ್ ಹಾಗೂ ಸ್ಟೀವ್ ಸ್ಮಿತ್ ಉತ್ತಮ ಜೊತೆಯಾಟ ಆಡಿದರು.

  ಎಚ್ಚರಿಕೆಯಿಂದ ಬ್ಯಾಟ್ ಬೀಸಿದ ಈ ಜೋಡಿ 65 ರನ್​ಗಳ ಕಾಣಿಕೆ ನೀಡಿತು. ಆದರೆ, ಸುಂದರ್ ಬೌಲಿಂಗ್​ನಲ್ಲಿ ಸ್ಮಿತ್ (24) ಔಟ್ ಆಗುವ ಮೂಲಕ ಆಸೀಸ್ ಎರಡನೇ ವಿಕೆಟ್ ಕಳೆದುಕೊಂಡಿತು.

  ಇಂದಿನ ಪಂದ್ಯಕ್ಕೆ ಕೊಹ್ಲಿ ಪಡೆಯಲ್ಲಿ ಯಾವುದೇ ಬದಲಾವಣೆ ಮಾಡದೆ ಕಳೆದ ಗೆದ್ದ ಪಂದ್ಯದಲ್ಲಿ ಆಡಿದ ಆಟಗಾರರೇ ಕಣಕ್ಕಿಳಿಯುತ್ತಿದ್ದಾರೆ. ಇತ್ತ ಆಸ್ಟ್ರೇಲಿಯಾ ತಂಡದಲ್ಲಿ ನಾಯಕ ಆ್ಯರೋನ್ ಫಿಂಚ್ ಫಿಟ್ ಆಗಿದ್ದು ಮಾರ್ಕಸ್ ಸ್ಟಾಯಿನಿಸ್ ಹೊರಗುಳಿದಿದ್ದಾರೆ.

  ಭಾರತ ತಂಡ: ಶಿಖರ್‌ ಧವನ್‌, ಕೆ. ಎಲ್ ರಾಹುಲ್ (ವಿ. ಕೀ), ವಿರಾಟ್‌ ಕೊಹ್ಲಿ (ನಾಯಕ), ಶ್ರೇಯಸ್‌ ಅಯ್ಯರ್‌, ಸಂಜು ಸ್ಯಾಮ್ಸನ್, ಹಾರ್ದಿಕ್‌ ಪಾಂಡ್ಯ, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ದೀಪಕ್ ಚಹಾರ್, ಟಿ. ನಟರಾಜನ್, ಯಜುವೇಂದ್ರ ಚಹಾಲ್.

  ಆಸ್ಟ್ರೇಲಿಯ ತಂಡ: ಆ್ಯರೋನ್ ಫಿಂಚ್ (ನಾಯಕ), ಮ್ಯಾಥ್ಯೂ ವೇಡ್, ಸ್ಟೀವ್ ಸ್ಮಿತ್‌, ಗ್ಲೆನ್‌ ಮ್ಯಾಕ್ಸ್​ವೆಲ್‌, ಮೊಯ್​ಸೆಸ್ ಹೆನ್ರಿಕ್ಯೂಸ್, ಡಾರ್ಸಿ ಶಾರ್ಟ್​, ಡೆನಿಯಲ್ ಸ್ಯಾಮ್ಸ್, ಸಿಯಾನ್ ಅಬಾಟ್, ಮಿಚೆಲ್ ಸ್ವೆಪ್ಸನ್, ಆ್ಯಂಡ್ರೋ ಟೈ, ಆ್ಯಡಂ ಝಂಪ.

  ಟೀಂ ಇಂಡಿಯಾಕ್ಕೆ ಬ್ಯಾಟಿಂಗ್​ ಬಗ್ಗೆ ಯಾವುದೇ ಚಿಂತೆಯಿಲ್ಲ. ಶಿಖರ್ ಧವನ್ ಫಾರ್ಮ್​ಗೆ ಬಂದಿರುವುದು ಸಂತಸದ ವಿಷಯವಾದರೆ, ಕೆ. ಎಲ್ ರಾಹುಲ್ ಕೂಡ ಉತ್ತಮ ಲಯದಲ್ಲಿದ್ದಾರೆ. ನಾಯಕ ವಿರಾಟ್ ಕೊಹ್ಲಿ ಹಾಗೂ ಹಾರ್ದಿಕ್ ಪಾಂಡ್ಯ ಕಳೆದ ಪಂದ್ಯದಲ್ಲಿ ಆಸೀಸ್ ಬೌಲರ್​ಗಳ ಬೆಂಡೆತ್ತಿದ್ದರು. ಸಂಜು ಸ್ಯಾಮ್ಸನ್ ಉತ್ತಮವಾಗಿ ಕಂಡರು ಅಪಾಯಕಾರಿ ಆಗಬೇಕಿದೆ.

  ಇನ್ನೂ ಶ್ರೇಯಸ್ ಅಯ್ಯರ್ ಎರಡನೇ ಪಂದ್ಯದಲ್ಲಿ ಪರಿಣಾಮಕಾರಿಯಾಗಿ ಗೋಚರಿಸಿದರು. ಅಂತಿಮ ಹಂತದಲ್ಲಿ ಬೌಂಡರಿ, ಸಿಕ್ಸರ್ ಸಿಡಿಸಿ ತಂಡದ ಗೆಲುವನ್ನು ಹತ್ತಿರಮಾಡಿದರು. ವಾಷಿಂಗ್ಟನ್ ಸುಂದರ್ ಸೇವೆ ಭಾರತಕ್ಕೆ ಬ್ಯಾಟಿಂಗ್​ನಲ್ಲಿ ಸಿಗುತ್ತಿಲ್ಲ. ಬೌಲಿಂಗ್​ನಲ್ಲೂ ಕಳೆದ ಪಂದ್ಯದಲ್ಲಿ ದುಬಾರಿಯಾಗಿದ್ದರು.

  ಇನ್ನೂ ವೇಗಿಗಳ ಪೈಕಿ ಟಿ. ನಟರಾಜನ್ ಬಿಟ್ಟರೆ ಉಳಿದವರಿಂದ ನಿರೀಕ್ಷೆಗೆ ತಕ್ಕಂತ ಸ್ಪೆಲ್ ಬರುತ್ತಿಲ್ಲ. ದೀಪಕ್ ಚಹಾರ್ ಹಾಗೂ ಶಾರ್ದೂಲ್ ಠಾಕೂರ್ ಸಾಕಷ್ಟು ರನ್ ಹರಿಬಿಡುತ್ತಿದ್ದಾರೆ.

  ಇತ್ತ ಕಳೆದ ಪಂದ್ಯಕ್ಕೆ ಗಾಯದಿಂದಾಗಿ ಆಸ್ಟ್ರೇಲಿಯಾ ನಾಯಕ ಆ್ಯರೋನ್‌ ಫಿಂಚ್‌ ಅಲಭ್ಯರಾಗಿದ್ದರು. ಆದರೆ, ತಂಡದ ನಾಯಕತ್ವ ವಹಿಸಿಕೊಂಡಿದ್ದ ಮ್ಯಾಥ್ಯೂ ವೇಡ್‌ ಕೇವಲ 32 ಎಸೆತಗಳಲ್ಲಿ 58 ರನ್‌ಗಳನ್ನು ಗಳಿಸಿ ಮಿಂಚಿದ್ದರು. ಬ್ಯಾಟಿಂಗ್​ನಲ್ಲಿ ಕೊರತೆ ಇಲ್ಲದ ಆಸೀಸ್ ಬೌಲಿಂಗ್ ವಿಭಾಗದಲ್ಲಿ ಬದಲಾವಣೆ ಮಾಡಬಹುದು.
  Published by:Vinay Bhat
  First published: