India vs Australia T20: ವೇಡ್-ಮ್ಯಾಕ್ಸ್​ವೆಲ್ ಸ್ಫೋಟಕ ಆಟ: ಭಾರತಕ್ಕೆ 187 ರನ್​ಗಳ ಟಾರ್ಗೆಟ್

IND vs AUS 3rd T20 Live, India vs Australia: ಎಚ್ಚರಿಕೆಯಿಂದ ಬ್ಯಾಟ್ ಬೀಸಿದ ಈ ಜೋಡಿ 65 ರನ್​ಗಳ ಕಾಣಿಕೆ ನೀಡಿತು. ಆದರೆ, ಸುಂದರ್ ಬೌಲಿಂಗ್​ನಲ್ಲಿ ಸ್ಮಿತ್ (24) ಔಟ್ ಆಗುವ ಮೂಲಕ ಆಸೀಸ್ ಎರಡನೇ ವಿಕೆಟ್ ಕಳೆದುಕೊಂಡಿತು. ನಂತರ ಶುರುವಾಗಿದ್ದು ವೇಡ್ ಹಾಗೂ ಗ್ಲೆನ್ ಮ್ಯಾಕ್ಸ್​ವೆಲ್ ಸ್ಫೋಟಕ ಆಟ.

ಮ್ಯಾಥ್ಯೂ ವೇಡ್

ಮ್ಯಾಥ್ಯೂ ವೇಡ್

  • Share this:
    ಸಿಡ್ನಿ (ಡಿ. 08): ಇಲ್ಲಿನ ಸಿಡ್ನಿ ಕ್ರಿಕೆಟ್ ಗ್ರೌಂಡ್​ನಲ್ಲಿ ನಡೆಯುತ್ತಿರುವ ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ಅಂತಿಮ ಟಿ-20 ಪಂದ್ಯ ಸಾಕಷ್ಟು ರೋಚಕತೆ ಸೃಷ್ಟಿಸಿದೆ. ಮೊದಲು ಬ್ಯಾಟ್ ಮಾಡಿರುವ ಆಸ್ಟ್ರೇಲಿಯಾ ಮ್ಯಾಥ್ಯೂ ವೇಡ್ ಹಾಗೂ ಗ್ಲೆನ್ ಮ್ಯಾಕ್ಸ್​ವೆಲ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ 20 ಓವರ್​ಗಳಲ್ಲಿ 186 ರನ್ ಬಾರಿಸಿದೆ. ಇಂದಿನ ಪಂದ್ಯ ಗೆದ್ದು ಕೊಹ್ಲಿ ಪಡೆ ಸರಣಿ ಕ್ಲೀನ್​ಸ್ವೀಪ್ ಮಾಡುವತ್ತ ಚಿತ್ತ ನೆಟ್ಟಿದ್ದರೆ, ಇತ್ತ ಕಾಂಗರೂ ಪಡೆ ಕನಿಷ್ಠ ಕೊನೆಯ ಪಂದ್ಯವನ್ನಾದರೂ ಗೆದ್ದು ಪ್ರತಿಷ್ಠೆ ಉಳಿಸಿಕೊಳ್ಳುವ ಪ್ಲ್ಯಾನ್ ಮಾಡಿಕೊಂಡಿದೆ.

    ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಆಸ್ಟ್ರೇಲಿಯಾ ತಂಡ ಆರಂಭದಲ್ಲೇ ಆಘಾತ ಅನುಭವಿಸಿತಾದರೂ ನಂತರದಲ್ಲಿ ಚೇತರಿಕೆ ಕಂಡಿತು. ಇಂಜುರಿಯಿಂದ ಕಮ್​ಬ್ಯಾಕ್ ಮಾಡಿದ ನಾಯಕ ಆ್ಯರೋನ್ ಫಿಂಚ್ ಶೂನ್ಯಕ್ಕೆ ನಿರ್ಗಮಿಸಿದರು. ಈ ಸಂದರ್ಭ ಒಂದಾದ ಮ್ಯಾಥ್ಯೂ ವೇಡ್ ಹಾಗೂ ಸ್ಟೀವ್ ಸ್ಮಿತ್ ಉತ್ತಮ ಜೊತೆಯಾಟ ಆಡಿದರು.

    ಎಚ್ಚರಿಕೆಯಿಂದ ಬ್ಯಾಟ್ ಬೀಸಿದ ಈ ಜೋಡಿ 65 ರನ್​ಗಳ ಕಾಣಿಕೆ ನೀಡಿತು. ಆದರೆ, ಸುಂದರ್ ಬೌಲಿಂಗ್​ನಲ್ಲಿ ಸ್ಮಿತ್ (24) ಔಟ್ ಆಗುವ ಮೂಲಕ ಆಸೀಸ್ ಎರಡನೇ ವಿಕೆಟ್ ಕಳೆದುಕೊಂಡಿತು. ನಂತರ ಶುರುವಾಗಿದ್ದು ವೇಡ್ ಹಾಗೂ ಗ್ಲೆನ್ ಮ್ಯಾಕ್ಸ್​ವೆಲ್ ಸ್ಫೋಟಕ ಆಟ.





    ಭಾರತೀಯ ಬೌಲರ್​ಗಳ ಬೆವರಿಳಿಸಿದ ಈ ಜೋಡಿ ಮೈದಾನದ ಮೂಲೆ ಮೂಲೆಗೆ ಚೆಂಡನ್ನು ಅಟ್ಟಿದರು. jಒತೆಗೆ ಅಮೋಘ ಅರ್ಧಶತಕ ಸಿಡಿಸಿ ಮಿಂಚಿದರು. 90 ರನ್​ಗಳ ಕಾಣಿಕೆ ನೀಡಿದರು. ವೇಡ್ 53 ಎಸೆತಗಳಲ್ಲಿ 7 ಬೌಂಡರಿ, 2 ಸಿಕ್ಸರ್ ಬಾರಿಸಿ ಅಜೇಯ 80 ರನ್ ಬಾರಿಸಿದರೆ, ಮ್ಯಾಕ್ಸ್​ವೆಲ್ ಕೇವಲ36 ಎಸೆತಗಳಲ್ಲಿ 3 ಬೌಂಡರಿ ಸಿಕ್ಸರ್​ನೊಂದಿಗೆ 54 ರನ್ ಬಾರಿಸಿದರು.

    ಅಂತಿಮವಾಗಿ ಆಸ್ಟ್ರೇಲಿಯಾ 20 ಓವರ್​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 186 ರನ್ ಗಳಿಸಿತು. ಭಾರತ ಪರ ವಾಷಿಂಗ್ಟನ್ ಸುಂದರ್ 2 ವಿಕೆಟ್ ಕಿತ್ತರೆ, ಶಾರ್ದುಲ್ ಠಾಕೂರ್, ಟಿ. ನಟರಾಜನ್ 1 ವಿಕೆಟ್ ಪಡೆದರು.

    ಭಾರತ ತಂಡ: ಶಿಖರ್‌ ಧವನ್‌, ಕೆ. ಎಲ್ ರಾಹುಲ್ (ವಿ. ಕೀ), ವಿರಾಟ್‌ ಕೊಹ್ಲಿ (ನಾಯಕ), ಶ್ರೇಯಸ್‌ ಅಯ್ಯರ್‌, ಸಂಜು ಸ್ಯಾಮ್ಸನ್, ಹಾರ್ದಿಕ್‌ ಪಾಂಡ್ಯ, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ದೀಪಕ್ ಚಹಾರ್, ಟಿ. ನಟರಾಜನ್, ಯಜುವೇಂದ್ರ ಚಹಾಲ್.

    ಆಸ್ಟ್ರೇಲಿಯ ತಂಡ: ಆ್ಯರೋನ್ ಫಿಂಚ್ (ನಾಯಕ), ಮ್ಯಾಥ್ಯೂ ವೇಡ್, ಸ್ಟೀವ್ ಸ್ಮಿತ್‌, ಗ್ಲೆನ್‌ ಮ್ಯಾಕ್ಸ್​ವೆಲ್‌, ಮೊಯ್​ಸೆಸ್ ಹೆನ್ರಿಕ್ಯೂಸ್, ಡಾರ್ಸಿ ಶಾರ್ಟ್​, ಡೆನಿಯಲ್ ಸ್ಯಾಮ್ಸ್, ಸಿಯಾನ್ ಅಬಾಟ್, ಮಿಚೆಲ್ ಸ್ವೆಪ್ಸನ್, ಆ್ಯಂಡ್ರೋ ಟೈ, ಆ್ಯಡಂ ಝಂಪ.
    Published by:Vinay Bhat
    First published: