IND vs AUS: ಚಿನ್ನಸ್ವಾಮಿಯಲ್ಲಿ ಕೊಹ್ಲಿ-ರೋಹಿತ್ ದರ್ಬಾರ್; ಸರಣಿ ವಶಪಡಿಸಿಕೊಂಡು ಸೇಡು ತೀರಿಸಿಕೊಂಡ ಭಾರತ

India vs Australia, 3rd ODI Match in Bangalore: 2ನೇ ವಿಕೆಟ್​ಗೆ ರೋಹಿತ್ ಜೊತೆಯಾದ ನಾಯಕ ವಿರಾಟ್ ಕೊಹ್ಲಿ ಅಮೋಘ ಆಟ ಪ್ರದರ್ಶಿಸಿದರು. ರೋಹಿತ್ ತಮ್ಮ ಆರ್ಭಟವನ್ನು ಮುಂದುವರೆಸಿದರೆ, ಕೊಹ್ಲಿ ಎಚ್ಚರಿಕೆಯಿಂದ ಬ್ಯಾಟ್ ಬೀಸಿದರು. ಈ ಜೋಡಿಯ ಶತಕದ ಜೊತೆಯಾಟ ಭಾರತದ ಗೆಲುವನ್ನು ಹತ್ತಿರ ಮಾಡಿತು. ರೋಹಿತ್ ಆಕರ್ಷಕ ಶತಕ ಸಿಡಿಸಿ ಮಿಂಚಿದರು.

Vinay Bhat | news18-kannada
Updated:January 19, 2020, 9:06 PM IST
IND vs AUS: ಚಿನ್ನಸ್ವಾಮಿಯಲ್ಲಿ ಕೊಹ್ಲಿ-ರೋಹಿತ್ ದರ್ಬಾರ್; ಸರಣಿ ವಶಪಡಿಸಿಕೊಂಡು ಸೇಡು ತೀರಿಸಿಕೊಂಡ ಭಾರತ
ಟೀಂ ಇಂಡಿಯಾ
  • Share this:
ಬೆಂಗಳೂರು (ಜ. 19): ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ರೋಹಿತ್ ಶರ್ಮಾ ಅಬ್ಬರದ ಶತಕ ಹಾಗೂ ವಿರಾಟ್ ಕೊಹ್ಲಿ ಅರ್ಧಶತಕದ ನೆರವಿನಿಂದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ 2-1 ಅಂತರದ ಮುನ್ನಡೆಯೊಂದಿಗೆ ಸರಣಿ ವಶಪಡಿಸಿಕೊಂಡು ಸೇಡು ತೀರಿಸಿಕೊಂಡಿದೆ.

ಟೀಂ ಇಂಡಿಯಾಕ್ಕೆ ಈ ಸರಣಿ ಗೆಲುವು ತುಂಬಾನೇ ಮುಖ್ಯವಾಗಿತ್ತು. ಯಾಕೆಂದರೆ, ಆಸ್ಟ್ರೇಲಿಯಾ ಕಳೆದ ವರ್ಷ ಭಾರತಕ್ಕೆ ಬಂದು 5 ಏಕದಿನ ಸರಣಿಯಲ್ಲಿ ಕೊಹ್ಲಿ ಪಡೆಯನ್ನು 3-2ರಿಂದ ಸೋಲಿಸಿತ್ತು. ಸದ್ಯ ಕೊಹ್ಲಿ ಸೈನ್ಯ ಈ ಬಾರಿ ಸರಣಿ ವಶಪಡಿಸಿಕೊಂಡು ಸೇಡನ್ನೂ ತೀರಿಸಿದೆ.

 




ತಂಡದಲ್ಲಿದ್ದದ್ದು ಕ್ರಿಸ್ ಲಿನ್, ಡಿವಿಲಿಯರ್ಸ್‌: ಕೇವಲ 8 ರನ್​ಗಳಿಗೆ 7 ವಿಕೆಟ್ ಪತನ..!

ಆಸ್ಟ್ರೇಲಿಯಾ ನೀಡಿದ್ದ 287 ರನ್​ಗಳ ಸವಾಲಿನ ಟಾರ್ಗೆಟ್ ಬೆನ್ನಟ್ಟಿದ ಭಾರತ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿತು. ಉತ್ತಮ ಆರಂಭ ಪಡೆದುಳ್ಳುವ ಜೊತೆಗೆ ಕೆ ಎಲ್ ರಾಹುಲ್ ವಿಕೆಟ್ ಕಳೆದುಕೊಂಡಿತಾದರು, ಇದು ಹಿನ್ನಡೆಯಾಗಲಿಲ್ಲ.

ಶಿಖರ್ ಧವನ್ ಇಂಜುರಿಗೆ ತುತ್ತಾದ ಪರಿಣಾಮ ರೋಹಿತ್ ಶರ್ಮಾ ಜೊತೆ ಕೆ ಎಲ್ ರಾಹುಲ್ ಇನ್ನಿಂಗ್ಸ್​ ಆರಂಭಿಸಿದರು. ರೋಹಿತ್ ಆರಂಭದಿಂದಲೇ ಬಿರುಸಿನ ಆಟದ ಮೊರೆ ಹೋದರೆ, ರಾಹುಲ್ ಇವರಿಗೆ ಉತ್ತಮ ಸಾಥ್ ನೀಡಿದರು. ಆದರೆ, ರಾಹುಲ್ 27 ಎಸೆತಗಳಲ್ಲಿ 19 ರನ್ ಗಳಿಸಿ ಎಲ್​ಬಿ ಬಲೆಗೆ ಸಿಲುಕಿದರು. ಈ ಜೋಡಿ ಮೊದಲ ವಿಕೆಟ್​ಗೆ 69 ರನ್​ಗಳ ಜೊತೆಯಾಟ ನೀಡಿತು.

IND vs AUS: ಧೋನಿಯ ವಿಶ್ವದಾಖಲೆ ಮುರಿದ ಕಿಂಗ್ ಕೊಹ್ಲಿ; ಕ್ಯಾಪ್ಟನ್ ಆಗಿ ನೂತನ ಸಾಧನೆ

ಬಳಿಕ 2ನೇ ವಿಕೆಟ್​ಗೆ ರೋಹಿತ್ ಜೊತೆಯಾದ ನಾಯಕ ವಿರಾಟ್ ಕೊಹ್ಲಿ ಅಮೋಘ ಆಟ ಪ್ರದರ್ಶಿಸಿದರು. ರೋಹಿತ್ ತಮ್ಮ ಆರ್ಭಟವನ್ನು ಮುಂದುವರೆಸಿದರೆ, ಕೊಹ್ಲಿ ಎಚ್ಚರಿಕೆಯಿಂದ ಬ್ಯಾಟ್ ಬೀಸಿದರು. ಈ ಜೋಡಿಯ ಶತಕದ ಜೊತೆಯಾಟ ಭಾರತದ ಗೆಲುವನ್ನು ಹತ್ತಿರ ಮಾಡಿತು. ರೋಹಿತ್ ಆಕರ್ಷಕ ಶತಕ ಸಿಡಿಸಿ ಮಿಂಚಿದರು.

ಏಕದಿನ ಕ್ರಿಕೆಟ್​ನಲ್ಲಿ 29ನೇ ಶತಕ ಸಿಡಿಸಿದ ರೋಹಿತ್ 128 ಎಸೆತಗಳಲ್ಲಿ 8 ಬೌಂಡರಿ, 6 ಸಿಕ್ಸರ್​​ನೊಂದಿಗೆ 119 ರನ್ ಚಚ್ಚಿ ಔಟ್ ಆದರು. ರೋಹಿತ್- ಕೊಹ್ಲಿ ಜೋಡಿ 137 ರನ್​ಗಳ ಕಾಣಿಕೆ ನೀಡಿದರು. ಇತ್ತ ರೋಹಿತ್ ಔಟ್ ಆದ ಬಳಿಕ ಕೊಹ್ಲಿ ಹಾಗೂ ಶ್ರೇಯಸ್ ಐಯರ್ ಪಂದ್ಯವನ್ನು ಗೆಲುವಿನೊಂದಿಗೆ ಅಂತ್ಯಗೊಳಿಸುವ ಜವಾಬ್ದಾರಿ ಹೊತ್ತರು.

ಅದರಂತೆ ಅತ್ಯುತ್ತಮ ಆಟವಾಡಿದ ಕೊಹ್ಲಿ ಅರ್ಧಶತಕ ಬಾರಿಸಿ ಮನಮೋಹಕ ಹೊಡೆತಗಳ ಮೂಲಕ ಗಮನ ಸೆಳೆದರು. ಭಾರತ 47.3 ಓವರ್​ನಲ್ಲಿ 3 ವಿಕೆಟ್ ನಷ್ಟಕ್ಕೆ 289 ರನ್ ಬಾರಿಸಿ 7 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿತು. ಅಂತಿಮ ಹಂತದಲ್ಲಿ ಎಡವಿದ  ಕೊಹ್ಲಿ 91 ಎಸೆತಗಳಲ್ಲಿ 8 ಬೌಂಡರಿ ಬಾರಿಸಿ 89 ರನ್ ಕಲೆಹಾಕಿದರು. ಶ್ರೇಯಸ್ ಐಯರ್ ಅಜೇಯ 44 ರನ್ ಗಳಿಸಿದರು.

IND vs AUS: ಟೀಂ ಇಂಡಿಯಾ ಮಿಂಚಿನ ಫೀಲ್ಡಿಂಗ್​ಗೆ ಫಿಂಚ್ ರನೌಟ್; ಇಲ್ಲಿದೆ ರೋಚಕ ವಿಡಿಯೋ

ಇದಕ್ಕೂ ಮೊದಲು ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಆ್ಯರೋನ್ ಫಿಂಚ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆ ಬ್ಯಾಟಿಂಗ್​ಗೆ ಉಳಿದ ಓಪನರ್​ಗಳಾದ ಆ್ಯರೋನ್ ಫಿಂಚ್(19) ಹಾಗೂ ಡೇವಿಡ್ ವಾರ್ನರ್(3) ಆರಂಭದಲ್ಲೇ ಔಟ್ ಆದರು.

ಬಳಿಕ ಸ್ಟೀವ್ ಸ್ಮಿತ್ ಹಾಗೂ ಮಾರ್ನಸ್ ಲಾಬುಶೇನ್ ಜೋಪಾನವಾಗಿ ಇನ್ನಿಂಗ್ಸ್​ ಕಟ್ಟಿದರು. ಎಚ್ಚರಿಕೆಯಿಂದ ಬ್ಯಾಟ್ ಬೀಸಿದ ಈ ಜೋಡಿ ತಂಡಕ್ಕೆ ಆಸರೆಯಾಗಿ ನಿಂತಿತು. ಆದರೆ, ಲಾಬುಶೇನ್ (54) ಅರ್ಧಶತಕ ಸಿಡಿಸಿದ ಬೆನ್ನಲ್ಲೇ ವಿರಾಟ್ ಕೊಹ್ಲಿ ಹಿಡಿದ ಅದ್ಭುತ ಕ್ಯಾಚ್​ಗೆ ಬಲಿಯಾದರು. ಈ ಮೂಲಕ ಸ್ಮಿತ್- ಮಾರ್ನಸ್ 127 ರನ್​ಗಳ ಜೊತೆಯಾಟಕ್ಕೆ ಬ್ರೇಕ್ ಬಿತ್ತು. ಬಂದ ಬೆನ್ನಲ್ಲೆ ಮಿಚೆಲ್ ಸ್ಟಾರ್ಕ್​ ಶೂನ್ಯಕ್ಕೆ ಪೆವಿಲಿಯನ್ ಸೇರಿಕೊಂಡರು.

ಬಳಿಕ ಸ್ಮಿತ್ ಜೊತೆಯಾದ ಅಲೆಕ್ಸ್ ಕ್ಯಾರಿ(35) ಅರ್ಧಶತಕದ ಜೊತೆಯಾಟ ಆಡಿದರೆ, ಆಸ್ಟನ್ ಟರ್ನರ್(4) ಬೇಗನೆ ಔಟ್ ಆದರು. ಈ ನಡುವೆ ಸ್ಮಿತ್ 117 ಎಸೆತಗಳಲ್ಲಿ ಏಕದಿನ ಕ್ರಿಕೆಟ್​ನ 9ನೇ ಶತಕ ಪೂರೈಸಿದರು.

IND vs AUS: ಏಕದಿನ ಕ್ರಿಕೆಟ್​ನಲ್ಲಿ ಹಿಟ್​ಮ್ಯಾನ್​ ಹೊಸ ಮೈಲಿಗಲ್ಲು; ಗಂಗೂಲಿ ದಾಖಲೆ ಮುರಿದ ರೋಹಿತ್

ಅಂತಿಮ ಹಂತದಲ್ಲಿ ಬಿರುಸಿನ ಆಟವಾಡಿದ ಸ್ಮಿತ್ ತಂಡದ ರನ್ ಗತಿಯನ್ನು ಏರಿಸಿದರು. ಆಸ್ಟ್ರೇಲಿಯಾ 50 ಓವರ್​ನಲ್ಲಿ 9 ವಿಕೆಟ್ ಕಳೆದುಕೊಂಡು 286 ರನ್ ಕಲೆಹಾಕಿತು. ಸ್ಮಿತ್ 132 ಎಸೆತಗಳಲ್ಲಿ 14 ಬೌಂಡರಿ, 1 ಸಿಕ್ಸರ್ ಸಿಡಿಸಿ 131 ರನ್ ಗಳಿಸಿದರು. ಭಾರತ ಪರ ಮೊಹಮ್ಮದ್ ಶಮಿ 4 ವಿಕೆಟ್ ಕಿತ್ತರೆ, ರವೀಂದ್ರ ಜಡೇಜಾ 2, ಕುಲ್ದೀಪ್ ಯಾದವ್ ಹಾಗೂ ಸೈನಿ ತಲಾ 1 ವಿಕೆಟ್ ಪಡೆದರು.

First published:January 19, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ