India vs Australia 3rd ODI Live: ಹಾರ್ದಿಕ್-ಜಡೇಜಾ ಜೊತೆಯಾಟ
IND vs AUS Live, India vs Australia Cricket Live Score: ಇಂದಿನ ಪಂದ್ಯದಲ್ಲೂ ಭಾರತ ಸೋತರೆ ಸತತ 2 ಏಕದಿನ ಸರಣಿಗಳಲ್ಲಿ ಕ್ಲೀನ್ ಸ್ವೀಪ್ ಸಂಕಟಕ್ಕೆ ತುತ್ತಾದಂತಾಗುತ್ತದೆ. ವರ್ಷಾರಂಭದಲ್ಲಿ ನ್ಯೂಜಿಲೆಂಡ್ಗೆ ಪ್ರವಾಸಗೈದಿದ್ದ ಭಾರತ ಅಲ್ಲಿಯೂ 3-0 ಅಂತರದ ಸೋಲಿಗೆ ಗುರಿಯಾಗಿತ್ತು.
ಕ್ಯಾನ್ಬೆರಾ (ಡಿ. 02): ಇಲ್ಲಿನ ಮನುಕಾ ಓವಲ್ ಕ್ರೀಡಾಂಗಣದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ಅಂತಿಮ ಮೂರನೇ ಏಕದಿನ ಪಂದ್ಯ ನಡೆಯುತ್ತಿದೆ. ಈಗಾಗಲೇ ಸತತ ಎರಡು ಜಯ ಸಾಧಿಸಿ ಸರಣಿ ವಶಪಡಿಸಿಕೊಂಡಿರುವ ಫಿಂಚ್ ಪಡೆ ವೈಟ್ವಾಷ್ನತ್ತ ಚಿತ್ತ ನೆಟ್ಟಿದ್ದರೆ, ಇತ್ತ ಕೊಹ್ಲಿ ಸೈನ್ಯ ಕೊನೆಯ ಪಂದ್ಯವನ್ನಾದರೂ ಗೆದ್ದು ಟಿ-20 ಸರಣಿಗೂ ಮುನ್ನ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವ ಲೆಕ್ಕಾಚಾರದಲ್ಲಿದೆ.
ಆದರೆ, ಭಾರತ ಮತ್ತೆ ಕಳಪೆ ಬ್ಯಾಟಿಂಗ್ ಮುಂದುವರೆಸಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ಕಣಕ್ಕಿಳಿದಿರುವ ಭಾರತ ಆರಂಭದಲ್ಲೇ ಪ್ರಮುಖ ವಿಕೆಟ್ ಕಳೆದುಕೊಂಡಿದೆ. ಓಪನರ್ಗಳಾಗಿ ಇನ್ನಿಂಗ್ಸ್ ಆರಂಭಿಸಿದ ಶುಭ್ಮನ್ ಗಿಲ್ ಹಾಗೂ ಶಿಖರ್ ಧವನ್ ಹೆಚ್ಚುಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ. ಧವನ್ 16 ರನ್ ಗಳಿಸಿ ಔಟ್ ಆದರು.
2ನೇ ವಿಕೆಟ್ಗೆ ಗಿಲ್ ಜೊತೆಯಾದ ನಾಯಕ ವಿರಾಟ್ ಕೊಹ್ಲಿ ಉತ್ತಮ ಜೊತೆಯಾಟ ಆಡಿದರು. ಎಚ್ಚರಿಕೆಯಿಂದ ಬ್ಯಾಟ್ ಬೀಸಿದ ಈ ಜೋಡಿ 56 ರನ್ಗಳ ಕಾಣಿಕೆ ನೀಡಿತು. ಗಿಲ್ 39 ಎಸೆತಗಳಲ್ಲಿ 33 ರನ್ ಗಳಿಸಿದ್ದಾಗ ಎಲ್ಬಿ ಬಲೆಗೆ ಸಿಲುಕಿದರು. ಶ್ರೇಯಸ್ ಅಯ್ಯರ್(19) ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ.
ಇತ್ತ ಕೆ. ಎಲ್ ರಾಹುಲ್(5) ಕೂಡ ಕೊಹ್ಲಿಗೆ ಸಾತ್ ನೀಡದೆ ನಿರ್ಗಮಿಸಿದರು. ಸದ್ಯ ಕ್ರೀಸ್ನಲ್ಲಿ ಕೊಹ್ಲಿ ಜೊತೆ ಹಾರ್ದಿಕ್ ಪಾಂಡ್ಯ ಇದ್ದಾರೆ.
ಅಂದುಕೊಂಡಂತೆ ತಂಡದಲ್ಲಿ 4 ಬದಲಾವಣೆ ಮಾಡಲಾಗಿದ್ದು, ಮಯಾಂಕ್ ಅರ್ವಾಲ್ ಬದಲು ಶುಭ್ಮನ್ ಗಿಲ್, ಚಹಾಲ್ ಬದಲು ಕುಲ್ದೀಪ್, ಸೈನಿ ಬದಲು ಟಿ. ನಟರಾಜನ್, ಶಮಿ ಬದಲು ಶಾರ್ದೂಲ್ ಠಾಕೂರ್ ಸ್ಥಾನ ಪಡೆದುಕೊಂಡಿದ್ದಾರೆ.
ಇತ್ತ ಆಸ್ಟ್ರೇಲಿಯಾ ತಂಡದಲ್ಲಿ ಮೂರು ಬದಲಾವಣೆ ಮಾಡಲಾಗಿದೆ. ಗ್ರಿನ್ ಏಕದಿನ ಕ್ರಿಕೆಟ್ಗೆ ಪದಾರ್ಪಣೆ ಮಾಡುತ್ತಿದ್ದರೆ, ಸಿಯಾನ್ ಅಬೊಟ್ ಹಾಗೂ ಆಸ್ಟನ್ ಅಗರ್ ಕಣಕ್ಕಿಳಿಯುತ್ತಿದ್ದಾರೆ.
ಮೊದಲ ಹಾಗೂ ಎರಡನೇ ಏಕದಿನ ಪಂದ್ಯಗಳಲ್ಲಿ ರನ್ಗಳ ಹೊಳೆ ಹರಿದಿದೆ. ಆಸ್ಟ್ರೇಲಿಯಾ ತಂಡ ಎರಡೂ ಪಂದ್ಯಗಳಲ್ಲೂ ಭಾರತೀಯ ಬೌಲರ್ಗಳನ್ನು ಬೆಚ್ಚಿಬೀಳಿಸಿದ್ದಾರೆ. ಟಿ-20 ಸರಣಿಗೂ ಮುನ್ನ ಈ ಪಂದ್ಯವನ್ನು ಗೆದ್ದು ತಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳುವ ಕೊನೆಯ ಅವಕಾಶ ಭಾರತ ತಂಡಕ್ಕಿದೆ.
ಇನ್ನೂ ಇಂದಿನ ಪಂದ್ಯದಲ್ಲೂ ಭಾರತ ಸೋತರೆ ಸತತ 2 ಏಕದಿನ ಸರಣಿಗಳಲ್ಲಿ ಕ್ಲೀನ್ ಸ್ವೀಪ್ ಸಂಕಟಕ್ಕೆ ತುತ್ತಾದಂತಾಗುತ್ತದೆ. ವರ್ಷಾರಂಭದಲ್ಲಿ ನ್ಯೂಜಿಲೆಂಡ್ಗೆ ಪ್ರವಾಸಗೈದಿದ್ದ ಭಾರತ ಅಲ್ಲಿಯೂ 3-0 ಅಂತರದ ಸೋಲಿಗೆ ಗುರಿಯಾಗಿತ್ತು. ಕ್ಯಾನ್ಬೆರಾದಲ್ಲಿ ಈ ಮುಖಭಂಗ ತಪ್ಪಬೇಕಿದೆ.
Published by:Vinay Bhat
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ