India vs Australia 3rd ODI Live: ಮ್ಯಾಕ್ಸ್​ವೆಲ್ ಔಟ್: ರೋಚಕ ಘಟ್ಟದತ್ತ ಪಂದ್ಯ

IND vs AUS Live, India vs Australia Cricket Live Score: ಇಂದಿನ ಪಂದ್ಯದಲ್ಲೂ ಭಾರತ ಸೋತರೆ ಸತತ 2 ಏಕದಿನ ಸರಣಿಗಳಲ್ಲಿ ಕ್ಲೀನ್‌ ಸ್ವೀಪ್‌ ಸಂಕಟಕ್ಕೆ ತುತ್ತಾದಂತಾಗುತ್ತದೆ. ವರ್ಷಾರಂಭದಲ್ಲಿ ನ್ಯೂಜಿಲೆಂಡ್​ಗೆ ಪ್ರವಾಸಗೈದಿದ್ದ ಭಾರತ ಅಲ್ಲಿಯೂ 3-0 ಅಂತರದ ಸೋಲಿಗೆ ಗುರಿಯಾಗಿತ್ತು.

India vs Australia Live Score Updates:

India vs Australia Live Score Updates:

  • Share this:
    ಕ್ಯಾನ್ಬೆರಾ (ಡಿ. 02): ಇಲ್ಲಿನ ಮನುಕಾ ಓವಲ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಮೂರನೇ ಏಕದಿನ ಪಂದ್ಯದಲ್ಲಿ ಭಾರತ ತಂಡ ಉತ್ತಮ ಮೊತ್ತ ಕಲೆಹಾಕಿದೆ. ನಾಯಕ ವಿರಾಟ್ ಕೊಹ್ಲಿ ಅರ್ಧಶತಕದ ಒಂದುಕಡೆಯಾದರೆ, ಅಂತಿಮ ಹಂತದಲ್ಲಿ ಹಾರ್ದಿಕ್ ಪಾಂಡ್ಯ - ರವೀಂದ್ರ ಜಡೇಜಾ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಟೀಂ ಇಂಡಿಯಾ 50 ಓವರ್​ಗಳಲ್ಲಿ 302 ರನ್ ಗಳಿಸಿದೆ.

    ಸದ್ಯ ಟಾರ್ಗೆಟ್ ಬೆನ್ನಟ್ಟಿರುವ ಆಸ್ಟ್ರೇಲಿಯಾ 5 ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ನಾಯಕ ಆ್ಯರೋನ್ ಫಿಂಚ್ ಜೊತೆ ಓಪನರ್ ಆಗಿ ಕಣಕ್ಕಿಳಿದ ಮಾರ್ನಸ್‌ ಲಾಬುಶೇನ್(7) ನಟರಾಜನ್ ಬೌಲಿಂಗ್​ನಲ್ಲಿ ಬೇಗನೆ ಔಟ್ ಆದರು.

    ಕಳೆದ ಎರಡೂ ಪಂದ್ಯದಲ್ಲಿ ಸತತ ಶತಕ ಬಾರಿಸಿ ಮಿಂಚಿದ್ದ ಸ್ಟೀವ್ ಸ್ಮಿತ್ ಆಟ ಕೂಡ ಈ ಬಾರಿ 7 ರನ್​ಗೆ ಅಂತ್ಯವಾಯಿತು. ಫಿಂಚ್ ಹಾಗೂ ಮೊರೀಸ್ ಹೆನ್ರಿಕ್ಯೂಸ್(22) ಅರ್ಧಶತಕದ ಜೊತೆಯಾಟ ಆಡಿದರಷ್ಟೆ. ಈ ನಡುವೆ ಫಿಂಚ್ ಬ್ಯಾಟ್​ನಿಂದ ಭರ್ಜರಿ ಅರ್ಧಶತಕ ಸಿಡಿಸಿಯಿತು.

    ಆದರೆ, ತಂಡವನ್ನು ಗೆಲುವಿನ ತಂಡ ಸೇರಿಸುವಲ್ಲಿ ಎಡವಿದ ಫಿಂಚ್ 82 ಎಸೆತಗಳಲ್ಲಿ 7 ಬೌಂಡರಿ, 3 ಸಿಕ್ಸರ್ ಬಾರಿಸಿ 75 ರನ್​ಗೆ ಔಟ್ ಆದರು. ಚೊಚ್ಚಲ ಏಕದಿನ ಪಂದ್ಯವನ್ನಾಡಿದ ಕ್ಯಾಮ್ರೆನ್ ಗ್ರೀನ್ 21 ರನ್​ಗೆ ಸುಸ್ತಾದರು.

    ಈ ಸಂದರ್ಭ ಒಂದಾದ ಅಲೆಕ್ಸ್ ಕ್ಯಾರಿ ಹಾಗೂ ಗ್ಲೆನ್ ಮ್ಯಾಕ್ಸ್​ವೆಲ್ ಭಾರತೀಯ ಬೌಲರ್​ಗಳನ್ನು ಕೊಂಚ ಕಾಡಿದರು. ಅರ್ಧಶತಕದ ಜೊತೆಯಾಟವೂ ಆಡಿತು. ಆದರೆ, 42 ಎಸೆತಗಳಲ್ಲಿ 38 ರನ್ ಗಳಿಸಿದ ಕ್ಯಾರಿ ರನೌಟ್​ಗೆ ಬಲಿಯಾದರು.

    ಇದಕ್ಕೂ ಮುನ್ನ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ ಕಳೆದ ಎರಡು ಪಂದ್ಯದಂತೆ ಉತ್ತಮ ಆರಂಭ ಪಡೆದುಕೊಂಡಿಲ್ಲ. ಮತ್ತೆ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿತು.  ಓಪನರ್​ಗಳಾಗಿ ಇನ್ನಿಂಗ್ಸ್ ಆರಂಭಿಸಿದ ಶುಭ್ಮನ್ ಗಿಲ್ ಹಾಗೂ ಶಿಖರ್ ಧವನ್ ಹೆಚ್ಚುಹೊತ್ತು ಕ್ರೀಸ್​ನಲ್ಲಿ ನಿಲ್ಲಲಿಲ್ಲ. ಧವನ್ 16 ರನ್​ ಗಳಿಸಿ ಔಟ್ ಆದರು.

    Virat Kohli: ರನ್ ಮೆಷಿನ್ ವಿರಾಟ್ ಕೊಹ್ಲಿಯಿಂದ ಮತ್ತೊಂದು ವಿಶ್ವದಾಖಲೆ: ಸಚಿನ್ ದಾಖಲೆ ಬ್ರೇಕ್

    2ನೇ ವಿಕೆಟ್​ಗೆ ಗಿಲ್ ಜೊತೆಯಾದ ನಾಯಕ ವಿರಾಟ್ ಕೊಹ್ಲಿ ಉತ್ತಮ ಜೊತೆಯಾಟ ಆಡಿದರು. ಎಚ್ಚರಿಕೆಯಿಂದ ಬ್ಯಾಟ್ ಬೀಸಿದ ಈ ಜೋಡಿ 56 ರನ್​ಗಳ ಕಾಣಿಕೆ ನೀಡಿತು. ಗಿಲ್ 39 ಎಸೆತಗಳಲ್ಲಿ 33 ರನ್ ಗಳಿಸಿದ್ದಾಗ ಎಲ್​ಬಿ ಬಲೆಗೆ ಸಿಲುಕಿದರು. ಶ್ರೇಯಸ್ ಅಯ್ಯರ್(19) ಹೆಚ್ಚು ಹೊತ್ತು ಕ್ರೀಸ್​ನಲ್ಲಿ ನಿಲ್ಲಲಿಲ್ಲ.

    ಇತ್ತ ಕೆ. ಎಲ್ ರಾಹುಲ್(5) ಕೂಡ ಕೊಹ್ಲಿಗೆ ಸಾತ್ ನೀಡದೆ ನಿರ್ಗಮಿಸಿದರು. ಈ ನಡುವೆ ಕೊಹ್ಲಿ ಅರ್ಧಶತಕ ಬಾರಿಸಿದರು. ಆದರೆ, 78 ಎಸೆತಗಳಲ್ಲಿ 63 ರನ್ ಗಳಿಸಿ ಕೊಹ್ಲಿ ಔಟ್ ಆಗಿದ್ದು ತಂಡಕ್ಕೆ ಹಿನ್ನಡೆಯಾಯಿತು. ಈ ಸಂದರ್ಭ ಒಂದಾದ ರವೀಂದ್ರ ಜಡೇಜಾ ಹಾಗೂ ಹಾರ್ದಿಕ್ ಪಾಂಡ್ಯ ತಂಡಕ್ಕೆ ಆಸೆಯಾಗಿ ನಿಂತರು. ತಂಡದ ರನ್ ಗತಿಯನ್ನು ಏರಿಸಿದ ಈ ಜೋಡಿ ಅತ್ಯುತ್ತಮ ಶತಕದ ಜೊತೆಯಾಟ(150 ರನ್) ಆಡಿತು.





    ಕೊನೆಯ 5 ಓವರ್​ನಲ್ಲಿ ಬರೋಬ್ಬರಿ 76 ರನ್ ಮೂಡಿಬಂತು. ಹಾರ್ದಿಕ್ 76 ಎಸೆತಗಳಲ್ಲಿ 7 ಬೌಂಡರಿ, 1 ಸಿಕ್ಸರ್ ಬಾರಿಸಿ ಅಜೇಯ 92 ರನ್ ಗಳಿಸಿದರೆ, ಜಡೇಜಾ ಕೇವಲ 50 ಎಸೆತಗಳಲ್ಲಿ 5 ಬೌಂಡರಿ, 3 ಸಿಕ್ಸರ್ ಚಚ್ಚಿ ಅಜೇಯ 66 ರನ್ ಬಾರಿಸಿದರು.

    ಅಂತಿಮವಾಗಿ ಭಾರತ 50 ಓವರ್​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 302 ರನ್ ಗಳಿಸಿತು. ಆಸ್ಟ್ರೇಲಿಯಾ ಪರ ಅಸ್ಟರ್ ಅಗರ್ 2 ವಿಕೆಟ್ ಕಿತ್ತರೆ, ಜೋಷ್ ಹ್ಯಾಜ್ಲೆವುಡ್, ಸೀನ್ ಅಬಟ್ ಹಾಗೂ ಆ್ಯಡಂ ಝಂಪ ತಲಾ 1 ವಿಕೆಟ್ ಪಡೆದರು.

    ಆಸ್ಟ್ರೇಲಿಯ ತಂಡ: ಆ್ಯರೋನ್ ಫಿಂಚ್‌ (ನಾಯಕ), ಮಾರ್ನಸ್‌ ಲಾಬುಶೇನ್‌, ಸ್ಟೀವ್ ಸ್ಮಿತ್‌, ಗ್ಲೆನ್‌ ಮ್ಯಾಕ್ಸ್​ವೆಲ್‌, ಮೊಯ್​ಸೆಸ್ ಹೆನ್ರಿಕ್ಯೂ, ಅಲೆಕ್ಸ್‌ ಕ್ಯಾರಿ, ಕ್ಯಾಮೆರಾನ್ ಗ್ರೀನ್, ಆಸ್ಟನ್ ಅಗರ್, ಸಿಯಾನ್ ಅಬಾಟ್, ಜೋಶ್‌ ಹ್ಯಾಝಲ್‌ವುಡ್‌, ಆ್ಯಡಂ ಝಂಪ.

    ಭಾರತ ತಂಡ: ಶಿಖರ್‌ ಧವನ್‌, ಶುಭ್ಮನ್ ಗಿಲ್, ವಿರಾಟ್‌ ಕೊಹ್ಲಿ (ನಾಯಕ), ಶ್ರೇಯಸ್‌ ಅಯ್ಯರ್‌, ಕೆ. ಎಲ್‌. ರಾಹುಲ್‌, ಹಾರ್ದಿಕ್‌ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಕುಲ್ದೀಪ್ ಯಾದವ್, ಜಸ್​ಪ್ರೀತ್ ಬುಮ್ರಾ, ಟಿ. ನಟರಾಜನ್.
    Published by:Vinay Bhat
    First published: