India vs Australia: ಮೂರನೇ ಏಕದಿನಕ್ಕೆ ಮೂರು ಬದಲಾವಣೆ; ಟೀಂ ಇಂಡಿಯಾದಲ್ಲಿ ಯಾರಿಗೆ ಅವಕಾಶ?

ಅಂಬಟಿ ರಾಯುಡು ಆಡಿದ ಎರಡು ಪಂದ್ಯಗಳಲ್ಲಿ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡಿಲ್ಲ. ಮೊದಲ ಪಂದ್ಯದಲ್ಲಿ 13 ಹಾಗೂ ಎರಡನೇ ಪಂದ್ಯದಲ್ಲಿ 18 ರನ್ ಗಳಿಸಿದ್ದಾರಷ್ಟೆ. ಹೀಗಾಗಿ ರಾಯುಡು ಬದಲು ರಿಷಭ್ ಪಂತ್​ಗೆ ಅವಕಾಶ ನೀಡಬೇಕು.

Vinay Bhat | news18
Updated:March 13, 2019, 5:11 PM IST
India vs Australia: ಮೂರನೇ ಏಕದಿನಕ್ಕೆ ಮೂರು ಬದಲಾವಣೆ; ಟೀಂ ಇಂಡಿಯಾದಲ್ಲಿ ಯಾರಿಗೆ ಅವಕಾಶ?
ಭುವನೇಶ್ವರ್ ಕುಮಾರ್ (ಟೀಂ ಇಂಡಿಯಾ ಬೌಲರ್)
Vinay Bhat | news18
Updated: March 13, 2019, 5:11 PM IST
ಬೆಂಗಳೂರು: ಆಸ್ಟ್ರೇಲಿಯಾ ವಿರುದ್ಧ ಎರಡು ಏಕದಿನ ಪಂದ್ಯ ಗೆದ್ದು ಬೀಗಿರುವ ಟೀಂ ಇಂಡಿಯಾ ಸದ್ಯ ಮೂರನೇ ಪಂದ್ಯವನ್ನು ಗೆದ್ದು, ಸರಣಿ ಕೈವಶ ಮಾಡಿಕೊಳ್ಳುವ ಅಂದಾಜಿನಲ್ಲಿದೆ. ಮಾರ್ಚ್​ 8 ರಂದು ರಾಂಚಿಯ ಜೆಎಸ್​​​​​ಸಿಎ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿರುವ ಮೂರನೇ ಏಕದಿನ ಪಂದ್ಯ ಉಭಯ ತಂಡಗಳಿಗೆ ಮಹತ್ವದ್ದಾಗಿದೆ.

ಎರಡನೇ ಏಕದಿನ ಪಂದ್ಯದಲ್ಲಿ ಭಾರತ ಪರ ಬ್ಯಾಟಿಂಗ್​​ನಲ್ಲಿ ನಾಯಕ ವಿರಾಟ್ ಕೊಹ್ಲಿ ಹಾಗೂ ವಿಜಯ್ ಶಂಕರ್ ಹೊರತು ಪಡಿಸಿದರೆ, ಉಳಿದ ಬ್ಯಾಟ್ಸ್​ಮನ್​​ಗಳು ಸಂಪೂರ್ಣ ವಿಫಲರಾಗಿದ್ದರು. ಮೊದಲ ಪಂದ್ಯದ ಗೆಲುವಿನ ರೂವಾರಿ ಎಂಎಸ್ ಧೋನಿ ಹಾಗೂ ಕೇದರ್ ಜಾಧವ್ ಕೂಡ ಬೇಗನೆ ಔಟ್ ಆಗಿ ನಿರಾಸೆ ಮೂಡಿಸಿದ್ದರು. ಇದನ್ನೆಲ್ಲ ಮನಗಂಡು ಭಾರತದ ಬ್ಯಾಟಿಂಗ್ ಆರ್ಡರ್​​ನಲ್ಲಿ ಒಂದಿಷ್ಟು ಬದಲಾವಣೆ ಬೇಕಾಗಿದೆ. ಅಲ್ಲದೆ ಈಗಾಗಲೇ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿರುವುದರಿಂದ ಬೆಂಚ್ ಕಾದಿದ್ದ ಆಟಗಾರರನ್ನು ಕಣಕ್ಕಿಳಿಸಬೇಕಿದೆ.

ಇದನ್ನೂ ಓದಿ: ಕೊಹ್ಲಿಅಲ್ಲ; ವಿಜಯ್ ಶಂಕರ್​​ಗೆ 50ನೇ ಓವರ್ ಬೌಲಿಂಗ್ ಮಾಡಲು ಹೇಳಿದ್ದು ಯಾರು?

ವಿಶ್ವಕಪ್​​ಗೂ ಮುನ್ನ ಭಾರತಕ್ಕಿದು ಕೊನೆಯ ಏಕದಿನ ಸರಣಿ. ಹೀಗಿರುವಾಗ, ಟೀಂ ಇಂಡಿಯಾಕ್ಕೆ ಓಪನಿಂಗ್ ದೊಡ್ಡ ಸಮಸ್ಯೆಯಾಗೇ ಉಳಿದಿದೆ. ಗಬ್ಬರ್ ಖ್ಯಾತಿಯ ಶಿಖರ್​ ಧವನ್​ ಅಬ್ಬರಿಸೋದನ್ನೇ ಮರೆತು ಬಿಟ್ಟಿದ್ದಾರೆ. ಆಡಿದ ಎರಡೂ ಪಂದ್ಯಗಳಲ್ಲಿ ಧವನ್ ಬ್ಯಾಟ್​​ನಿಂದ ಹೇಳಿಕೊಳ್ಳುವಂತಹ ಪ್ರದರ್ಶನ ಬಂದಿಲ್ಲ. ಹೀಗಾಗಿ ಧವನ್ ಬದಲು ಕೆ ಎಲ್ ರಾಹುಲ್​ಗೆ ಅವಕಾಶ ನೀಡಬೇಕಿದೆ. ಈಗಷ್ಟೆ ಫಾರ್ಮ್​ಗೆ ಮರಳಿರುವ ರಾಹುಲ್​​ಗೆ ಇನ್ನಷ್ಟು ಅವಕಾಶ ನೀಡಿದರೆ, ವಿಶ್ವಕಪ್​​ಗೆ ಸೆಟ್ ಆಗಬಹುದು.

ಅಂಬಟಿ ರಾಯುಡು ಆಡಿದ ಎರಡು ಪಂದ್ಯಗಳಲ್ಲಿ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡಿಲ್ಲ. ಮೊದಲ ಪಂದ್ಯದಲ್ಲಿ 13 ಹಾಗೂ ಎರಡನೇ ಪಂದ್ಯದಲ್ಲಿ 18 ರನ್ ಗಳಿಸಿದ್ದಾರಷ್ಟೆ. ಹೀಗಾಗಿ ರಾಯುಡು ಬದಲು ರಿಷಭ್ ಪಂತ್​ಗೆ ಅವಕಾಶ ನೀಡಬೇಕು. ವಿಶ್ವಕಪ್ ದೃಷ್ಟಿಯಿಂದ ಪಂತ್ ಮತ್ತಷ್ಟು ಆಟವನ್ನು ಆಡಬೇಕಿದೆ. ಈ ಹಿಂದೆ ಬಿಸಿಸಿಐ ಹೇಳಿರುವಂತೆ ಪಂತ್​ರನ್ನು ಉಳಿದ ಮೂರು ಪಂದ್ಯಗಳಲ್ಲಿ ಆಡಿಸಿ ಪ್ರಯೋಗಕ್ಕೆ ಒಳಪಡಿಸಬೇಕಾಗಿದೆ.

ಇದನ್ನೂ ಓದಿ: ಇದೇ ಮೊದಲ ಬಾರಿ ಐಪಿಎಲ್ ಪ್ರಶಸ್ತಿ ಗೆದ್ದು ಬೀಗಲಿದೆ ಆರ್​ಸಿಬಿ; ಹೇಗೆ ಗೊತ್ತಾ?

ಇನ್ನು ಮೊದಲ ಎರಡು ಏಕದಿನ ಪಂದ್ಯಕ್ಕೆ ಭುವನೇಶ್ವರ್ ಕುಮಾರ್​​ಗೆ ವಿಶ್ರಾಂತಿ ನೀಡಲಾಗಿತ್ತು. ಸದ್ಯ ಉಳಿದಿರುವ ಮೂರು ಪಂದ್ಯದಲ್ಲಿ ಸ್ಥಾನ ಗಿಟ್ಟಿಸಿಕೊಂಡಿರುವ ಭುವಿ, ಮೊಹಮ್ಮದ್ ಶಮಿ ಜಾಗದಲ್ಲಿ ಆಡಬೇಕಿದೆ. ಭುವನೇಶ್ವರ್​​ರ ಸ್ವಿಂಗ್ ಬಾಲ್ ಹೆಚ್ಚು ಉಪಯುಕ್ತವಾಗಲಿದ್ದು, ವಿಶ್ವಕಪ್ ದೃಷ್ಟಿಯಿಂದ ಮೂರನೇ ಪಂದ್ಯದಲ್ಲಿ ಕಣಕ್ಕಿಳಿಯಬೇಕಿದೆ.

ಅಂತಿಮ ಮೂರು ಏಕದಿನ ಪಂದ್ಯಕ್ಕೆ ಭಾರತ ತಂಡ:

ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪ-ನಾಯಕ), ಶಿಖರ್ ಧವನ್, ಅಂಬಟಿ ರಾಯುಡು, ಕೇದರ್ ಜಾಧವ್, ಎಂ ಎಸ್ ಧೋನಿ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಜಸ್​ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ಯಜುವೇಂದ್ರ ಚಹಾಲ್, ಕುಲ್ದೀಪ್ ಯಾದವ್, ವಿಜಯ್ ಶಂಕರ್, ರಿಷಭ್ ಪಂತ್, ಕೆ ಎಲ್ ರಾಹುಲ್.

First published:March 6, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...