India Playing XI: ಎರಡನೇ ಟೆಸ್ಟ್​ಗೆ ಟೀಂ ಇಂಡಿಯಾ ಪ್ರಕಟ: ತಂಡದಲ್ಲಿ ಬರೋಬ್ಬರಿ ನಾಲ್ಕು ಬದಲಾವಣೆ

ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಅಜಿಂಕ್ಯಾ ರಹಾನೆ ತಂಡವನ್ನು ಮುನ್ನಡೆಸುತ್ತಿದ್ದಾರೆ. ಶುಭ್ಮನ್ ಗಿಲ್ ಹಾಗೂ ಮೊಹಮ್ಮದ್ ಸಿರಾಜ್ ಟೆಸ್ಟ್​ಗೆ ಕ್ರಿಕೆಟ್​ಗೆ ಪದಾರ್ಪಣೆ ಮಾಡಲಿದ್ದು, ಇಂಜುರಿಯಿಂದ ಗುಣಮುಖರಾಗಿರುವ ರವೀಂದ್ರ ಜಡೇಜಾ ಸ್ಥಾನ ಪಡೆದುಕೊಂಡಿದ್ದಾರೆ.

Team India

Team India

 • Share this:
  ಮೆಲ್ಬೋರ್ನ್​ ಕ್ರಿಕೆಟ್ ಗ್ರೌಂಡ್​ನಲ್ಲಿ ಶನಿವಾರದಿಂದ ಆರಂಭವಾಗಲಿರುವ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್​ ಪಂದ್ಯಕ್ಕೆ ಭಾರತ ತಂಡವನ್ನು ಪ್ರಕಟಮಾಡಲಾಗಿದೆ. ಬಿಸಿಸಿಐ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಆಡುವ 11 ಆಟಗಾರರ ಹೆಸರನ್ನು ತಿಳಿಸಿದ್ದು ತಂಡದಲ್ಲಿ ಒಟ್ಟು ನಾಲ್ಕು ಬದಲಾವಣೆ ಮಾಡಲಾಗಿದೆ. ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಅಜಿಂಕ್ಯಾ ರಹಾನೆ ತಂಡವನ್ನು ಮುನ್ನಡೆಸುತ್ತಿದ್ದಾರೆ. ಶುಭ್ಮನ್ ಗಿಲ್ ಹಾಗೂ ಮೊಹಮ್ಮದ್ ಸಿರಾಜ್ ಟೆಸ್ಟ್​ಗೆ ಕ್ರಿಕೆಟ್​ಗೆ ಪದಾರ್ಪಣೆ ಮಾಡಲಿದ್ದು, ಇಂಜುರಿಯಿಂದ ಗುಣಮುಖರಾಗಿರುವ ರವೀಂದ್ರ ಜಡೇಜಾ ಸ್ಥಾನ ಪಡೆದುಕೊಂಡಿದ್ದಾರೆ. ಇತ್ತ ವಿಕೆಟ್ ಕೀಪರ್ ಜಾಗಕ್ಕೆ ವೃದ್ದಿಮಾನ್ ಸಾಹ ಬದಲು ರಿಷಭ್ ಪಂತ್ ಆಯ್ಕೆ ಆಗಿದ್ದಾರೆ. ಆದರೆ, ಕೆ. ಎಲ್ ರಾಹುಲ್​ ಸ್ಥಾನ ಪಡೆಯುವಲ್ಲಿ ವಿಫಲವಾಗಿದ್ದು ಬೆಂಚ್ ಕಾಯಬೇಕಿದೆ. ಕ್ರಿಸ್ಮಸ್ ಮುಂದಿನ ದಿನ ನಡೆಯುವ ಪಂದ್ಯವಾಗಿದ್ದರಿಂದ ಬಾಕ್ಸಿಂಗ್ ಡೇ ಟೆಸ್ಟ್ ಇದಾಗಲಿದ್ದು ಸಾಕಷ್ಟು ಕುತೂಹಲ ಕೆರಳಿಸಿದೆ.

  ಭಾರತ ಪ್ಲೇಯಿಂಗ್‌ XI: ಮಯಾಂಕ್ ಅಗರ್ವಾಲ್, ಶುಭ್ಮನ್ ಗಿಲ್, ಚೇತೇಶ್ವರ್ ಪೂಜಾರ, ಹನುಮಾ ವಿಹಾರಿ, ಅಜಿಂಕ್ಯಾ ರಹಾನೆ (ನಾಯಕ), ರಿಷಭ್ ಪಂತ್ (ವಿಕೆಟ್-ಕೀಪರ್), ರವೀಂದ್ರ ಜಡೇಜಾ, ಆರ್. ಅಶ್ವಿನ್, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಜಸ್​ಪ್ರೀತ್ ಬುಮ್ರಾ.

  ಮೊದಲ ಪಂದ್ಯ ಸೋತಿರುವ ಭಾರತ ತಂಡದಲ್ಲಿ ಬಾರಿ ಬದಲಾವಣೆ ಮಾಡಿದ್ದು, ಆತಿಥೇಯ ಆಸ್ಟ್ರೇಲಿಯಾಗೆ ತಿರುಗೇಟು ನೀಡುವ ಲೆಕ್ಕಚಾರದಲ್ಲಿದೆ. ಆದರೆ, ಬಾಕ್ಸಿಂಗ್ ಡೇ ಟೆಸ್ಟ್​ನಲ್ಲಿ ಭಾರತದ ಪ್ರದರ್ಶನ ಹೇಳಿಕೊಳ್ಳುವಂತೇನಿಲ್ಲ.

  ಆಸೀಸ್ ವಿರುದ್ಧ ಭಾರತ ಈವರೆಗೆ ಒಟ್ಟು 15 ಬಾಕ್ಸಿಂಗ್ ಡೇ ಟೆಸ್ಟ್​ ಪಂದ್ಯವನ್ನು ಆಡಿದೆ. ಇದರಲ್ಲಿ ಕೇವಲ ಎರಡರಲ್ಲಷ್ಟೆ ಜಯ ಸಾಧಿಸಿದೆ. 2010 ರಲ್ಲಿ ಧೋನಿ ನಾಯಕನಾಗಿರುವಾಗ ಮತ್ತು 2018 ರಲ್ಲಿ ವಿರಾಟ್ ಕೊಹ್ಲಿ ನೇತೃತ್ವದಲ್ಲಿ ಗೆಲುವು ಕಂಡಿದೆ. ಉಳಿದ 10 ಪಂದ್ಯಗಳಲ್ಲಿ ಸೋತರೆ, ಮೂರು ಪಂದ್ಯ ಡ್ರಾ ಆಗಿದೆ.

  ಆಸ್ಟ್ರೇಲಿಯಾ ವಿರುದ್ಧದ ಎರಡನೇ ಪಂದ್ಯಕ್ಕೆ ಸಾಕಷ್ಟು ಸಮತೋಲನವುಳ್ಳ ತಂಡವನ್ನು ಟೀಂ ಮ್ಯಾನೇಜ್​ಮೆಂಟ್​ ಆಯ್ಕೆ ಮಾಡಿದೆ. ಹೀಗಾಗಿ ರಹಾನೆ ಮೇಲೆ ಕೂಡ ಸಾಕಷ್ಟು ಒತ್ತಡವಿದೆ. ಅಕಸ್ಮಾತ್‌ ಮೆಲ್ಬರ್ನ್ ನಲ್ಲೂ ಮುಗ್ಗರಿಸಿದರೆ ಭಾರತ ತಂಡದ ಮೇಲಿನ ಅಳಿದುಳಿದ ನಂಬಿಕೆ ಕೂಡ ಹೊರಟು ಹೋಗುತ್ತದೆ. ಕೋಚ್‌ ರವಿ ಶಾಸ್ತ್ರೀ, ಉಸ್ತುವಾರಿ ನಾಯಕ ಅಜಿಂಕ್ಯ ರಹಾನೆ ಹಾಗೂ ಇಡೀ ತಂಡದ ಮೇಲೆ ಭಾರತೀಯ ಕ್ರಿಕೆಟಿನ ಪ್ರತಿಷ್ಠೆ ಹಾಗೂ ಭವಿಷ್ಯ ನಿಂತಿದೆ.

  ಟೀಂ ಇಂಡಿಯಾದ ದೊಡ್ಡ ಸಮಸ್ಯೆಯೆಂದರೆ “ಟೆಸ್ಟ್‌ ಪಿಲ್ಲರ್‌’ಗಳೇ ಇಲ್ಲದಿರುವುದು. ವಿರಾಟ್‌ ಕೊಹ್ಲಿ, ಮೊಹಮ್ಮದ್‌ ಶಮಿ, ಇಶಾಂತ್‌ ಶರ್ಮ, ರೋಹಿತ್‌ ಶರ್ಮ ಅವರ ಅನುಪಸ್ಥಿತಿ ಪ್ರವಾಸಿಗರನ್ನು ಗಂಭೀರವಾಗಿ ಕಾಡು ತ್ತಿದೆ. ಆಸ್ಟ್ರೇಲಿಯದಲ್ಲಿ ಯಾವತ್ತೂ ಘಾತಕ ಬೌಲಿಂಗ್‌ ದಾಳಿ ನಡೆಸುವ ಇಶಾಂತ್‌ ಈ ಬಾರಿ ಕಾಂಗರೂ ನಾಡಿಗೆ ಆಗಮಿಸದಿರುವುದು ಭಾರತಕ್ಕೆ ಬಿದ್ದ ದೊಡ್ಡ ಹೊಡೆತ. ರೋಹಿತ್‌ ಶರ್ಮ ಆಗಮಿಸಿದರೂ ಅವರ ಕ್ವಾರಂಟೈನ್‌ ಇನ್ನೂ ಮುಗಿದಿಲ್ಲ.

  ಒಟ್ಟಾರೆ, ಕಳೆದ ಸಲ ಕಾಂಗರೂ ನಾಡಿನಲ್ಲಿ ಸರಣಿ ಗೆದ್ದು ಇತಿಹಾಸ ನಿರ್ಮಿಸಿದ ಭಾರತದ ಪಾಲಿಗೆ ಈ ಪ್ರವಾಸ ದೊಡ್ಡ ಪ್ರಯಾಸದ ಸೂಚನೆಯೊಂದನ್ನು ರವಾನಿಸಿದೆ. ನಾಳೆ ಶನಿವಾರದಿಂದ ಬಾಕ್ಸಿಂಗ್ ಡೇ ಟೆಸ್ಟ್​ ಆರಂಭವಾಗಲಿದೆ.
  Published by:Vinay Bhat
  First published: