• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • India vs Australia: ಕಾಂಗರೂ ಪಡೆಗೆ ನಡುಕ ಹುಟ್ಟಿಸಿದ ಭಾರತೀಯ ಬೌಲರ್ಸ್​: ಆಸ್ಟ್ರೇಲಿಯಾ 133/6

India vs Australia: ಕಾಂಗರೂ ಪಡೆಗೆ ನಡುಕ ಹುಟ್ಟಿಸಿದ ಭಾರತೀಯ ಬೌಲರ್ಸ್​: ಆಸ್ಟ್ರೇಲಿಯಾ 133/6

India vs Australia

India vs Australia

ಕೊನೆಯ ಸೆಷನ್​ನಲ್ಲಿ ಕ್ಯಾಮೆರನ್ ಗ್ರೀನ್ (65 ಎಸೆತ, ಅಜೇಯ 17 ರನ್) ಹಾಗೂ ಪ್ಯಾಟ್ ಕಮಿನ್ಸ್​ (53 ಎಸೆತ ಅಜೇಯ 15 ರನ್) ವಿಕೆಟ್ ಕಳೆದುಕೊಳ್ಳದಂತೆ ನೋಡಿ ನಾಲ್ಕನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

  • Share this:

ಮೆಲ್ಬೋರ್ನ್​ (ಡಿ. 28): ಮೆಲ್ಬೋರ್ನ್​ ಕ್ರಿಕೆಟ್ ಗ್ರೌಂಡ್​ನಲ್ಲಿ ಸಾಗುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್​ ಪಂದ್ಯದಲ್ಲಿ ಭಾರತೀಯ ಬೌಲರ್​ಗಳು ಮಾರಕ ದಾಳಿ ಸಂಘಟಿಸಿದ್ದಾರೆ. ಪರಿಣಾಮ ಆಸ್ಟ್ರೇಲಿಯಾ ಎರಡನೇ ಇನ್ನಿಂಗ್ಸ್​ನಲ್ಲಿ ಮೂರನೇ ದಿನದಾಟದ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 133 ರನ್ ಗಳಿಸಿ 2 ರನ್​ಗಳ ಮುನ್ನಡೆ ಸಾಧಿಸಿದೆಯಷ್ಟೆ. ಭಾರತ ತಂಡ ನಾಯಕ ಅಜಿಂಕ್ಯಾ ರಹಾನೆ ಅವರ ಅಮೋಘ ಶತಕ ಹಾಗೂ ರವೀಂದ್ರ ಜಡೇಜಾ ಅವರ ಅರ್ಧಶತಕದ ನೆರವಿನಿಂದ ಮೊದಲ ಇನ್ನಿಂಗ್ಸ್​ನಲ್ಲಿ ಭಾರತ 326 ರನ್​ಗೆ ಆಲೌಟ್ ಆಯಿತು. ಈ ಮೂಲಕ 131 ರನ್​ಗಳ ಮುನ್ನಡೆ ಸಾಧಿಸಿತು.


ಬಳಿಕ ತನ್ನ ಎರಡನೇ ಇನ್ನಿಂಗ್ಸ್​ ಆರಂಭಿದ ಆಸ್ಟ್ರೇಲಿಯಾ ಆರಂಭದಲ್ಲೇ ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಉಮೇಶ್ ಯಾದವ್ ಬೌಲಿಂಗ್​ನಲ್ಲಿ ಜೋ ಬರ್ನ್ಸ್​ ಕೇವಲ 4 ರನ್ ಗಳಿಸಿ ಔಟ್ ಆದರೆ, ದೊಡ್ಡ ಇನ್ನಿಂಗ್ಸ್ ಕಟ್ಟುವ ಯೋಜನೆಯಲ್ಲಿದ್ದ ಮಾರ್ನಸ್ ಲ್ಯಾಬುಶೆನ್ 49 ಎಸೆತಗಳಲ್ಲಿ 28 ರನ್ ಗಳಿಸಿ ಔಟ್ ಆದರು.


India vs Australia: ಶುಭ್ಮನ್ ಗಿಲ್​ರನ್ನು ತಡೆದು ರವೀಂದ್ರ ಜಡೇಜಾ ರೋಚಕ ಕ್ಯಾಚ್: ಇಲ್ಲಿದೆ ವಿಡಿಯೋ


ಇತ್ತ ಸ್ಟೀವ್ ಸ್ಮಿತ್ ಈ ಬಾರಿಯೂ ವೈಫಲ್ಯ ಅನುಭವಿಸಿ 8 ರನ್ ಗಳಿಸಿರುವಾಗ ಬುಮ್ರಾ ಬೌಲಿಂಗ್​ನಲ್ಲಿ ಬೌಲ್ಡ್ ಆದರು. ಕ್ರೀಸ್ ಕಚ್ಚಿ ನಿಂತಿದ್ದ ಮ್ಯಾಥ್ಯೂ ವೇಡ್ 137 ಎಸೆತಗಳಲ್ಲಿ 40 ರನ್ ಬಾರಿಸಿ ಜಡೇಜ ಬೌಲಿಂಗ್​ನಲ್ಲಿ ಎಲ್​ಬಿ ಬಲೆಗೆ ಸಿಲುಕಿದರು. ಟ್ರಾವಿಸ್ ಹೆಡ್ ಆಟ 17 ರನ್​ಗೆ ಅಂತ್ಯವಾಯಿತು.ತಂಡಕ್ಕೆ ಆಸರೆಯಾಗುತ್ತಿದ್ದ ನಾಯಕ ಟಿಮ್ ಪೈನ್ 1 ರನ್​ಗೆ ಬ್ಯಾಟ್ ಕೆಳಗಿಟ್ಟರು. ಆದರೆ, ಕೊನೆಯ ಸೆಷನ್​ನಲ್ಲಿ ಕ್ಯಾಮೆರನ್ ಗ್ರೀನ್ (65 ಎಸೆತ, ಅಜೇಯ 17 ರನ್) ಹಾಗೂ ಪ್ಯಾಟ್ ಕಮಿನ್ಸ್​ (53 ಎಸೆತ ಅಜೇಯ 15 ರನ್) ವಿಕೆಟ್ ಕಳೆದುಕೊಳ್ಳದಂತೆ ನೋಡಿ ನಾಲ್ಕನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಆಸ್ಟ್ರೇಲಿಯಾ ಮೂರನೇ ದಿನದಾಟದ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 133 ರನ್ ಬಾರಿಸಿದೆ. ಭಾರತ ಪರ ಜಡೇಜಾ 2 ವಿಕೆಟ್ ಕಿತ್ತರೆ, ಅಶ್ವಿನ್, ಬುಮ್ರಾ, ಸಿರಾಜ್ ಹಾಗೂ ಉಮೇರ್ಶ ಯಾದವ್ ತಲಾ 1 ವಿಕೆಟ್ ಪಡೆದರು.


ಇದಕ್ಕೂ ಮುನ್ನ ನಿನ್ನೆ ಎರಡನೇ ದಿನದಾಟದಲ್ಲೂ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಮೇಲುಗೈ ಸಾಧಿಸಿತ್ತು. ಆಸ್ಟ್ರೇಲಿಯಾದ 195 ರನ್​ಗಳ ಮೊದಲ ಇನ್ನಿಂಗ್ಸ್​ಗೆ ಪ್ರತಿಯಾಗಿ ಭಾರತ ತಂಡ ಎರಡನೇ ದಿನದಾಟದ ಅಂತ್ಯಕ್ಕೆ 5 ವಿಕೆಟ್ ನಷ್ಟಕ್ಕೆ 277 ರನ್ ಗಳಿಸಿ 82 ರನ್​ಗಳ ಮುನ್ನಡೆ ಹೊಂದಿತ್ತು.


ಮೂರನೇ ದಿನವಾದ ಇಂದು ಬ್ಯಾಟಿಂಗ್ ಮುಂದುವರೆಸಿದ ಭಾರತ ಹೆಚ್ಚು ರನ್ ಗಳಿಸಲು ಸಾಧ್ಯವಾಗಲಿಲ್ಲ. 49 ರನ್​ಗೆ ಉಳಿದ 5 ವಿಕೆಟ್ ಕಳೆದುಕೊಂಡು ಸರ್ವಪತನ ಕಂಡಿತು. ರಹಾನೆ 223 ಎಸೆತಗಳಲ್ಲಿ 12 ಬೌಂಡರಿಯೊಂದಿಗೆ 112 ರನ್ ಬಾರಿಸಿದರೆ, ಜಡೇಜಾ 159 ಎಸೆತಗಳಲ್ಲಿ 57 ರನ್ ಗಳಿಸಿದರು. ಅಶ್ವಿನ್ ಆಟ 14 ರನ್​ಗೆ ಅಂತ್ಯವಾಯಿತು.


ಉಮೇಶ್ ಯಾದವ್ 9 ಹಾಗೂ ಜಸ್​ಪ್ರೀತ್ ಬುಮ್ರಾ ಸೊನ್ನೆ ಸುತ್ತಿದರು. ಭಾರತ 115.1 ಓವರ್​ನಲ್ಲಿ 326 ರನ್​ಗೆ ಆಲೌಟ್ ಆಯಿತು. ಆಸ್ಟ್ರೇಲಿಯಾ ಪರ ನೇಥನ್ ಲ್ಯಾನ್ ಹಾಗೂ ಮಿಚೆಲ್ ಸ್ಟಾರ್ಕ್​ ತಲಾ 3 ವಿಕೆಟ್ ಕಿತ್ತರೆ, ಪ್ಯಾಟ್ ಕಮಿನ್ಸ್ 2 ವಿಕೆಟ್ ಪಡೆದರು.

First published: