ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಹೀನಾಯ ಪ್ರದರ್ಶನ ತೋರಿ ಸೋಲುಂಡಿದ್ದ ಟೀಂ ಇಂಡಿಯಾ ಸದ್ಯ ಎರಡನೇ ಟೆಸ್ಟ್ಗೆ ಸಜ್ಜಾಗುತ್ತಿದೆ. ನಾಯಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಹಾಗೂ ಮೊಹಮ್ಮದ್ ಶಮಿಯಂತಹ ಅನುಭವಿ ಆಟಗಾರರ ಅನುಪಸ್ಥಿತಿಯಲ್ಲಿ ಭಾರತ ತಂಡ ಎರಡನೇ ಟೆಸ್ಟ್ನಲ್ಲಿ ಕಣಕ್ಕಿಳಿಯುತ್ತಿದ್ದು, ಸಾಕಷ್ಟು ಕುತೂಹಲ ಕೆರಳಿಸಿದೆ. ಹಾಗಾದ್ರೆ ಭಾರತ - ಆಸ್ಟ್ರೇಲಿಯಾ ಎರಡನೇ ಟೆಸ್ಟ್ ಪಂದ್ಯ ಯಾವಾಗ ಆರಂಭ?, ಎಲ್ಲಿ?, ಎಷ್ಟು ಗಂಟೆಗೆ ಎಂಬ ಮಾಹಿತಿ ಇಲ್ಲಿದೆ.
ವಿರಾಟ್ ಕೊಹ್ಲಿ ಅಲಭ್ಯತೆಯಲ್ಲಿ ಭಾರತ ತಂಡವನ್ನು ಎರಡನೇ ಟೆಸ್ಟ್ನಿಂದ ಅಜಿಂಕ್ಯಾ ರಹಾನೆ ಮುನ್ನಡೆಸುತ್ತಿದ್ದಾರೆ. ಅಲ್ಲದೆ ತಂಡದ ಪ್ಲೇಯಿಂಗ್ 11 ನಲ್ಲಿ ಸಾಕಷ್ಟು ಬದಲಾವಣೆಯನ್ನು ನಿರೀಕ್ಷಿಸಲಾಗಿದೆ. ಪೃಥ್ವಿ ಶಾ ಹಾಗೂ ವೃದ್ದಿಮಾನ್ ಸಾಹ ವೈಫಲ್ಯ ಅನುಭವಿಸುತ್ತಿರುವ ಕಾರಣ ಶುಭ್ಮನ್ ಗಿಲ್ ಹಾಗೂ ರಿಷಭ್ ಪಂತ್ಗೆ ಅವಕಾಶ ನೀಡುವ ಸಾಧ್ಯತೆ ಹೆಚ್ಚಿದೆ.
Suresh Raina: ಮುಂಬೈನಲ್ಲಿ ಟೀಂ ಇಂಡಿಯಾ ಮಾಜಿ ಸ್ಟಾರ್ ಆಟಗಾರ ಸುರೇಶ್ ರೈನಾ ಅರೆಸ್ಟ್
ವಿರಾಟ್ ಕೊಹ್ಲಿ ಬದಲು ಕೆ. ಎಲ್ ರಾಹುಲ್ ಸ್ಥಾನ ಪಡೆಯುವುದು ಖಚಿತ. ಇತ್ತ ಇಂಜುರಿಗೆ ತುತ್ತಾಗಿರುವ ರವೀಂದ್ರ ಜಡೇಜಾ ಗುಣಮುಖರಾಗುತ್ತಿದ್ದು, ಹನುಮಾ ವಿಹಾರಿ ಬದಲು ಸ್ಥಾನ ಆಡುವ ಬಳಗದಲ್ಲಿ ಕಾಣಿಸಿಕೊಂಡರೆ ಅಚ್ಚರಿ ಪಡಬೇಕಿಲ್ಲ. ಶಮಿ ಜಾಗವನ್ನು ಮೊಹಮ್ಮದ್ ಸಿರಾಜ್ ತುಂಬಲಿದ್ದಾರ.
ಡಿಸೆಂಬರ್ 26 ರಿಂದ ಭಾರತ – ಆಸ್ಟ್ರೇಲಿಯಾ ನಡುವೆ ಎರಡನೇ ಟೆಸ್ಟ್ ಪಂದ್ಯ ಮೆಲ್ಬೋರ್ನ್ನ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ನಲ್ಲಿ ನಡೆಯಲಿದೆ. ಭಾರತೀಯ ಕಾಲಮಾನದ ಪ್ರಕಾರ ಪಂದ್ಯ ಮುಂಜಾನೆ 5 ಗಂಟೆಗೆ ಪ್ರಾರಂಭವಾಗಲಿದೆ.
ಏನಿದು ಬಾಕ್ಸಿಂಗ್ ಡೇ ಟೆಸ್ಟ್?:
ಈ ಟೆಸ್ಟ್ ಪಂದ್ಯವನ್ನು ಬಾಕ್ಸಿಂಗ್ ಡೇ ಟೆಸ್ಟ್ ಎಂದು ಕರೆಯಲಾಗುತ್ತಿದೆ. ಹೆಚ್ಚಿನವರು ಬಾಕ್ಸಿಂಗ್ ಡೇ ಟೆಸ್ಟ್ ಎಂದರೆ ಎರಡು ತಂಡಗಳ ಹಣಾಹಣಿ ಅಥವಾ ಕಾಳಗ ಅಂದುಕೊಂಡಿದ್ದಾರೆ. ಹೀಗಾಗಿ ಇದನ್ನು ಬಾಕ್ಸಿಂಗ್ ಡೇ ಎಂದು ವರ್ಣಿಸಲಾಗುತ್ತಿದೆ ಎಂದು ಭಾವಿಸಿದ್ದಾರೆ. ಆದರೆ ಇಲ್ಲಿ ಬಾಕ್ಸಿಂಗ್ ಎಂದರೆ ಮುಷ್ಠಿ ಕಾಳಗವಲ್ಲ. ಬದಲಾಗಿ ಕ್ರಿಸ್ಮಸ್ ಮರುದಿನ ನಡೆಯುತ್ತಿರುವುದರಿಂದ ಬಾಕ್ಸಿಂಗ್ ಡೇ ಪಂದ್ಯ ಎಂದು ಕರೆಯಲಾಗುತ್ತಿದೆ.
India vs Australia: ಕೊಹ್ಲಿ, ರೋಹಿತ್, ಶಮಿ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾಕ್ಕೆ ಸಿಕ್ತು ಭರ್ಜರಿ ಗುಡ್ ನ್ಯೂಸ್
ಅಂದರೆ ಕ್ರಿಸ್ಮಸ್ ದಿನ ಸ್ನೇಹಿತರು, ಕುಟುಂಬದವರು ಪರಸ್ಪರ ಗಿಫ್ಟ್ ಬಾಕ್ಸ್ ನೀಡುತ್ತಾರೆ. ಮರುದಿನ ಅಂದರೆ ಡಿಸೆಂಬರ್ 26 ರಂದು ಆ ಬಾಕ್ಸ್ ಓಪನ್ ಮಾಡಲಾಗುತ್ತದೆ. ಇದೇ ಕಾರಣದಿಂದ ಬಾಕ್ಸ್ ಓಪನ್ ಮಾಡುವ ದಿನವನ್ನು ಬಾಕ್ಸಿಂಗ್ ಡೇ ಎನ್ನಲಾಗುತ್ತದೆ. ಇದೇ ದಿನ ಪಂದ್ಯವನ್ನು ಆಯೋಜಿಸುತ್ತಿರುವುದರಿಂದ ಬಾಕ್ಸಿಂಗ್ ಡೇ ಟೆಸ್ಟ್ ಎಂಬ ಹೆಸರು ಬಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ