India vs Australia: ಸಿಡ್ನಿಯಲ್ಲಿ ಸಿಡಿಯುತ್ತಾ ವಿರಾಟ್ ಬಳಗ: ಇಂದು ಭಾರತ – ಆಸ್ಟ್ರೇಲಿಯಾ ಎರಡನೇ ಟಿ-20 ಕದನ

ನಾಯಕ ಕೊಹ್ಲಿ ಹಾಗೂ ಹಾರ್ದಿಕ್ ಪಾಂಡ್ಯ ಉತ್ತಮ ಲಯದಲ್ಲಿದ್ದಾರೆ. ಆದರೆ, ಮನೀಶ್ ಪಾಂಡೆ ಹಾಗೂ ಸಂಜು ಸ್ಯಾಮ್ಸನ್ ಬ್ಯಾಟ್ ಸಿಡಿಯಬೇಕಿದೆ.

IND vs AUS

IND vs AUS

 • Share this:
  ಸಿಡ್ನಿ (ಡಿ. 06): ಇಲ್ಲಿನ ಸಿಡ್ನಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಇಂದು ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ಎರಡನೇ ಟಿ-20 ಪಂದ್ಯ ನಡೆಯಲಿದೆ. ಮೊದಲ ಪಂದ್ಯದಲ್ಲಿ ಪರಾಕ್ರಮ ಮೆರೆದ ಟೀಂ ಇಂಡಿಯಾ 11 ರನ್​ಗಳ ಭರ್ಜರಿ ಜಯ ಸಾಧಿಸಿ 1-0 ಮುನ್ನಡೆ ಕಾಯ್ದುಕೊಂಡಿದೆ. ಇಂದಿನ ಪಂದ್ಯ ಗೆದ್ದರೆ ಸರಣಿ ವಶಪಡಿಸಿಕೊಳ್ಳಲಿದೆ. ಇತ್ತ ಆಸ್ಟ್ರೇಲಿಯಾಕ್ಕೆ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಮಧ್ಯಾಹ್ನ 1:40ಕ್ಕೆ ಪಂದ್ಯ ಆರಂಭವಾಗಲಿದ್ದು ಸಾಕಷ್ಟು ಕುತೂಹಲ ಕೆರಳಿಸಿದೆ.

  ವಿರಾಟ್ ಪಡೆ ಬ್ಯಾಟಿಂಗ್​ನಲ್ಲಿ ಇನ್ನಷ್ಟು ಸುಧಾರಿಸಬೇಕಿದೆ. ಏಕದಿನ ಸರಣಿಯಿಂದಲೂ ಭಾರತ ಈವರೆಗೆ ಯಾವುದೇ ಪಂದ್ಯದಲ್ಲಿ ಉತ್ತಮ ಆರಂಭ ಪಡೆದುಕೊಂಡಿಲ್ಲ. ಶಿಖರ್ ಧವನ್ ಫಾರ್ಮ್​ ಕಳೆದುಕೊಂಡಿರುವುದು ಒಂದುಕಡೆಯಾದರೆ, ರೋಹಿತ್ ಶರ್ಮಾ ಅಲಭ್ಯತೆ ಎದ್ದು ಕಾಣುತ್ತಿದೆ. ರಾಹುಲ್ ಜೊತೆ ಧವನ್ ಬಿರುಸಿನ ಆರಂಭ ಕೊಡುವ ಬಗ್ಗೆ ಯೋಚಿಸಬೇಕಿದೆ.

  ಯಾರ್ಕರ್ ಕಿಂಗ್ ನಟರಾಜನ್ ಎಸೆದ ಬೆಂಕಿಯ ಚೆಂಡಿಗೆ ನಡುಗಿದ ಆಸೀಸ್ ಬ್ಯಾಟ್ಸ್​ಮನ್: ಕ್ಲೀನ್ ಬೌಲ್ಡ್ ವಿಡಿಯೋ ಇಲ್ಲಿದೆ

  ನಾಯಕ ಕೊಹ್ಲಿ ಹಾಗೂ ಹಾರ್ದಿಕ್ ಪಾಂಡ್ಯ ಉತ್ತಮ ಲಯದಲ್ಲಿದ್ದಾರೆ. ಆದರೆ, ಮನೀಶ್ ಪಾಂಡೆ ಹಾಗೂ ಸಂಜು ಸ್ಯಾಮ್ಸನ್ ಬ್ಯಾಟ್ ಸಿಡಿಯಬೇಕಿದೆ. ರವೀಂದ್ರ ಜಡೇಜಾ ಅನುಪಸ್ಥಿತಿ ತಂಡಕ್ಕೆ ಹಿನ್ನಡೆಯಾಗುವುದು ಖಚಿತ. ಯಜುವೇಂದ್ರ ಚಹಾಲ್ ಸ್ಪಿನ್ ಮೋಡಿ ಕೆಲಸ ಮಾಡಲು ಶುರುಮಾಡಿದೆ. ಉಳಿದಂತೆ ಟಿ. ನಟರಾಜನ್, ಮೊಹಮ್ಮದ್ ಶಮಿ ಹಾಗೂ ದೀಪಕ್ ಚಹಾರ್ ತಂಡಕ್ಕೆ ಗೆಲುವು ತಂದುಕೊಡುವಲ್ಲಿ ಪಾತ್ರವಹಿಸುತ್ತಿದ್ದಾರೆ.

  ಇತ್ತ ಆಸ್ಟ್ರೇಲಿಯಾಕ್ಕೆ ಇಲ್ಲಿ ಗೆಲುವು ಅನಿವಾರ್ಯವಾದ್ದರಿಂದ ಒತ್ತಡಕ್ಕೆ ಬಿದ್ದಿದೆ. ಸ್ವತಃ ನಾಯಕನೇ ಆ್ಯರೋನ್ ಫಿಂಚ್ ಇಂಜುರಿಗೆ ತುತ್ತಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಇವರ ಲಭ್ಯತೆ ಬಗ್ಗೆ ಮಾಹಿತಿಯಿಲ್ಲ. ಏಕದಿನದಲ್ಲಿ ಸತತ ಎರಡು ಶತಕ ಬಾರಿಸಿ ಮೆರೆದಿದ್ದ ಸ್ಮಿತ್‌ ಮೊದಲ ಪಂದ್ಯದಲ್ಲಿ ಕೈಕೊಟ್ಟಿದ್ದರು. ಅವರನ್ನು ಮತ್ತೆ ಬೇಗ ಪೆವಿಲಿಯನ್‌ಗೆ ಸೇರಿಸಬೇಕಿದೆ.

  IND vs AUS: ಇಡೀ ಪಂದ್ಯದ ಗತಿಯನ್ನೇ ಬದಲಾಯಿಸಿತು ಆ ಒಂದು ರೋಚಕ ಕ್ಯಾಚ್: ಇಲ್ಲಿದೆ ವಿಡಿಯೋ

  ಉಳಿದಿರುವ ಮತ್ತೋರ್ವ ಅಪಾಯಕಾರಿ ಆಟಗಾರನೆಂದರೆ ಮ್ಯಾಕ್ಸ್‌ವೆಲ್‌. ಈ ವಿಕೆಟ್‌ ಬೇಗ ಪತನಗೊಂಡರೆ ಭಾರತದ ಕೈ ಮೇಲಾದಂತೆ. ಬೌಲಿಂಗ್‌ ವಿಭಾಗದಲ್ಲಿ ಹಿರಿಯ ಸ್ಪಿನ್ನರ್‌ ನಥನ್‌ ಲಿಯಾನ್‌ ಅವರನ್ನು ಆಡಿಸಿ, ಅವರನ್ನು ಪವರ್‌ ಪ್ಲೇ ಅವಧಿಯಲ್ಲಿ ಬಳಕೊಳ್ಳುವ ಯೋಜನೆ ಆಸ್ಟ್ರೇಲಿಯದ್ದು. ಆಗ ಮಿಚೆಲ್‌ ಸ್ವೆಪ್ಸನ್‌ ಹೊರಗುಳಿಯಬೇಕಾಗುತ್ತದೆ.

  ಘಾತಕ ವೇಗಿ ಮಿಚೆಲ್ ಸ್ಟಾರ್ಕ್​ ವೈಯಕ್ತಿಕ ಕಾರಣಗಳಿಂದ ಟಿ-20 ಸರಣಿಯಿಂದ ಹೊರಗುಳಿದಿದ್ದಾರೆ. ಇದುಕೂಡ ಕಾಂಗರೂ ಪಡೆಗೆ ದೊಡ್ಡ ಹೊಡೆತವಾಗಿದೆ. ಕಳೆದ ಪಂದ್ಯಗಳಲ್ಲಿ ಕೊನೆಯ ಓವರ್​ಗಳಲ್ಲಿ ಸಾಕಷ್ಟು ರನ್​ ಬಿಟ್ಟುಕೊಟ್ಟಿರುವ ಆಸೀಸ್ ಬೌಲಿಂಗ್ ವಿಭಾಗವನ್ನು ರಿಪೇರಿ ಮಾಡಿಕೊಳ್ಳ ಬೇಕಿದೆ. ಚೇಸಿಂಗ್ ಮಾಡುವ ವೇಳೆ ನಾವು ಹೆಚ್ಚು ಬೌಂಡರಿಗಳನ್ನು ಬಾರಿಸಲಿಲ್ಲ. ಜೊತೆಗೆ ಕೊನೆಯ ಓವರ್​ಗಳಲ್ಲಿ ಸಾಕಷ್ಟು ರನ್​ ಬಿಟ್ಟುಕೊಟ್ಟೆವು ಎಂದು ಫಿಂಚ್​ ಶುಕ್ರವಾರದ ಪಂದ್ಯದ ನಂತರ ತಿಳಿಸಿದ್ದರು.
  Published by:Vinay Bhat
  First published: