India vs Australia 2nd T20 Live: ಸ್ಮಿತ್ ಭರ್ಜರಿ ಬ್ಯಾಟಿಂಗ್: ಉತ್ತಮ ಮೊತ್ತದತ್ತ ಆಸ್ಟ್ರೇಲಿಯಾ

IND vs AUS 2nd T20 Live, India vs Australia Live Cricket Score: ಮೊದಲ ಪಂದ್ಯದಲ್ಲಿ ಪರಾಕ್ರಮ ಮೆರೆದ ಟೀಂ ಇಂಡಿಯಾ 11 ರನ್​ಗಳ ಭರ್ಜರಿ ಜಯ ಸಾಧಿಸಿ 1-0 ಮುನ್ನಡೆ ಕಾಯ್ದುಕೊಂಡಿದೆ. ಇಂದಿನ ಪಂದ್ಯ ಗೆದ್ದರೆ ಸರಣಿ ವಶಪಡಿಸಿಕೊಳ್ಳಲಿದೆ.

IND vs AUS 2nd Live Score Updates

IND vs AUS 2nd Live Score Updates

 • Share this:
  ಸಿಡ್ನಿ (ಡಿ. 06): ಇಲ್ಲಿನ ಸಿಡ್ನಿ ಕ್ರಿಕೆಟ್ ಗ್ರೌಂಡ್​ನಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ಎರಡನೇ ಟಿ-20 ಪಂದ್ಯ ನಡೆಯುತ್ತಿದೆ. ಮೊದಲ ಪಂದ್ಯದಲ್ಲಿ 11 ರನ್​ಗಳ ಜಯ ಸಾಧಿಸಿ 1-0 ಮುನ್ನಡೆಯಲ್ಲಿರುವ ಕೊಹ್ಲಿ ಪಡೆ, ಇಂದಿನ ಪಂದ್ಯ ಗೆದ್ದರೆ ಸರಣಿ ವಶಪಡಿಸಿಕೊಳ್ಳಲಿದೆ. ಇತ್ತ ಆಸ್ಟ್ರೇಲಿಯಾಕ್ಕೆ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿದ್ದು, ಸೋಲಿನ ಸುಳಿಯಿಂದ ಹೊರಬರಬೇಕಿದೆ. ಉಭಯ ತಂಡಗಳ ಆಟಗಾರರು ಇಂಜುರಿಯಿಂದ ಬಳಲುತ್ತಿದ್ದು, ಗೆಲುವಿಗಾಗಿ ಕಠಿಣ ಹೋರಾಟ ನಡೆಸಬೇಕಿದೆ.

  ಟಾಸ್ ಗೆದ್ದ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.

  ಬ್ಯಾಟಿಂಗ್​ಗೆ ಇಳಿದಿರುವ ಆಸ್ಟ್ರೇಲಿಯಾ ಸ್ಫೋಟಕ ಆರಂಭ ಪಡೆದುಕೊಳ್ಳುವ ಜೊತೆ ಒಂದು ವಿಕೆಟ್ ಕಳೆದುಕೊಂಡಿತು. ಓಪನರ್​ಗಳಾದ ನಾಯಕ ಮ್ಯಾಥ್ಯೂ ವೇಡ್ ಬಿರುಸಿನ ಬ್ಯಾಟಿಂಗ್ ನಡೆಸಿ ಮೊದಲ 4 ಓವರ್​ನಲ್ಲೇ ತಂಡದ ಮೊತ್ತವನ್ನು 40ರ ಗಡಿ ದಾಟಿಸಿದರು. ಆದರೆ, ಇತ್ತ ಡಾರ್ಸಿ ಶಾರ್ಟ್​ 9 ರನ್​ಗೆ ಔಟ್ ಆಗುವ ಮೂಲಕ ನಿರಾಸೆ ಮೂಡಿಸಿದರು.

  ನಂತರವೂ ಹೇಡ್ ಸ್ಫೋಟಕ ಆಟ ಮುಂದುವರೆಯಿತು. ಆದರೆ, ಆಕರ್ಷಕ ಅರ್ಧಶತಕ ಸಿಡಿಸಿದ ಬೆನ್ನಲ್ಲೆ ರನೌಟ್​ಗೆ ಬಲಿಯಾದರು. 32 ಎಸೆತಗಳಲ್ಲಿ 10 ಬೌಂಡರಿ, 1 ಸಿಕ್ಸರ್ ಬಾರಿಸಿ 58 ರನ್ ಗಳಿಸಿದರು. ಗ್ಲೆನ್ ಮ್ಯಾಕ್ಸ್​ವೆಲ್  13 ಎಸೆತಗಳಲ್ಲಿ 22 ರನ್ ಬಾರಿಸಿದರು.

  ಕ್ರೀಸ್​ನಲ್ಲಿ ಸ್ಟೀವ್ ಸ್ಮಿತ್ ಹಾಗೂ ಮೊಯ್​ಸೆಸ್ ಹೆನ್ರಿಕ್ಯೂಸ್ ಇದ್ದಾರೆ.

  ಇಂದಿನ ಪಂದ್ಯಕ್ಕೆ ಭಾರತ ತಂಡದಲ್ಲಿ ಮೂರು ಬದಲಾವಣೆ ಮಾಡಲಾಗಿದೆ. ಜಡೇಜಾ ಬದಲು ಚಹಾಲ್ ತಂಡ ಸೇರಿಕೊಂಡರೆ, ಶಮಿ ಬದಲು ಶಾರ್ದೂಲ್ ಠಾಕೂರ್ ಹಾಗೂ ಮನೀಶ್ ಪಾಂಡೆ ಬದಲು ಶ್ರೇಯಸ್ ಅಯ್ಯರ್ ಸ್ಥಾನ ಪಡೆದುಕೊಂಡಿದ್ದಾರೆ.

  ಭಾರತ ತಂಡ: ಶಿಖರ್‌ ಧವನ್‌, ಕೆ. ಎಲ್ ರಾಹುಲ್ (ವಿ. ಕೀ), ವಿರಾಟ್‌ ಕೊಹ್ಲಿ (ನಾಯಕ), ಶ್ರೇಯಸ್‌ ಅಯ್ಯರ್‌, ಸಂಜು ಸ್ಯಾಮ್ಸನ್, ಹಾರ್ದಿಕ್‌ ಪಾಂಡ್ಯ, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ದೀಪಕ್ ಚಹಾರ್, ಟಿ. ನಟರಾಜನ್, ಯಜುವೇಂದ್ರ ಚಹಾಲ್

  ಇತ್ತ ಆಸ್ಟ್ರೇಲಿಯಾ ತಂಡದ ನಾಯಕ ಆ್ಯರೋನ್ ಫಿಂಚ್ ಇಂಜುರಿಗೆ ತುತ್ತಾದ ಪರಿಣಾಮ ಮ್ಯಾಥ್ಯೂ ವೇಡ್ ತಂಡನ್ನು ಮುನ್ನಡೆಸುತ್ತಿದ್ದಾರೆ. ಕಾಂಗರೂ ಪಡೆಯಲ್ಲೂ ಮೂರು ಬದಲಾವಣೆ ಮಾಡಲಾಗಿದೆ. ಜೊತೆಗೆ ಆಸ್ಟ್ರೇಲಿಯಾ ಪರ ಡ್ಯಾನಿಯಲ್ ಸ್ಯಾಮ್ಸ್ ಟಿ-20 ಕ್ರಿಕೆಟ್​ಗೆ ಪದಾರ್ಪಣೆ ಮಾಡುತ್ತಿದ್ದಾರೆ.

  ಆಸ್ಟ್ರೇಲಿಯ ತಂಡ: ಡಾರ್ಸಿ ಶಾರ್ಟ್​, ಮಾರ್ಕಸ್ ಸ್ಟಾಯಿನಿಸ್, ಮ್ಯಾಥ್ಯೂ ವೇಡ್ (ನಾಯಕ), ಸ್ಟೀವ್ ಸ್ಮಿತ್‌, ಗ್ಲೆನ್‌ ಮ್ಯಾಕ್ಸ್​ವೆಲ್‌, ಮೊಯ್​ಸೆಸ್ ಹೆನ್ರಿಕ್ಯೂಸ್, ಡೆನಿಯಲ್ ಸ್ಯಾಮ್ಸ್, ಸಿಯಾನ್ ಅಬಾಟ್, ಮಿಚೆಲ್ ಸ್ವೆಪ್ಸನ್, ಆ್ಯಂಡ್ರೋ ಟೈ, ಆ್ಯಡಂ ಝಂಪ.

  ವಿರಾಟ್ ಪಡೆ ಬ್ಯಾಟಿಂಗ್​ನಲ್ಲಿ ಇನ್ನಷ್ಟು ಸುಧಾರಿಸಬೇಕಿದೆ. ಏಕದಿನ ಸರಣಿಯಿಂದಲೂ ಭಾರತ ಈವರೆಗೆ ಯಾವುದೇ ಪಂದ್ಯದಲ್ಲಿ ಉತ್ತಮ ಆರಂಭ ಪಡೆದುಕೊಂಡಿಲ್ಲ. ಶಿಖರ್ ಧವನ್ ಫಾರ್ಮ್​ ಕಳೆದುಕೊಂಡಿರುವುದು ಒಂದುಕಡೆಯಾದರೆ, ರೋಹಿತ್ ಶರ್ಮಾ ಅಲಭ್ಯತೆ ಎದ್ದು ಕಾಣುತ್ತಿದೆ. ರಾಹುಲ್ ಜೊತೆ ಧವನ್ ಬಿರುಸಿನ ಆರಂಭ ಕೊಡುವ ಬಗ್ಗೆ ಯೋಚಿಸಬೇಕಿದೆ.

  Australia A vs India A Practice match: ಅಭ್ಯಾಸ ಪಂದ್ಯದಲ್ಲಿ ಕುಸಿದ ಭಾರತ: 150 ರನ್​ಗೂ ಮುನ್ನವೇ 6 ವಿಕೆಟ್ ಪತನ

  ನಾಯಕ ಕೊಹ್ಲಿ ಹಾಗೂ ಹಾರ್ದಿಕ್ ಪಾಂಡ್ಯ ಉತ್ತಮ ಲಯದಲ್ಲಿದ್ದಾರೆ. ಆದರೆ, ಮನೀಶ್ ಪಾಂಡೆ ಹಾಗೂ ಸಂಜು ಸ್ಯಾಮ್ಸನ್ ಬ್ಯಾಟ್ ಸಿಡಿಯಬೇಕಿದೆ. ರವೀಂದ್ರ ಜಡೇಜಾ ಅನುಪಸ್ಥಿತಿ ತಂಡಕ್ಕೆ ಹಿನ್ನಡೆಯಾಗುವುದು ಖಚಿತ. ಯಜುವೇಂದ್ರ ಚಹಾಲ್ ಸ್ಪಿನ್ ಮೋಡಿ ಕೆಲಸ ಮಾಡಲು ಶುರುಮಾಡಿದೆ. ಉಳಿದಂತೆ ಟಿ. ನಟರಾಜನ್, ಮೊಹಮ್ಮದ್ ಶಮಿ ಹಾಗೂ ದೀಪಕ್ ಚಹಾರ್ ತಂಡಕ್ಕೆ ಗೆಲುವು ತಂದುಕೊಡುವಲ್ಲಿ ಪಾತ್ರವಹಿಸುತ್ತಿದ್ದಾರೆ.

  ಇತ್ತ ಆಸ್ಟ್ರೇಲಿಯಾಕ್ಕೆ ಇಲ್ಲಿ ಗೆಲುವು ಅನಿವಾರ್ಯವಾದ್ದರಿಂದ ಒತ್ತಡಕ್ಕೆ ಬಿದ್ದಿದೆ. ಸ್ವತಃ ನಾಯಕನೇ ಆ್ಯರೋನ್ ಫಿಂಚ್ ಇಂಜುರಿಗೆ ತುತ್ತಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಏಕದಿನದಲ್ಲಿ ಸತತ ಎರಡು ಶತಕ ಬಾರಿಸಿ ಮೆರೆದಿದ್ದ ಸ್ಮಿತ್‌ ಮೊದಲ ಪಂದ್ಯದಲ್ಲಿ ಕೈಕೊಟ್ಟಿದ್ದರು. ಅವರನ್ನು ಮತ್ತೆ ಬೇಗ ಪೆವಿಲಿಯನ್‌ಗೆ ಸೇರಿಸಬೇಕಿದೆ.

  ಉಳಿದಿರುವ ಮತ್ತೋರ್ವ ಅಪಾಯಕಾರಿ ಆಟಗಾರನೆಂದರೆ ಮ್ಯಾಕ್ಸ್‌ವೆಲ್‌. ಈ ವಿಕೆಟ್‌ ಬೇಗ ಪತನಗೊಂಡರೆ ಭಾರತದ ಕೈ ಮೇಲಾದಂತೆ. ಘಾತಕ ವೇಗಿ ಮಿಚೆಲ್ ಸ್ಟಾರ್ಕ್​ ವೈಯಕ್ತಿಕ ಕಾರಣಗಳಿಂದ ಟಿ-20 ಸರಣಿಯಿಂದ ಹೊರಗುಳಿದಿದ್ದಾರೆ. ಇದುಕೂಡ ಕಾಂಗರೂ ಪಡೆಗೆ ದೊಡ್ಡ ಹೊಡೆತವಾಗಿದೆ.
  Published by:Vinay Bhat
  First published: