ಸಿಡ್ನಿ ಕ್ರಿಕೆಟ್ ಗ್ರೌಂಡ್ನಲ್ಲಿ ನಡೆಯುತ್ತಿರುವ ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಎರಡನೇ ಏಕದಿನ ಪಂದ್ಯ ರೋಚಕ ಘಟ್ಟದತ್ತ ಸಾಗುತ್ತಿದೆ. ಮೊದಲ ಬ್ಯಾಟ್ ಮಾಡಿರುವ ಆಸ್ಟ್ರೇಲಿಯಾ 50 ಓವರ್ಗಳಲ್ಲಿ ಬರೋಬ್ಬರಿ 389 ರನ್ ಕಲೆಹಾಕಿದೆ. ಸ್ಟೀವ್ ಸ್ಮಿತ್ ಅಬ್ಬರದ ಶತಕ ಸಿಡಿಸಿದರೆ, ಫಿಂಚ್, ಡೇವಿಡ್ ವಾರ್ನರ್, ಮ್ಯಾಕ್ಸ್ವೆಲ್ ಹಾಗೂ ಮಾರ್ನಸ್ ಲಾಬುಶೇನ್ ಅವರ ಅರ್ಧಶತಕದ ನೆರವಿನಿಂದ ಕಾಂಗರೂ ಪಡೆ ಬೃಹತ್ ಮೊತ್ತ ಪೇರಿಸಿದೆ. ಭಾರತಕ್ಕಿದು ಮಾಡು ಇಲ್ಲವೇ ಮಡಿ ಪಂದ್ಯವಾಗಿದ್ದು ಗೆಲ್ಲಲೇ ಬೇಕಾದ ಒತ್ತಡದಲ್ಲಿದೆ.
ಈ ನಡುವೆ ಶ್ರೇಯಸ್ ಅಯ್ಯರ್ ಬುಲುಟ್ನಂತೆ ಚೆಂಡನ್ನು ಥ್ರೋ ಮಾಡಿ ಡೇವಿಡ್ ವಾರ್ನರ್ರನ್ನು ರನೌಟ್ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ರವೀಂದ್ರ ಜಡೇಜಾ ಬೌಲಿಂಗ್ನಲ್ಲಿ ಸ್ಟ್ರೈಕ್ನಲ್ಲಿದ್ದ ಸ್ಟೀವ್ ಸ್ಮಿತ್ ಲಾಂಗ್ಆಫ್ ಕಡೆ ಚೆಂಡನ್ನು ಅಟ್ಟಿದರು. ಸ್ಮಿತ್ ಒಂದು ರನ್ಗೆಂದು ಓಡಿದರು.
India vs Australia 2nd ODI Live
ಆದರೆ, ವಾರ್ನರ್ ಎರಡು ರನ್ ಕಲೆಹಾಕಲೆಂದು ಬಿರುಸಾಗಿ ಓಡಿದರು. ಅದು ಯಶಸ್ವಿ ಆಗಲಿಲ್ಲ. ಓಡಿ ಬಂದು ಚೆಂಡನ್ನು ಕೈಗೆತ್ತಿಕೊಂಡ ಶ್ರೇಯಸ್ ಅಯ್ಯರ್ ನೇರವಾಗಿ ನಾನ್ ಸ್ಟ್ರೈಕರ್ ವಿಕೆಟ್ ಕಡೆ ಚೆಂಡನ್ನು ಎಸೆದು ಕೂದಳೆಯಲ್ಲಿ ವಾರ್ನರ್ ಔಟ್ ಆದರು. ಸದ್ಯ ಈ ರೋಚಕ ರನೌಟ್ ವಿಡಿಯೋ ವೈರಲ್ ಆಗುತ್ತಿದೆ.
What a throw from Iyer!
Watch live #AUSvIND on @FoxCricket and @kayosports: https://t.co/CTxq6E4aSW pic.twitter.com/Vp4mzOhTws
— cricket.com.au (@cricketcomau) November 29, 2020
ಆದರೆ, ವಾರ್ನರ್ ನಿರ್ಗಮನದ ಬಳಿಕ ಆಸ್ಟ್ರೇಲಿಯಾ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿತು. ಸ್ಟೀವ್ ಸ್ಮಿತ್ ಹಾಗೂ ಮಾರ್ನಸ್ ಲಾಬುಶೇನ್ ಮತ್ತೊಂದು ಅಮೋಘ ಇನ್ನಿಂಗ್ಸ್ ಕಟ್ಟಿದರು. ಸ್ಮಿತ್ ತಮ್ಮ ಹಳೇಯ ಫಾರ್ಮ್ ಮುಂದುವರೆಸಿ ಮನಮೋಹಕ ಹೊಡೆತಗಳ ಮೂಲಕ ಗಮನ ಸೆಳೆದರು. ಸತತ ಎರಡನೇ ಶತಕವನ್ನೂ ಪೂರೈಸಿದರು.
ಭಾರತೀಯ ಬೌಲರ್ಗಳ ಬೆವರಿಳಿಸಿದ ಸ್ಮಿತ್-ಮಾರ್ನಸ್ ಜೋಡಿ 136 ರನ್ಗಳ ಕಾಣಿಕೆ ನೀಡಿದರು. ಸ್ಮಿತ್ 64 ಎಸೆತಗಳಲ್ಲಿ 14 ಬೌಂಡರಿ, 2 ಸಿಕ್ಸರ್ ಬಾರಿಸಿ 104 ರನ್ ಚಚ್ಚಿದರು. ಬಳಿಕ ಅಂತಿಮ ಹಂತದಲ್ಲಿ ಗ್ಲೆನ್ ಮ್ಯಾಕ್ಸ್ವೆಲ್ ಜೊತೆಗೂಡಿ ಸ್ಫೋಟಕ ಆಟವಾಡಿದ ಮಾರ್ನಸ್ ಅರ್ಧಶತಕ ಸಿಡಿಸಿ ತಂಡದ ಮೊತ್ತವನ್ನು 370ರ ಗಡಿ ದಾಟಿಸಿದರು. ಮಾರ್ನಸ್ 61 ಎಸೆತಗಳಲ್ಲಿ 5 ಬೌಂಡರಿ ಬಾರಿಸಿ 70 ರನ್ ಗಳಿಸಿದರೆ, ಮ್ಯಾಕ್ಸ್ವೆಲ್ ಕೇವಲ 29 ಎಸೆತಗಳಲ್ಲಿ 4 ಬೌಂಡರಿ, 4 ಸಿಕ್ಸರ್ ಸಿಡಿಸಿ ಅಜೇಯ 63 ರನ್ ಚಚ್ಚಿದರು.
ಆಸ್ಟ್ರೇಲಿಯಾ 50 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 389 ರನ್ ಗಳಿಸಿತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ