India vs Australia 2nd ODI Live: ಸೋಲಿನ ಸುಳಿಯಲ್ಲಿ ಟೀಮ್ ಇಂಡಿಯಾ

IND vs AUS Live, India vs Australia Cricket Live Score: ಮೊದಲ ಏಕದಿನ ಪಂದ್ಯದಲ್ಲಿ ಕಾಂಗರೂ ಪಡೆ 66 ರನ್​ಗಳ ಭರ್ಜರಿ ಜಯ ಸಾಧಿಸಿ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು. ಕೊಹ್ಲಿ ಪಡೆ ಬ್ಯಾಟಿಂಗ್, ಬೌಲಿಂಗ್ ಜೊತೆ ಫೀಲ್ಡಿಂಗ್​ನಲ್ಲೂ ವೈಫಲ್ಯ ಅನುಭವಿಸಿತ್ತು. ಕೊಹ್ಲಿ ಪಡೆಗೆ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ.

IND vs AUS Live Score Updates

IND vs AUS Live Score Updates

 • Share this:
  ಸಿಡ್ನಿ (ನ. 29): ಇಲ್ಲಿನ ಸಿಡ್ನಿ ಕ್ರಿಕೆಟ್ ಗ್ರೌಂಡ್​​ನಲ್ಲಿ ನಡೆಯುತ್ತಿರುವ ಭಾರತ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಬೃಹತ್ ಮೊತ್ತ ಕಲೆಹಾಕಿದೆ. ಸ್ಟೀವ್ ಸ್ಮಿತ್ ಅವರ ಅಮೋಘ ಶತಕದ ಜೊತೆ, ನಾಯಕ ಆ್ಯರೋನ್ ಫಿಂಚ್, ಡೇವಿಡ್ ವಾರ್ನರ್, ಮ್ಯಾಕ್ಸ್​ವೆಲ್ ಹಾಗೂ ಮಾರ್ನಸ್‌ ಲಾಬುಶೇನ್ ಅವರ ಅರ್ಧಶತಕದ ನೆರವಿನಿಂದ ಆಸೀಸ್ 50 ಓವರ್​ಗಳಲ್ಲಿ ಬರೋಬ್ಬರಿ 389 ರನ್ ಚಚ್ಚಿದೆ.

  ಸದ್ಯ ಬೆಟ್ಟದಂತಹ ಟಾರ್ಗೆಟ್ ಬೆನ್ನಟ್ಟಿರುವ ಎರಡು ವಿಕೆಟ್ ಕಳೆದುಕೊಂಡಿದೆಯಾದರೂ ನಾಯಕ ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್ ಉತ್ತಮ ಜೊತೆಯಾಟ ಆಡುತ್ತಿದ್ದಾರೆ.

  ಓಪನರ್​ಗಳಾಗಿ ಕಣಕ್ಕಿಳಿದ ಶಿಖರ್ ಧವನ್ ಹಾಗೂ ಮಯಾಂಕ್ ಅಗರ್ವಾಲ್ ತಂಡಕ್ಕೆ ಬಿರುಸಿನ ಆರಂಭ ಒದಗಿಸಿದರು. 7 ಓವರ್ ಆಗುವ ಹೊತ್ತಿಗೆ 58 ರನ್ ಬಾರಿಸಿದರು. ಆದರೆ, ದೊಡ್ಡ ಹೊಡೆತಕ್ಕೆ ಮುಂದಾದ ಧವನ್ 30 ರನ್ ಗಳಿಸಿದ್ದಾಗ ಔಟ್ ಆದರು.

  ಇದರ ಬೆನ್ನಲ್ಲೆ 28 ರನ್ ಗಳಿಸಿದ್ದ ಮಯಾಂಕ್ ಕೂಡ ಕೀಪರ್​ಗೆ ಕ್ಯಾಚಿತ್ತು ನಿರ್ಗಮಿಸಿದರು. ಬಳಿಕ ಜೊತೆಯಾದ ನಾಯಕ ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದರು. ತಂಡದ ಮೊತ್ತವನ್ನ 150ರ ಗಡಿ ದಾಟಿಸಿದರು. ಈ ನಡುವೆ ಕೊಹ್ಲಿ ಅರ್ಧಶತಕ ಪೂರೈಸಿದರು. ಆದರೆ, ಚೆನ್ನಾಗಿಯೆ ಆಡುತ್ತಿದ್ದ ಅಯ್ಯರ್(36 ಎಸೆತ, 38 ರನ್) ಅನಗತ್ಯ ಹೊಡೆತಕ್ಕೆ ಮಾರುಹೋಹಿ ಔಟ್ ಆದರು.

  ಇದಕ್ಕೂ ಮುನ್ನ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಆಸ್ಟ್ರೇಲಿಯಾ ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿತು. ಓಪನರ್​ಗಳಾದ ನಾಯಕ ಆ್ಯರೋನ್ ಫಿಂಚ್ ಹಾಗೂ ಡೇವಿಡ್ ವಾರ್ನರ್ ಕಳೆದ ಪಂದ್ಯದಂತೆ ತಂಡಕ್ಕೆ ಅತ್ಯುತ್ತಮ ಆರಂಭ ಒದಗಿಸಿದರು. ಬಿರುಸಿನ ಆಟ ಪ್ರದರ್ಶಿಸಿದ ಇಬ್ಬರೂ ಅರ್ಧಶತಕ ಸಿಡಿಸಿ  ಮಿಂಚಿದರು.

  ಈ ಜೋಡಿ ಮೊದಲ ವಿಕೆಟ್​ಗೆ 142 ರನ್​ಗಳ ಜೊತೆಯಾಟ ಆಡಿತು. ಫಿಂಚ್ 69 ಎಸೆತಗಳಲ್ಲಿ 6 ಫೋರ್, 1 ಸಿಕ್ಸರ್ ಬಾರಿಸಿ 60 ರನ್ ಗಳಿಸಿ ಔಟ್ ಆದರೆ. ವಾರ್ನರ್ 77 ಎಸೆತಗಳಲ್ಲಿ 7 ಫೋರ್, 3 ಸಿಕ್ಸರ್ ಸಿಡಿಸಿ 83 ರನ್​ಗೆ ನಿರ್ಗಮಿಸಿದರು.

  Babar Azam: ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಂ ಕಾಮಕಾಂಡ ಬಯಲು; ಹಳೇ ಕತೆ ಬಿಚ್ಚಿಟ್ಟ ಮಾಜಿ ಪ್ರೇಯಸಿ

  ಬಳಿಕ ಒಂದಾದ ಸ್ಟೀವ್ ಸ್ಮಿತ್ ಹಾಗೂ ಮಾರ್ನಸ್‌ ಲಾಬುಶೇನ್ ಮತ್ತೊಂದು ಅಮೋಘ ಇನ್ನಿಂಗ್ಸ್​ ಕಟ್ಟಿದರು. ಸ್ಮಿತ್ ತಮ್ಮ ಹಳೇಯ ಫಾರ್ಮ್​ ಮುಂದುವರೆಸಿ ಮನಮೋಹಕ ಹೊಡೆತಗಳ ಮೂಲಕ ಗಮನ ಸೆಳೆದರು. ಸತತ ಎರಡನೇ ಶತಕವನ್ನೂ ಪೂರೈಸಿದರು.

  ಭಾರತೀಯ ಬೌಲರ್​ಗಳ ಬೆವರಿಳಿಸಿದ ಸ್ಮಿತ್-ಮಾರ್ನಸ್ ಜೋಡಿ 136 ರನ್​ಗಳ ಕಾಣಿಕೆ ನೀಡಿದರು. ಸ್ಮಿತ್ 64 ಎಸೆತಗಳಲ್ಲಿ 14 ಬೌಂಡರಿ, 2 ಸಿಕ್ಸರ್ ಬಾರಿಸಿ 104 ರನ್ ಚಚ್ಚಿದರು.  ಬಳಿಕ ಅಂತಿಮ ಹಂತದಲ್ಲಿ ಗ್ಲೆನ್ ಮ್ಯಾಕ್ಸ್​ವೆಲ್ ಜೊತೆಗೂಡಿ ಸ್ಫೋಟಕ ಆಟವಾಡಿದ ಮಾರ್ನಸ್ ಅರ್ಧಶತಕ ಸಿಡಿಸಿ ತಂಡದ ಮೊತ್ತವನ್ನು 370ರ ಗಡಿ ದಾಟಿಸಿದರು. ಮಾರ್ನಸ್ 61 ಎಸೆತಗಳಲ್ಲಿ 5 ಬೌಂಡರಿ ಬಾರಿಸಿ 70 ರನ್ ಗಳಿಸಿದರೆ, ಮ್ಯಾಕ್ಸ್​ವೆಲ್ ಕೇವಲ 29 ಎಸೆತಗಳಲ್ಲಿ 4 ಬೌಂಡರಿ, 4 ಸಿಕ್ಸರ್ ಸಿಡಿಸಿ ಅಜೇಯ 63 ರನ್ ಚಚ್ಚಿದರು.

  ಆಸ್ಟ್ರೇಲಿಯಾ 50 ಓವರ್​ಗಳಲ್ಲಿ 4 ವಿಕೆಟ್ ನಷ್ಟಕ್ಕೆ 389 ರನ್ ಗಳಿಸಿತು. ಭಾರತ ಪರ ಮೊಹಮ್ಮದ್ ಶಮಿ, ಜಸ್​ಪ್ರೀತ್ ಬುಮ್ರಾ ಹಾಗೂ ಹಾರ್ದಿಕ್ ಪಾಂಡ್ಯ ತಲಾ 1 ವಿಕೆಟ್ ಪಡೆದರು.

  ಆಸ್ಟ್ರೇಲಿಯ ತಂಡ: ಆ್ಯರೋನ್ ಫಿಂಚ್‌ (ನಾಯಕ), ಡೇವಿಡ್‌ ವಾರ್ನರ್‌, ಸ್ಟೀವ್ ಸ್ಮಿತ್‌, ಮಾರ್ನಸ್‌ ಲಾಬುಶೇನ್‌, ಗ್ಲೆನ್‌ ಮ್ಯಾಕ್ಸ್​ವೆಲ್‌, ಮೊಯ್​ಸೆಸ್ ಹೆನ್ರಿಕ್ಯೂ, ಅಲೆಕ್ಸ್‌ ಕ್ಯಾರಿ, ಪ್ಯಾಟ್‌ ಕಮಿನ್ಸ್‌, ಮಿಚೆಲ್‌ ಸ್ಟಾರ್ಕ್‌, ಜೋಶ್‌ ಹ್ಯಾಝಲ್‌ವುಡ್‌, ಆ್ಯಡಂ ಝಂಪ.

  ಭಾರತ ತಂಡ: ಶಿಖರ್‌ ಧವನ್‌, ಮಾಯಾಂಕ್‌ ಅಗರ್ವಾಲ್‌, ವಿರಾಟ್‌ ಕೊಹ್ಲಿ (ನಾಯಕ), ಶ್ರೇಯಸ್‌ ಅಯ್ಯರ್‌, ಕೆ. ಎಲ್‌. ರಾಹುಲ್‌, ಹಾರ್ದಿಕ್‌ ಪಾಂಡ್ಯ, ರವೀಂದ್ರ ಜಡೇಜಾ, ನವದೀಪ್‌ ಸೈನಿ, ಯಜುವೇಂದ್ರ ಚಹಾಲ್‌, ಮೊಹಮ್ಮದ್‌ ಶಮಿ, ಜಸ್​ಪ್ರೀತ್ ಬುಮ್ರಾ.
  Published by:Vinay Bhat
  First published: