India vs Australia 2nd ODI Live: ಶತಕ ಸಿಡಿಸಿ ಸ್ಮಿತ್ ಔಟ್: ಬೃಹತ್ ಮೊತ್ತದತ್ತ ಆಸ್ಟ್ರೇಲಿಯಾ

IND vs AUS Live, India vs Australia Cricket Live Score: ಮೊದಲ ಏಕದಿನ ಪಂದ್ಯದಲ್ಲಿ ಕಾಂಗರೂ ಪಡೆ 66 ರನ್​ಗಳ ಭರ್ಜರಿ ಜಯ ಸಾಧಿಸಿ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು. ಕೊಹ್ಲಿ ಪಡೆ ಬ್ಯಾಟಿಂಗ್, ಬೌಲಿಂಗ್ ಜೊತೆ ಫೀಲ್ಡಿಂಗ್​ನಲ್ಲೂ ವೈಫಲ್ಯ ಅನುಭವಿಸಿತ್ತು. ಕೊಹ್ಲಿ ಪಡೆಗೆ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ.

IND vs AUS 3rd T20 Live Score Updates

IND vs AUS 3rd T20 Live Score Updates

  • Share this:
    ಸಿಡ್ನಿ (ನ. 29): ಇಲ್ಲಿನ ಸಿಡ್ನಿ ಕ್ರಿಕೆಟ್ ಗ್ರೌಂಡ್​​ನಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ಎರಡನೇ ಏಕದಿನ ಪಂದ್ಯ ನಡೆಯುತ್ತಿದೆ. ಮೊದಲ ಪಂದ್ಯದಲ್ಲಿ ಸೋಲುಕಂಡ ಕೊಹ್ಲಿ ಪಡೆಗೆ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಗೆಲ್ಲಲೇ ಬೇಕಾದ ಒತ್ತಡದಲ್ಲಿ ಭಾರತ ತಂಡವಿದ್ದು, ಮತ್ತಷ್ಟು ಬಲಿಷ್ಠವಾಗಿ ಕಣಕ್ಕಿಳಿದಿದೆ. ಇತ್ತ ಆಸ್ಟ್ರೇಲಿಯಾ ಈ ಪಂದ್ಯ ಗೆದ್ದರೆ ಸರಣಿ ವಶಪಡಿಸಿಕೊಳ್ಳಲಿದೆ.

    ಈಗಾಗಲೇ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿರುವ ಆಸ್ಟ್ರೇಲಿಯಾ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸುತ್ತಿದೆ. ಓಪನರ್​ಗಳಾದ ನಾಯಕ ಆ್ಯರೋನ್ ಫಿಂಚ್ ಹಾಗೂ ಡೇವಿಡ್ ವಾರ್ನರ್ ಕಳೆದ ಪಂದ್ಯದಂತೆ ತಂಡಕ್ಕೆ ಅತ್ಯುತ್ತಮ ಆರಂಭ ಒದಗಿಸಿದರು. ಬಿರುಸಿನ ಆಟ ಪ್ರದರ್ಶಿಸಿದ ಇಬ್ಬರೂ ಅರ್ಧಶತಕ ಸಿಡಿಸಿ  ಮಿಂಚಿದರು.

    ಈ ಜೋಡಿ ಮೊದಲ ವಿಕೆಟ್​ಗೆ 142 ರನ್​ಗಳ ಜೊತೆಯಾಟ ಆಡಿತು. ಫಿಂಚ್ 69 ಎಸೆತಗಳಲ್ಲಿ 6 ಫೋರ್, 1 ಸಿಕ್ಸರ್ ಬಾರಿಸಿ 60 ರನ್ ಗಳಿಸಿ ಔಟ್ ಆದರೆ. ವಾರ್ನರ್ 77 ಎಸೆತಗಳಲ್ಲಿ 7 ಫೋರ್, 3 ಸಿಕ್ಸರ್ ಸಿಡಿಸಿ 83 ರನ್​ಗೆ ನಿರ್ಗಮಿಸಿದರು.

    ಬಳಿಕ ಒಂದಾದ ಸ್ಟೀವ್ ಸ್ಮಿತ್ ಹಾಗೂ ಮಾರ್ನಸ್‌ ಲಾಬುಶೇನ್ ಮತ್ತೊಂದು ಅಮೋಘ ಇನ್ನಿಂಗ್ಸ್​ ಕಟ್ಟಿದರು. ಸ್ಮಿತ್ ತಮ್ಮ ಹಳೇಯ ಫಾರ್ಮ್​ ಮುಂದುವರೆಸಿ ಮನಮೋಹಕ ಹೊಡೆತಗಳ ಮೂಲಕ ಗಮನ ಸೆಳೆದರು. ಸತತ ಎರಡನೇ ಶತಕವನ್ನೂ ಪೂರೈಸಿದರು.

    ಭಾರತೀಯ ಬೌಲರ್​ಗಳ ಬೆವರಿಳಿಸಿದ ಸ್ಮಿತ್-ಮಾರ್ನಸ್ ಜೋಡಿ 136 ರನ್​ಗಳ ಕಾಣಿಕೆ ನೀಡಿದರು. ಸ್ಮಿತ್ 64 ಎಸೆತಗಳಲ್ಲಿ 14 ಬೌಂಡರಿ, 2 ಸಿಕ್ಸರ್ ಬಾರಿಸಿ 104 ರನ್ ಚಚ್ಚಿದರು.

    ಮಾರ್ಕಸ್‌ ಸ್ಟಾಯ್‌ನೆಸ್‌ ಗುಣಮುಖರಾಗದ ಕಾರಣ ಮೊಯ್​ಸೆಸ್ ಹೆನ್ರಿಕ್ಯೂ ಅವರು ಸ್ಥಾನ ಪಡೆದುಕೊಂಡಿದ್ದಾರೆ.

    ಇತ್ತ ಭಾರತ ತಂಡದಲ್ಲಿ ಯಾವುದೇ ಬದಲಾವಣೆ ಮಾಡದೆ ಕಳೆದ ಪಂದ್ಯದಲ್ಲಿ ಆಡಿದ ಆಟಗಾರರೇ ಕಣಕ್ಕಿಳಿಯುತ್ತಿದ್ದಾರೆ.

    ಆಸ್ಟ್ರೇಲಿಯ ತಂಡ: ಆ್ಯರೋನ್ ಫಿಂಚ್‌ (ನಾಯಕ), ಡೇವಿಡ್‌ ವಾರ್ನರ್‌, ಸ್ಟೀವ್ ಸ್ಮಿತ್‌, ಮಾರ್ನಸ್‌ ಲಾಬುಶೇನ್‌, ಗ್ಲೆನ್‌ ಮ್ಯಾಕ್ಸ್​ವೆಲ್‌, ಮೊಯ್​ಸೆಸ್ ಹೆನ್ರಿಕ್ಯೂ, ಅಲೆಕ್ಸ್‌ ಕ್ಯಾರಿ, ಪ್ಯಾಟ್‌ ಕಮಿನ್ಸ್‌, ಮಿಚೆಲ್‌ ಸ್ಟಾರ್ಕ್‌, ಜೋಶ್‌ ಹ್ಯಾಝಲ್‌ವುಡ್‌, ಆ್ಯಡಂ ಝಂಪ.

    ಭಾರತ ತಂಡ: ಶಿಖರ್‌ ಧವನ್‌, ಮಾಯಾಂಕ್‌ ಅಗರ್ವಾಲ್‌, ವಿರಾಟ್‌ ಕೊಹ್ಲಿ (ನಾಯಕ), ಶ್ರೇಯಸ್‌ ಅಯ್ಯರ್‌, ಕೆ. ಎಲ್‌. ರಾಹುಲ್‌, ಹಾರ್ದಿಕ್‌ ಪಾಂಡ್ಯ, ರವೀಂದ್ರ ಜಡೇಜಾ, ನವದೀಪ್‌ ಸೈನಿ, ಯಜುವೇಂದ್ರ ಚಹಾಲ್‌, ಮೊಹಮ್ಮದ್‌ ಶಮಿ, ಜಸ್​ಪ್ರೀತ್ ಬುಮ್ರಾ.





    ಮೊದಲ ಏಕದಿನ ಪಂದ್ಯದಲ್ಲಿ ಕಾಂಗರೂ ಪಡೆ 66 ರನ್​ಗಳ ಭರ್ಜರಿ ಜಯ ಸಾಧಿಸಿ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು. ಕೊಹ್ಲಿ ಪಡೆ ಬ್ಯಾಟಿಂಗ್, ಬೌಲಿಂಗ್ ಜೊತೆ ಫೀಲ್ಡಿಂಗ್​ನಲ್ಲೂ ವೈಫಲ್ಯ ಅನುಭವಿಸಿತ್ತು. ಸುಮಾರು ಒಂಬತ್ತು ತಿಂಗಳ ಬಳಿಕ ಆಡಿದ ಮೊದಲ ಅಂತರಾಷ್ಟ್ರೀಯ ಪಂದ್ಯದಲ್ಲಿ ಭಾರತ ಕಳಪೆ ಪ್ರದರ್ಶನ ತೋರಿತು.

    ಶಿಖರ್ ಧವನ್ ಹಾಗೂ ಹಾರ್ದಿಕ್ ಪಾಂಡ್ಯ ಉತ್ತಮ ಲಯದಲ್ಲಿದ್ದಾರೆ. ಆದರೆ, ಪ್ರಮುಖ ಅನುಭವಿ ಬ್ಯಾಟ್ಸ್​ಮನ್​ಗಳು ಮಿಂಚಬೇಕಿದೆ. ನಾಯಕ ವಿರಾಟ್ ಕೊಹ್ಲಿ, ಕೆ. ಎಲ್ ರಾಹುಲ್, ಶ್ರೇಯಸ್ ಅಯ್ಯರ್ ಮೇಲೆ ಹೆಚ್ಚಿನ ನಿರೀಕ್ಷೆ ಇದೆ.
    Published by:Vinay Bhat
    First published: