IND vs AUS: ಶ್ರೀಲಂಕಾ ಆಯ್ತು ಸದ್ಯ ಆಸೀಸ್ ಸರಣಿ ಮೇಲೆ ಕೊಹ್ಲಿ ಪಡೆ ಕಣ್ಣು; ಎಲ್ಲಿ?, ಯಾವಾಗ?; ಇಲ್ಲಿದೆ ಮಾಹಿತಿ

ಕಾಂಗರೂ ಪಡೆ ಈಗಾಗಲೇ ಭಾರತಕ್ಕೆ ಬಂದಿಳಿದಿದ್ದು ಅಭ್ಯಾಸ ಆರಂಭಿಸಿದೆ. ಅಲ್ಲದೆ ಆಸೀಸ್ ನಾಯಕ ಆ್ಯರೋನ್ ಫಿಂಚ್ ನಾವು ಕೊಹ್ಲಿ ಪಡೆಗೆ ಸವಾಲೆಸೆಯಲು ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ.

news18-kannada
Updated:January 12, 2020, 8:12 AM IST
IND vs AUS: ಶ್ರೀಲಂಕಾ ಆಯ್ತು ಸದ್ಯ ಆಸೀಸ್ ಸರಣಿ ಮೇಲೆ ಕೊಹ್ಲಿ ಪಡೆ ಕಣ್ಣು; ಎಲ್ಲಿ?, ಯಾವಾಗ?; ಇಲ್ಲಿದೆ ಮಾಹಿತಿ
ಭಾರತ vs ಆಸ್ಟ್ರೇಲಿಯಾ
  • Share this:
ಬೆಂಗಳೂರು (ಜ. 12): ಶ್ರಿಲಂಕಾ ವಿರುದ್ಧದ ಟಿ-20 ಸರಣಿಯನ್ನು ವಶಪಡಿಸಿಕೊಳ್ಳುವ ಮೂಲಕ ಭಾರತ ಕ್ರಿಕೆಟ್ ತಂಡ ಹೊಸ ವರ್ಷವನ್ನು ಭರ್ಜರಿ ಆಗಿ ಆರಂಭಿಸಿದೆ. ಸದ್ಯ ಮುಂದಿನ ಕಠಿಣ ಸವಾಲಿಗೆ ಕೊಹ್ಲಿ ಪಡೆ ಸಜ್ಜಾಗಿದೆ. ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ತವರಿನಲ್ಲಿ ಮೂರು ಪಂದ್ಯಗಳ ಏಕದಿನ ಸರಣಿ ಆಡಲಿದೆ.

ಜ. 14 ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಮೊದಲ ಏಕದಿನ ನಡೆಯಲಿದ್ದರೆ, ಜ. 17ಕ್ಕೆ ರಾಜ್ಕೋಟ್​ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ 2ನೇ ಏಕದಿನ ಹಾಗೂ ಅಂತಿಮ ಪಂದ್ಯ ಜ. 19 ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ. ಎಲ್ಲ ಏಕದಿನ ಪಂದ್ಯ ಮಧ್ಯಾಹ್ನ 1:30ಕ್ಕೆ ಗಂಟೆಗೆ ಶುರುವಾಗಲಿದೆ.

ಕಾಂಗರೂ ಪಡೆ ಈಗಾಗಲೇ ಭಾರತಕ್ಕೆ ಬಂದಿಳಿದಿದ್ದು ಅಭ್ಯಾಸ ಆರಂಭಿಸಿದೆ. ಅಲ್ಲದೆ ಆಸೀಸ್ ನಾಯಕ ಆ್ಯರೋನ್ ಫಿಂಚ್ ನಾವು ಕೊಹ್ಲಿ ಪಡೆಗೆ ಸವಾಲೆಸೆಯಲು ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ.

Ranji Trophy – ಕರ್ನಾಟಕದ ಪಾಲಿಗೆ ಕಂಟಕರಾದ ಪೂಜಾರ; ದ್ವಿಶತಕದತ್ತ ಸೌರಾಷ್ಟ್ರ ಸರದಾರ

“ಕಳೆದ ವರ್ಷ ಭಾರತದಲ್ಲಿ ನಡೆದ ಐದು ಪಂದ್ಯಗಳ ಏಕದಿನ ಸರಣಿಯನ್ನ ಆಸ್ಟ್ರೇಲಿಯಾ, 3-2 ಅಂತರದಿಂದ ವಶಪಡಿಸಿಕೊಂಡಿತ್ತು. ಈ ಬಾರಿಯೂ ಆಸೀಸ್ ಭಾರತದ ನೆಲದಲ್ಲಿ ತನ್ನ ಗೆಲುವಿನ ಓಟವನ್ನು ಭದ್ರ ಪಡಿಸಿಕೊಳ್ಳಲಿದೆ. ಟೀಂ ಇಂಡಿಯಾದಲ್ಲಿ ಜಸ್​ಪ್ರೀತ್ ಬೂಮ್ರಾರಂತಹ ನಂಬರ್ 1 ವೇಗಿ ಇದ್ದರೂ, ನಾವು ಅದರ ಬಗ್ಗೆ ತಲೆಕೆಡಿಸಿಕೊಳ್ಳೋದಿಲ್ಲ” ಎಂದು ಫಿಂಚ್ ಹೇಳಿದ್ದಾರೆ.

“ಭಾರತ, ಪಾಕಿಸ್ತಾನ ಮತ್ತು ಶ್ರೀಲಂಕಾ ತಂಡಗಳು ಎದುರಾಳಿಯ ಆತ್ಮವಿಶ್ವಾಸ ಅಡಗಿಸುವಂತೆ ಆಡುತ್ತವೆ. ಆದರೆ, ನಮ್ಮ ಗೇಮ್ ಪ್ಲ್ಯಾನ್ ಮತ್ತು ಸಾಮರ್ಥ್ಯ ನಮಗೆ ಗೆಲ್ಲುವ ಆತ್ಮವಿಶ್ವಾಸ ತಂದುಕೊಡುತ್ತದೆ. ಭಾರತವನ್ನು ಅವರದ್ದೇ ಲೆನದಲ್ಲಿ ಸೋಲಿಸುವ ಸಾಮರ್ಥ್ಯ ನಮಗಿದೆ” ಎಂದರು.

ಆಸೀಸ್​ನ ಸ್ಫೋಟಕ ಆರಂಭಿಕ ಆಟಗಾರ ಡಾರ್ಸಿ ಶಾರ್ಟ್​ ಇಂಜುರಿಗೆ ತುತ್ತಾದ ಪರಿಣಾಮ ತಂಡದಿಂದ ಕೈಬಿಡಲಾಗಿದೆ. ​ಇವರ ಬದಲು ವೇಗಿ ಸೀನ್ ಅಬಾಟ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಆಸೀಸ್ ತಂಡದಲ್ಲಿ ಈಗಾಗಲೇ ಮಿಚೆಲ್ ಸ್ಟಾರ್ಕ್​, ಪ್ಯಾಟ್ ಕಮಿನ್ಸ್​, ಜೋಷ್ ಹ್ಯಾಜ್ಲೆವುಡ್ ಹಾಗೂ ಕೇನ್ ರಿಚರ್ಡಸನ್ ಸೇರಿ ಒಟ್ಟು 4 ಸ್ಟಾರ್ ವೇಗಿಗಳಿದ್ದಾರೆ. ಇವರ ಜೊತೆಗೆ ಸೀನ್ ಅಬಾಟ್ ಕೂಡ ಸೇರಿಕೊಂಡಿದ್ದಾರೆ.ಚೆನ್ನಾಗಿ ಆಡದಿದ್ರೆ ಮನೆಗೆ ಬರಬೇಡಿ: ಹೆಂಡತಿಯಿಂದ ಕ್ರಿಕೆಟಿಗನಿಗೆ ಬೆದರಿಕೆ..!

ಭಾರತ ತಂಡ: ವಿರಾಟ್ ಕೊಹ್ಲಿ(ನಾಯಕ), ರೋಹಿತ್ ಶರ್ಮಾ(ಉಪನಾಯಕ), ಶಿಖರ್ ಧವನ್, ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ, ಕೇದಾರ್ ಜಾಧವ್, ರಿಷಭ್ ಪಂತ್(ವಿಕೆಟ್ ಕೀಪರ್), ಶಿವಮ್ ದುಬೇ, ರವೀಂದ್ರ ಜಡೇಜಾ, ಯುಜವೇಂದ್ರ ಚಹಲ್, ಕುಲದೀಪ್ ಯಾದವ್, ನವದೀಪ್ ಸೈನಿ, ಜಸ್​ಪ್ರೀತ್ ಬುಮ್ರಾ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ.

ಆಸ್ಟ್ರೇಲಿಯಾ ತಂಡ:ಆ್ಯರೋನ್ ಫಿಂಚ್ (ನಾಯಕ), ಅಸ್ಟನ್ ಅಗರ್, ಅಲೆಕ್ಸ್​ ಕ್ಯಾರಿ (ಉಪ- ನಾಯಕ), ಪ್ಯಾಟ್ ಕಮಿನ್ಸ್​, ಪೀಟರ್ ಹ್ಯಾಂಡ್ಸ್​ಕಂಬ್​​, ಜೋಷ್ ಹ್ಯಾಜ್ಲೆವುಡ್, ಮರ್ನಸ್ ಲಾಬುಶೇನ್, ಕೇನ್ ರಿಚರ್ಡಸನ್, ಸೀನ್ ಅಬಾಟ್, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್​, ಅಸ್ಟನ್ ಟರ್ನರ್, ಡೇವಿಡ್ ವಾರ್ನರ್, ಆ್ಯಡಂ ಜಂಪಾ.

First published: January 12, 2020, 8:12 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading