ಆಸ್ಟ್ರೇಲಿಯಾ ನೆಲದಲ್ಲಿ ಭಾರತ ಗೆದ್ದ ಏಕದಿನ ಪಂದ್ಯಗಳೆಷ್ಟು?; ಈ ಅಂಕಿ-ಅಂಶ ನೋಡಿದ್ರೆ ಅಚ್ಚರಿ ಪಡ್ತೀರಾ!
ಮೊದಲ ಏಕದಿನ ಪಂದ್ಯ ನಡೆಯಲಿರುವ ಸಿಡ್ನಿ ಕ್ರಿಕೆಟ್ ಗ್ರೌಂಡ್ನಲ್ಲಿ ಭಾರತ ವಿರುದ್ಧ ಆಸ್ಟ್ರೇಲಿಯಾ ಪಾರುಪತ್ಯ ಸಾಧಿಸಿದೆ. ಆಡಿದ 17 ಪಂದ್ಯಗಳಲ್ಲಿ ಆಸ್ಟ್ರೇಲಿಯಾ 14ರಲ್ಲಿ ಗೆದ್ದರೆ ಟೀಂ ಇಂಡಿಯಾ ಎರಡರಲ್ಲಿ ಜಯ ಗಳಿಸಿದೆ.
news18-kannada Updated:November 24, 2020, 11:44 AM IST

ಟೀಂ ಇಂಡಿಯಾ
- News18 Kannada
- Last Updated: November 24, 2020, 11:44 AM IST
ನವೆಂಬರ್ 27ರಿಂದ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಏಕದಿನ ಪಂದ್ಯ ಆರಂಭಗೊಳ್ಳಲಿದೆ. ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡರಲ್ಲೂ ಸ್ಟ್ರಾಂಗ್ ಆಗಿರುವ ಟೀಂ ಇಂಡಿಯಾ ಆಸ್ಟ್ರೇಲಿಯಾ ತಂಡವನ್ನು ಸೋಲಿಸುವ ಹುಮ್ಮಸ್ಸಿನಲ್ಲಿದೆ. ಆದರೆ, ಆಸ್ಟ್ರೇಲಿಯಾ ನೆಲದಲ್ಲಿ ಟೀಂ ಇಂಡಿಯಾ ಗೆದ್ದಿದ್ದು ಮಾತ್ರ ಕೆಲವೇ ಕೆಲವು ಸೀರಿಸ್ಗಳು! ಆ ಬಗ್ಗೆ ಇಲ್ಲಿದೆ ಮಾಹಿತಿ.
ಭಾರತ ಮೂರು ಏಕದಿನ, ಮೂರು ಟಿ20 ಹಾಗೂ ನಾಲ್ಕು ಟೆಸ್ಟ್ ಪಂದ್ಯಗಳನ್ನು ಆಸ್ಟ್ರೇಲಿಯಾ ನೆಲ್ಲದಲ್ಲಿ ಆಡಲಿದೆ. ಏಕದಿನ ಹಾಗೂ ಟಿ20ಗೆ ವಿರಾಟ್ ಕೋಹ್ಲಿ ನಾಯಕತ್ವ ವಹಿಸಿಕೊಳ್ಳಲಿದ್ದಾರೆ. ಒಂದು ಟೆಸ್ಟ್ ಆಡಿದ ನಂತರದಲ್ಲಿ ಅವರು ಭಾರತಕ್ಕೆ ಮರಳಲಿದ್ದಾರೆ. ಆಸ್ಟ್ರೇಲಿಯಾ ನೆಲದಲ್ಲಿ ಟೀಂ ಇಂಡಿಯಾ ಒಟ್ಟೂ 51 ಏಕದಿನ ಪಂದ್ಯಗಳನ್ನು ಆಡಿದೆ. ಈ ಪೈಕಿ ಭಾರತ ಗೆದ್ದಿದ್ದು ಕೇವಲ 13 ಮ್ಯಾಚ್ ಎಂದರೆ ನೀವು ನಂಬಲೇ ಬೇಕು! ಇನ್ನು, ಆಸ್ಟ್ರೇಲಿಯಾ ನೆಲದಲ್ಲಿ ಭಾರತ ಗೆದ್ದ ಸರಣಿ ಕೇವಲ 3. 1984-85ರಲ್ಲಿ ನಡೆದ ಬೆನ್ಸನ್ ಮತ್ತು ಹೆಡ್ಜಸ್ ವಿಶ್ವ ಕ್ರಿಕೆಟ್ ಚಾಂಪಿಯನ್ಶಿ ಪ್, ಕಾಮನ್ವೆಲ್ತ್ ಬ್ಯಾಂಕ್ ಸೀರಿಸ್ ಹಾಗೂ 2018-19 ಏಕದಿನ ಸರಣಿಯಲ್ಲಿ ಟೀಂ ಇಂಡಿಯಾ ಗೆದ್ದಿತ್ತು.
ಇನ್ನು, ಮೊದಲ ಏಕದಿನ ಪಂದ್ಯ ನಡೆಯಲಿರುವ ಸಿಡ್ನಿ ಕ್ರಿಕೆಟ್ ಗ್ರೌಂಡ್ನಲ್ಲಿ ಭಾರತ ವಿರುದ್ಧ ಆಸ್ಟ್ರೇಲಿಯಾ ಪಾರುಪತ್ಯ ಸಾಧಿಸಿದೆ. ಆಡಿದ 17 ಪಂದ್ಯಗಳಲ್ಲಿ ಆಸ್ಟ್ರೇಲಿಯಾ 14ರಲ್ಲಿ ಗೆದ್ದರೆ ಟೀಂ ಇಂಡಿಯಾ ಎರಡರಲ್ಲಿ ಜಯ ಗಳಿಸಿದೆ. ಒಂದು ಪಂದ್ಯ ರದ್ದಾಗಿದೆ.
ಭಾರತ ಮೂರು ಏಕದಿನ, ಮೂರು ಟಿ20 ಹಾಗೂ ನಾಲ್ಕು ಟೆಸ್ಟ್ ಪಂದ್ಯಗಳನ್ನು ಆಸ್ಟ್ರೇಲಿಯಾ ನೆಲ್ಲದಲ್ಲಿ ಆಡಲಿದೆ. ಏಕದಿನ ಹಾಗೂ ಟಿ20ಗೆ ವಿರಾಟ್ ಕೋಹ್ಲಿ ನಾಯಕತ್ವ ವಹಿಸಿಕೊಳ್ಳಲಿದ್ದಾರೆ. ಒಂದು ಟೆಸ್ಟ್ ಆಡಿದ ನಂತರದಲ್ಲಿ ಅವರು ಭಾರತಕ್ಕೆ ಮರಳಲಿದ್ದಾರೆ.
ಇನ್ನು, ಮೊದಲ ಏಕದಿನ ಪಂದ್ಯ ನಡೆಯಲಿರುವ ಸಿಡ್ನಿ ಕ್ರಿಕೆಟ್ ಗ್ರೌಂಡ್ನಲ್ಲಿ ಭಾರತ ವಿರುದ್ಧ ಆಸ್ಟ್ರೇಲಿಯಾ ಪಾರುಪತ್ಯ ಸಾಧಿಸಿದೆ. ಆಡಿದ 17 ಪಂದ್ಯಗಳಲ್ಲಿ ಆಸ್ಟ್ರೇಲಿಯಾ 14ರಲ್ಲಿ ಗೆದ್ದರೆ ಟೀಂ ಇಂಡಿಯಾ ಎರಡರಲ್ಲಿ ಜಯ ಗಳಿಸಿದೆ. ಒಂದು ಪಂದ್ಯ ರದ್ದಾಗಿದೆ.