news18-kannada Updated:December 18, 2020, 5:18 PM IST
India vs Australia
ಅಡಿಲೇಡ್ (ಡಿ. 18): ಇಲ್ಲಿನ ಅಡಿಲೇಡ್ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಡೇ- ನೈಟ್ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತವನ್ನು 244 ರನ್ಗೆ ಆಲೌಟ್ ಮಾಡಿ ಮೊದಲ ಇನ್ನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ 191 ರನ್ಗೆ ಸರ್ವಪತನ ಕಂಡಿತು. ಭಾರತೀಯ ಬೌಲರ್ಗಳ ಮಾರಕ ದಾಳಿಗೆ ತರಗೆಲೆಯಂತೆ ಉರುಳಿದ ಆಸೀಸ್ ಬ್ಯಾಟ್ಸ್ಮನ್ಗಳು 53 ರನ್ಗಳ ಹಿನ್ನಡೆ ಅನುಭವಿಸಿತು. ಆದರೆ, ಅಲ್ಪ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಭಾರತ ಎರಡನೇ ದಿನದಾಟದ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 9 ರನ್ ಗಳಿಸಿದೆ.
ನಿನ್ನೆ ಮೊದಲ ದಿನದಾಟದ ಅಂತ್ಯಕ್ಕೆ6 ವಿಕೆಟ್ ಕಳೆದುಕೊಂಡು 233 ರನ್ ಗಳಿಸಿದ್ದ ಕೊಹ್ಲಿ ಪಡೆ ಇಂದು 11 ರನ್ ಗಳಿಸಲಷ್ಟೇ ಶಕ್ತವಾಯಿತು. ಟೀಂ ಇಂಡಿಯಾ 244 ರನ್ಗೆ ಸರ್ವಪತನ ಕಂಡಿತು.ಬಳಿಕ ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ಆರಂಭದಿಂದ ವಿಕೆಟ್ ಕಳೆದುಕೊಂಡು ಸಾಗಿತು. ಓಪನರ್ಗಳಾದ ಮ್ಯಾಥ್ಯೂ ವೇಡ್(8) ಹಾಗೂ ಜೋ ಬರ್ಸ್(8) ಬುಮ್ರಾ ಬಲೆಗೆ ಸಿಲುಕಿ ಪೆವಿಲಿಯನ್ ಸೇರಿಕೊಂಡರು.
India vs Australia: 16 ರನ್ ಗಳಿಸಿದ್ದಾಗಲೇ ಔಟ್ ಆಗಿದ್ದ ವಿರಾಟ್ ಕೊಹ್ಲಿ: ಇಲ್ಲಿದೆ ನೀವು ಗಮನಿಸದ ವಿಡಿಯೋ
ಮಾರ್ನಸ್ ಲ್ಯಾಬುಶೇನ್ ಜೊತೆ ಇನ್ನಿಂಗ್ಸ್ ಕಟ್ಟಲು ಹೊರಟ ಅಪಾಯಕಾರಿ ಬ್ಯಾಟ್ಸ್ಮನ್ ಸ್ಟೀವ್ ಸ್ಮಿತ್ ಕೇವಲ 1 ರನ್ ಗಳಿಸಿ ಅಶ್ವಿನ್ ಸ್ಪಿನ್ ಮೋಡಿಗೆ ಬಲಿಯಾದರು. ಟ್ರಾವಿಸ್ ಹೆಡ್ 7 ಹಾಗೂ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಕಾಮರೆನ್ ಗ್ರೀನ್ 11 ರನ್ಗೆ ಸುಸ್ತಾದರು. ಇತ್ತ ಕ್ರೀಸ್ ಕಚ್ಚಿ ಆಡುತ್ತಿದ್ದ ಮಾರ್ನಸ್ ಲ್ಯಾಬುಶೇನ್ ಕೂಡ 119 ಎಸೆತಗಳಲ್ಲಿ 47 ರನ್ ಗಳಿಸಿ ಉಮೇಶ್ ಯಾದವ್ ಬೌಲಿಂಗ್ನಲ್ಲಿ ಔಟ್ ಆದರು.
ಪ್ಯಾಟ್ ಕಮಿನ್ಸ್ ಶೂನ್ಯಕ್ಕೆ ಬ್ಯಾಟ್ ಕೆಳಗಿಟ್ಟರೆ, ಮಿಚೆಲ್ ಸ್ಟಾರ್ಕ್ 15 ರನ್ ಗಳಿಸಿ ರನೌಟ್ಗೆ ಬಲಿಯಾದರು. ನೇಥನ್ ಲ್ಯಾನ್(10) ಹಾಗೂ ಜೋಷ್ ಹ್ಯಾಜ್ಲೆವುಡ್(8) ಕೂಡ ನಾಯಕ ಪೈನ್ಗೆ ಸಾತ್ ನೀಡಲಿಲ್ಲ.
ಅಂತಿಮವಾಗಿ ಆಸ್ಟ್ರೇಲಿಯಾ 72.1 ಓವರ್ಗಳಲ್ಲಿ 191 ರನ್ಗೆ ಆಲೌಟ್ ಆಯಿತು. ಟಿಮ್ ಪೈನ್ 99 ಎಸೆತಗಳಲ್ಲಿ ಅಜೇಯ 73 ರನ್ ಗಳಿಸಿದರು. ಭಾರತ ಪರ ರವಿಚಂದ್ರನ್ ಅಶ್ವಿನ್ 4 ವಿಕೆಟ್ ಕಿತ್ತು ಮಿಂಚಿದರೆ, ಉಮೇಶ್ ಯಾದವ್ 3 ಹಾಗೂ ಜಸ್ಪ್ರೀತ್ ಬುಮ್ರಾ 2 ವಿಕೆಟ್ ಪಡೆದರು.
ಎರಡನೇ ಇನ್ನಿಂಗ್ಸ್ ಆರಂಭಿಸಿದ ಭಾರತ ಮತ್ತೆ ಕಳಪೆ ಆರಂಭ ಪಡೆದುಕೊಂಡಿತು. ಪೃಥ್ವಿ ಶಾ ಕೇವಲ 4 ರನ್ಗೆ ಕ್ಲೀನ್ ಬೌಲ್ಡ್ ಆದರು. ಎರಡನೇ ದಿನದಾಟದ ಅಂತ್ಯಕ್ಕೆ ಭಾರತ 9 ರನ್ಗೆ 1 ವಿಕೆಟ್ ಕಳೆದುಕೊಂಡಿದೆ. ಮಯಾಂಕ್ ಅಗರ್ವಾಲ್ 5 ಹಾಗೂ ಜಸ್ಪ್ರೀತ್ ಬುಮ್ರಾ ಖಾತೆ ತೆರೆಯದೆ ನಾಳೆಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
Russia: ಮುಂದಿನ ಒಲಿಂಪಿಕ್ಸ್ನಲ್ಲಿ ರಷ್ಯಾ ನಿಷೇಧ..!
ಇದಕ್ಕೂ ಮುನ್ನ ಮೊದಲು ಬ್ಯಾಟ್ ಮಾಡಿದ ಭಾರತ ನಾಯಕ ವಿರಾಟ್ ಕೊಹ್ಲಿ ಅವರ 74 ರನ್, ಚೇತೇಶ್ವರ್ ಪೂಜಾರ 43 ಹಾಗೂ ಉಪ ನಾಯಕ ಅಜಿಂಕ್ಯಾ ರಹಾನೆaವರ 42 ರನ್ಗಳ ನೆರವಿನಿಂದ ಮೊದಲ ದಿನದಾಟದ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 233 ರನ್ ಗಳಿಸಿತ್ತು.
300 ರನ್ಗಳ ಗುರಿ ಇಟ್ಟು ಎರಡನೇ ದಿನದಾಟ ಆರಂಭಿಸಿದ ಭಾರತ ಇಂದು 11 ರನ್ ಗಳಿಸಲಷ್ಟೇ ಶಕ್ತವಾಯಿತು. 2ನೇ ದಿನದಾಟದ ಮೊದಲ ಓವರ್ನಲ್ಲೇ ಭಾರತ ಆಘಾತ ಅನುಭವಿಸಿತು. 15 ರನ್ ಗಳಿಸಿದ್ದ ಆರ್. ಅಶ್ವಿನ್ ಆರಂಭದಲ್ಲೇ ಔಟ್ ಆದರೆ, ವೃದ್ದಿಮಾನ್ ಸಾಹ ಕೂಡ 9 ರನ್ಗೆ ಪೆವಿಲಿಯನ್ ಸೇರಿಕೊಂಡರು. ಉಮೇಶ್ ಯಾದವ್ 6 ಹಾಗೂ ಮೊಹಮ್ಮದ್ ಶಮಿ ಶೂನ್ಯಕ್ಕೆ ಔಟ್ ಆಗುವ ಮೂಲಕ ಭಾರತ 244 ರನ್ಗೆ ಸರ್ವಪತನ ಕಂಡಿತು.
Published by:
Vinay Bhat
First published:
December 18, 2020, 5:17 PM IST