news18-kannada Updated:December 17, 2020, 5:10 PM IST
ವಿರಾಟ್ ಕೊಹ್ಲಿ
ಅಡಿಲೇಡ್ (ಡಿ. 17): ಇಲ್ಲಿನ ಅಡಿಲೇಡ್ ಓವಲ್ ಮೈದಾನದಲ್ಲಿ ಡೇ-ನೈಟ್ ಟೆಸ್ಟ್ನೊಂದಿಗೆ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಬಾರ್ಡರ್-ಗವಾಸ್ಕರ್ ಟ್ರೋಫಿಯ ಮೊದಲ ಪಂದ್ಯಕ್ಕೆ ಚಾಲನೆ ಸಿಕ್ಕಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿರುವ ಭಾರತ ಮೊದಲ ದಿನ ಘನತೆಗೆ ತಕ್ಕಂತೆ ಪ್ರದರ್ಶನ ನೀಡಲಿಲ್ಲ. ನಾಯಕ ವಿರಾಟ್ ಕೊಹ್ಲಿ ಹೊರತುಪಡಿಸಿ ಕಣಕ್ಕಿಳಿದ ಬ್ಯಾಟ್ಸ್ಮನ್ಗಳು ಅಷ್ಟೊಂದು ಪರಿಣಾಮಕಾರಿಯಾಗಿ ಗೋಚರಿಸಲಿಲ್ಲ. ಪರಿಣಾಮ ಭಾರತ ಮೊದಲ ದಿನದಾಟದ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 233 ರನ್ ಗಳಿಸಿತು.
ಭಾರತ ಇನ್ನಿಂಗ್ಸ್ ಆರಂಭಿಸಿದ ಮೊದಲ ಓವರ್ನಲ್ಲೇ ವಿಕೆಟ್ ಪೃಥ್ವಿ ಶಾ ವಿಕೆಟ್ ಕಳೆದುಕೊಂಡಿತು. ಮಿಚೆಲ್ ಸ್ಟಾರ್ಕ್ ಬೌಲಿಂಗ್ನಲ್ಲಿ ಪೃಥ್ವಿ ಶಾ(0) ಕ್ಲೀನ್ ಬೌಲ್ಡ್ ಆಗುವ ಮೂಲಕ ಪೆವಿಲಿಯನ್ ಸೇರಿಕೊಂಡರು. ಬಳಿಕ ಮಯಾಂಕ್ ಅಗರ್ವಾಲ್ ಹಾಗೂ ಚೇತೇಶ್ವರ್ ಪೂಜಾರ ಇನ್ನಿಂಗ್ಸ್ ಕಟ್ಟಲು ಹೊರಟರೂ ಸಾಧ್ಯವಾಗಲಿಲ್ಲ.
(VIDEO): ಆತ ನುಡಿದ ಭವಿಷ್ಯ ನಿಜವೇ ಆಯಿತು: ಪಂದ್ಯ ಆರಂಭವಾದ 2ನೇ ಎಸೆತದಲ್ಲೇ ಪೃಥ್ವಿ ಶಾ ಕ್ಲೀನ್ ಬೌಲ್ಡ್
ಮಯಾಂಕ್ 40 ಎಸೆತಗಳಲ್ಲಿ 17 ರನ್ ಗಳಿಸಿ ಪ್ಯಾಟ್ ಕಮಿನ್ಸ್ ಬೌಲಿಂಗ್ನಲ್ಲಿ ಬೌಲ್ಡ್ ಆದರು. ಈ ಸಂದರ್ಭ ಪೂಜಾರ ಜೊತೆಯಾಟ ನಾಯಕ ವಿರಾಟ್ ಕೊಹ್ಲಿ ಎಚ್ಚರಿಕೆಯ ಆಟವಾಡದರು. ಆದರೆ, ಈ ಜೋಡಿ ಅರ್ಧಶತಕದ ಜೊತೆಯಾಟ ಆಡಿತಷ್ಟೆ. 160 ಎಸೆತಗಳಲ್ಲಿ 43 ರನ್ ಗಳಿಸಿ ಪೂಜಾರ ಬ್ಯಾಟ್ ಕೆಳಗಿಟ್ಟರು.
ನಂತರ ಉಪ ನಾಯಕ ಅಜಿಂಕ್ಯಾ ರಹಾನೆ ಜೊತೆಯಾದ ಕೊಹ್ಲಿ ಮತ್ತೊಂದು ಉತ್ತಮ ಇನ್ನಿಂಗ್ಸ್ ಕಟ್ಟಿದರು. ಕೊಹ್ಲಿ ಟೆಸ್ಟ್ ಕ್ರಿಕೆಟ್ನಲ್ಲಿ 22ನೇ ಅರ್ಧಶತಕವನ್ನೂ ಪೂರೈಸಿದರು. ಆದರೆ, ಶತಕ ಗಳಿಸುವ ಅಂದಾಜಿನಲ್ಲಿದ್ದ ಕೊಹ್ಲಿ ಅನಿರೀಕ್ಷಿತ ರನೌಟ್ಗೆ ಬಲಿಯಾಗಬೇಕಾಯಿತು. 180 ಎಸೆತಗಳಲ್ಲಿ 8 ಬೌಂಡರಿಯೊಂದಿಗೆ 74 ರನ್ ಗಳಿಸಿ ಕೊಹ್ಲಿ ಔಟ್ ಆದರು. ಇದರ ಬೆನ್ನಲ್ಲೇ ರಹಾನೆ ಕೂಡ 92 ಎಸೆತಗಳಲ್ಲಿ 42 ರನ್ ಬಾರಿಸಿ ನಿರ್ಗಮಿಸಿದರು.
ದಿನದಾಟದ ಅಂತಿಮ ಹಂತದಲ್ಲಿ ಹನುಮಾ ವಿಹಾರಿ(16) ಕೂಡ ನಿರ್ಗಮಿಸಿದರು. ಭಾರತ ಮೊದಲ ದಿನದಾಟದ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 233 ರನ್ ಗಳಿಸಿದೆ. ವೃದ್ದಿಮಾನ್ ಸಾಹ 9 ರನ್ ಹಾಗೀ ರವಿಚಂದ್ರನ್ ಅಶ್ವಿನ್ 15 ರನ್ ಗಳಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಆಸ್ಟ್ರೇಲಿಯಾ ಪರ ಮಿಚೆಲ್ ಸ್ಟಾರ್ಕ್ 2 ವಿಕೆಟ್ ಕಿತ್ತರೆ, ಜೋಷ್ ಹ್ಯಾಜ್ಲೆವುಡ್, ಪ್ಯಾಟ್ ಕಮಿನ್ಸ್ ಹಾಗೂ ನಥನ್ ಲ್ಯಾನ್ ತಲಾ 1 ವಿಕೆಟ್ ಪಡೆದರು.
Mohammad Amir: ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಗುಡ್ ಬೈ ಹೇಳಿದ ಪಾಕ್ ವೇಗಿ ಮೊಹಮ್ಮದ್ ಅಮೀರ್
ಅಡಿಲೇಡ್ನಲ್ಲಿ 500 ರನ್ ಬಾರಿಸಿದ ಕೊಹ್ಲಿ:
ಅಡಿಲೇಡ್ನಲ್ಲಿ ಆಡಿದ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಒಟ್ಟು 500 ರನ್ ಪೂರೈಸಿದ ಸಾಧನೆ ಮಾಡಿದರು. ಈ ಮೈದಾನದಲ್ಲಿ 500ರ ಗಡಿ ದಾಟಿದ 4ನೇ ವಿದೇಶಿ ಆಟಗಾರ ಕೊಹ್ಲಿ ಆಗಿದ್ದಾರೆ.
Published by:
Vinay Bhat
First published:
December 17, 2020, 5:10 PM IST