India vs Australia 1st T20 Live: ಭಾರತದ 6 ವಿಕೆಟ್ ಪತನ

IND vs AUS 1st T20 Live, India vs Australia Live Cricket Score: ಟೀಂ ಇಂಡಿಯಾ ಆಡಿದ ಕಳೆದ ಒಂಬತ್ತು ಟಿ-20 ಪಂದ್ಯದಲ್ಲಿ ಎಂಟನ್ನು ಗೆದ್ದು ಬೀಗಿದೆ. ಒಂದು ಪಂದ್ಯ ಫಲಿತಾಂಶ ಕಂಡಿಲ್ಲ. ದಾಖಲೆಗಳನ್ನು ನೋಡುವುದಾದರೆ ಮೇಲ್ನೋಟಕ್ಕೆ ಭಾರತವೇ ಬಲಿಷ್ಠವಾಗಿದ್ದು ಆಸೀಸ್ ವಿರುದ್ಧ ಮೇಲುಗೈ ಸಾಧಿಸುವ ಸಾಧ್ಯತೆ ಹೆಚ್ಚಿದೆ.

IND vs AUS 1st Live Score Updates

IND vs AUS 1st Live Score Updates

 • Share this:
  ಕ್ಯಾನ್​ಬೆರ (ಡಿ. 04): ಇಲ್ಲಿನ ಮನುಕಾ ಓವಲ್ ಕ್ರಿಕೆಟ್ ಮೈದಾನದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ಮೊದಲ ಟಿ-20 ಪಂದ್ಯ ನಡೆಯುತ್ತಿದೆ. ಏಕದಿನ ಸರಣಿ ಕಳೆದಕೊಂಡ ಕೊಹ್ಲಿ ಪಡೆ ಸೇಡು ತೀರಿಸಿಕೊಳ್ಳುವ ನಿರೀಕ್ಷೆಯಲ್ಲಿದ್ದರೆ, ಇತ್ತ ಫಿಂಚ್ ಪಡೆ ಮತ್ತೊಂದು ಸರಣಿ ಗೆಲುವಿನ ಮೇಲೆ ಕಣ್ಣಿಟ್ಟಿದೆ. ಈಗಾಗಲೇ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಆ್ಯರೋನ್ ಫಿಂಚ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಭಾರತ ಪರ ಟಿ. ನಟರಾಜನ್ ಅಂತರಾಷ್ಟ್ರೀಯ ಟಿ-20 ಕ್ರಿಕೆಟ್​ಗೆ ಪದಾರ್ಪಣೆ ಮಾಡುತ್ತಿದ್ದಾರೆ.

  ಸದ್ಯ ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದಿರುವ ಭಾರತ ಆರಂಭದಲ್ಲೇ ಆಘಾತ ಅನುಭವಿಸಿತು. ಮಿಚೆಲ್ ಸ್ಟಾರ್ಕ್​ ಬೌಲಿಂಗ್​ನಲ್ಲಿ ಶಿಖರ್ ಧವನ್ ಕೇವಲ 1 ರನ್​ ಗಳಿಸಿ ಕ್ಲೀನ್ ಬೌಲ್ಡ್ ಆದರು. ನಾಯಕ ವಿರಾಟ್ ಕೊಹ್ಲಿ(9) ಆಟ ಕೂಡ ಹೆಚ್ಚುಹೊತ್ತು ನಡೆಯಲಿಲ್ಲ.

  ಬಳಿಕ ಕೆ. ಎಲ್ ರಾಹುಲ್ ಜೊತೆಯಾದ ಸಂಜು ಸ್ಯಾಮ್ಸನ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ರಾಹುಲ್ ಅರ್ಧಶತಕ ಬಾರಿಸಿದರೆ, 15 ಎಸೆತಗಳಲ್ಲಿ 1 ಬೌಂಡರಿ, 1 ಸಿಕ್ಸರ್​ ಬಾರಸಿದ ಸಂಜು 23 ರನ್ ಗಳಿಸಿ ಔಟ್ ಆದರು. ಮನೀಶ್ ಪಾಂಡೆ ಆಟ ಕೇವಲ 2 ರನ್​ಗೆ ಅಂತ್ಯವಾಯಿತು.

  ಅರ್ಧಶತಕದ ಬೆನ್ನಲ್ಲೇ ರಾಹುಲ್ ಕೂಡ ಬ್ಯಾಟ್ ಕೆಳಗಿಟ್ಟರು. 40 ಎಸೆತಗಳಲ್ಲಿ 5 ಬೌಂಡರಿ, 1 ಸಿಕ್ಸರ್ ಬಾರಿಸಿ ರಾಹುಲ್ 51 ರನ್ ಬಾರಿಸಿದರು. ಕ್ರೀಸ್​ನಲ್ಲಿ ಹಾರ್ದಿಕ್ ಪಾಂಡ್ಯ ಜೊತೆ ರವೀಂದ್ರ ಜಡೇಜಾ ಇದ್ದಾರೆ.

  ಭಾರತ ತಂಡ: ಶಿಖರ್‌ ಧವನ್‌, ಕೆ. ಎಲ್ ರಾಹುಲ್ (ವಿ. ಕೀ), ವಿರಾಟ್‌ ಕೊಹ್ಲಿ (ನಾಯಕ), ಶ್ರೇಯಸ್‌ ಅಯ್ಯರ್‌, ಸಂಜು ಸ್ಯಾಮ್ಸನ್, ಹಾರ್ದಿಕ್‌ ಪಾಂಡ್ಯ, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ದೀಪಕ್ ಚಹಾರ್, ಮೊಹಮ್ಮದ್ ಶಮಿ, ಟಿ. ನಟರಾಜನ್.

  IND vs AUS: ಧೋನಿ ದಾಖಲೆಯತ್ತ ಧವನ್ ಚಿತ್ತ: ಇತಿಹಾಸ ನಿರ್ಮಿಸಲು ತಯಾರಾದ ಕೆ. ಎಲ್ ರಾಹುಲ್

  ಆಸ್ಟ್ರೇಲಿಯ ತಂಡ: ಆ್ಯರೋನ್ ಫಿಂಚ್‌ (ನಾಯಕ), ಡಾರ್ಸಿ ಶಾರ್ಟ್​, ಮ್ಯಾಥ್ಯೂ ವೇಡ್, ಸ್ಟೀವ್ ಸ್ಮಿತ್‌, ಗ್ಲೆನ್‌ ಮ್ಯಾಕ್ಸ್​ವೆಲ್‌, ಮೊಯ್​ಸೆಸ್ ಹೆನ್ರಿಕ್ಯೂಸ್, ಸಿಯಾನ್ ಅಬಾಟ್, ಮಿಚೆಲ್ ಸ್ಟಾರ್ಕ್, ಮಿಚೆಲ್ ಸ್ವೆಪ್ಸನ್, ಜೋಶ್‌ ಹ್ಯಾಝಲ್‌ವುಡ್‌, ಆ್ಯಡಂ ಝಂಪ.

  ಆಸ್ಟ್ರೇಲಿಯಾ ವಿರುದ್ಧ ಭಾರತದ ಟಿ-20 ದಾಖಲೆ ಅತ್ಯುತ್ತಮವಾಗಿದೆ. 2007 ರಿಂದ 2019 ವರೆಗೆ ಭಾರತ – ಆಸ್ಟ್ರೇಲಿಯಾ 8 ಟಿ-20 ಸರಣಿ ಆಡಿವೆ, ಇದರಲ್ಲಿ ಭಾರತ ಮೂರು ಬಾರಿ ಸರಣಿ ಗೆದ್ದರೆ, ಆಸೀಸ್ ಕೇವಲ ಎರಡು ಸರಣಿಯಷ್ಟೆ ಗೆದ್ದಿದೆ. ಮೂರು ಡ್ರಾ ಕಂಡಿದೆ.

  ಇನ್ನೂ ಟೀಂ ಇಂಡಿಯಾ ಆಡಿದ ಕಳೆದ ಒಂಬತ್ತು ಟಿ-20 ಪಂದ್ಯದಲ್ಲಿ ಎಂಟನ್ನು ಗೆದ್ದು ಬೀಗಿದೆ. ಒಂದು ಪಂದ್ಯ ಫಲಿತಾಂಶ ಕಂಡಿಲ್ಲ. ದಾಖಲೆಗಳನ್ನು ನೋಡುವುದಾದರೆ ಮೇಲ್ನೋಟಕ್ಕೆ ಭಾರತವೇ ಬಲಿಷ್ಠವಾಗಿದ್ದು ಆಸೀಸ್ ವಿರುದ್ಧ ಮೇಲುಗೈ ಸಾಧಿಸುವ ಸಾಧ್ಯತೆ ಹೆಚ್ಚಿದೆ.

  1-2 ಅಂತರದಿಂದ ಏಕದಿನ ಸರಣಿಯನ್ನು ಸೋತಿರುವ ಭಾರತ 50 ಓವರ್ ಮಾದರಿ ಕ್ರಿಕೆಟ್‌ನಲ್ಲಿ ಸಾಕಷ್ಟು ಶ್ರಮ ಹಾಕಬೇಕಾದ ಅಗತ್ಯತೆಯನ್ನು ಬೆಟ್ಟುಮಾಡಿದೆ. ಆದರೆ, ಚುಟುಕು ಮಾದರಿಯ ಕ್ರಿಕೆಟ್‌ನಲ್ಲಿ ಭಾರತ ಸಮತೋಲಿತ ತಂಡವನ್ನು ಹೊಂದಿದೆ.

  ಕಾಂಗರೂ ನಾಡಲ್ಲಿ ಈವರೆಗೆ ಟೀಮ್​​​ ಇಂಡಿಯಾ 9 ಪಂದ್ಯಗಳನ್ನಾಡಿದ್ದು, ಅದರಲ್ಲಿ 5 ಪಂದ್ಯಗಳಲ್ಲಿ ಗೆದ್ದಿದ್ರೆ, 3 ಪಂದ್ಯಗಳಲ್ಲಿ ಸೋತಿದೆ. ಇನ್ನುಳಿದ 1 ಪಂದ್ಯ ರದ್ದಾಗಿದೆ. ಕೊನೆಯ ಏಕದಿನ ಪಂದ್ಯ ನಡೆದ ಕ್ಯಾನ್​ಬೆರಾ ಅಂಗಳವೇ ಇಂದಿನ ಹೋರಾಟಕ್ಕೂ ವೇದಿಕೆ ಒದಗಿಸಲಿದ್ದು, ಹೈ ಸ್ಕೋರಿಂಗ್​ ಗೇಮ್​ ಆಗೋ ಸಾಧ್ಯತೆ ದಟ್ಟವಾಗಿದೆ.
  Published by:Vinay Bhat
  First published: