HOME » NEWS » Sports » CRICKET INDIA VS AUSTRALIA 1ST T20 LIVE SCORE ONLINE LIVE STREAMING PLAYING XI LIVE SCORECARD AUS LOST 2 WICKETS VB

India vs Australia 1st T20 Live: ಆಸ್ಟ್ರೇಲಿಯಾದ 4 ವಿಕೆಟ್ ಪತನ: ರೋಚಕ ಘಟ್ಟದತ್ತ ಪಂದ್ಯ

IND vs AUS 1st T20 Live, India vs Australia Live Cricket Score: ಟೀಂ ಇಂಡಿಯಾ ಆಡಿದ ಕಳೆದ ಒಂಬತ್ತು ಟಿ-20 ಪಂದ್ಯದಲ್ಲಿ ಎಂಟನ್ನು ಗೆದ್ದು ಬೀಗಿದೆ. ಒಂದು ಪಂದ್ಯ ಫಲಿತಾಂಶ ಕಂಡಿಲ್ಲ. ದಾಖಲೆಗಳನ್ನು ನೋಡುವುದಾದರೆ ಮೇಲ್ನೋಟಕ್ಕೆ ಭಾರತವೇ ಬಲಿಷ್ಠವಾಗಿದ್ದು ಆಸೀಸ್ ವಿರುದ್ಧ ಮೇಲುಗೈ ಸಾಧಿಸುವ ಸಾಧ್ಯತೆ ಹೆಚ್ಚಿದೆ.

news18-kannada
Updated:December 4, 2020, 5:02 PM IST
India vs Australia 1st T20 Live: ಆಸ್ಟ್ರೇಲಿಯಾದ 4 ವಿಕೆಟ್ ಪತನ: ರೋಚಕ ಘಟ್ಟದತ್ತ ಪಂದ್ಯ
IND vs AUS 1st Live Score Updates
  • Share this:
ಕ್ಯಾನ್​ಬೆರ (ಡಿ. 04): ಇಲ್ಲಿನ ಮನುಕಾ ಓವಲ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ-20 ಪಂದ್ಯದಲ್ಲಿ ಭಾರತ ಸವಾಲಿನ ಮೊತ್ತ ಕಲೆಹಾಕಿದೆ. ಕೆ. ಎಲ್ ರಾಹುಲ್ ಅವರ ಆಕರ್ಷಕ ಅರ್ಧಶತಕ ಹಾಗೂ ಜಡೇಜಾ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಭಾರತ 20 ಓವರ್​ಗಳಲ್ಲಿ 161 ರನ್ ಬಾರಿಸಿದೆ. ಕೊಹ್ಲಿ ಪಡೆ ಏಕದಿನ ಸರಣಿ ಕಳೆದಕೊಂಡ ನೋವಿನಲ್ಲಿ ಸೇಡು ತೀರಿಸಿಕೊಳ್ಳುವ ನಿರೀಕ್ಷೆಯಲ್ಲಿದ್ದರೆ, ಇತ್ತ ಫಿಂಚ್ ಪಡೆ ಮತ್ತೊಂದು ಸರಣಿ ಗೆಲುವಿನ ಮೇಲೆ ಕಣ್ಣಿಟ್ಟಿದೆ. ಭಾರತ ಪರ ಟಿ. ನಟರಾಜನ್ ಅಂತರಾಷ್ಟ್ರೀಯ ಟಿ-20 ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದಾರೆ.

162 ರನ್​ಗಳ ಟಾರ್ಗೆಟ್ ಬೆನ್ನಟ್ಟಿರುವ ಆಸ್ಟ್ರೇಲಿಯಾ ಉತ್ತಮ ಆರಂಭ ಪಡೆದುಕೊಂಡಿತು. ಓಪನರ್​ಗಳಾದ ನಾಯಕ ಆ್ಯರೋನ್ ಫಿಂಚ್ ಹಾಗೂ ಡಾರ್ಸಿ ಶಾರ್ಟ್​ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಮೊದಲ ವಿಕೆಟ್​ಗೆ ಈ ಜೋಡಿ 56 ರನ್​ಗಳ ಜೊತೆಯಾಟ ಆಡಿತು. 8ನೇ ಓವರ್ ಬೌಲಿಂಗ್ ಮಾಡಲು ಬಂದ ಚಹಾಲ್ ಕೊನೆಗೂ ಇವರ ಜೊತೆಯಾಟಕ್ಕೆ ಬ್ರೇಕ್ ಹಾಕಿದರು.

26 ಎಸೆತಗಳಲ್ಲಿ 35 ರನ್ ಗಳಿಸಿದ್ದ ಫಿಂಚ್ ಚಹಾಲ್​ಗೆ ವಿಕೆಟ್ ಒಪ್ಪಿಸಿದರು. ಸ್ಟೀವ್ ಸ್ಮಿತ್ 12 ರನ್ ಗಳಿಸಿರುವಾಗ ಸಂಜು ಸ್ಯಾಮ್ಸನ್ ಹಿಡಿದ ಅದ್ಭುತ ಕ್ಯಾಚ್​ಗೆ ಬಲಿಯಾದರೆ, ನಟರಾಜನ್ ಬೌಲಿಂಗ್​ನಲ್ಲಿ ಗ್ಲೆನ್ ಮ್ಯಾಕ್ಸ್​ವೆಲ್(2) ಎಲ್​ಬಿ ಬಲೆಗೆ ಸಿಲುಕಿದರು. ಇತ್ತ ಎಚ್ಚರಿಕೆಯಿಂದ ಬ್ಯಾಟ್ ಬೀಸುತ್ತಿದ್ದ ಡಾರ್ಸಿ ಶಾರ್ಟ್​ ಕೂಡ 38 ಎಸೆತಗಳಲ್ಲಿ 34 ರನ್ ಗಳಿಸಿ ನಿರ್ಗಮಿಸಿದರು.

ಕ್ರೀಸ್​ನಲ್ಲಿ ಮ್ಯಾಥ್ಯೂ ವೇಡ್ ಹಾಗೂ ಮೊಯ್​ಸೆಸ್ ಹೆನ್ರಿಕ್ಯೂಸ್ ಇದ್ದಾರೆ.

ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಭಾರತ ಆರಂಭದಲ್ಲೇ ಆಘಾತ ಅನುಭವಿಸಿತು. ಮಿಚೆಲ್ ಸ್ಟಾರ್ಕ್​ ಬೌಲಿಂಗ್​ನಲ್ಲಿ ಶಿಖರ್ ಧವನ್ ಕೇವಲ 1 ರನ್​ ಗಳಿಸಿ ಕ್ಲೀನ್ ಬೌಲ್ಡ್ ಆದರು. ನಾಯಕ ವಿರಾಟ್ ಕೊಹ್ಲಿ(9) ಆಟ ಕೂಡ ಹೆಚ್ಚುಹೊತ್ತು ನಡೆಯಲಿಲ್ಲ.

ಬಳಿಕ ಕೆ. ಎಲ್ ರಾಹುಲ್ ಜೊತೆಯಾದ ಸಂಜು ಸ್ಯಾಮ್ಸನ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ರಾಹುಲ್ ಅರ್ಧಶತಕ ಬಾರಿಸಿದರೆ, 15 ಎಸೆತಗಳಲ್ಲಿ 1 ಬೌಂಡರಿ, 1 ಸಿಕ್ಸರ್​ ಬಾರಸಿದ ಸಂಜು 23 ರನ್ ಗಳಿಸಿ ಔಟ್ ಆದರು. ಮನೀಶ್ ಪಾಂಡೆ ಆಟ ಕೇವಲ 2 ರನ್​ಗೆ ಅಂತ್ಯವಾಯಿತು.

ಅರ್ಧಶತಕದ ಬೆನ್ನಲ್ಲೇ ರಾಹುಲ್ ಕೂಡ ಬ್ಯಾಟ್ ಕೆಳಗಿಟ್ಟರು. 40 ಎಸೆತಗಳಲ್ಲಿ 5 ಬೌಂಡರಿ, 1 ಸಿಕ್ಸರ್ ಬಾರಿಸಿ ರಾಹುಲ್ 51 ರನ್ ಗಳಿಸಿದರೆ ಹಾರ್ದಿಕ್ ಪಾಂಡ್ಯ 16 ರನ್​ಗೆ ಸುಸ್ತಾದರು. ಅಂತಿಮ ಹಂತದಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿದ ಜಡೇಜಾ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು.ಕೇವಲ 23 ಎಸೆತಗಳಲ್ಲಿ 5 ಬೌಂಡರಿ, 1 ಸಿಕ್ಸರ್ ಸಿಡಿಸಿ ಅಜೇಯ 44 ರನ್ ಚಚ್ಚಿದರು. ಭಾರತ 20 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 161 ರನ್ ಗಳಿಸಿತು. ಆಸ್ಟ್ರೇಲಿಯಾ ಪರ ಮೊಯ್​ಸೆಸ್ ಹೆನ್ರಿಕ್ಯೂಸ್ 3 ವಿಕೆಟ್, ಮಿಚೆಲ್ ಸ್ಟಾರ್ಕ್​ 2 ವಿಕೆಟ್ ಕಿತ್ತರು.

ಭಾರತ ತಂಡ: ಶಿಖರ್‌ ಧವನ್‌, ಕೆ. ಎಲ್ ರಾಹುಲ್ (ವಿ. ಕೀ), ವಿರಾಟ್‌ ಕೊಹ್ಲಿ (ನಾಯಕ), ಶ್ರೇಯಸ್‌ ಅಯ್ಯರ್‌, ಸಂಜು ಸ್ಯಾಮ್ಸನ್, ಹಾರ್ದಿಕ್‌ ಪಾಂಡ್ಯ, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ದೀಪಕ್ ಚಹಾರ್, ಮೊಹಮ್ಮದ್ ಶಮಿ, ಟಿ. ನಟರಾಜನ್.

IND vs AUS: ಧೋನಿ ದಾಖಲೆಯತ್ತ ಧವನ್ ಚಿತ್ತ: ಇತಿಹಾಸ ನಿರ್ಮಿಸಲು ತಯಾರಾದ ಕೆ. ಎಲ್ ರಾಹುಲ್

ಆಸ್ಟ್ರೇಲಿಯ ತಂಡ: ಆ್ಯರೋನ್ ಫಿಂಚ್‌ (ನಾಯಕ), ಡಾರ್ಸಿ ಶಾರ್ಟ್​, ಮ್ಯಾಥ್ಯೂ ವೇಡ್, ಸ್ಟೀವ್ ಸ್ಮಿತ್‌, ಗ್ಲೆನ್‌ ಮ್ಯಾಕ್ಸ್​ವೆಲ್‌, ಮೊಯ್​ಸೆಸ್ ಹೆನ್ರಿಕ್ಯೂಸ್, ಸಿಯಾನ್ ಅಬಾಟ್, ಮಿಚೆಲ್ ಸ್ಟಾರ್ಕ್, ಮಿಚೆಲ್ ಸ್ವೆಪ್ಸನ್, ಜೋಶ್‌ ಹ್ಯಾಝಲ್‌ವುಡ್‌, ಆ್ಯಡಂ ಝಂಪ.
Published by: Vinay Bhat
First published: December 4, 2020, 3:55 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories