India vs Australia 1st T20: ಆಸೀಸ್ ಬ್ಯಾಟ್ಸ್​ಮನ್​ಗಳ ಹುಟ್ಟಡಗಿಸಿದ ನಟರಾಜನ್: ಭಾರತಕ್ಕೆ 11 ರನ್​ಗಳ ಜಯ

IND vs AUS 1st T20, India vs Australia: ಟಿ. ನಟರಾಜನ್ ಪದಾರ್ಪಣೆ ಪಂದ್ಯದಲ್ಲಿ ಆಸ್ಟ್ರೇಲಿಯಾದ ಪ್ರಮುಖ ಬ್ಯಾಟ್ಸ್​ಮನ್​ಗಳಾದ ಡಾರ್ಸಿ ಶಾರ್ಟ್​, ಗ್ಲೆನ್ ಮ್ಯಾಕ್ಸ್​ವೆಲ್ ಹಾಗೂ ಮಿಚೆಲ್ ಸ್ಟಾರ್ಕ್​ ವಿಕೆಟ್ ಕಿತ್ತು ಮಿಂಚಿದರು.

Team India

Team India

 • Share this:
  ಕ್ಯಾನ್​ಬೆರ (ಡಿ. 04): ಇಲ್ಲಿನ ಮನುಕಾ ಓವಲ್ ಕ್ರಿಕೆಟ್ ಮೈದಾನದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ-20 ಪಂದ್ಯದಲ್ಲಿ ಭಾರತ 11 ರನ್​ಗಳ ಭರ್ಜರಿ ಜಯ ಸಾಧಿಸಿದೆ. ಬ್ಯಾಟಿಂಗ್ - ಬೌಲಿಂಗ್ ಎರಡೂ ವಿಭಾಗಗಳಲ್ಲಿ ಅದ್ಭುತ ಪ್ರದರ್ಶನ ತೋರಿದ ಕೊಹ್ಲಿ ಪಡೆ ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಇತ್ತ ಫಿಂಚ್ ಪಡೆ ಟಿ-20 ಯಲ್ಲಿ ಭಾರತ ವಿರುದ್ಧ ತನ್ನ ಹಳೆಯ ಕೆಟ್ಟ ದಾಖಲೆ ಮುಂದುವರೆಸಿದೆ.

  ಪ್ರಮುಖ ಹೈಲೇಟ್ಸ್​: ಟಿ. ನಟರಾಜನ್ ಪದಾರ್ಪಣೆ ಪಂದ್ಯದಲ್ಲಿ ಆಸ್ಟ್ರೇಲಿಯಾದ ಪ್ರಮುಖ ಬ್ಯಾಟ್ಸ್​ಮನ್​ಗಳಾದ ಡಾರ್ಸಿ ಶಾರ್ಟ್​, ಗ್ಲೆನ್ ಮ್ಯಾಕ್ಸ್​ವೆಲ್ ಹಾಗೂ ಮಿಚೆಲ್ ಸ್ಟಾರ್ಕ್​ ವಿಕೆಟ್ ಕಿತ್ತು ಮಿಂಚಿದರು.

  ಬ್ಯಾಟಿಂಗ್ ಮಾಡುವಾಗ ರವೀಂದ್ರ ಜಡೇಜಾ ಇಂಜುರಿಗೆ ತುತ್ತಾದ ಪರಿಣಾಮ ಅವರ ಬದಲು ಯಜುವೇಂದ್ರ ಚಹಾಲ್ ಬದಲಿ ಆಟಗಾರನಾಗಿ ಬೌಲಿಂಗ್ ಮಾಡಿದರು.

  Virat Kohli: ವಿರಾಟ್‌ ಕೊಹ್ಲಿಯನ್ನು ಹಾಡಿ ಹೊಗಳಿದ ಗೌತಮ್‌ ಗಂಭೀರ್‌..!

  ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಉತ್ತಮ ಆರಂಭ ಪಡೆದುಕೊಂಡಿಲ್ಲವಾದರೂ ಅಂತಿಮ ಹಂತದಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿತು. ಆರಂಭದಲ್ಲೇ ಮಿಚೆಲ್ ಸ್ಟಾರ್ಕ್​ ಬೌಲಿಂಗ್​ನಲ್ಲಿ ಶಿಖರ್ ಧವನ್ ಕೇವಲ 1 ರನ್​ ಗಳಿಸಿ ಕ್ಲೀನ್ ಬೌಲ್ಡ್ ಆದರು. ನಾಯಕ ವಿರಾಟ್ ಕೊಹ್ಲಿ(9) ಆಟ ಕೂಡ ಹೆಚ್ಚುಹೊತ್ತು ನಡೆಯಲಿಲ್ಲ.

  ಬಳಿಕ ಕೆ. ಎಲ್ ರಾಹುಲ್ ಜೊತೆಯಾದ ಸಂಜು ಸ್ಯಾಮ್ಸನ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ರಾಹುಲ್ ಅರ್ಧಶತಕ ಬಾರಿಸಿದರೆ, 15 ಎಸೆತಗಳಲ್ಲಿ 1 ಬೌಂಡರಿ, 1 ಸಿಕ್ಸರ್​ ಬಾರಸಿದ ಸಂಜು 23 ರನ್ ಗಳಿಸಿ ಔಟ್ ಆದರು. ಮನೀಶ್ ಪಾಂಡೆ ಆಟ ಕೇವಲ 2 ರನ್​ಗೆ ಅಂತ್ಯವಾಯಿತು.

  ಅರ್ಧಶತಕದ ಬೆನ್ನಲ್ಲೇ ರಾಹುಲ್ ಕೂಡ ಬ್ಯಾಟ್ ಕೆಳಗಿಟ್ಟರು. 40 ಎಸೆತಗಳಲ್ಲಿ 5 ಬೌಂಡರಿ, 1 ಸಿಕ್ಸರ್ ಬಾರಿಸಿ ರಾಹುಲ್ 51 ರನ್ ಗಳಿಸಿದರೆ ಹಾರ್ದಿಕ್ ಪಾಂಡ್ಯ 16 ರನ್​ಗೆ ಸುಸ್ತಾದರು. ಅಂತಿಮ ಹಂತದಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿದ ಜಡೇಜಾ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು.

  ಕೇವಲ 23 ಎಸೆತಗಳಲ್ಲಿ 5 ಬೌಂಡರಿ, 1 ಸಿಕ್ಸರ್ ಸಿಡಿಸಿ ಅಜೇಯ 44 ರನ್ ಚಚ್ಚಿದರು. ಭಾರತ 20 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 161 ರನ್ ಗಳಿಸಿತು. ಆಸ್ಟ್ರೇಲಿಯಾ ಪರ ಮೊಯ್​ಸೆಸ್ ಹೆನ್ರಿಕ್ಯೂಸ್ 3 ವಿಕೆಟ್, ಮಿಚೆಲ್ ಸ್ಟಾರ್ಕ್​ 2 ವಿಕೆಟ್ ಕಿತ್ತರು.

  ಭಾರತ ನೀಡಿದ್ದ 162 ರನ್​ಗಳ ಟಾರ್ಗೆಟ್ ಬೆನ್ನಟ್ಟಿದ ಆಸ್ಟ್ರೇಲಿಯಾ ಉತ್ತಮ ಆರಂಭ ಪಡೆದುಕೊಂಡಿತು. ಓಪನರ್​ಗಳಾದ ನಾಯಕ ಆ್ಯರೋನ್ ಫಿಂಚ್ ಹಾಗೂ ಡಾರ್ಸಿ ಶಾರ್ಟ್​ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಮೊದಲ ವಿಕೆಟ್​ಗೆ ಈ ಜೋಡಿ 56 ರನ್​ಗಳ ಜೊತೆಯಾಟ ಆಡಿತು. 8ನೇ ಓವರ್ ಬೌಲಿಂಗ್ ಮಾಡಲು ಬಂದ ಚಹಾಲ್ ಕೊನೆಗೂ ಇವರ ಜೊತೆಯಾಟಕ್ಕೆ ಬ್ರೇಕ್ ಹಾಕಿದರು.

  ಟೆಸ್ಟ್​ ಆರಂಭಕ್ಕೂ ಮುನ್ನವೇ ಭಾರತಕ್ಕೆ ಪಂಚ್‌ ನೀಡಲಿದ್ದೇವೆ ಆಸ್ಟ್ರೇಲಿಯಾ ಆರಂಭಿಕನ ಎಚ್ಚರಿಕೆ..!

  26 ಎಸೆತಗಳಲ್ಲಿ 35 ರನ್ ಗಳಿಸಿದ್ದ ಫಿಂಚ್ ಚಹಾಲ್​ಗೆ ವಿಕೆಟ್ ಒಪ್ಪಿಸಿದರು. ಸ್ಟೀವ್ ಸ್ಮಿತ್ 12 ರನ್ ಗಳಿಸಿರುವಾಗ ಸಂಜು ಸ್ಯಾಮ್ಸನ್ ಹಿಡಿದ ಅದ್ಭುತ ಕ್ಯಾಚ್​ಗೆ ಬಲಿಯಾದರೆ, ನಟರಾಜನ್ ಬೌಲಿಂಗ್​ನಲ್ಲಿ ಗ್ಲೆನ್ ಮ್ಯಾಕ್ಸ್​ವೆಲ್(2) ಎಲ್​ಬಿ ಬಲೆಗೆ ಸಿಲುಕಿದರು. ಇತ್ತ ಎಚ್ಚರಿಕೆಯಿಂದ ಬ್ಯಾಟ್ ಬೀಸುತ್ತಿದ್ದ ಡಾರ್ಸಿ ಶಾರ್ಟ್​ ಕೂಡ 38 ಎಸೆತಗಳಲ್ಲಿ 34 ರನ್ ಗಳಿಸಿ ನಿರ್ಗಮಿಸಿದರು. ಮ್ಯಾಥ್ಯೂ ವೇಡ್ ಆಟ 7 ರನ್​ಗೆ ಅಂತ್ಯವಾಯಿತು.

  ಮೊಯ್​ಸೆಸ್ ಹೆನ್ರಿಕ್ಯೂಸ್ ಹೋರಾಟ 30 ರನ್​​ಗೆ ಅಂತ್ಯವಾಯಿತು. ಅಂತಿಮವಾಗಿ ಆಸ್ಟ್ರೇಲಿಯಾ 20 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 150 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಗೊಂಡಿತು. ಭಾರತ ಪರ ಯಜುವೇಂದ್ರ ಚಹಾಲ್ ಹಾಗೂ ನಟರಾಜನ್ ತಲಾ 3 ವಿಕೆಟ್ ಕಿತ್ತು ಮಿಂಚಿದರೆ, ದೀಪಕ್ ಚಹಾರ್ 1 ವಿಕೆಟ್ ಪಡೆದರು.
  Published by:Vinay Bhat
  First published: