ಆಸ್ಟ್ರೇಲಿಯಾ-ಭಾರತ ನಡುವಣ ಟಿ20 ಸರಣಿಯ ಮೊದಲ ಪಂದ್ಯ ನಾಳೆ (ಡಿ.4) ಕ್ಯಾನ್ಬೆರಾ ಮನುಕಾ ಓವಲ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಚುಟುಕು ಕ್ರಿಕೆಟ್ ಲೋಕದಲ್ಲಿ ಉಭಯ ತಂಡಗಳೂ ಬಲಿಷ್ಠವಾಗಿದ್ದು, ರೋಚಕ ಕಾದಾಟಯನ್ನು ನಿರೀಕ್ಷಿಸಬಹುದು. ಅದರಲ್ಲೂ ಏಕದಿನ ಸರಣಿ ಗೆದ್ದ ಆತ್ಮವಿಶ್ವಾಸದಲ್ಲಿ ಫಿಂಚ್ ಪಡೆ ಇದ್ದರೆ, ಇತ್ತ 3ನೇ ಏಕದಿನ ಪಂದ್ಯವನ್ನು ಗೆದ್ದು ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡಿದೆ. ಹಾಗಾದ್ರೆ ಇಂಡೋ-ಆಸೀಸ್ ಟಿ20 ಕದನ ವೀಕ್ಷಿಸುವುದು ಹೇಗೆ?, ಇಲ್ಲಿದೆ ಸಂಪೂರ್ಣ ಮಾಹಿತಿ.
ಉಭಯ ತಂಡಗಳ ನಡುವೆ ಒಟ್ಟು ಮೂರು ಟಿ 20 ಪಂದ್ಯಗಳು ನಡೆಯಲಿವೆ. ಈ ಎಲ್ಲಾ ಪಂದ್ಯಗಳು ಸೋನಿ ಸ್ಪೋರ್ಟ್ಸ್ ಚಾನೆಲ್ನಲ್ಲಿ ವೀಕ್ಷಿಸಬಹುದಾಗಿದೆ. ಇದಲ್ಲದೆ SonyLiv.comನಲ್ಲಿ ಲೈವ್ ಸ್ಟ್ರೀಮಿಂಗ್ ಕೂಡ ಇರಲಿದೆ.
ಸೋನಿ ನೆಟ್ವರ್ಕ್ನ ಯಾವೆಲ್ಲಾ ಚಾನೆಲ್ನಲ್ಲಿ ನೇರ ಪ್ರಸಾರ?
ಸೋನಿ ಸಿಕ್ಸ್, ಸೋನಿ ಟೆನ್ 1 ಮತ್ತು ಸೋನಿ ಟೆನ್ 3.
ಲೈವ್ ಸ್ಟ್ರೀಮಿಂಗ್ ಅನ್ನು ಹೇಗೆ ವೀಕ್ಷಿಸುವುದು?
ಸೋನಿ ಲೈವ್ ಆ್ಯಪ್ ಅಥವಾ ವೆಬ್ಸೈಟ್ನಲ್ಲಿ ಚಂದದಾರಾಗುವ ಮೂಲಕ ವೀಕ್ಷಿಸಬಹುದು.
ಭಾರತದಲ್ಲಿ ಎಷ್ಟು ಗಂಟೆಗೆ ನೇರ ಪ್ರಸಾರ?
ಭಾರತ-ಆಸ್ಟ್ರೇಲಿಯಾ ನಡುವಣ ಮೊದಲ ಪಂದ್ಯ ಮಧ್ಯಾಹ್ನ 1:40 ಕ್ಕೆ ಪ್ರಾರಂಭವಾಗಲಿವೆ.
ಉಚಿತ ನೇರ ಪ್ರಸಾರ ವೀಕ್ಷಿಸುವುದು ಹೇಗೆ?
ಡಿಡಿ ಸ್ಪೋರ್ಟ್ಸ್ ಡಿಸೆಂಬರ್ 4 ರಂದು ಉಚಿತವಾಗಿ ಭಾರತ ಮತ್ತು ಆಸ್ಟ್ರೇಲಿಯಾ ಮೊದಲ ಟಿ20 ಯನ್ನು ನೇರ ಪ್ರಸಾರ ಮಾಡಲಿದೆ.
ಯಾವ ಆ್ಯಪ್ನಲ್ಲಿ ವೀಕ್ಷಿಸಬಹುದು?
ಏರ್ಟೆಲ್ ಪೋಸ್ಟ್ಪೇಯ್ಡ್ ಮತ್ತು ಜಿಯೋ ಚಂದಾದಾರರು ಕ್ರಮವಾಗಿ ಏರ್ಟೆಲ್ ಸ್ಟ್ರೀಮ್ ಮತ್ತು ಜಿಯೋ ಟಿವಿ ಪ್ಲಾಟ್ಫಾರ್ಮ್ಗಳಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಸರಣಿ ಪಂದ್ಯಗಳನ್ನು ಸೋನಿ ಚಾನೆಲ್ಗಳಲ್ಲಿ ಉಚಿತವಾಗಿ ವೀಕ್ಷಿಸಬಹುದಾಗಿದೆ.
ಟಿ20 ಪಂದ್ಯಗಳ ವೇಳಾಪಟ್ಟಿ
ಡಿಸೆಂಬರ್ 4 ಶುಕ್ರವಾರ: ಮೊದಲ ಟಿ20, ಇಂಡಿಯಾ vs ಆಸ್ಟ್ರೇಲಿಯಾ, ಮನುಕಾ ಓವಲ್
ಡಿಸೆಂಬರ್ 6 ರ ಭಾನುವಾರ: 2ನೇ ಟಿ20, ಇಂಡಿಯಾ vs ಆಸ್ಟ್ರೇಲಿಯಾ, ಸಿಡ್ನಿ ಕ್ರಿಕೆಟ್ ಮೈದಾನ
ಬುಧವಾರ, ಡಿಸೆಂಬರ್ 8: 3 ನೇ ಟಿ20, ಇಂಡಿಯಾ vs ಆಸ್ಟ್ರೇಲಿಯಾ, ಸಿಡ್ನಿ ಕ್ರಿಕೆಟ್ ಮೈದಾನ
ಇದನ್ನೂ ಓದಿ: 55 ಎಸೆತ, 5 ಬೌಂಡರಿ, 20 ಸಿಕ್ಸ್, ಸ್ಪೋಟಕ ಶತಕ: ಈ ಬ್ಯಾಟ್ಸ್ಮನ್ ಮೇಲೆ ಕಣ್ಣಿಟ್ಟಿದೆ RCB..! ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ