India vs Australia 1st ODI Live: ಬೃಹತ್ ಮೊತ್ತದತ್ತ ಆಸ್ಟ್ರೇಲಿಯಾ

IND vs AUS Live, India vs Australia Cricket Live Score: ಸಿಡ್ನಿ ಕ್ರಿಕೆಟ್ ಗ್ರೌಂಡ್​ನಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ಮೊದಲ ಏಕದಿನ ಪಂದ್ಯ ನಡೆಯುತ್ತಿದೆ. ಕ್ರಿಕೆಟ್ ಲೋಕದಲ್ಲಿ ಉಭಯ ತಂಡಗಳೂ ಬಲಿಷ್ಠವಾಗಿದ್ದು ರೋಚಕ ಕಾದಾಟ ವೀಕ್ಷಿಸಲು ಅಭಿಮಾನಿಗಳು ಕಾದುಕುಳಿತಿದ್ದಾರೆ.

IND vs AUS Live Score Updates

IND vs AUS Live Score Updates

 • Share this:
  ಸಿಡ್ನಿ (ನ. 27): ಇಲ್ಲಿನ ಸಿಡ್ನಿ ಕ್ರಿಕೆಟ್ ಗ್ರೌಂಡ್​ನಲ್ಲಿ ನಡೆಯುತ್ತಿರುವ ಭಾರತ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ಬೃಹತ್ ಮೊತ್ತದತ್ತ ದಾಪುಗಾಲಿಡುತ್ತಿದೆ. ಇತ್ತ ಭಾರತ ಫಿಂಚ್ ಪಡೆಯ ವಿಕೆಟ್ ಕೀಳಲು ಪರದಾಡುತ್ತಿದೆ.

  ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಆಸ್ಟ್ರೇಲಿಯಾ ಭರ್ಜರಿ ಆರಂಭ ಪಡೆದುಕೊಂಡಿತು. ಓಪನರ್​ಗಳಾದ ನಾಯಕ ಆ್ಯರೋನ್ ಫಿಂಚ್ ಹಾಗೂ ಡೇವಿಡ್ ವಾರ್ನರ್ ಬೊಂಬಾಟ್ ಆಟ ಪ್ರದರ್ಶಿಸಿದರು. ಭಾರತೀಯ ಬೌಲರ್​ಗಳ ಬೆವರಿಳಿಸಿದ ಈ ಜೋಡಿ ಶತಕದ ಜೊತೆಯಾಟ ಆಡಿತು.

  ಎಷ್ಟೇ ಪ್ರಯತ್ನ ಪಟ್ಟರೂ, ನಾನಾ ಪ್ರಯೋಗ ಮಾಡಿದರು ಭಾರತಕ್ಕೆ ಇವರಿಬ್ಬರ ಜೊತೆಯಾಟಕ್ಕೆ ಬ್ರೇಕ್ ಹಾಕಲು ಸಾಧ್ಯವಾಗಲಿಲ್ಲ. 28 ಓವರ್​ನಲ್ಲಿ ಇವರಿಬ್ಬರು ಒಟ್ಟು 156 ರನ್​ಗಳ ಕಾಣಿಕೆ ನೀಡಿದರು. ವಾರ್ನರ್ 76 ಎಸೆತಗಳಲ್ಲಿ 6 ಬೌಂಡರಿ ಬಾರಿಸಿ 69 ರನ್ ಗಳಿಸಿದರು.

  ಬಳಿಕ ಫಿಂಚ್ ಹಾಗೂ ಸ್ಟೀವ್ ಸ್ಮಿತ್ ಜೊತೆಯಾಗಿ ಮತ್ತೊಂದು ಅಮೋಘ ಇನ್ನಿಂಗ್ಸ್​ ಕಟ್ಟಿದರು. ಫಿಂಚ್ ಶತಕ ಸಿಡಿಸಿ ಮಿಂಚಿದರೆ, ಸ್ಮಿತ್ ಅನುಭವಕ್ಕೆ ತಕ್ಕಂತೆ ಬ್ಯಾಟ್ ಬೀಸಿದರು. ಫಿಂಚ್ 124 ಎಸೆತಗಳಲ್ಲಿ 9 ಬೌಂಡರಿ, 2 ಸಿಕ್ಸರ್ ಸಿಡಿಸಿ 114 ರನ್ ಗಳಿಸಿದರು.

  ಇಂದಿನ ಪಂದ್ಯಕ್ಕೆ ಉಭಯ ತಂಡಗಳು:

  ಆಸ್ಟ್ರೇಲಿಯ ತಂಡ: ಆ್ಯರೋನ್ ಫಿಂಚ್‌ (ನಾಯಕ), ಡೇವಿಡ್‌ ವಾರ್ನರ್‌, ಸ್ಟೀವ್ ಸ್ಮಿತ್‌, ಮಾರ್ನಸ್‌ ಲಾಬುಶೇನ್‌, ಗ್ಲೆನ್‌ ಮ್ಯಾಕ್ಸ್​ವೆಲ್‌, ಮಾರ್ಕಸ್‌ ಸ್ಟೋಯಿನಿಸ್‌, ಅಲೆಕ್ಸ್‌ ಕ್ಯಾರಿ, ಪ್ಯಾಟ್‌ ಕಮಿನ್ಸ್‌, ಮಿಚೆಲ್‌ ಸ್ಟಾರ್ಕ್‌, ಜೋಶ್‌ ಹ್ಯಾಝಲ್‌ವುಡ್‌, ಆ್ಯಡಂ ಝಂಪ.

  ಭಾರತ ತಂಡ: ಶಿಖರ್‌ ಧವನ್‌, ಮಾಯಾಂಕ್‌ ಅಗರ್ವಾಲ್‌, ವಿರಾಟ್‌ ಕೊಹ್ಲಿ (ನಾಯಕ), ಶ್ರೇಯಸ್‌ ಅಯ್ಯರ್‌, ಕೆ. ಎಲ್‌. ರಾಹುಲ್‌, ಹಾರ್ದಿಕ್‌ ಪಾಂಡ್ಯ, ರವೀಂದ್ರ ಜಡೇಜಾ, ನವದೀಪ್‌ ಸೈನಿ, ಯಜುವೇಂದ್ರ ಚಹಾಲ್‌, ಮೊಹಮ್ಮದ್‌ ಶಮಿ, ಜಸ್​ಪ್ರೀತ್ ಬುಮ್ರಾ.

  ಕಳೆದ ವರ್ಷದ ಪ್ರವಾಸದ ವೇಳೆ ಆಸ್ಟ್ರೇಲಿಯಕ್ಕೆ ಮೊದಲ ಸಲ ಅವರದೇ ನೆಲದಲ್ಲಿ ಸರಣಿ ಸೋಲುಣಿಸಿ ಇತಿಹಾಸ ನಿರ್ಮಿಸಿದ್ದ ಟೀಂ ಇಂಡಿಯಾ ಈ ಸಲವೂ ಇಂಥದೇ ಪರಾಕ್ರಮ ಮೆರೆದೀತೇ ಎಂಬುದು ಎಲ್ಲರ ಕುತೂಹಲ.

  ಆದರೆ ಇದಕ್ಕೆ ಎರಡು ದೊಡ್ಡ ತೊಡಕುಗಳಿವೆ. ಸಿಡ್ನಿಯಲ್ಲಿ ಭಾರತದ ಏಕದಿನ ದಾಖಲೆ ಅತ್ಯಂತ ಕಳಪೆ ಆಗಿರುವುದು ಹಾಗೂ ಸ್ಟಾರ್‌ ಆಟಗಾರರಾದ ರೋಹಿತ್‌ ಶರ್ಮ ಮತ್ತು ಇಶಾಂತ್‌ ಗಾಯಾಳಾಗಿ ಹೊರಗುಳಿದಿರುವುದು. ಹೀಗಾಗಿ ಭಾರತದ ಟೀಂ ಕಾಂಬಿನೇಶನ್‌ಗೆ ಇದೊಂದು ದೊಡ್ಡ ತೊಡಕಾಗಿ ಪರಿಣಮಿಸಿದೆ.
  Published by:Vinay Bhat
  First published: