'ಧೋನಿ ಜಾಗದಲ್ಲಿ ಪಂತ್​​ರನ್ನು ಆಡಿಸಿ'; ನಿಧಾನಗತಿಯ ಆಟಕ್ಕೆ ಸಿಡಿದೆದ್ದ ಅಭಿಮಾನಿಗಳು

MS Dhoni: ಧೋನಿಯ ಈ ನಿಧಾನಗತಿಯ ಆಟವೇ ಭಾರತ ತಂಡ ಕಡಿಮೆ ರನ್ ಕಲೆಹಾಕಲು ಕಾರಣವಾಯಿತು ಎಂದು ಅಭಿಮಾನಿಗಳು ಸಾಮಾಜಿಕ ತಾಣಗಳಲ್ಲಿ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.

ಎಂ ಎಸ್ ಧೋನಿ

ಎಂ ಎಸ್ ಧೋನಿ

  • News18
  • Last Updated :
  • Share this:
ಬೆಂಗಳೂರು (ಜೂ. 22): ವಿಶ್ವಕಪ್​ನಲ್ಲಿ ಇಂದು ನಡೆಯುತ್ತಿರುವ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ ಸಾಧಾರಣ ಮೊತ್ತ ಕಲೆಹಾಕಿದೆ. ನಾಯಕ ವಿರಾಟ್ ಕೊಹ್ಲಿ ಹಾಗೂ ಕೇದರ್ ಜಾಧವ್​ರ ಅರ್ಧಶತಕ ನೆರವಿನಿಂದ ಭಾರತ 50 ಓವರ್​ಗೆ 224 ರನ್​ಗಳನ್ನಷ್ಟೇ ಗಳಿಸಿದೆ.

ಈ ಬಾರಿಯ ವಿಶ್ವಕಪ್​ನಲ್ಲಿ ಒಂದೂ ಗೆಲುವನ್ನ ಕಾಣದೆ ಪಾಯಿಂಟ್ಸ್ ಟೇಬಲ್​​ನಲ್ಲಿ ತಳ ಮುಟ್ಟಿರುವ ಅಫ್ಘಾನಿಸ್ತಾನ ವಿರುದ್ಧ ಭಾರತದ ಪ್ರದರ್ಶನ ನೋಡಿ ಅಭಿಮಾನಿಗಳು ಕಿಡಿ ಕಾರುತ್ತಿದ್ದಾರೆ.

ಬಲಿಷ್ಠ ತಂಡದೆದುರು ಉತ್ತಮ ಪ್ರದರ್ಶನ ನೀಡಿರುವ ಭಾರತ, ದುರ್ಬಲ ತಂಡದೆದುರು ಆಡಿದ ಆಟದ ಬಗ್ಗೆ ಅಭಿಮಾನಿಗಳು ಸಿಡಿದೆದ್ದಾರೆ. ಅದರಲ್ಲೂ ಎಂ ಎಸ್ ಧೋನಿ ನಿಧಾನಗತಿಯ ಆಟಕ್ಕೆ ಸಾಕಷ್ಟು ಆಕ್ರೋಶ ವ್ಯಕ್ತವಾಗುತ್ತಿದೆ.

Fans Ask Dhoni to Retire After 'Slow and Boring' Knock Against Afghanistan
52 ಎಸೆತಗಳಲ್ಲಿ 28 ರನ್ ಕಲೆಹಾಕಿದ ಎಂ ಎಸ್ ಧೋನಿ


Cricket World Cup, IND vs AFG: 225 ಟಾರ್ಗೆಟ್; ಅಫ್ಘಾನ್ನರ ಮೊದಲ ವಿಕೆಟ್ ಕಿತ್ತ ಶಮಿ

52 ಎಸೆತಗಳಲ್ಲಿ 3 ಬೌಂಡರಿ ಬಾರಿಸಿ ಕೇವಲ 28 ರನ್ ಕಲೆಹಾಕಿ ಎಂ ಎಸ್ ಧೋನಿ 44.3ನೇ ಓವರ್​​ನಲ್ಲಿ ಔಟ್ ಆದರು. ಧೋನಿಯ ಈ ನಿಧಾನಗತಿಯ ಆಟವೇ ಭಾರತ ತಂಡ ಕಡಿಮೆ ರನ್ ಕಲೆಹಾಕಲು ಕಾರಣವಾಯಿತು ಎಂದು ಅಭಿಮಾನಿಗಳು ಸಾಮಾಜಿಕ ತಾಣಗಳಲ್ಲಿ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.

ಅಷ್ಟೇ ಅಲ್ಲದೆ ಧೋನಿಯನ್ನು ತಂಡದಿಂದ ಕೈಬಿಟ್ಟು ರಿಷಭ್ ಪಂತ್​ಗೆ ಅವಕಾಶ ನೀಡಿ ಎಂಬ ಮಾತುಗಳು ಕೇಳಿಬರುತ್ತಿವೆ. ಜೊತೆಗೆ ಧೋನಿ ಇನ್ನೂ ಟೆಸ್ಟ್​ ಕ್ರಿಕೆಟ್​​ನಿಂದ ನಿವೃತ್ತಿ ಪಡೆದಿಲ್ಲವೇ, ಆದಷ್ಟು ಬೇಗ ಕ್ರಿಕೆಟ್​ಗೆ ನಿವೃತ್ತಿ ನೀಡಿ ಎನ್ನುತ್ತಿದ್ದಾರೆ. ಇನ್ನೂ ಕೆಲವರು ಭಾರತ ತಂಡವನ್ನು ಬಿಟ್ಟು ಕೇವಲ ಐಪಿಎಲ್​ ಮಾತ್ರ ಆಡಿ ಎಂದಿದ್ದಾರೆ.

 First published: