India v Australia: ಕೇವಲ 24 ಗಂಟೆಯೊಳಗೆ ಭಾರತ-ಆಸೀಸ್ ಸರಣಿಯ ಟಿಕೆಟ್ ಸೋಲ್ಡ್ ಔಟ್

ಟಿ-20 ಸರಣಿಯ ಪಂದ್ಯಗಳು ಕೂಡ ಮನುಕಾ ಓವರ್‌ ಹಾಗೂ ಎಸ್‌ಸಿಜಿಯಲ್ಲಿ ನಡೆಯಲಿದ್ದು ಎಲ್ಲಾ ಪಂದ್ಯಗಳ ಟಿಕೆಟ್‌ಗಳು ಸಂಪೂರ್ಣವಾಗಿ ಮಾರಾಟವಾಗಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಮಾಹಿತಿಯನ್ನು ನೀಡಿದೆ.

IND vs AUS

IND vs AUS

 • Share this:
  ಬಹುನಿರೀಕ್ಷಿತ ಭಾರತ ಹಾಗೂ ಆಸ್ಟ್ರೇಲಿಯಾ ಸರಣಿ ಆರಂಭಕ್ಕೆ ದಿನಗಣನೆ ಶುರುವಾಗಿದೆ. ವಿಶ್ವದ ಎರಡು ಬಲಿಷ್ಠ ತಂಡಗಳ ಕಾದಾಟದ ವೀಕ್ಷಣೆಗೆ ಅಭಿಮಾನಿಗಳು ಕಾದುಕುಳಿತಿದ್ದಾರೆ. ನವೆಂಬರ್ 27ಕ್ಕೆ ಇಂಡೋ-ಆಸೀಸ್ ಸರಣಿಗೆ ಚಾಲನೆ ಸಿಗಲಿದೆ. ಮೊದಲಿಗೆ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದ್ದು ಆ ಬಳಿಕ ಮೂರು ಪಂದ್ಯಗಳ ಟಿ-20 ಸರಣಿ ಏರ್ಪಡಿಸಲಾಗಿದೆ. ವಿಶೇಷ ಎಂದರೆ ಈ ಆರು ಪಂದ್ಯಗಳ ಪೈಕಿ ಐದು ಪಂದ್ಯಗಳ ಟಿಕೆಟ್ 24 ಗಂಟೆಯ ಒಳಗೆ ಸಂಪೂರ್ಣವಾಗಿ ಮಾರಾಟವಾಗಿದೆ.

  ಸಿಡ್ನಿ ಕ್ರಿಕೆಟ್ ಮೈದಾನ (ಎಸ್‌ಸಿಜಿ) ಹಾಗೂ ಮನುಕಾ ಓವಲ್‌ನಲ್ಲಿ ನಡೆಯಲಿರುವ ಎರಡನೇ ಹಾಗೂ ಮೂರನೇ ಏಕದಿನ ಪಂದ್ಯದ ಟಿಕೆಟ್‌ಗಳೆಲ್ಲವೂ ಸೋಲ್ಡ್ ಔಟ್ ಆಗಿವೆ. ನವೆಂಬರ್ 27 ರಂದು ಎಸ್‌ಸಿಜಿಯಲ್ಲಿ ನಡೆಯಲಿರುವ ಮೊದಲ ಏಕದಿನ ಪಂದ್ಯದ ಕೆಲವೇ ಟಿಕೆಟ್‌ಗಳಷ್ಟೆ ಬಾಕಿ ಇವೆ. ಇದುಕೂಡ ಶೀಘ್ರದಲ್ಲೇ ಸಂಪೂರ್ಣವಾಗಿ ಮಾರಾಟವಾಗುವ ನಿರೀಕ್ಷೆಯಿದೆ.

  ಹೊಸ ದಾಖಲೆ ಬರೆದ IPL 2020; 400 ಬಿಲಿಯನ್ ನಿಮಿಷಗಳ ವೀಕ್ಷಣೆಯನ್ನು ದಾಟಿದ ಮೊದಲ ಕ್ರೀಡಾಕೂಟ

  ಇನ್ನೂ ಟಿ-20 ಸರಣಿಯ ಪಂದ್ಯಗಳು ಕೂಡ ಮನುಕಾ ಓವರ್‌ ಹಾಗೂ ಎಸ್‌ಸಿಜಿಯಲ್ಲಿ ನಡೆಯಲಿದ್ದು ಎಲ್ಲಾ ಪಂದ್ಯಗಳ ಟಿಕೆಟ್‌ಗಳು ಸಂಪೂರ್ಣವಾಗಿ ಮಾರಾಟವಾಗಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಮಾಹಿತಿಯನ್ನು ನೀಡಿದೆ. ಈ ಸರಣಿಗಾಗಿ ಕ್ರೀಡಾಂಗಣದ ಸಾಮರ್ಥ್ಯದ ಅರ್ಧದಷ್ಟು ಪ್ರೇಕ್ಷಕರಿಕೆ ಅವಕಾಶವನ್ನು ನೀಡಲಾಗುತ್ತಿದೆ.

  ಟಿಕೆಟ್‌ಗಳ ಮಾರಾಟವು ಅಂತರಾಷ್ಟ್ರೀಯ ಕ್ರಿಕೆಟ್ ಋತು ಆರಂಭವಾಗುವುದನ್ನು ಅಭಿಮಾನಿಗಳು ಕಾದು ಕುಳಿತ್ತಿದ್ದಾರೆ ಎನ್ನುವುದನ್ನು ತೋರಿಸುತ್ತದೆ. ಪ್ರೇಕ್ಷಕರ ಸುರಕ್ಷತೆ ನಮ್ಮ ಮೊದಲ ಆದ್ಯತೆಯಾಗಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯದ ಕಾರ್ಯಕಾರಿ ಪ್ರಧಾನ ಪ್ರಬಂಧಕ ಅಂಥೋನಿ ಎವೆರಾರ್ಡ್ ಹೇಳಿದ್ದಾರೆ.

  ಏಕದಿನ ಸರಣಿ: ಸಿಡ್ನಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನವೆಂಬರ್ 27 ರಂದು ಮೊದಲ ಏಕದಿನ ಪಂದ್ಯ ನಡೆಯಲಿದೆ. 2ನೇ ಪಂದ್ಯ ಕೂಡ ಇದೇ ಮೈದಾನದಲ್ಲಿ ನಡೆಯಲಿದ್ದು ನ. 29ಕ್ಕೆ ಏರ್ಪಡಿಸಲಾಗಿದೆ. ಡಿ. 2 ರಂದು ಅಂತಿಮ ಮೂರನೇ ಏಕದಿನ ಪಂದ್ಯ ಕ್ಯಾನ್​ಬೆರಾದಲ್ಲಿ ನಡೆಯಲಿದೆ. ಎಲ್ಲಾ ಏಕದಿನ ಪಂದ್ಯ ಭಾರತದ ಕಾಲಮಾನದ ಪ್ರಕಾರ ಬೆಳಗ್ಗೆ 9:10ಕ್ಕೆ ಆರಂಭವಾಗಲಿದೆ.

  Mohammed Siraj father passed away: ತಂದೆಯನ್ನು ಕಳೆದುಕೊಂಡ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್; ಅಂತಿಮ ವಿಧಿ ವಿಧಾನಕ್ಕೆ ಬರಲಾಗದ ಮಗ

  ಟಿ-20 ಸರಣಿ: ಮೊದಲ ಟಿ-20 ಪಂದ್ಯ ಡಿಸೆಂಬರ್ 4 ರಂದು ಕ್ಯಾನ್​ಬೆರಾದಲ್ಲಿ ನಡೆಯಲಿದ್ದು, ಡಿಸೆಂಬರ್ 6 ರಂದು ಎರಡನೇ ಮತ್ತು ಡಿ.8 ರಂದು 3ನೇ ಟಿ-20 ಪಂದ್ಯ ಸಿಡ್ನಿಯಲ್ಲಿ ಜರುಗಲಿದೆ. ಎಲ್ಲಾ ಟಿ-20 ಪಂದ್ಯಗಳು ಭಾರತದ ಕಾಲಮಾನದ ಪ್ರಕಾರ ಮಧ್ಯಾಹ್ಹ 1:40ಕ್ಕೆ ಶುರುವಾಗಲಿದೆ.

  ಟೆಸ್ಟ್​ ಸರಣಿ: ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಒಟ್ಟು 4 ಪಂದ್ಯಗಳ ಐದು ದಿನಗಳ ಟೆಸ್ಟ್​ ಸರಣಿ ಆಡಲಿದೆ. ಪ್ರತಿಷ್ಠಿತ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಡಿಸೆಂಬರ್ 17 ರಿಂದ ಆರಂಭವಾಗಲಿದೆ. ಅಡಿಲೇಡ್​ನ ಓವಲ್ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯವು ಹೊನಲು ಬೆಳಕಿನಲ್ಲಿ ನಡೆಯಲಿರುವುದು ವಿಶೇಷ. ಈ ಪಂದ್ಯ ಬೆಳಗ್ಗೆ 9:30ಕ್ಕೆ ಆರಂಭವಾಗಲಿದೆ.ಎರಡನೇ ಟೆಸ್ಟ್ ಡಿಸೆಂಬರ್ 26 ರಿಂದ 30ರವರೆಗೆ ಮೆಲ್ಬೋರ್ನ್​ನಲ್ಲಿ, 3ನೇ ಟೆಸ್ಟ್ ಪಂದ್ಯ ಜನವರಿ 7 ರಿಂದ 11 ರವರೆಗೆ ಸಿಡ್ನಿ ಮೈದಾನದಲ್ಲಿ ಹಾಗೂ ಅಂತಿಮ ಟೆಸ್ಟ್​ ಬ್ರಿಸ್ಬೇನ್​ನಲ್ಲಿ ಜನವರಿ 15 ರಿಂದ 19 ರವರೆಗೆ ನಡೆಯಲಿದೆ. ಎರಡು ಹಾಗೂ ಮೂರನೇ ಟೆಸ್ಟ್ ಮುಂಜಾನೆ 5 ಗಂಟೆಗೆ ಶುರುವಾದರೆ, ಅಂತಿಮ ಟೆಸ್ಟ್​ 5:30ಕ್ಕೆ ಆರಂಭವಾಗಲಿದೆ.
  Published by:Vinay Bhat
  First published: