ICC U19 World Cup 2020: ಜಪಾನ್ ತಂಡದ 5 ಬ್ಯಾಟ್ಸ್​ಮನ್ಸ್​​ ಶೂನ್ಯ, 41ಕ್ಕೆ ಆಲೌಟ್; ಮಿಂಚಿದ ಭಾರತ ಅಂಡರ್-19 ತಂಡ

India vs Japan, ICC U19 World Cup 2020 at Bloemfontein: 5 ಬ್ಯಾಟ್ಸ್​ಮನ್​ಗಳು ಒಂದೂ ರನ್ ಕಲೆಹಾಕದೆ ಸತತ ಶೂನ್ಯಕ್ಕೆ ಔಟ್ ಆಗಿದ್ದು ಮಾತ್ರ ವಿಪರ್ಯಾಸ. ತಂಡದ ಪರ ಶು ನೊಗೊಚಿ 7 ರನ್ ಗಳಿಸಿದ್ದೇ ತಂಡದ ಬ್ಯಾಟ್ಸ್​ಮನ್​​ ಒಬ್ಬ ಕಲೆಹಾಕಿದ ಗರಿಷ್ಠ ಮೊತ್ತವಾಗಿತ್ತು.

Vinay Bhat | news18-kannada
Updated:January 21, 2020, 3:33 PM IST
ICC U19 World Cup 2020: ಜಪಾನ್ ತಂಡದ 5 ಬ್ಯಾಟ್ಸ್​ಮನ್ಸ್​​ ಶೂನ್ಯ, 41ಕ್ಕೆ ಆಲೌಟ್; ಮಿಂಚಿದ ಭಾರತ ಅಂಡರ್-19 ತಂಡ
ಭಾರತ ಅಂಡರ್-19 ತಂಡದ ಆಟಗಾರರು
  • Share this:
ಮೊನ್ನೆಯಷ್ಟೆ ಶ್ರೀಲಂಕಾ ವಿರುದ್ಧ ಗೆದ್ದು ಐಸಿಸಿ ಅಂಡರ್-19 ವಿಶ್ವಕಪ್ ಅನ್ನು ಭರ್ಜರಿ ಆಗಿ ಶುಭಾರಂಭ ಮಾಡಿದ ಭಾರತೀಯ ಕಿರಿಯರು ಎರಡನೇ ಪಂದ್ಯದಲ್ಲೂ ಅಮೋಘ ಪ್ರದರ್ಶನ ನೀಡುತ್ತಿದ್ದಾರೆ. ಭಾರತ ಅಂಡರ್-19 ತಂಡದ ಬೌಲರ್​​ಗಳ ಮಾರಕ ದಾಳಿಗೆ ತರಗೆಲೆಯಂತೆ ಉರುಳಿದ ಜಪಾನ್ ಬ್ಯಾಟ್ಸ್​ಮನ್​ಗಳು ಕೇವಲ 41 ರನ್​ಗೆ ಆಲೌಟ್ ಆಗಿದೆ.

ಟಾಸ್ ಗೆದ್ದ ಭಾರತ ಅಂಡರ್-19 ತಂಡದ ನಾಯಕ ಪ್ರಿಯಮ್ ಗರ್ಗ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ನಿಧಾನ ಗತಿಯಲ್ಲಿ ರನ್ ಕಲೆಹಾಕುತ್ತ ಬ್ಯಾಟಿಂಗ್ ಶುರು ಮಾಡಿದ ಜಪಾನ್ 4.3 ಓವರ್​ನಲ್ಲಿ 5 ರನ್ ಗಳಿಸಿದ್ದಾಗ ಮೊದಲ ವಿಕೆಟ್ ಕಳೆದು ಕೊಂಡಿತು.

India U19 team shining in ICC U19 world cup 2020; 5 Japan Players duck out and all out for 51
ಭಾರತ ಅಂಡರ್-19 ತಂಡದ ನಾಯಕ ಪ್ರಿಯಮ್ ಗರ್ಗ್ ಹಾಗೂ ಜಪಾನ್ ತಂಡದ ನಾಯಕ ಮಾರ್ನಸ್ ತುರ್ಗೇಟ್.


IND vs NZ: ನ್ಯೂಜಿಲೆಂಡ್ ಟಿ-20 ಸರಣಿಯಿಂದ ಧವನ್ ಹೊರಕ್ಕೆ; ಶಿಖರ್ ಜಾಗಕ್ಕೆ ಅಚ್ಚರಿ ಆಯ್ಕೆ?

ಬಳಿಕ ಬಂದ 5 ಬ್ಯಾಟ್ಸ್​ಮನ್​ಗಳು ಒಂದೂ ರನ್ ಕಲೆಹಾಕದೆ ಸತತ ಶೂನ್ಯಕ್ಕೆ ಔಟ್ ಆಗಿದ್ದು ಮಾತ್ರ ವಿಪರ್ಯಾಸ. ತಂಡದ ಪರ ಶು ನೊಗೊಚಿ 7 ರನ್ ಗಳಿಸಿದ್ದೇ ತಂಡದ ಬ್ಯಾಟ್ಸ್​ಮನ್​​ ಒಬ್ಬ ಕಲೆಹಾಕಿದ ಗರಿಷ್ಠ ಮೊತ್ತವಾಗಿತ್ತು. 22.5 ಓವರ್​ನಲ್ಲಿ ಜಪಾನ್ ಅಂಡರ್-19 ತಂಡ 41 ರನ್​ಗೆ ಆಲೌಟ್ ಆಯಿತು.

ಭಾರತ ಅಂಡರ್-19 ಪರ ರವಿ ಬಿಷ್ಣೋಯಿ 4 ವಿಕೆಟ್ ಕಿತ್ತು ಮಿಂಚಿದರೆ, ಕಾರ್ತಿಕ್ ತ್ಯಾಗಿ 3, ಆಕಾಶ್ ಸಿಂಗ್ 2 ಹಾಗೂ ವಿದ್ಯಾಧರ್ ಪಾಟಿಲ್ 1 ವಿಕೆಟ್ ಪಡೆದರು.

5 ಟಿ-20, 3 ಏಕದಿನ, 2 ಟೆಸ್ಟ್​; ಭಾರತ- ನ್ಯೂಜಿಲೆಂಡ್ ಮಹಾ ಸರಣಿ ಎಲ್ಲಿ, ಯಾವಾಗ?, ಎಷ್ಟು ಗಂಟೆಗೆ?; ಇಲ್ಲಿದೆ ಮಾಹಿತಿಭಾರತ ಅಂಡರ್-19 ತಂಡ ತನ್ನ ಮೊದಲ ಪಂದ್ಯದಲ್ಲೂ ಭರ್ಜರಿ ಪ್ರದರ್ಶನ ತೋರಿತ್ತು. ಶ್ರೀಲಂಕಾ ವಿರುದ್ಧ 50 ಓವರ್​ನಲ್ಲಿ 297 ರನ್​ಗಳ ಬೃಹತ್ ಮೊತ್ತ ಕಲೆಹಾಕಿತ್ತು. ಯಶಸ್ವಿ ಜೈಸ್ವಾಲ್ 59, ನಾಯಕ ಪ್ರಿಯಮ್ ಗರ್ಗ್ 56 ಹಾಗೂ ತಿಕ್ ವರ್ಮಾ 46 ರನ್ ಚಚ್ಚಿದ್ದರು. ಟಾರ್ಗೆಟ್ ಬೆನ್ನಟ್ಟಿದ ಶ್ರೀಲಂಕಾ ಅಂಡರ್-19 ತಂಡ 45.2 ಓವರ್​ನಲ್ಲಿ 207 ರನ್​ಗೆ ಸರ್ವಪತನ ಕಂಡಿತು.

First published:January 21, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading