ದಕ್ಷಿಣ ಆಫ್ರಿಕಾ ಪ್ರವಾಸ ಬೆಳೆಸಿದ್ದ ಭಾರತ ಅಂಡರ್-19 ತಂಡ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ದ. ಆಫ್ರಿಕಾ ಅಂಡರ್-19 ವಿರುದ್ಧ ಸರಣಿ ವಶಪಡಿಸಿಕೊಂಡಿದೆ. ನಿನ್ನೆ ನಡೆದ ಅಂತಿಮ ಪಂದ್ಯದಲ್ಲಿ ಸೋಲುಂಡಿತಾದರು, ಮೊದಲೆರಡು ಪಂದ್ಯ ಗೆದ್ದ ಪರಿಣಾಮ 2-1 ಅಂತರದಿಂದ ಸರಣಿ ಗೆದ್ದು ಬೀಗಿದೆ.
ಮೊದಲ ಪಂದ್ಯದಲ್ಲಿ ಭಾರತ 9 ವಿಕೆಟ್ಗಳ ಹಾಗೂ ಎರಡನೇ ಪಂದ್ಯದಲ್ಲಿ 8 ವಿಕೆಟ್ಗಳ ಜಯ ಸಾಧಿಸಿತ್ತು. ಆದರೆ, ವೈಟ್ವಾಶ್ ಮಾಡುವಲ್ಲಿ ಎಡವಿತು.
ಈಸ್ಟ್ ಲಂಡನ್ನಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ಸಂಪೂರ್ಣ ವೈಫಲ್ಯ ಅನುಭವಿಸಿತು. ಕಳೆದ ಪಂದ್ಯದಲ್ಲಿ ಮಿಂಚಿದ್ದ ಯಶಸ್ವಿ ಜೈಸ್ವಾಲ್(16) ಆರಂಭದಲ್ಲೇ ಔಟ್ ಆದರೆ, ನಾಯಕ ಪ್ರಿಯಾಂ ಗಾರ್ಗ್ 76 ಎಸೆತಗಳಲ್ಲಿ 52 ರನ್ ಗಳಿಸಿದರು.
ಬಿಗ್ಬ್ಯಾಷ್ ಪಂದ್ಯ ಆರಂಭಕ್ಕೂ ಮುನ್ನ ಬೆಂಕಿ ಅವಘಡ; ಗ್ಲೆನ್ ಮ್ಯಾಕ್ಸ್ವೆಲ್ ಮಾಡಿದ್ದೇನು ನೋಡಿ
READ: India U19 suffer a loss in the third one-day against South Africa U19 but clinch the three-match series 2-1. 🏆
Report 📰 here: https://t.co/0FHHyVcWb2 pic.twitter.com/YuR2DWuHJ2
— BCCI (@BCCI) December 31, 2019
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ