5 ಟಿ-20, 3 ಏಕದಿನ, 2 ಟೆಸ್ಟ್​; ಭಾರತ- ನ್ಯೂಜಿಲೆಂಡ್ ಮಹಾ ಸರಣಿ ಎಲ್ಲಿ, ಯಾವಾಗ?, ಎಷ್ಟು ಗಂಟೆಗೆ?; ಇಲ್ಲಿದೆ ಮಾಹಿತಿ

India vs New Zraland: ಎರಡು ಪಂದ್ಯಗಳ ಟೆಸ್ಟ್​ ಸರಣಿ ಆರಂಭಕ್ಕೂ ಮುನ್ನ ಭಾರತ ತಂಡ ನ್ಯೂಜಿಲೆಂಡ್ ಇಲೆವೆನ್ ವಿರುದ್ಧ ಫೆಬ್ರವರು 14 ರಿಂದ 16 ವರೆಗೆ ಮೂರು ದಿನಗಳ ಅಭ್ಯಾಸ ಪಂದ್ಯ ಆಡಲಿದೆ.

Vinay Bhat | news18-kannada
Updated:January 21, 2020, 12:26 PM IST
5 ಟಿ-20, 3 ಏಕದಿನ, 2 ಟೆಸ್ಟ್​; ಭಾರತ- ನ್ಯೂಜಿಲೆಂಡ್ ಮಹಾ ಸರಣಿ ಎಲ್ಲಿ, ಯಾವಾಗ?, ಎಷ್ಟು ಗಂಟೆಗೆ?; ಇಲ್ಲಿದೆ ಮಾಹಿತಿ
ಭಾರತ vs ನ್ಯೂಜಿಲೆಂಡ್
  • Share this:
2020 ವರ್ಷವನ್ನು ಭರ್ಜರಿ ಆಗಿ ಆರಂಭಿಸಿರುವ ಟೀಂ ಇಂಡಿಯಾ ಆಡಿರುವ ಎರಡೂ ಸರಣಿಯಲ್ಲಿ ಗೆದ್ದು ಬೀಗಿದೆ. ಮೊದಲಿಗೆ ಶ್ರೀಲಂಕಾ ವಿರುದ್ಧದ ಟಿ-20 ಸರಣಿಯಲ್ಲಿ 2-0 ಯಿಂದ ವಶಪಡಿಸಿಕೊಂಡರೆ, ಆಸ್ಟ್ರೇಲಿಯಾ ವಿರುದ್ಧದ ಮೂರು ಏಕದಿನ ಸರಣಿಯನ್ನು 2-1 ಅಂತರದಿಂದ ಗೆದ್ದು ಬೀಗಿತು.

ಸದ್ಯ ಮತ್ತೊಂದು ಮಹಾ ಕದನಕ್ಕೆ ಕೊಹ್ಲಿ ಪಡೆ ಸಜ್ಜಾಗಿದೆ. ನ್ಯೂಜಿಲೆಂಡ್ ವಿರುದ್ಧ ಭಾರತ ಐದು ಪಂದ್ಯಗಳ ಟಿ-20, ಮೂರು ಪಂದ್ಯಗಳ ಏಕದಿನ ಹಾಗೂ ಎರಡು ಪಂದ್ಯಗಳ ಟೆಸ್ಟ್​ ಸರಣಿ ಆಡಲಿದೆ. ಆಸೀಸ್ ಸರಣಿ ಮುಗಿದ ಬೆನ್ನಲ್ಲೆ ಟೀಂ ಇಂಡಿಯಾ ಆಟಗಾರರು ಪ್ಲೈಟ್ ಏರಿದ್ದು ನ್ಯೂಜಿಲೆಂಡ್​ಗೆ ತಲುಪಿದ್ದಾರೆ.

5 ಟಿ-20 ಪಂದ್ಯ: ಮೊದಲಿಗೆ ಭಾರತ ತಂಡದ ನ್ಯೂಜಿಲೆಂಡ್ ವಿರುದ್ಧ ಐದು ಪಂದ್ಯಗಳ ಟಿ-20 ಸರಣಿ ಆಡಲಿದೆ. ಜನವರಿ 24 ಶುಕ್ರವಾರ ನಡೆಯಲಿರುವ ಮೊದಲ ಟಿ-20 ಹಾಗೂ ಜನವರಿ 26ಕ್ಕೆ ಆಯೋಜನೆಯಾಗಿರುವ ಎರಡನೇ ಟಿ-20 ಪಂದ್ಯ ಅಕ್ವಲೆಂಡ್​​ನ ಈಡನ್ ಪಾರ್ಕ್​ನಲ್ಲಿ ನಡೆಯಲಿದೆ.

ಆಸ್ಟ್ರೇಲಿಯಾ ತಂಡಕ್ಕೆ ಕೋಚ್ ಆಗಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಆಯ್ಕೆ!

ಜನವರಿ 29ಕ್ಕೆ ಹ್ಯಾಮಿಲ್ಟನ್​​ನ ಸೀಡನ್ ಪಾರ್ಕ್​ನಲ್ಲಿ ಮೂರನೇ ಟಿ-20, ಜನವರಿ 31ಕ್ಕೆ ವೆಲ್ಲಿಂಗ್ಟನ್​ನಲ್ಲಿ 4ನೇ ಟಿ-20 ಹಾಗೂ ಫೆಬ್ರವರಿ 2ಕ್ಕೆ ಮೌಂಟ್ ಮೌಂಗನಿಯಲ್ಲಿ ಅಂತಿಮ ಐದನೇ ಟಿ-20 ಪಂದ್ಯ ಆಯೋಜಿಸಲಾಗಿದೆ.

ಟಿ-20 ಪಂದ್ಯಕ್ಕೆ ಭಾರತ ತಂಡ: ವಿರಾಟ್‌ ಕೊಹ್ಲಿ (ನಾಯಕ), ರೋಹಿತ್‌ ಶರ್ಮಾ (ಉಪ ನಾಯಕ), ಕೆ. ಎಲ್‌. ರಾಹುಲ್‌, ಶಿಖರ್‌ ಧವನ್‌, ಶ್ರೇಯಸ್‌ ಐಯರ್, ಮನೀಷ್‌ ಪಾಂಡೆ, ರಿಷಭ್‌ ಪಂತ್‌ (ವಿಕೆಟ್‌ ಕೀಪರ್‌), ಶಿವಂ ದುಬೆ, ಕುಲದೀಪ್‌ ಯಾದವ್‌, ಯಜುವೇಂದ್ರ ಚಾಹಲ್‌, ವಾಷಿಂಗ್ಟನ್‌ ಸುಂದರ್‌, ಜಸ್‌ಪ್ರೀತ್‌ ಬೂಮ್ರಾ, ಮೊಹಮ್ಮದ್‌ ಶಮಿ, ನವದೀಪ್‌ ಸೈನಿ, ರವೀಂದ್ರ ಜಡೇಜಾ ಮತ್ತು ಶಾರ್ದೂಲ್‌ ಠಾಕೂರ್‌.

ಭಾರತದ ಕಾಲಮಾನ ಪ್ರಕಾರ ಟಿ-20 ಪಂದ್ಯ ಮಧ್ಯಾಹ್ನ 12:30 ಕ್ಕೆ ಆರಂಭವಾಗಲಿದೆ.3 ಏಕದಿನ ಪಂದ್ಯ: ಟಿ-20 ಸರಣಿ ಮುಗಿದ ಬೆನ್ನಲ್ಲೆ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದೆ. ಫೆಬ್ರವರಿ 5 ರಂದು ಹ್ಯಾಮಿಲ್ಟನ್​ನಲ್ಲಿ ಮೊದಲ ಪಂದ್ಯ, ಫೆ. 8ಕ್ಕೆ ಅಕ್ವಲೆಂಡ್​ನಲ್ಲಿ ಹಾಗೂ ಫೆ. 11ಕ್ಕೆ ಮೌಂಗನಿಯಲ್ಲಿ ಕ್ರಮವಾಗಿ ಎರಡು ಹಾಗೂ ಮೂರನೇ ಏಕದಿನ ಪಂದ್ಯ ನಡೆಯಲಿದೆ.

Glenn Maxwell: ದೊಡ್ಡ ಅಪಾಯದಿಂದ ಪಾರಾದ ಗ್ಲೆನ್ ಮ್ಯಾಕ್ಸ್​ವೆಲ್; ಇಲ್ಲಿದೆ ರೋಚಕ ವಿಡಿಯೋ

ಭಾರತದ ಕಾಲಮಾನ ಪ್ರಕಾರ ಏಕದಿನ ಪಂದ್ಯ ಬೆಳಗ್ಗೆ 7:30ಕ್ಕೆ ಶುರುವಾಗಲಿದೆ.

2 ಟೆಸ್ಟ್​ ಪಂದ್ಯ: ಎರಡು ಪಂದ್ಯಗಳ ಟೆಸ್ಟ್​ ಸರಣಿ ಆರಂಭಕ್ಕೂ ಮುನ್ನ ಭಾರತ ತಂಡ ನ್ಯೂಜಿಲೆಂಡ್ ಇಲೆವೆನ್ ವಿರುದ್ಧ ಫೆಬ್ರವರು 14 ರಿಂದ 16 ವರೆಗೆ ಮೂರು ದಿನಗಳ ಅಭ್ಯಾಸ ಪಂದ್ಯ ಆಡಲಿದೆ. ಫೆ. 21 ರಿಂದ 25 ವರೆಗೆ ವೆಲ್ಲಿಂಗ್ಟನ್​ನಲ್ಲಿ ಮೊದಲ ಟೆಸ್ಟ್ ಹಾಗೂ ಫೆ. 29 ರಿಂದ ಮಾರ್ಚ್ 4 ವರೆಗೆ ಕ್ರಿಸ್ಟ್​​ಚರ್ಚ್​​ನಲ್ಲಿ ಎರಡನೇ ಟೆಸ್ಟ್ ಪಂದ್ಯ ಆಯೋಜಿಸಲಾಗಿದೆ.

ಭಾರತದ ಕಾಲಮಾನ ಪ್ರಕಾರ ಟೆಸ್ಟ್​ ಪಂದ್ಯ ಬೆಳಗಿನ ಜಾವ 4 ಗಂಟೆಗೆ ಶುರುವಾಗಲಿದೆ.

First published: January 21, 2020, 12:12 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading