ಏಕದಿನ ಕ್ರಿಕೆಟ್ ರ‍್ಯಾಂಕಿಂಗ್‌ ಪಟ್ಟಿ ಬಿಡುಗಡೆ: ಇಂಗ್ಲೆಂಡ್​ ವಿರುದ್ಧದ ಸೋಲಿಗೆ ಬೆಲೆತೆತ್ತ ಭಾರತ

ಪ್ರಸ್ತುತ ಇಂಗ್ಲೆಂಡ್ 123 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೆ ಟೀಂ ಇಂಡಿಯಾ 122 ಅಂಕಗಳೊಂದಿಗೆ ನಂತರದ ಸ್ಥಾನವನ್ನು ಅಲಂಕರಿಸಿದೆ. ಮೂರನೇ ಸ್ಥಾನದಲ್ಲಿ ನ್ಯೂಜಿಲೆಂಡ್, ಆಸ್ಟ್ರೇಲಿಯಾ ನಾಲ್ಕನೇ ಹಾಗೂ ದಕ್ಷಿಣ ಆಫ್ರಿಕಾ 5ನೇ ಸ್ಥಾನ ಪಡೆದುಕೊಂಡಿದೆ.

zahir | news18
Updated:July 2, 2019, 4:44 PM IST
ಏಕದಿನ ಕ್ರಿಕೆಟ್ ರ‍್ಯಾಂಕಿಂಗ್‌ ಪಟ್ಟಿ ಬಿಡುಗಡೆ: ಇಂಗ್ಲೆಂಡ್​ ವಿರುದ್ಧದ ಸೋಲಿಗೆ ಬೆಲೆತೆತ್ತ ಭಾರತ
Metro
zahir | news18
Updated: July 2, 2019, 4:44 PM IST
ಐಸಿಸಿ ಏಕದಿನ ಕ್ರಿಕೆಟ್ ರ‍್ಯಾಂಕಿಂಗ್‌ ಪಟ್ಟಿ ಬಿಡುಗಡೆಯಾಗಿದೆ. ಕೆಲವೇ ದಿನಗಳ ಹಿಂದೆ ಈ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದ ಟೀಂ ಇಂಡಿಯಾ ಇದೀಗ ದ್ವಿತೀಯ ಸ್ಥಾನಕ್ಕೆ ಕುಸಿದಿದೆ. ವಿಶ್ವಕಪ್​ನಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿರುವ ಭಾರತ ತಂಡವು ಕೆಲ ದಿನಗಳ ಹಿಂದೆ ಇಂಗ್ಲೆಂಡ್​ ಅನ್ನು 2ನೇ ಸ್ಥಾನಕ್ಕಿಳಿಸಿ ಪ್ರಥಮ ಸ್ಥಾನಕ್ಕೇರಿತ್ತು.

ಆದರೆ ವಿಶ್ವಕಪ್​ನಲ್ಲಿ ಟೀಂ ಇಂಡಿಯಾದ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಹಾಕುವಲ್ಲಿ ಆತಿಥೇಯ ಇಂಗ್ಲೆಂಡ್ ತಂಡ ಯಶಸ್ವಿಯಾಗಿದ್ದರು. ಈ  ಮೂಲಕ ಕೊಹ್ಲಿ ಪಡೆಗೆ ಈ ಬಾರಿಯ ವರ್ಲ್ಡ್​ಕಪ್​ನಲ್ಲಿ ಮೊದಲ ಸೋಲಿನ ರುಚಿ ತೋರಿಸಿತ್ತು. ಇದರಿಂದ ರ್ಯಾಕಿಂಗ್ ಪಟ್ಟಿಯಲ್ಲಿ 1 ಅಂಕ ಕಳೆದುಕೊಂಡಿರುವ ಟೀಂ ಇಂಡಿಯಾ ಮತ್ತೊಮ್ಮೆ 2ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.

ಪ್ರಸ್ತುತ ಇಂಗ್ಲೆಂಡ್ 123 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೆ ಟೀಂ ಇಂಡಿಯಾ 122 ಅಂಕಗಳೊಂದಿಗೆ ನಂತರದ ಸ್ಥಾನವನ್ನು ಅಲಂಕರಿಸಿದೆ. ಮೂರನೇ ಸ್ಥಾನದಲ್ಲಿ ನ್ಯೂಜಿಲೆಂಡ್, ಆಸ್ಟ್ರೇಲಿಯಾ ನಾಲ್ಕನೇ ಹಾಗೂ ದಕ್ಷಿಣ ಆಫ್ರಿಕಾ 5ನೇ ಸ್ಥಾನ ಪಡೆದುಕೊಂಡಿದೆ.ಸದ್ಯ ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಜಯ ಸಾಧಿಸಿದರೆ ಮತ್ತೊಮ್ಮೆ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ಸಾಧ್ಯತೆಗಳಿವೆ.
First published:July 2, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...