ಪರಿಹಾರವಾಯ್ತು ಭಾರತಕ್ಕೆ ಎದುರಾಗಿದ್ದ ಕಂಟಕ; ಕೊಹ್ಲಿ ಪಡೆ ಫೈನಲ್ ಪ್ರವೇಶಿಸೋದು ಖಚಿತ?

ಶ್ರೀಲಂಕಾ ವಿರುದ್ಧ ಭಾರತ ಸುಲಭವಾಗಿ ಚೇಸ್​ ಮಾಡಿ ಗೆಲುವು ಸಾಧಿಸಿದೆ. ಕೇವಲ 43 ಓವರ್​ಗಳಲ್ಲಿ 265 ರನ್​ಗಳ ಗುರಿಮುಟ್ಟಿದೆ. ಈ ಮೂಲಕ ಭಾರತ ಹೊಸ ವಿಶ್ವಾಸದಲ್ಲಿ ಸೆಮಿಫೈನಲ್​ ಪ್ರವೇಶಿಸುತ್ತಿದೆ.

Rajesh Duggumane | news18
Updated:July 7, 2019, 12:41 PM IST
ಪರಿಹಾರವಾಯ್ತು ಭಾರತಕ್ಕೆ ಎದುರಾಗಿದ್ದ ಕಂಟಕ; ಕೊಹ್ಲಿ ಪಡೆ ಫೈನಲ್ ಪ್ರವೇಶಿಸೋದು ಖಚಿತ?
ಟೀಂ ಇಂಡಿಯಾ
  • News18
  • Last Updated: July 7, 2019, 12:41 PM IST
  • Share this:
ಭಾರತ ಕ್ರಿಕೆಟ್​ ತಂಡ ಸೆಮಿ ಫೈನಲ್​ಗೆ ಸಿದ್ಧತೆ ನಡೆಸುತ್ತಿದೆ. ವಿರಾಟ್​ ಕೊಹ್ಲಿ ಪಡೆ ಮಂಗಳವಾರ ಮ್ಯಾಂಚೆಸ್ಟರ್​ನಲ್ಲಿ ನ್ಯೂಜಿಲೆಂಡ್​ ತಂಡದ ಎದುರು ಸೆಣಸಲಿದೆ. ಉತ್ತಮ ಪ್ರದರ್ಶನ ನಿಡುತ್ತಿದ್ದಾಗ್ಯೂ ಭಾರತಕ್ಕೆ ಸೆಮೀಸ್​ನಲ್ಲಿ ಕಂಟಕವೊಂದು ಎದುರಾಗುವ ಸಾಧ್ಯತೆ ಇದೆ ಎನ್ನಲಾಗಿತ್ತು. ಆದರೆ, ಈಗ ಈ ತೊಂದರೆ ದೂರವಾಗಿದೆ. ಅಷ್ಟಕ್ಕೂ ಆ ಕಂಟಕವೇನಾಗಿತ್ತು? ಎಂಬುದಕ್ಕೆ ಈ ಸ್ಟೋರಿ ಓದಿ.

ಲೀಗ್​ ಹಂತದಲ್ಲಿ ಭಾರತ ಆಡಿದ 9 ಪಂದ್ಯಗಳ ಪೈಕಿ ಏಳನ್ನು ಗೆದ್ದಿದ್ದು, ಒಂದು ಪಂದ್ಯವನ್ನು ಇಂಗ್ಲೆಂಡ್​ ವಿರುದ್ಧ ಸೋತಿದೆ. ಮತ್ತೊಂದು ಪಂದ್ಯ ಮಳೆಯಿಂದಾಗಿ ರದ್ದಾಗಿದೆ. 7 ಪಂದ್ಯಗಳನ್ನು ಗೆದ್ದ ಹೊರತಾಗಿಯೂ ವಿರಾಟ್​ ಕೊಹ್ಲಿ ಪಡೆ ಹಲವು ಸವಾಲುಗಳನ್ನು ಎದುರಿಸುತ್ತಿದೆ. ಆಂರಭಿಕ ಬ್ಯಾಟ್ಸ್​ಮನ್ ಶಿಖರ್ ಧವನ್​ ಗಾಯದ ಸಮಸ್ಯೆಯಿಂದ ವಿಶ್ವಕಪ್​ನಿಂದಲೇ ಔಟ್​ ಆಗಿದ್ದರೆ, ಆಲ್​ರೌಂಡರ್​ ವಿಜಯಶ್​ ಶಂಕರ್​ಗೂ ಗಾಯದ ಸಮಸ್ಯೆ ಕಾಡುತ್ತಿದೆ. ಮಧ್ಯಮ ಕ್ರಮಾಂಕದ ಬ್ಯಾಟ್ಸ್​ಮನ್​ಗಳು ಹೇಳಿಕೊಳ್ಳುವಂಥ ಪ್ರದರ್ಶನ ನೀಡುತ್ತಿಲ್ಲ. ಇದಲ್ಲದೆ, ಚೇಸಿಂಗ್​ ಕೂಡ ಭಾರತಕ್ಕೆ ಸವಾಲಾಗಿ ಪರಿಣಮಿಸಿತ್ತು.

ಚೇಸಿಂಗ್​ನಲ್ಲಿ ಬಲಿಷ್ಠ ಇಂಗ್ಲೆಂಡ್ ವಿರುದ್ಧ ಪಂದ್ಯದಲ್ಲಿ ಭಾರತ ಸೋತಿತ್ತು. ಆಂಗ್ಲರು ನೀಡಿದ್ದ ಬೃಹತ್​ ಮೊತ್ತದ ಗುರಿ​ ಬೆನ್ನತ್ತಿದ ಭಾರತ ಆರಂಭಿಕ ರೋಹಿತ್ ಶರ್ಮಾ ಶತಕದ ಹೊರತಾಗಿಯೂ ಸೋಲು ಕಂಡಿತ್ತು. ಚೇಸಿಂಗ್​ ತೆಗೆದುಕೊಂಡರೆ ಸೋಲು ಖಚಿತ ಎನ್ನುವ ಮಾತುಗಳು ಈ ಸಂದರ್ಭದಲ್ಲಿ ಕೇಳಿ ಬಂದಿದ್ದವು.

ಆದರೆ, ಶ್ರೀಲಂಕಾ ವಿರುದ್ಧ ಭಾರತ ಸುಲಭವಾಗಿ ಗುರಿ ಬೆನ್ನಟ್ಟಿ ಗೆಲುವು ಸಾಧಿಸಿದೆ. ಕೇವಲ 43 ಓವರ್​ಗಳಲ್ಲಿ 265 ರನ್​ಗಳ ಗುರಿಮುಟ್ಟಿದೆ. ಈ ಮೂಲಕ ಭಾರತ ಹೊಸ ವಿಶ್ವಾಸದಲ್ಲಿ ಸೆಮಿಫೈನಲ್​ ಪ್ರವೇಶಿಸುತ್ತಿದೆ. ಇನ್ನು, ವಿಶ್ವಕಪ್​ನಲ್ಲಿ ಭಾರತ ಮೊದಲು ಬ್ಯಾಟಿಂಗ್​ ಆಯ್ದುಕೊಂಡರೆ ಗೆಲುವು ಖಚಿತವೇ. ಈಗ ಚೇಸಿಂಗ್​ನಲ್ಲೂ ಒಳ್ಳೆಯ ಫಾರ್ಮ್​ ಕಂಡುಕೊಂಡಿರುವುದರಿಂದ ಸೆಮಿಫೈನಲ್​ನಲ್ಲಿ ನ್ಯೂಜಿಲೆಂಡ್​ ವಿರುದ್ಧ ಭಾರತ ಗೆದ್ದು ಫೈನಲ್​ ಪ್ರವೇಶಿಸುವುದು ಖಚಿತ ಎನ್ನಲಾಗುತ್ತಿದೆ.

ಇದನ್ನೂ ಓದಿ: ಸೆಮಿ ಫೈನಲ್​ ಕಾದಾಟಕ್ಕೆ ವೇದಿಕೆ ಸಜ್ಜು; ನ್ಯೂಜಿಲೆಂಡ್​ ವಿರುದ್ಧ ಸೆಣಸಲಿದೆ ಭಾರತ

First published: July 7, 2019, 12:41 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading