HOME » NEWS » Sports » CRICKET INDIA TO GRANT VISAS TO PAKISTAN CRICKETERS FOR WORLD T20 MATCH STG HG

2021ರ ಐಸಿಸಿ ವಿಶ್ವ T20 ಟೂರ್ನಿ: ಪಾಕಿಸ್ತಾನ ತಂಡಕ್ಕೆ ವೀಸಾ ನೀಡಿದ ಭಾರತ

ಭಾರತಕ್ಕೆ ತೆರಳುವ ಪಾಕಿಸ್ತಾನ ತಂಡದ ಆಟಗಾರರನ್ನು ಈಗಾಗಲೇ ಆಯ್ಕೆ ಮಾಡಲಾಗಿದೆ. ಆದರೆ ಅವರ ಅಭಿಮಾನಿಗಳು ತೆರಳಲು ಅವಕಾಶವಿದೆಯೋ ಇಲ್ಲವೋ ಎಂಬುದರ ಬಗ್ಗೆ ಇನ್ನು ನಿರ್ಧಾರವಾಗಿಲ್ಲ ಎಂದು ಅಪೆಕ್ಸ್ ಕೌನ್ಸಿಲ್ ಸದಸ್ಯರು ಪಿಟಿಐಗೆ ಮಾಹಿತಿ ನೀಡಿದ್ದಾರೆ.

news18-kannada
Updated:April 17, 2021, 2:32 PM IST
2021ರ ಐಸಿಸಿ ವಿಶ್ವ T20 ಟೂರ್ನಿ: ಪಾಕಿಸ್ತಾನ ತಂಡಕ್ಕೆ ವೀಸಾ ನೀಡಿದ ಭಾರತ
ಪಾಕಿಸ್ತಾನ ತಂಡ
  • Share this:
2021ರ ಐಸಿಸಿ ವರ್ಲ್ಡ್‌ ಟಿ20 ಪಂದ್ಯ ನಿಮಿತ್ತ ಬಾಬಾರ್ ಅಜಾಮ್ ನೇತೃತ್ವದ ಪಾಕಿಸ್ತಾನ ತಂಡಕ್ಕೆ ಭಾರತಕ್ಕೆ ಪ್ರವಾಸ ಕೈಗೊಳ್ಳಲು ಅನುಮತಿ ದೊರಕಿದೆ. ಟಿ20 ಪಂದ್ಯ ಹಿನ್ನೆಲೆ ಭಾರತಕ್ಕೆ ತೆರಳಲು ಪಾಕಿಸ್ತಾನ ತಂಡಕ್ಕೆ ವೀಸಾ ನೀಡಿದೆ. ಈ ಕುರಿತು ಬಿಸಿಸಿಐ ಸೆಕ್ರೆಟರಿ ಜಯ್ ಶಾ ಭಾರತದ ಈ ನಿರ್ಧಾರವನ್ನು ಅಪೆಕ್ಸ್ ಕೌನ್ಸಿಲ್‍ಗೆ ತಿಳಿಸಿದೆ.

ಭಾರತಕ್ಕೆ ತೆರಳುವ ಪಾಕಿಸ್ತಾನ ತಂಡದ ಆಟಗಾರರನ್ನು ಈಗಾಗಲೇ ಆಯ್ಕೆ ಮಾಡಲಾಗಿದೆ. ಆದರೆ ಅವರ ಅಭಿಮಾನಿಗಳು ತೆರಳಲು ಅವಕಾಶವಿದೆಯೋ ಇಲ್ಲವೋ ಎಂಬುದರ ಬಗ್ಗೆ ಇನ್ನು ನಿರ್ಧಾರವಾಗಿಲ್ಲ ಎಂದು ಅಪೆಕ್ಸ್ ಕೌನ್ಸಿಲ್ ಸದಸ್ಯರು ಪಿಟಿಐಗೆ ಮಾಹಿತಿ ನೀಡಿದ್ದಾರೆ.

ಪಾಕಿಸ್ತಾನ ತಂಡವು ಭಾರತಕ್ಕೆ ಹೋಗುವ ಅನುಮತಿಯ ಬಗ್ಗೆ ನಿಗದಿತ ಸಮಯದೊಳಗೆ ನಿರ್ಧರಿಸಲಾಗುವುದು ಎಂದು ತಿಳಿಸಿದ್ದೆವು. ಅದರಂತೆ ತಂಡವನ್ನು ವಿಂಗಡಿಸಲಾಗುವುದು ಎಂದು ಬಿಸಿಸಿಐ ಸೆಕ್ರೆಟರಿ ಸಭೆಯಲ್ಲಿ ಹೇಳಿದರು.

ಈ ಬಗ್ಗೆ ಮಾಹಿತಿ ನೀಡಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮುಖ್ಯಸ್ಥ ಇಶಾನ್ ಮಾಣಿ, ಪಾಕಿಸ್ತಾನದ ಆಟಗಾರರಿಗೆ ಐಸಿಸಿಯು ಲಿಖಿತಪತ್ರ ನೀಡಿದೆ. ಭಾರತ - ಪಾಕಿಸ್ತಾನ ತಂಡಗಳು ಐಸಿಸಿ ಮತ್ತು ಎಸಿಸಿ 2012-13ರಲ್ಲಿ ಆಯೋಜಿಸಿದ್ದ ಪಂದ್ಯಗಳಲ್ಲಿ ಮುಖಾಮುಖಿಯಾಗಿ ಸೆಣಸಿದ್ದವು ಎಂದು ನೆನಪಿಸಿಕೊಂಡರು. ಉಭಯ ದೇಶಗಳ ರಾಜಕೀಯ ಬಿಕ್ಕಟ್ಟಿನ ಹಿನ್ನೆಲೆ ಕಳೆದ ಕೆಲವು ವರ್ಷಗಳಿಂದ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಲಿಲ್ಲ.

ಈ ವರ್ಷದ ಐಸಿಸಿ ವಿಶ್ವ ಟಿ20 ಪಂದ್ಯಾವಳಿಯು ಅಕ್ಟೋಬರ್‌ನಿಂದ ನವೆಂಬರ್‌ವರೆಗೂ ಭಾರತದಲ್ಲಿ ಆಯೋಜಿಸಲಾಗಿದೆ. ಮೊದಲು ಅಕ್ಟೋಬರ್ 18 ರಿಂದ ನವೆಂಬರ್ 15 ರವರೆಗೆ ಆಸ್ಟ್ರೇಲಿಯಾದಲ್ಲಿ ಪಂದ್ಯವನ್ನು ಆಯೋಜಿಸಲಾಗಿತ್ತು. ಆದರೆ ಈ ಬಾರಿ ಭಾರತದಲ್ಲಿ ಆಯೋಜಿಸಲಾಗಿದೆ. ಫೈನಲ್ ಪಂದ್ಯ ಅಹಮದಾಬಾದ್‍ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ.

2021ರ ಐಸಿಸಿ ವಿಶ್ವ ಟಿ20 ಪಂದ್ಯಗಳು ಅಹಮದಾಬಾದ್, ದೆಹಲಿ, ಮುಂಬೈ, ಚೆನ್ನೈ, ಕೋಲ್ಕತ್ತಾ, ಬೆಂಗಳೂರು, ಹೈದರಾಬಾದ್, ಧರ್ಮಶಾಲಾದಲ್ಲಿ ಆಯೋಜಿಸಿದೆ. ಕೋವಿಡ್-19 ಪರಿಸ್ಥಿತಿಗಳನ್ನು ಪರಿಶೀಲಿಸಿ ಮುಂದಿನ ವ್ಯವಸ್ಥೆ ಮಾಡಲಾಗುವುದು. 2016ರಲ್ಲಿದ್ದ ಸ್ಥಳಗಳನ್ನೇ ಆಯ್ಕೆ ಮಾಡಲಾಗಿದ್ದು ಅದರಲ್ಲಿ ನಾಗಪುರ, ಮೊಹಾಲಿ ತೆಗೆದುಹಾಕಿ ಚೆನ್ನೈ, ಹೈದರಾಬಾದ್, ಅಹಮದಾಬಾದ್, ಲಕ್ನೋ ಸ್ಥಳಗಳನ್ನು ಈ ಪಟ್ಟಿಯಲ್ಲಿ ಸೇರಿಸಲಾಗಿದೆ. ಒಟ್ಟು ಈ ಬಾರಿಯ ಪಂದ್ಯದಲ್ಲಿ 16 ತಂಡಗಳು ಭಾಗವಹಿಸಲಿದೆ. ಇನ್ನು ಎಲ್ಲಾ ತಂಡದ ಆಟಗಾರರಿಗೂ ವೀಸಾ ನೀಡಲಾಗುವುದು ಎಂದು ಸಹ ಬಿಸಿಸಿಐ ತಿಳಿಸಿದೆ.
ಅಲ್ಲದೇ ಬಿಸಿಸಿಐ ಇನ್ನಷ್ಟು ಯೋಜನೆಗಳನ್ನು ಹಾಕಿಕೊಂಡಿದೆ. 2028ರಲ್ಲಿ ಲಾಸ್ ಏಂಜಲೀಸ್‍ನ ಒಲಂಪಿಕ್ ಮೇಲೂ ದೃಷ್ಟಿ ನೆಟ್ಟಿದೆ. ಇದನ್ನು ಬಿಸಿಸಿಸಿ ತುಂಬಾ ಗಂಭೀರವಾಗಿ ಪರಿಗಣಿಸಿದೆ. ಈ ಕುರಿತು ಸಕಾರಾತ್ಮಕ ಬೆಳವಣಿಗೆಗಳಾಗುತ್ತಿವೆ. ಈ ಎಲ್ಲಾ ವಿಚಾರಗಳ ಬಗ್ಗೆ ಸೆಪ್ಟೆಂಬರ್ ತಿಂಗಳಲ್ಲಿ ಮಾಹಿತಿ ಹೊರಬೀಳುವ ಸಾಧ್ಯತೆ ಇದೆ ಎಂದು ಅಪೆಕ್ಸ್ ಕೌನ್ಸಿಲ್ ಹೇಳಿದೆ.
First published: April 17, 2021, 2:32 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories