ಬದಲಾಗಿದೆ ಇಂಡೋ-ವಿಂಡೀಸ್ ವೇಳಾಪಟ್ಟಿ; ಎಲ್ಲಿ?, ಎಷ್ಟು ಗಂಟೆಗೆ?; ಇಲ್ಲಿದೆ ಸಂಪೂರ್ಣ ಮಾಹಿತಿ!

ಟೀಂ ಇಂಡಿಯಾ ಪರ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ಅನುಭವಿ ವೇಗಿ ಭುವನೇಶ್ವರ್‌ ಕುಮಾರ್‌ ಟಿ-20 ಕ್ರಿಕೆಟ್‌ ತಂಡಕ್ಕೆ ಮರಳಿದ್ದಾರೆ. ಅವರೊಂದಿಗೆ ಮೊಹಮ್ಮದ್‌ ಶಮಿ ಸಹ ಟಿ-20 ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

Vinay Bhat | news18-kannada
Updated:June 2, 2020, 1:49 PM IST
ಬದಲಾಗಿದೆ ಇಂಡೋ-ವಿಂಡೀಸ್ ವೇಳಾಪಟ್ಟಿ; ಎಲ್ಲಿ?, ಎಷ್ಟು ಗಂಟೆಗೆ?; ಇಲ್ಲಿದೆ ಸಂಪೂರ್ಣ ಮಾಹಿತಿ!
ಭಾರತ vs ವೆಸ್ಟ್​ ಇಂಡೀಸ್
  • Share this:
ಬೆಂಗಳೂರು (ನ. 27): ಭಾರತ ಹಾಗೂ ವೆಸ್ಟ್​ ಇಂಡೀಸ್ ಸರಣಿಗೆ ದಿನಗಣನೆ ಶುರುವಾಗಿದೆ. ಈಗಾಗಲೇ ಭಾರತ ತಂಡ ಪ್ರಕಟಗೊಂಡಿದ್ದು, ಶಿಖರ್ ಧವನ್ ಇಂಜುರಿಯಿಂದ ಗುಣಮುಖರಾಗದ ಕಾರಣ ಸಂಜು ಸ್ಯಾಮ್ಸನ್​ಗೆ ಅವಕಾಶ ನೀಡಲಾಗಿದೆ. ಇತ್ತ ಕ್ರಿಸ್ ಗೇಲ್ ನಾನು ಭಾರತ ವಿರುದ್ಧದ ಏಕದಿನ ಸರಣಿಗೆ ಲಭ್ಯವಿಲ್ಲ ಎಂದು ಹೇಳಿದ್ದಾರೆ.

ಭಾರತ ತವರಿನಲ್ಲಿ ಕೆರಿಬಿಯನ್ನರ ವಿರುದ್ಧ ಮೂರು ಪಂದ್ಯಗಳ ಟಿ-20 ಹಾಗೂ ಏಕದಿನ ಸರಣಿ ಆಡಲಿದೆ. ಈ ಮೊದಲು ನಿಗದಿಪಡಿಸಲಾಗಿದ್ದ ಮೊದಲ ಹಾಗೂ 3ನೇ ಟಿ-20 ಪಂದ್ಯ​ಗಳ ಸ್ಥಳ ಅದಲು ಬದಲು ಮಾಡ​ಲಾ​ಗಿದೆ. ಡಿ.6ರ ಮುಂಬೈ ಟಿ-20 ಪಂದ್ಯ ಹೈದ​ರಾ​ಬಾ​ದ್‌ ಹಾಗೂ ಡಿ.11ರ ಹೈದ​ರಾ​ಬಾದ್‌ ಟಿ-20ಯನ್ನು ಮುಂಬೈಗೆ ಸ್ಥಳಾಂತರಿಸ​ಲಾ​ಗಿ​ದೆ.

India T20I, ODI Squad, Timings for West Indies Series 2019: Sanuj Samson makes T20I comeback
ಭಾರತ vs ವೆಸ್ಟ್​ ಇಂಡೀಸ್


ಡಿ. 6 ಬಾಬ್ರಿ ಮಸೀದಿ ಉರು​ಳಿ​ಸಿದ ದಿನ​ವಾ​ಗಿದ್ದು, ಮುಂಬೈ​ ಪೊಲೀ​ಸರು ಹೈ ಅಲ​ರ್ಟ್‌ ಘೋಷಿ​ಸಿದ್ದಾರೆ. ಹೀಗಾಗಿ ಸ್ಥಳದಲ್ಲಿ ಬದಲಾವಣೆ ಮಾಡಲಿದೆ. ಸರ​ಣಿಯ ದ್ವಿತೀ​ಯ ಟಿ-20 ಪಂದ್ಯದಲ್ಲಿ ಯಾವುದೇ ಬದ​ಲಾ​ವ​ಣೆ​ ಮಾಡದೆ ಡಿ.8ರಂದು ತಿರು​ವ​ನಂತ​ಪು​ರಂನಲ್ಲಿ ನಡೆಯ​ಲಿ​ದೆ. ಎಲ್ಲಾ ಪಂದ್ಯ ಸಂಜೆ 7 ಗಂಟೆಗೆ ಆರಂಭವಾಗಲಿದೆ.

IND vs WI: ಇದೀಗ ಅಧಿಕೃತ; ವಿಂಡೀಸ್ ವಿರುದ್ಧದ ಟಿ-20 ಸರಣಿಯಿಂದ ಶಿಖರ್ ಧವನ್ ಔಟ್!

ಇನ್ನು ಮೂರು ಪಂದ್ಯಗಳ ಏಕದಿನ ಸರಣಿ ಪೈಕಿ ಡಿ. 15 ರಂದು ಚೆನ್ನೈನಲ್ಲಿ ಮೊದಲ ಪಂದ್ಯ ನಡೆದರೆ, 2ನೇ ಪಂದ್ಯ ಡಿ. 18 ರಂದು ವಿಶಾಖಪಟ್ಟಣಂ ಹಾಗೂ ಅಂತಿಮ ಪಂದ್ಯ ಡಿ. 22 ರಂದು ಕತಕ್​ನಲ್ಲಿ ಆಯೋಜಿಸಲಾಗಿದೆ. ಎಲ್ಲಾ ಏಕದಿನ ಪಂದ್ಯ ಮಧ್ಯಾಹ್ನ 2 ಗಂಟೆಗೆ ಪ್ರಾರಂಭವಾಗಲಿದೆ.

ವಿರಾಟ್‌ ಕೊಹ್ಲಿ (ನಾಯಕ), ರೋಹಿತ್‌ ಶರ್ಮಾ (ಉಪನಾಯಕ), ಶ್ರೇಯಸ್‌ ಐಯ್ಯರ್‌, ಕೇದರ್‌ ಜಾಧವ್‌, ಶಿಖರ್‌ ಧವನ್‌, ಕೆ.ಎಲ್‌ ರಾಹುಲ್‌, ರಿಷಭ್‌ ಪಂತ್‌, ಮನೀಶ್‌ ಪಾಂಡೆ, ರವೀಂದ್ರ ಜಡೇಜಾ, ಶಿವಂ ದುಬೆ, ಯಜುವೇಂದ್ರ ಚಹಲ್‌, ದೀಪಕ್‌ ಚಹರ್‌, ಭುವನೇಶ್ವರ್‌ ಕುಮಾರ್‌, ಕುಲ್ದೀಪ್‌ ಯಾದವ್‌, ಮೊಹಮ್ಮದ್‌ ಶಮಿ.
First published: November 27, 2019, 3:40 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading