India T20 World Cup Squad: ಟಿ20 ವಿಶ್ವಕಪ್​ಗೆ ಭಾರತ ತಂಡ ಪ್ರಕಟ; ಯಾರಿಗೆ ಅವಕಾಶ? ಯಾರು ಹೊರಕ್ಕೆ?

ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧದ ಪಂದ್ಯದ ಮೂಲಕ ಸೂಪರ್ 12 ಹಂತದಲ್ಲಿ ಭಾರತ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ. 

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ICC T20 ವಿಶ್ವಕಪ್ 2022 ಗಾಗಿ 15 ಸದಸ್ಯರ ತಂಡವನ್ನು(India T20 World Cup Squad) ಘೋಷಿಸಿದೆ. ರೋಹಿತ್ ಶರ್ಮಾ (Rohit Sharma) ಟೀ ಇಂಡಿಯಾವನ್ನು ಮುನ್ನಡೆಸಲಿದ್ದಾರೆ. ಅಕ್ಟೋಬರ್ 16 ರಿಂದ ನವೆಂಬರ್ 13 ರವರೆಗೆ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ವಿಶ್ವಕಪ್​ನಲ್ಲಿ ಭಾರತ ಪದಕ ಎತ್ತಿಹಿಡಿಯುವ ಭರವಸೆ ಹೊಂದಿದೆ. ಅಕ್ಟೋಬರ್ 23 ರಂದು ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್​ನಲ್ಲಿ (MCG) ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧದ ಪಂದ್ಯದ ಮೂಲಕ ಸೂಪರ್ 12 ಹಂತದಲ್ಲಿ ಭಾರತ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ. 

  2022ರ ಟಿ20 ವಿಶ್ವಕಪ್‌ಗೆ ಭಾರತ ತಂಡ
  ರೋಹಿತ್ ಶರ್ಮಾ (ಸಿ), ಕೆಎಲ್ ರಾಹುಲ್ (ವಿಸಿ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ಆರ್ ಪಂತ್ (ಡಬ್ಲ್ಯುಕೆ), ದಿನೇಶ್ ಕಾರ್ತಿಕ್ (ಡಬ್ಲ್ಯುಕೆ), ಹಾರ್ದಿಕ್ ಪಾಂಡ್ಯ, ಆರ್. ಅಶ್ವಿನ್, ವೈ ಚಾಹಲ್, ಅಕ್ಸರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಬಿ. ಕುಮಾರ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್

  ಸ್ಟ್ಯಾಂಡ್-ಬೈ ಆಟಗಾರರು

  ಮೊಹಮ್ಮದ್ ಶಮಿ, ಶ್ರೇಯಸ್ ಅಯ್ಯರ್, ರವಿ ಬಿಷ್ಣೋಯ್, ದೀಪಕ್ ಚಹಾರ್

  ಗ್ರೂಪ್ 2 ರಲ್ಲಿ ಭಾರತ, ಪಾಕಿಸ್ತಾನ, ದಕ್ಷಿಣ ಆಫ್ರಿಕಾ ಮತ್ತು ಬಾಂಗ್ಲಾದೇಶ ತಂಡಗಳಿವೆ. ಅಡಿಲೇಡ್, ಬ್ರಿಸ್ಬೇನ್, ಜಿಲಾಂಗ್, ಹೊಬಾರ್ಟ್, ಮೆಲ್ಬೋರ್ನ್, ಪರ್ತ್ ಮತ್ತು ಸಿಡ್ನಿಯಲ್ಲಿ ನಡೆಯಲಿರುವ ಪಂದ್ಯಾವಳಿಯಲ್ಲಿ 16 ರಾಷ್ಟ್ರಗಳು ಸ್ಪರ್ಧಿಸಲಿವೆ.

  ಇದನ್ನೂ ಓದಿ: Veda Krishnamurthy: ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ವೇದಾ ಕೃಷ್ಣಮೂರ್ತಿ, ಲೇಡಿ ಕ್ರಿಕೆಟರ್‌ಗೆ ಬೋಲ್ಡ್ ಆದ ಕರುನಾಡ ಆಟಗಾರ!

  ಭಾರತ ತಂಡದ ನಾಯಕನಾಗಿ ರೋಹಿತ್ ಶರ್ಮಾ ಮತ್ತು ಉಪ ನಾಯಕನಾಗಿ KL ರಾಹುಲ್ ತಂಡವನ್ನು ಮುನ್ನಡೆಸಲಿದ್ದಾರೆ. ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಏಷ್ಯಾ ಕಪ್ 2022 ರಲ್ಲಿ ತಮ್ಮ ಫಾರ್ಮ್ ಪ್ರದರ್ಶಿಸಿದ ನಂತರ ನಂತರ ಬ್ಯಾಟಿಂಗ್ ಮಾಡಲಿದ್ದಾರೆ. ಸೂರ್ಯಕುಮಾರ್ ಯಾದವ್ T20I ಕ್ರಿಕೆಟ್‌ನಲ್ಲಿ ಭಾರತದ ಅತ್ಯಂತ ಯಶಸ್ವಿ ಬ್ಯಾಟರ್ ಆಗಿದ್ದಾರೆ. ಪ್ರಸಕ್ತ ಋತುವಿನಲ್ಲಿ ಮತ್ತು ಆಸ್ಟ್ರೇಲಿಯನ್ ಪಿಚ್‌ಗಳಲ್ಲಿ ನಂ.4 ರಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ.
  Published by:ಗುರುಗಣೇಶ ಡಬ್ಗುಳಿ
  First published: