HOME » NEWS » Sports » CRICKET INDIA SQUAD FOR WTC FINALS NO PLACE FOR HARDIK PANDYA ZP

Team India: ಟೀಮ್ ಇಂಡಿಯಾದಿಂದ ಹಾರ್ದಿಕ್ ಪಾಂಡ್ಯ ಅವರನ್ನು ಕೈ ಬಿಡಲು ಇದುವೇ ಮುಖ್ಯ ಕಾರಣ..!

2018 ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದಾಗಿನಿಂದ ಅರ್ಜಾನ್ 16 ಪಂದ್ಯಗಳಲ್ಲಿ 62 ವಿಕೆಟ್ ಪಡೆದಿದ್ದಾರೆ. ಇದೇ ಕಾರಣದಿಂದ ಯುವ ಎಡಗೈ ವೇಗಿಯನ್ನು ಟೀಮ್ ಇಂಡಿಯಾ ಬಳಗಕ್ಕೆ ಆಯ್ಕೆ ಮಾಡಲಾಗಿದೆ.

news18-kannada
Updated:May 7, 2021, 10:14 PM IST
Team India: ಟೀಮ್ ಇಂಡಿಯಾದಿಂದ ಹಾರ್ದಿಕ್ ಪಾಂಡ್ಯ ಅವರನ್ನು ಕೈ ಬಿಡಲು ಇದುವೇ ಮುಖ್ಯ ಕಾರಣ..!
Hardik Pandya
  • Share this:
ನ್ಯೂಜಿಲೆಂಡ್ ವಿರುದ್ದದ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಹಾಗೂ ಇಂಗ್ಲೆಂಡ್​ ವಿರುದ್ದ ಟೆಸ್ಟ್​ ಸರಣಿಗಾಗಿ ಟೀಮ್ ಇಂಡಿಯಾವನ್ನು ಪ್ರಕಟಿಸಲಾಗಿದೆ. 20 ಸದಸ್ಯರನ್ನು ಒಳಗೊಂಡಿರುವ ತಂಡಕ್ಕೆ ಆಲ್​ರೌಂಡರ್ ರವೀಂದ್ರ ಜಡೇಜಾ ಮರಳಿದ್ದಾರೆ. ಹಾಗೆಯೇ ಗಾಯದ ಕಾರಣ ಇಂಗ್ಲೆಂಡ್ ವಿರುದ್ದ ಭಾರತದಲ್ಲಿ ನಡೆದ ಟೆಸ್ಟ್​ನಿಂದ ಹೊರಗುಳಿದಿದ್ದ ಮೊಹಮ್ಮದ್ ಶಮಿ ಕೂಡ ತಂಡದಲ್ಲಿ ಸ್ಥಾನಗಿಟ್ಟಿಸಿಕೊಂಡಿದ್ದಾರೆ. ಆದರೆ ಅತ್ತ ಕಳೆದ ಬಾರಿ ಇಂಗ್ಲೆಂಡ್ ವಿರುದ್ದದ ಸರಣಿಗೆ ಆಯ್ಕೆಯಾಗಿದ್ದ ಆಲ್​ರೌಂಡರ್ ಹಾರ್ದಿಕ್ ಪಾಂಡ್ಯ, ಕುಲದೀಪ್ ಯಾದವ್ ಹಾಗೂ ವೇಗದ ಬೌಲರ್ ನವದೀಪ್ ಸೈನಿ ಅವರನ್ನು ಈ ಬಾರಿ ತಂಡದಿಂದ ಕೈಬಿಡಲಾಗಿದೆ.

ಇಂಗ್ಲೆಂಡ್ ವಿರುದ್ಧದ ತವರಿನಲ್ಲಿ ನಡೆದ ಸರಣಿಯಲ್ಲಿ ತಂಡದ ಭಾಗವಾಗಿದ್ದ ಹಾರ್ದಿಕ್ ಪಾಂಡ್ಯ ಸದ್ಯ ಬೌಲಿಂಗ್ ಮಾಡುವ ಸ್ಥಿತಿಯಲ್ಲಿಲ್ಲ. ಹೀಗಾಗಿ ಅವರನ್ನು ಆಯ್ಕೆ ಮಾಡಲಾಗಿಲ್ಲ. ಟಿ20 ಕ್ರಿಕೆಟ್​ನಲ್ಲಿ ಬ್ಯಾಟ್ಸ್‌ಮನ್‌ ಆಗಿ ತಂಡದಲ್ಲಿ ಸ್ಥಾನ ನೀಡಬಹುದು. ಆದರೆ ಟೆಸ್ಟ್ ತಂಡದಲ್ಲಿ ಆಲ್​ರೌಂಡರ್ ಬೌಲಿಂಗ್ ಮಾಡಬೇಕಾಗುತ್ತದೆ. ಹೀಗಾಗಿ ಅವರನ್ನು ಕೈಬಿಡಲಾಗಿದೆ ಎಂದು ಆಯ್ಕೆದಾರರೊಬ್ಬರು ತಿಳಿಸಿದ್ದಾರೆ.

ಬಿಸಿಸಿಐ ಮೂಲಗಳ ಪ್ರಕಾರ, 'ಹಾರ್ದಿಕ್ ಪಾಂಡ್ಯ ಇನ್ನೂ ಸಹ ಬೌಲಿಂಗ್ ಮಾಡುವ ಸ್ಥಿತಿಯಲ್ಲಿಲ್ಲ. ಬೌಲಿಂಗ್‌ನ ಹೊರೆಯನ್ನು ನಿಭಾಯಿಸಲು ಅವರನ್ನು ಇಂಗ್ಲೆಂಡ್ ವಿರುದ್ಧದ ತಂಡದಲ್ಲಿ ಇರಿಸಲಾಗಿತ್ತು. ಆದರೆ ಆ ಪ್ರಯೋಗವು ಫಲ ನೀಡಲಿಲ್ಲ. ಹೀಗಾಗಿ ಈ ಬಾರಿ ಟೆಸ್ಟ್ ಕ್ರಿಕೆಟ್‌ಗೆ ಪರಿಗಣಿಸಲಾಗಿಲ್ಲ ಎಂದು ತಿಳಿದು ಬಂದಿದೆ.

ಇನ್ನು ಆಯ್ಕೆದಾರರು ಅಭಿಮನ್ಯು ಈಶ್ವರನ್, ಪ್ರಸಿದ್ಧ್ ಕೃಷ್ಣ, ಅವೇಶ್ ಖಾನ್ ಮತ್ತು ಅರ್ಜಾನ್ ನಾಗವಾಸ್ವಾಲಾ ಅವರನ್ನು ತಂಡದಲ್ಲಿ ಸ್ಟ್ಯಾಂಡ್‌ಬೈ ಆಗಿ ಸೇರಿಸಿಕೊಂಡಿದ್ದಾರೆ. ಇಂಗ್ಲೆಂಡ್ ವಿರುದ್ಧದ ಸರಣಿ ವೇಳೆ ಓಪನರ್ ಸ್ಟ್ಯಾಂಡ್ ಬೈ ಆರಂಭಿಕನಾಗಿ ಈಶ್ವರನ್ ಮತ್ತು ವೇಗದ ಬೌಲರ್ ಅವೇಶ್ ಕೂಡ ತಂಡದಲ್ಲಿದ್ದರು. ಈ ಬಾರಿ ಹೆಚ್ಚುವರಿ ವೇಗಿಯಾಗಿ ಪ್ರಸಿದ್ಧ್ ಕೃಷ್ಣ ಮತ್ತು ಗುಜರಾತ್ ಎಡಗೈ ವೇಗದ ಬೌಲರ್ ಅರ್ಜಾನ್ ಅವರನ್ನು ಆಯ್ಕೆ ಮಾಡಲಾಗಿದೆ.

2018 ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದಾಗಿನಿಂದ ಅರ್ಜಾನ್ 16 ಪಂದ್ಯಗಳಲ್ಲಿ 62 ವಿಕೆಟ್ ಪಡೆದಿದ್ದಾರೆ. ಇದೇ ಕಾರಣದಿಂದ ಯುವ ಎಡಗೈ ವೇಗಿಯನ್ನು ಟೀಮ್ ಇಂಡಿಯಾ ಬಳಗಕ್ಕೆ ಆಯ್ಕೆ ಮಾಡಲಾಗಿದೆ. ಇನ್ನು ಅಕ್ಷರ್ ಪಟೇಲ್ ಮೂರನೇ ಸ್ಪಿನ್ನರ್ ಆಗಿ ತಂಡದಲ್ಲಿದ್ದಾರೆ. ಹಾಗೆಯೇ ಸೀಮಿತ ಓವರ್‌ಗಳಲ್ಲಿ ಉತ್ತಮ ಫಾರ್ಮ್‌ನಲ್ಲಿರುವ ಬ್ಯಾಟ್ಸ್‌ಮನ್ ಪೃಥ್ವಿ ಶಾ ಈ ಬಾರಿ ಸೆಲೆಕ್ಟರ್‌ಗಳನ್ನು ಸೆಳೆಯಲು ಸಾಧ್ಯವಾಗಲಿಲ್ಲ. ಫಿಟ್‌ನೆಸ್ ಸಮಸ್ಯೆಯ ಕಾರಣ ವೇಗಿ ಭುವನೇಶ್ವರ್ ಕುಮಾರ್ ಅವರನ್ನು ಆಯ್ಕೆ ಮಾಡಿಲ್ಲ.
Youtube Video

ನ್ಯೂಜಿಲೆಂಡ್ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಜೂನ್ 18 ರಂದು ಸೌತಾಂಪ್ಟನ್‌ನಲ್ಲಿ ನಡೆಯಲಿದೆ. ಆ ಬಳಿಕ ಇಂಗ್ಲೆಂಡ್ ವಿರುದ್ಧದ ಸರಣಿಯು ಆಗಸ್ಟ್ 4 ರಿಂದ ನಾಟಿಂಗ್ಹ್ಯಾಮ್‌ನಲ್ಲಿ ಪ್ರಾರಂಭವಾಗಲಿದೆ. ಎರಡನೇ ಟೆಸ್ಟ್ ಆಗಸ್ಟ್ 12 ರಿಂದ ಲಾರ್ಡ್ಸ್​ನಲ್ಲಿ, ಮೂರನೆಯದು ಆಗಸ್ಟ್ 25 ರಿಂದ ಲೀಡ್ಸ್​ನಲ್ಲಿ, ನಾಲ್ಕನೆ ಟೆಸ್ಟ್​ ಸೆಪ್ಟೆಂಬರ್ 2 ರಿಂದ ಓವಲ್​ನಲ್ಲಿ ಮತ್ತು ಐದನೇ ಟೆಸ್ಟ್​ ಸೆಪ್ಟೆಂಬರ್ 10 ರಂದು ಮ್ಯಾಂಚೆಸ್ಟರ್​ನಲ್ಲಿ ನಡೆಯಲಿದೆ.ಟೀಮ್ ಇಂಡಿಯಾ ಟೆಸ್ಟ್ ತಂಡ ಹೀಗಿದೆ: ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ರೋಹಿತ್ ಶರ್ಮಾ, ಶುಭ್​ಮನ್ ಗಿಲ್, ಮಯಾಂಕ್ ಅರ್ಗವಾಲ್, ಚೇತೇಶ್ವರ್ ಪೂಜಾರ, ಹನುಮ ವಿಹಾರಿ, ರಿಷಭ್ ಪಂತ್, ಆರ್​ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಜಸ್​ಪ್ರೀತ್ ಬುಮ್ರಾ, ಇಶಾಂತ್ ಶರ್ಮಾ, ಮೊಹಮ್ಮದ್ ಸಿರಾಜ್, ಶಾರ್ದುಲ್ ಠಾಕುರ್, ಉಮೇಶ್ ಯಾದವ್ (ಕೆಎಲ್ ರಾಹುಲ್, ವೃದ್ಧಿಮಾನ್ ಸಾಹ ಫಿಟ್​ನೆಸ್ ಸಾಬೀತುಪಡಿಸಿ ತಂಡವನ್ನು ಸೇರಿಕೊಳ್ಳಲಿದ್ದಾರೆ)
Published by: zahir
First published: May 7, 2021, 10:14 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories