news18-kannada Updated:January 19, 2021, 7:41 PM IST
ಟೀಮ್ ಇಂಡಿಯಾ
ಫೆಬ್ರವರಿ ತಿಂಗಳಲ್ಲಿ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ ಸರಣಿಯ ಮೊದಲ ಎರಡು ಟೆಸ್ಟ್ ಪಂದ್ಯಗಳಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಆಸ್ಟ್ರೇಲಿಯಾ ವಿರುದ್ಧದ ವಿರುದ್ಧ ಮೊದಲ ಟೆಸ್ಟ್ ಪಂದ್ಯದ ಬಳಿಕ ಪಿತೃತ್ವ ರಜೆ ತೆಗೆದುಕೊಂಡಿದ್ದ ನಾಯಕ ವಿರಾಟ್ ಕೊಹ್ಲಿ ಮತ್ತೆ ತಂಡಕ್ಕೆ ಮರಳಿದ್ದಾರೆ. ಇನ್ನು ಗಾಯದ ಸಮಸ್ಯೆಯಿಂದ ಆಸ್ಟ್ರೇಲಿಯಾ ವಿರುದ್ಧದ ಸರಣಿ ತಪ್ಪಿಸಿಕೊಂಡಿದ್ದ ಇಶಾಂತ್ ಶರ್ಮಾ ಕೂಡ ತಂಡಕ್ಕೆ ವಾಪಾಸ್ ಆಗಿದ್ದಾರೆ. ಅಲ್ಲದೆ ಆಲ್ರೌಂಡರ್ ಆಗಿ ಹಾರ್ದಿಕ್ ಪಾಂಡ್ಯ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಹೀನಾಯ ಪ್ರದರ್ಶನ ನೀಡಿದ್ದ ಪೃಥ್ವಿ ಶಾ ಅವರಿಗೆ ಗೇಟ್ ಪಾಸ್ ನೀಡಲಾಗಿದ್ದು, ಹಾಗೆಯೇ ಆಸೀಸ್ ವಿರುದ್ದ ತಂಡದಲ್ಲಿ ಸ್ಥಾನದಲ್ಲಿ ಪಡೆದಿದ್ದ ನವದೀಪ್ ಸೈನಿ ಹಾಗೂ ನಟರಾಜನ್ ಅವರನ್ನು ಸಹ ಕೈ ಬಿಡಲಾಗಿದೆ. ಇನ್ನು ಗಾಯಗೊಂಡಿರುವ ಮೊಹಮ್ಮದ್ ಶಮಿ ಹಾಗೂ ರವೀಂದ್ರ ಜಡೇಜಾ ಚೇತರಿಸಿಕೊಳ್ಳಲು ಸಮಯವಕಾಶ ಬೇಕಿದ್ದು, ಹೀಗಾಗಿ ಅವರನ್ನು ಆಯ್ಕೆಗೆ ಪರಿಗಣಿಸಲಾಗಿಲ್ಲ.
ಟೆಸ್ಟ್ ಸರಣಿ ಪೂರ್ಣ ವೇಳಾಪಟ್ಟಿ:
1ನೇ ಟೆಸ್ಟ್, ಚೆನ್ನೈ: ಫೆಬ್ರವರಿ 5 ರಿಂದ 9
2ನೇ ಟೆಸ್ಟ್, ಚೆನ್ನೈ: ಫೆಬ್ರವರಿ 13 ರಿಂದ 17
3ನೇ ಟೆಸ್ಟ್, ಅಹಮದಾಬಾದ್ (ಹಗಲು ರಾತ್ರಿ): ಫೆಬ್ರವರಿ 24 ರಿಂದ 28 ರವರೆಗೆ
4ನೇ ಟೆಸ್ಟ್, ಅಹಮದಾಬಾದ್: ಮಾರ್ಚ್ 4 ರಿಂದ 8ಇಂಗ್ಲೆಂಡ್ ವಿರುದ್ದದ ಮೊದಲೆರಡು ಟೆಸ್ಟ್ಗೆ ಟೀಮ್ ಇಂಡಿಯಾ ಹೀಗಿದೆ:
ಆರಂಭಿಕರು: ರೋಹಿತ್ ಶರ್ಮಾ, ಶುಭ್ಮನ್ ಗಿಲ್, ಮಯಾಂಕ್ ಅಗರ್ವಾಲ್
ಮಧ್ಯಮ ಕ್ರಮಾಂಕ: ವಿರಾಟ್ ಕೊಹ್ಲಿ (ನಾಯಕ), ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ, ರಿಷಭ್ ಪಂತ್, ವೃದ್ಧಿಮಾನ್ ಸಹಾ, ಹಾರ್ದಿಕ್ ಪಾಂಡ್ಯ, ಕೆಎಲ್ ರಾಹುಲ್ (ಫಿಟ್ನೆಸ್ ಬಳಿಕ ಆಯ್ಕೆ)
ವೇಗದ ಬೌಲರ್ಗಳು: ಜಸ್ಪ್ರೀತ್ ಬುಮ್ರಾ, ಇಶಾಂತ್ ಶರ್ಮಾ, ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್.
ಸ್ಪಿನ್ನರ್ ಗಳು: ಆರ್.ಅಶ್ವಿನ್, ಕುಲದೀಪ್ ಯಾದವ್, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್
ಸ್ಟ್ಯಾಂಡ್ ಬೈ ಆಟಗಾರರು: ಕೆ.ಎಸ್.ಭರತ್ (ವಿಕೆಟ್ ಕೀಪರ್), ಅಭಿಮನ್ಯು ಈಶ್ವರನ್, ಶಹಬಾಜ್ ನದೀಮ್, ರಾಹುಲ್ ಚಾಹರ್.
ನೆಟ್ ಬೌಲರ್ಗಳು: ಅಂಕಿತ್ ರಜಪೂತ್, ಅವೇಶ್ ಖಾನ್, ಸಂದೀಪ್ ವಾರಿಯರ್.
Published by:
zahir
First published:
January 19, 2021, 7:39 PM IST