ವಿಶ್ವಕಪ್​ನಲ್ಲಿ ಟೀಂ ಇಂಡಿಯಾದ ಅತ್ಯಂತ ಕಳಪೆ ಆರಂಭ: ಹೀನಾಯ ದಾಖಲೆ ಬರೆದ ಕೊಹ್ಲಿ ಪಡೆ

India Vs New Zealand Score: ಈ ಹಿಂದೆ ಟೀಂ ಇಂಡಿಯಾ ಲೀಗ್ ಹಂತದ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 1 ವಿಕೆಟ್​ ನಷ್ಟಕ್ಕೆ 28 ರನ್​ಗಳಿಸಿರುವುದು ಹೀನಾಯ ದಾಖಲೆಯಾಗಿತ್ತು. ಆದರೆ ಈ ಸೆಮಿಫೈನಲ್​ನಲ್ಲಿ  ನ್ಯೂಜಿಲೆಂಡ್ ತಂಡವನ್ನು ಭಾರತದ ವೇಗಿಗಳು ಮೊದಲ 10 ಓವರ್​ನಲ್ಲಿ ಒಂದು ವಿಕೆಟ್​ ನಷ್ಟಕ್ಕೆ 27 ರನ್​ಗಳಿಗೆ ನಿಯಂತ್ರಿಸಿದ್ದರು.

news18
Updated:July 10, 2019, 4:30 PM IST
ವಿಶ್ವಕಪ್​ನಲ್ಲಿ ಟೀಂ ಇಂಡಿಯಾದ ಅತ್ಯಂತ ಕಳಪೆ ಆರಂಭ: ಹೀನಾಯ ದಾಖಲೆ ಬರೆದ ಕೊಹ್ಲಿ ಪಡೆ
World Cup 2019 semifinal
  • News18
  • Last Updated: July 10, 2019, 4:30 PM IST
  • Share this:
ಮ್ಯಾಂಚೆಸ್ಟರ್​ನಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್​ನಲ್ಲಿ ಟೀಂ ಇಂಡಿಯಾ ಹೀನಾಯ ದಾಖಲೆಯೊಂದನ್ನು ನಿರ್ಮಿಸಿದೆ. ವಿಶ್ವಕಪ್​ ಟೂರ್ನಿಯಲ್ಲಿ ಮೊದಲ ಹತ್ತು ಓವರುಗಳಲ್ಲಿ ಅತೀ ಕಡಿಮೆ ಮೊತ್ತ ದಾಖಲಿಸುವ ಮೂಲಕ ಕಳಪೆ ದಾಖಲೆಯೊಂದಕ್ಕೆ ಕೊಹ್ಲಿ ಪಡೆ ಪಾತ್ರರಾಗಿದ್ದಾರೆ.

ಮೊದಲ ಪವರ್​ ಪ್ಲೇನಲ್ಲಿ ಭಾರತವು 4 ವಿಕೆಟ್ ನಷ್ಟಕ್ಕೆ 24 ರನ್​ಗಳಿಸುವ ಮೂಲಕ ವರ್ಲ್ಡ್​ಕಪ್ ಟೂರ್ನಿಯಲ್ಲಿ ಮೊದಲ ಹತ್ತು ಓವರುಗಳಲ್ಲಿ ಅತೀ ಕಡಿಮೆ ಮೊತ್ತ ದಾಖಲಿಸಿದ ತಂಡ ಎಂಬ ಕುಖ್ಯಾತಿಯನ್ನು ಭಾರತ ತಂಡಗಳಿಸಿದೆ.

ಈ ಹಿಂದೆ ಟೀಂ ಇಂಡಿಯಾ ಲೀಗ್ ಹಂತದ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 1 ವಿಕೆಟ್​ ನಷ್ಟಕ್ಕೆ 28 ರನ್​ಗಳಿಸಿರುವುದು ಹೀನಾಯ ದಾಖಲೆಯಾಗಿತ್ತು. ಆದರೆ ಈ ಸೆಮಿಫೈನಲ್​ನಲ್ಲಿ  ನ್ಯೂಜಿಲೆಂಡ್ ತಂಡವನ್ನು ಭಾರತದ ವೇಗಿಗಳು ಮೊದಲ 10 ಓವರ್​ನಲ್ಲಿ ಒಂದು ವಿಕೆಟ್​ ನಷ್ಟಕ್ಕೆ 27 ರನ್​ಗಳಿಗೆ ನಿಯಂತ್ರಿಸಿದ್ದರು.

ಈ ಮುಖಾಂತರ ತಮ್ಮ ಹೆಸರಲ್ಲಿದ್ದ ಕಳಪೆ ದಾಖಲೆಯನ್ನು ನ್ಯೂಜಿಲೆಂಡ್ ಹೆಸರಿಗೆ ಹಸ್ತಾಂತರಿಸಿತ್ತು. ಆದರೀಗ ಇದೇ ಪಂದ್ಯದಲ್ಲಿ ಮತ್ತೊಮ್ಮೆ ಭಾರತದ ಅಗ್ರ ಕ್ರಮಾಂಕದ ಬ್ಯಾಟ್ಸ್​​ಮನ್​ಗಳು ಕಿವೀಸ್ ವೇಗಿಗಳ ಮುಂದೆ ಮುಗ್ಗರಿಸಿದ್ದಾರೆ. ಮೂಲಕ ಮತ್ತೊಮ್ಮೆ ಕಳಪೆ ಆರಂಭದ ಕುಖ್ಯಾತಿಗೆ ಪಾತ್ರರಾಗಿದ್ದಾರೆ.

ಇನ್ನು ಈ ಪಂದ್ಯದಲ್ಲಿ ನ್ಯೂಜಿಲೆಂಡ್ ಮೊದಲ ರನ್​ಗಳಿಸಲು ತೆಗೆದುಕೊಂಡಿದ್ದು ಬರೋಬ್ಬರಿ 17 ಎಸೆತಗಳನ್ನಾದರೆ, ಭಾರತೀಯ ಬ್ಯಾಟ್ಸ್​​ಮನ್​ಗಳು ಮೊದಲ ಬೌಂಡರಿ ಬಾರಿಸಲು 35 ಎಸೆತಗಳನ್ನು ಎದುರಿಸಿದ್ದರು.

ಇನ್ನು ವಿಶ್ವಕಪ್‌ ಆವೃತ್ತಿಯ ಇತರೆ ಕಡಿಮೆ ಪವರ್‌ಪ್ಲೇ ಸ್ಕೋರ್‌ಗಳು ಇಂತಿವೆ:
ವೆಸ್ಟ್ ಇಂಡೀಸ್ - 29/2 ( vs ಭಾರತ)ನ್ಯೂಜಿಲೆಂಡ್ - 30/2 ( vs ವೆಸ್ಟ್​ ಇಂಡೀಸ್)
ನ್ಯೂಜಿಲೆಂಡ್ - 31/1 ( vs ಆಸ್ಟ್ರೇಲಿಯಾ)
ವೆಸ್ಟ್ ಇಂಡೀಸ್ - 32/1 ( vs ಬಾಂಗ್ಲಾದೇಶ)
ಭಾರತ - 34/1 ( vs ದಕ್ಷಿಣ ಆಫ್ರಿಕಾ)
ದಕ್ಷಿಣ ಆಫ್ರಿಕಾ - 34/2 ( vs ಭಾರತ).
First published:July 10, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ