IND V/S WI: 3ನೇ ಪಂದ್ಯದಲ್ಲೂ ಮಣ್ಣು ಮುಕ್ಕಿಸೋಕೆ ಭಾರತ ಸಜ್ಜು! ಇವತ್ತಾದ್ರೂ ಗೆದ್ದು ಮಾನ ಉಳಿಸಿಕೊಳ್ತಾರಾ ವೆಸ್ಟ್​ ಇಂಡೀಸ್?

ಎರಡನೇ ಟಿ-20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಭಾರತ 8 ರನ್ ಗಳಿಂದ ಗೆಲುವು ಸಾಧಿಸಿತ್ತು. ಈ ಮೂಲಕ 2-0 ಅಂತರದಲ್ಲಿ ಸರಣಿ(Series)ವನ್ನು ವಶಪಡಿಸಿಕೊಂಡಿದೆ. ಇಂದಿನ ಪಂದ್ಯ ಗೆದ್ದು ವೈಟ್​ ವಾಶ್(White Wash)​ ಮಾಡುವ ತವಕದಲ್ಲಿ ಟೀಮ್​ ಇಂಡಿಯಾ ಆಟಗಾರರಿದ್ದಾರೆ.

ರೋಹಿತ್​ ಶರ್ಮಾ್​, ಕೀರನ್ ಪೊಲಾರ್ಡ್

ರೋಹಿತ್​ ಶರ್ಮಾ್​, ಕೀರನ್ ಪೊಲಾರ್ಡ್

  • Share this:
ಭಾರತ(Team India) ಮತ್ತು ವೆಸ್ಟ್​ ಇಂಡೀಸ್(West Indies) ನಡುವಿನ 3ನೇ ಟಿ-20 ಪಂದ್ಯ(3rd T-20 Match) ಇಂದು ನಡೆಯಲಿದೆ. ಈಗಾಗಲೇ ಎರಡು ಟಿ-20 ಪಂದ್ಯಗಳಲ್ಲಿ ಭಾರತ ದಿಗ್ವಿಜಯ ಸಾಧಿಸಿದೆ. ಇಂದಿನ ಪಂದ್ಯದಲ್ಲೂ ವೆಸ್ಟ್​ ಇಂಡೀಸ್​ ಆಟಗಾರರಿಗೆ ಮಣ್ಣು ಮುಕ್ಕಿಸೋಕೆ ಟೀ ಇಂಡಿಯಾ ಸಜ್ಜಾಗಿದ್ದಾರೆ. ಅತ್ತ ಈ ಪಂದ್ಯವನ್ನಾದರೂ ಗೆದ್ದು ಮಾನ ಉಳಿಸಿಕೊಳ್ಳುವ ತವಕದಲ್ಲಿ ವೆಸ್ಟ್​ ಇಂಡೀಸ್​ ಆಟಗಾರರಿದ್ದಾರೆ. ಸಂಜೆ 7 ಗಂಟೆಗೆ ಪಂದ್ಯ ಆರಂಭವಾಗಲಿದ್ದು, ಭಾನುವಾರ(Sunday) ಆಗಿರುವು ಕಾರಣ ಪಂದ್ಯದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಕೊಲ್ಕತ್ತಾದ ಈಡನ್ ಗಾರ್ಡನ್(Eden Garden) ಕ್ರೀಡಾಂಗಣದಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟಿ-20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಭಾರತ ಆರು ವಿಕೆಟ್ ಗಳಿಂದ ಗೆಲುವು(Win) ಸಾಧಿಸಿತ್ತು. ಎರಡನೇ ಟಿ-20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಭಾರತ 8 ರನ್ ಗಳಿಂದ ಗೆಲುವು ಸಾಧಿಸಿತ್ತು. ಈ ಮೂಲಕ 2-0 ಅಂತರದಲ್ಲಿ ಸರಣಿ(Series)ವನ್ನು ವಶಪಡಿಸಿಕೊಂಡಿದೆ. ಇಂದಿನ ಪಂದ್ಯ ಗೆದ್ದು ವೈಟ್​ ವಾಶ್(White Wash)​ ಮಾಡುವ ತವಕದಲ್ಲಿ ಟೀಮ್​ ಇಂಡಿಯಾ ಆಟಗಾರರಿದ್ದಾರೆ.

3ನೇ ಟಿ20ಗೆ ಭಾರತದಲ್ಲಿ ದೊಡ್ಡ ಬದಲಾವಣೆ

ಈಡನ್ ಗಾರ್ಡನ್ಸ್ ಮೈದಾನ ಈ ರೋಚಕ ಕದನಕ್ಕೆ ಸಾಕ್ಷಿಯಾಗಲಿದ್ದು, ಹೈವೋಲ್ಟೇಜ್ ಪಂದ್ಯ ನಿರೀಕ್ಷಿಸಲಾಗಿದೆ. ಇನ್ನೊಂದೆಡೆ ಭಾರತಕ್ಕೆ ಆಗಮಿಸಿದ ಬಳಿಕ ಗೆಲುವನ್ನೇ ಕಂಡಿರದ ವೆಸ್ಟ್‌ ಇಂಡೀಸ್‌ಗೆ ಇದು ಕೊನೆಯ ಅವಕಾಶ. ಈ ಪಂದ್ಯವನ್ನು ಗೆದ್ದು ಮಾನ ಉಳಿಸಿಕೊಳ್ಳುತ್ತಾರಾ ಅಂದು ಕಾದು ನೋಡಬೇಕಿದೆ. ದ್ವಿತೀಯ ಟಿ20ಯಲ್ಲಿ ಅರ್ಧಶತಕಗಳನ್ನು ಸಿಡಿಸಿದ್ದ ವಿರಾಟ್‌ ಕೊಹ್ಲಿ ಹಾಗೂ ರಿಷಭ್‌ ಪಂತ್  ಇಬ್ಬರೂ ಬಯೋ ಬಬಲ್‌ ತೊರೆದಿದ್ದಾರೆ. ಸತತವಾಗಿ ಕ್ರಿಕೆಟ್ ಆಡುತ್ತಿರುವ ಹಿನ್ನೆಲೆಯಲ್ಲಿ ಇವರಿಗೆ ಬಿಸಿಸಿಐ ವಿಶ್ರಾಂತಿ ನೀಡಿದ್ದು, ಇಂದಿನ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ.

ಇದನ್ನೂ ಓದಿ: ಪಾಕಿಸ್ತಾನದಲ್ಲೂ ಇದ್ದಾರೆ 'ವಿರಾಟ್' ಫ್ಯಾನ್ಸ್! ಫೋಟೋ ಹಿಡಿದು ಅಭಿಮಾನಿಯ 'ಶಾಂತಿ ಸಂದೇಶ'

ಯುವ ಪ್ರತಿಭೆಗಳಿಗೆ ಪ್ಲೇಯಿಂಗ್​ ಇಲೆವೆನ್​ನಲ್ಲಿ ಅವಕಾಶ!

ವಿರಾಟ್​ ಕೊಹ್ಲಿ ಹಾಗೂ ರಿಷಭ್​ ಪಂತ್​ ಇಂದು ಪಂದ್ಯ ಆಡುವುದು ಡೌಟ್​. ಹೀಗಾಗಿಇವರ ಬದಲು ಯುವ ಪ್ರತಿಭೆಗಳಿಗೆ ಪ್ಲೇಯಿಂಗ್‌ ಇಲೆವೆನ್‌ನಲ್ಲಿ ಆಡುವ ಅವಕಾಶ ಸಿಗಲಿದೆ. ಭಾರತಕ್ಕೆ ಕಳೆದೆರಡು ಪಂದ್ಯಗಳಲ್ಲಿ ಉತ್ತಮ ಓಪೆನಿಂಗ್​ ಸಿಕ್ಕಿಲ್ಲ. ಮೊದಲೆರಡು ಟಿ20 ಪಂದ್ಯಗಳಲ್ಲಿ ಇಶಾನ್ ಕಿಶನ್ ಅವರು ನಾಯಕ ರೋಹಿತ್ ಅವರೊಂದಿಗೆ ಇನಿಂಗ್ಸ್ ಆರಂಭಿಸಿದ್ದರು. ಆದರೆ, ಇಂದಿನ ಪಂದ್ಯದಲ್ಲಿ ರುತುರಾಜ್ ಆರಂಭಿಕನಾಗಿ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ.

ವಿರಾಟ್​ ಕೊಹ್ಲಿ ಜಾಗದಲ್ಲಿ ಆಡ್ತಾರೆ ಅಯ್ಯರ್​!

ಇನ್ನೂ ಇಂದಿನ ಪಂದ್ಯದಲ್ಲಿ ವಿರಾಟ್​ ಕೊಹ್ಲಿ ಆಡದೇ ಇರುವುದರಿಂದ ವರ ಮೂರನೇ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ಆಡುವುದು ಖಚಿತವಾಗಿದೆ.ಸೂರ್ಯಕುಮಾರ್ ಯಾದವ್ ಎಂದಿನಂತೆ 4ನೇ ಕ್ರಮಾಂಕದಲ್ಲಿ ಆಡಿದರೆ, ಇಶಾನ್ ಕಿಶನ್ 5ನೇ ಸ್ಥಾನದಲ್ಲಿ ಬ್ಯಾಟ್ ಬೀಸಲಿದ್ದಾರೆ. ಭರವಸೆ ಮೂಡಿಸಿರುವ ಆಲ್ರೌಂಡರ್ ವೆಂಕಟೇಶ್ ಅಯ್ಯರ್​ಗೆ 6ನೇ ಕ್ರಮಾಂಕ ಫಿಕ್ಸ್ ಆಗಿದೆ.

ಇದನ್ನೂ ಓದಿ: ವಿರಾಟ್ ಕೊಹ್ಲಿ ನೀಡಿದ್ದ ಉಡುಗೊರೆ ನೋಡಿ ಕಣ್ಣೀರಿಟ್ಟಿದ್ದ ಸಚಿನ್ ತೆಂಡೂಲ್ಕರ್

ಭಾರತ ಸಂಭಾವ್ಯ ಪ್ಲೇಯಿಂಗ್ ಇಲೆವೆನ್​!

ರುತುರಾಜ್ ಗಾಯಕ್ವಾಡ್, ರೋಹಿತ್ ಶರ್ಮಾ (ನಾಯಕ), ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್ (ವಿಕೆಟ್ ಕೀಪರ್), ವೆಂಕಟೇಶ್ ಅಯ್ಯರ್, ದೀಪಕ್ ಚಹರ್, ಭುವನೇಶ್ವರ್ ಕುಮಾರ್, ರವಿ ಬಿಷ್ಟೋಯ್, ಕುಲ್ದೀಪ್ ಯಾದವ್, ಆವೇಶ್ ಖಾನ್.

ಅಂತರಾಷ್ಟ್ರೀಯ ಕ್ರಿಕೆಟ್​ಗೆ ಆವೇಶ್​ ಖಾನ್​ ಪಾದಾರ್ಪಣೆ!

ಆವೇಶ್​ ಖಾನ್​.. ಈ ಹೆಸರು ಐಪಿಎಲ್​ನಲ್ಲಿ ಚಿರಪರಿಚಿತ. ಘಟಾನುಘಟಿ ಬ್ಯಾಟ್ಸ್​​ಮನ್​ಗಳಿಗೆ ತಮ್ಮ ಬೌಲಿಂಗ್​ ಮೂಲಕವೇ ಆವೇಶ್​ ಖಾನ್​ ನಡುಕ ಹುಟ್ಟಿಸಿದ್ದಾರೆ. ಇಂದಿನ ಪಂದ್ಯದಲ್ಲಿ ಟೀಂ ಇಂಡಿಯಾ ಪರ ಆಡುವ ಮೂಲಕ ಆವೇಶ್​ ಖಾನ್​ ಅಂತರಾಷ್ಟ್ರೀಯ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಲಿದ್ದಾರೆ. ದೀಪಕ್​ ಚಹರ್​ ಅಥವಾ ಹರ್ಷಲ್​ ಪಟೇಲ್​ರನ್ನ ಇಂದಿನ ಪಂದ್ಯದಲ್ಲಿ ಕೈಬಿಟ್ಟು, ಇವರಿಬ್ಬರಲ್ಲಿ ಒಬ್ಬರ ಜಾಗಕ್ಕೆ ಆವೇಶ್ ಖಾನ್​ ಸೇರಲಿದ್ದಾರೆ.
Published by:Vasudeva M
First published: