ವಿಶ್ವಕಪ್ 2019: ಭಾರತ-ಪಾಕ್ ಹೈವೋಲ್ಟೇಜ್​​ ಪಂದ್ಯದ ಟಿಕೆಟ್​ ಸೋಲ್ಡ್​ ಔಟ್​

ವಿಶ್ವದ ಪ್ರಮುಖ 10 ತಂಡಗಳು ಆಂಗ್ಲರ ನಾಡಲ್ಲಿ ನಡೆಯಲಿರುವ ಈ ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದು, ಭಾರತ ಜೂನ್​ 16 ರಂದು ಪಾಕಿಸ್ತಾನವನ್ನು ಎದುರಿಸಲಿದೆ. ಕ್ರೀಡಾಂಗಣದ ಆಡಳಿತ ಮಂಡಳಿ ಟಿಕೆಟ್​ ಖರೀದಿಯನ್ನು ಪ್ರಾರಂಭ ಮಾಡಿದ 48 ಗಂಟೆಗಳ ಒಳಗೆ ಎಲ್ಲಾ ಟಿಕೆಕ್​ಗಳು ಖರೀದಿಯಾಗಿವೆ. ಅದರಲ್ಲು ಭಾರತದಿಂದ ಅತಿ ಹೆಚ್ಚು ಟಿಕೆಟ್​​ ಖರೀದಿ ಆಗಿವೆ ಎಂದು ಆಡಳಿತ ಮಂಡಳಿ ತಿಳಿಸಿದೆ.

news18
Updated:May 6, 2019, 9:22 PM IST
ವಿಶ್ವಕಪ್ 2019: ಭಾರತ-ಪಾಕ್ ಹೈವೋಲ್ಟೇಜ್​​ ಪಂದ್ಯದ ಟಿಕೆಟ್​ ಸೋಲ್ಡ್​ ಔಟ್​
ಇಂಡೋ- ಪಾಕ್ ವಿಶ್ವಕಪ್​ ಟೂರ್ನಿ
  • News18
  • Last Updated: May 6, 2019, 9:22 PM IST
  • Share this:
ನವದೆಹಲಿ(ಮೇ.06): ವಿಶ್ವಕಪ್​ ಮಹಾಸಮರಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇದೆ. ಮೇ.30 ರಿಂದ ವಿಶ್ವಕಪ್​ ಟೂರ್ನಿ ಆರಂಭವಾಗಲಿದ್ದು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಅದರಲ್ಲು ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ವೀಕ್ಷಣೆಗೆ ಕ್ರಿಕೆಟ್ ಜಗತ್ತೇ ಎದುರು ನೋಡುತ್ತಿದೆ. ಹೀಗಿರುವಾಗ ಈ ಹೈವೋಲ್ಟೇಜ್ ಪಂದ್ಯದ ಟಿಕೆಟ್​ಗಳು ಸೋಲ್ಡ್​​ ಔಟ್​ ಆಗಿವೆ.

ವಿಶ್ವದ ಪ್ರಮುಖ 10 ತಂಡಗಳು ಆಂಗ್ಲರ ನಾಡಲ್ಲಿ ನಡೆಯಲಿರುವ ಈ ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದು, ಭಾರತ ಜೂನ್​ 16 ರಂದು ಪಾಕಿಸ್ತಾನವನ್ನು ಎದುರಿಸಲಿದೆ. ಕ್ರೀಡಾಂಗಣದ ಆಡಳಿತ ಮಂಡಳಿ ಟಿಕೆಟ್​ ಖರೀದಿಯನ್ನು ಪ್ರಾರಂಭ ಮಾಡಿದ 48 ಗಂಟೆಗಳ ಒಳಗೆ ಎಲ್ಲಾ ಟಿಕೆಕ್​ಗಳು ಖರೀದಿಯಾಗಿವೆ. ಅದರಲ್ಲು ಭಾರತದಿಂದ ಅತಿ ಹೆಚ್ಚು ಟಿಕೆಟ್​​ ಖರೀದಿ ಆಗಿವೆ ಎಂದು ಆಡಳಿತ ಮಂಡಳಿ ತಿಳಿಸಿದೆ.

ಇದನ್ನೂ ಓದಿ: 56 ಇಂಚಿನ ‘ಬಾಕ್ಸರ್ ಪ್ರಧಾನಿ’ಯಿಂದ ಗುರು ಆಡ್ವಾಣಿ ಮುಖಕ್ಕೆ ಮೊದಲ ಪಂಚ್: ರಾಹುಲ್ ವ್ಯಂಗ್ಯ

ವಿಶ್ವಕಪ್​​ಗೆ ಬಿಸಿಸಿಐ ಈಗಾಗಲೇ 15 ಮಂದಿ ಆಟಗಾರರ ಹೆಸರನ್ನು ಪ್ರಕಟ ಮಾಡಿದೆ. ಟೂರ್ನಿಗೆ ಬೇಕಾದ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಟೀಂ ಇಂಡಿಯಾ ಮೇ 25 ಮತ್ತು 28 ರಂದು ನಡೆಯುವ ಅಭ್ಯಾಸ ಪಂದ್ಯದಲ್ಲಿ ನ್ಯೂಜಿಲೆಂಡ್​ ಮತ್ತು ಬಾಂಗ್ಲಾದೇಶವನ್ನು ಎದುರಿಸಲಿದೆ, ಲೀಗ್​ ಹಂತದ ಮೊದಲ ಪಂದ್ಯವನ್ನು ದಕ್ಷಿಣಾ ಆಫ್ರಿಕಾ ವಿರುದ್ಧ ಜೂನ್ 5 ರಂದು ಆಡಲಿದೆ.
First published:May 6, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ