HOME » NEWS » Sports » CRICKET INDIA PACER T NATARAJAN POSTS AN ADORABLE POST FOR NEWBORN DAUGHTER ZP

T Natarajan: ನಮ್ಮನ್ನು ಹೆತ್ತವರನ್ನಾಗಿ ಆಯ್ಕೆ ಮಾಡಿದ್ದಕ್ಕೆ ಧನ್ಯವಾದಗಳು: ಮುದ್ದಾದ ಮಗಳ ಹೆಸರು ತಿಳಿಸಿದ ನಟರಾಜನ್

ಸದ್ಯ ನಟರಾಜನ್ ಕುಟುಂಬದೊಂದಿಗೆ ತವರಿನಲ್ಲಿ ಕಾಲ ಕಳೆಯುತ್ತಿದ್ದು, ಇಂಗ್ಲೆಂಡ್​ ವಿರುದ್ಧದ ಟಿ20 ಸರಣಿಗಾಗಿ ಸಿದ್ಧತೆಯಲ್ಲಿದ್ದಾರೆ. ಇದೇ ಕಾರಣದಿಂದ ವಿಜಯ ಹಝಾರೆ ಟೂರ್ನಿಯಿಂದ ಸಹ ಬಿಸಿಸಿಐ ಸೂಚನೆ ಮೇರೆಗೆ ಅವರನ್ನು ಹೊರಗಿಡಲಾಗಿದೆ.

news18-kannada
Updated:February 22, 2021, 10:19 PM IST
T Natarajan: ನಮ್ಮನ್ನು ಹೆತ್ತವರನ್ನಾಗಿ ಆಯ್ಕೆ ಮಾಡಿದ್ದಕ್ಕೆ ಧನ್ಯವಾದಗಳು: ಮುದ್ದಾದ ಮಗಳ ಹೆಸರು ತಿಳಿಸಿದ ನಟರಾಜನ್
T Natarajan
  • Share this:
ಟೀಮ್ ಇಂಡಿಯಾ ವೇಗಿ ಟಿ ನಟರಾಜನ್ ಇದೇ ಮೊದಲ ಬಾರಿಗೆ ತಮ್ಮ ಕುಟುಂಬದ ಮುದ್ದಾದ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋ ಮೂಲಕ ತಮ್ಮ ಮುದ್ದಿನ ಮಗಳ ಹೆಸರನ್ನು ಸಹ ಬಹಿರಂಗಪಡಿಸಿದ್ದಾರೆ. ಹೌದು, ಕಳೆದ ಸೀಸನ್​ ಐಪಿಎಲ್ ಅಂತ್ಯದ ವೇಳೆ ನಟರಾಜನ್ ಅವರು ಹೆಣ್ಣು ಮಗುವಿನ ತಂದೆಯಾಗಿದ್ದರು. ಇದಾಗ್ಯೂ ಬಯೋ ಬಬಲ್ ಕಾರಣದಿಂದ ನಟರಾಜನ್ ಅವರು ದುಬೈನಿಂದ ಆಸ್ಟ್ರೇಲಿಯಾಗೆ ಸರಣಿಗೆ ತೆರಳಿದ್ದರು.

ಇದರಿಂದಾಗಿ ಸೆಪ್ಟೆಂಬರ್ ತಿಂಗಳಿನಿಂದ ಜನವರಿವರೆಗೆ ನಟರಾಜನ್ ಅವರು ಕುಟುಂಬ ವರ್ಗದಿಂದ ದೂರವಿದ್ದರು. ಆ ಬಳಿಕ ಭಾರತಕ್ಕೆ ಮರಳಿದರೂ ತಮಿಳುನಾಡು ವೇಗಿ ತಮ್ಮ ಮಗಳ ಹೆಸರಿನ ಬಗ್ಗೆ ಸುಳಿವು ನೀಡಿರಲಿಲ್ಲ. ಇದೀಗ ನಾಮಕರಣವಾದ ಬೆನ್ನಲ್ಲೇ ಕುಟುಂಬದ ಫೋಟೋದೊಂದಿಗೆ ಭಾವನಾತ್ಮಕ ಪೋಸ್ಟ್​ವೊಂದನ್ನು ಹಂಚಿಕೊಂಡಿದ್ದಾರೆ.

"ನಮ್ಮ ಪುಟ್ಟ ದೇವತೆ ಹನ್ವಿಕಾ, ನೀನು ನಮ್ಮ ಜೀವನದ ಸುಂದರವಾದ ಉಡುಗೊರೆ. ನಮ್ಮ ಜೀವನ ಮತ್ತಷ್ಟು ಸಂತೋಷವಾಗಿರಲು ನೀನು ಕಾರಣ. ನಮ್ಮನ್ನು ಹೆತ್ತವರನ್ನಾಗಿ ಆಯ್ಕೆ ಮಾಡಿದ್ದಕ್ಕೆ ಧನ್ಯವಾದಗಳು. ಯಾವಾಗಲೂ ನಿನ್ನನ್ನು ಪ್ರೀತಿಸುತ್ತೇನೆ" ಎಂದು ಟಿ ನಟರಾಜನ್ ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ. ಇದರೊಂದಿಗೆ ನಟರಾಜನ್ ತಮ್ಮ ಮಗಳ ಹೆಸರನ್ನು ಸಹ ತಿಳಿಸಿದ್ದಾರೆ.

ಸದ್ಯ ನಟರಾಜನ್ ಕುಟುಂಬದೊಂದಿಗೆ ತವರಿನಲ್ಲಿ ಕಾಲ ಕಳೆಯುತ್ತಿದ್ದು, ಇಂಗ್ಲೆಂಡ್​ ವಿರುದ್ಧದ ಟಿ20 ಸರಣಿಗಾಗಿ ಸಿದ್ಧತೆಯಲ್ಲಿದ್ದಾರೆ. ಇದೇ ಕಾರಣದಿಂದ ವಿಜಯ ಹಝಾರೆ ಟೂರ್ನಿಯಿಂದ ಸಹ ಬಿಸಿಸಿಐ ಸೂಚನೆ ಮೇರೆಗೆ ಅವರನ್ನು ಹೊರಗಿಡಲಾಗಿದೆ.
Published by: zahir
First published: February 22, 2021, 10:19 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories