ಟೀಂ ಇಂಡಿಯಾದ ವೇಗಿ ಮೊಹಮ್ಮದ್ ಸಿರಾಜ್ ಅವರ ತಂದೆ ಮೊಹಮ್ಮದ್ ಫೌಸ್ (53) ಇಂದು ನಿಧನರಾಗಿದ್ದಾರೆ. ಶ್ವಾಸಕೋಶ ಕಾಯಿಲೆಯಿಂದ ಬಳಲುತ್ತಿದ್ದ ಅವರು ಹೈದರಾಬಾದ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಸದ್ಯ ಸಿರಾಜ್ ಟೀಂ ಇಂಡಿಯಾದ ಜೊತೆಗೆ ಆಸ್ಟ್ರೇಲಿಯಾದಲ್ಲಿದ್ದು, ಅಂತಿಮ ವಿಧಿ ವಿಧಾನಕ್ಕೆ ಹಾಜರಾಗಲು ಸಾಧ್ಯವಾಗುತಿಲ್ಲ ಎಂದು ತಿಳಿದುಬಂದಿದೆ.
ಮೊಹಮ್ಮದ್ ಸಿರಾಜ್ (26) ಸಿಡ್ನಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಅಭ್ಯಾಸದಿಂದ ಹಿಂತಿರುಗಿ ಬಂದ ಮೇಲೆ ತಂದೆ ಸಾವಿನ ಸುದ್ದಿಯನ್ನು ಅವರಿಗೆ ತಿಳಿಯಿತು ಎಂದು ಕ್ರೀಡಾ ವೆಬ್ಸೈಟ್ವೊಂದು ವರದಿ ಮಾಡಿದೆ.
ತಂದೆಯ ಕುರಿತಾಗಿ ಮಾತನಾಡಿದ್ದ ಸಿರಾಜ್, ‘ನನ್ನ ತಂದೆಯ ಆಸೆ ಹೀಗಿತ್ತು, ನನ್ನ ಮಗ ನೀನು, ನಿನ್ನನ್ನು ದೇಶ ಹೆಮ್ಮೆ ಪಡುವಂತೆ ಮಾಡಬೇಕು. ನಾನು ತಂದೆಯ ಮಾತನ್ನು ಈಡೇರಿಸುತ್ತೇನೆ’ ಎಂದು ಹೇಳಿದ್ದಾರೆ.
![]()
ಮೊಹಮ್ಮದ್ ಸಿರಾಜ್ -ತಂದೆ ಮೊಹಮ್ಮದ್ ಫೌಸ್
ನಂತರ ಮಾತು ಮುಂದುವರಿಸಿದ ಅವರು ’ಇದು ಆಘಾತಕಾರಿ ಸುದ್ದಿ, ನನ್ನ ಜೀವನದಲ್ಲಿ ಸದಾ ಬೆಂಬಲಿಸುತ್ತಿದ್ದ ತಂದೆಯನ್ನು ಕಳೆದುಕೊಂಡಿದ್ದೇನೆ. ನಾನು ದೇಶಕ್ಕಾಗಿ ಆಡುವುದು ಅವರ ಕನಸಾಗಿತ್ತು’ ಎಂದರು.
ಸದ್ಯ ಕೊರೋನಾ ಕ್ವಾರಂಟೈನ್ ನಿಯಮಗಳಿರುವುದರಿಂದ ಸಿರಾಜ್ ಅವರಿಗೆ ಭಾರತಕ್ಕೆ ಬರಲು ಮತ್ತು ತಂದೆಯ ಅಂತಿಮ ವಿಧಿ ವಿಧಾನಕ್ಕೆ ಭಾಗಿಯಾಗಲು ಆಗುತ್ತಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ