T20 World Cup- ನ್ಯೂಜಿಲೆಂಡ್​ಗೆ ಗೆಲುವು; ಸೆಮಿಸ್ ರೇಸ್​ನಿಂದ ಭಾರತ ಔಟ್; ನಾಳೆ ಮ್ಯಾಚ್ ಡಮ್ಮಿ

India out of T20 World Cup Semifinal Race- ಅಬುಧಾಬಿಯಲ್ಲಿ ನಡೆದ ಎರಡನೇ ಗುಂಪಿನ ಪಂದ್ಯದಲ್ಲಿ ಅಫ್ಘಾನಿಸ್ತಾನ್ ವಿರುದ್ಧ ನ್ಯೂಜಿಲೆಂಡ್ ಗೆಲುವು ಸಾಧಿಸುವುದರೊಂದಿಗೆ ಭಾರತ ತಂಡದ ಸೆಮಿಫೈನಲ್ ಆಸೆ ಕಮರಿಹೋಗಿದೆ.

ನ್ಯೂಜಿಲೆಂಡ್ ಬ್ಯಾಟರ್ಸ್

ನ್ಯೂಜಿಲೆಂಡ್ ಬ್ಯಾಟರ್ಸ್

  • Share this:
    ಅಬುಧಾಬಿ, ನ. 07: ಮೊದಲೆರಡು ಪಂದ್ಯಗಳನ್ನ ಸೋತಿದ್ದು ಭಾರತಕ್ಕೆ (Indian Cricket Team) ಕೊನೆಗೂ ಮುಳುವಾಗಿ ಪರಿಣಿಮಿಸಿತು. ಕೊನೆಯ ಪಂದ್ಯ ಆಡುವ ಮುನ್ನವೇ ಭಾರತ ಈ ವಿಶ್ವಕಪ್​ನ ಸೆಮಿಫೈನಲ್ ರೇಸ್​ನಿಂದ (India out of T20 World Cup Semifinal Race) ಹೊರಬಿದ್ದಿದೆ. ನ್ಯೂಜಿಲೆಂಡ್ ವಿರುದ್ಧ ಅಫ್ಘಾನ್ನರು ಗೆಲುವು ಸಾಧಿಸುವಂತೆ ಕಾತರದಿಂದ ಕಾಯುತ್ತಿದ್ದ ಭಾರತ ತಂಡ ಹಾಗೂ ಅಭಿಮಾನಿಗಳಿಗೆ ನಿರಾಸೆ ಆಗಿದೆ. ಇಂದು ನಡೆದ ಎರಡನೇ ಗುಂಪಿನ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ನ್ಯೂಜಿಲೆಂಡ್ 8 ವಿಕೆಟ್​ಗಳಿಂದ ಸೋಲಿಸಿತು (New Zealand beat Afghanistan). ಭಾರತದ ಸೆಮಿಫೈನಲ್ ಆಸೆ ಜೀವಂತವಾಗಿಬೇಕಿದ್ದರೆ ನ್ಯೂಜಿಲೆಂಡ್ ಈ ಪಂದ್ಯದಲ್ಲಿ ಸೋಲುವುದು ಅಗತ್ಯ ಇತ್ತು. ಇದೀಗ ನಾಳೆ ಭಾರತ ಮತ್ತು ನಮೀಬಿಯಾ ನಡುವಿನ ಪಂದ್ಯ ಅಕ್ಷರಶಃ ನಾಮಕಾವಸ್ತೆಯದ್ದಾಗಿದೆ.

    ಇಂದು ಅಫ್ಘಾನಿಸ್ತಾನ್ ತಂಡ ಗೆಲ್ಲಲು ಒಡ್ಡಿದ 125 ರನ್ ಗುರಿಯನ್ನ ನ್ಯೂಜಿಲೆಂಡ್ ತುಸು ನಿರಾಯಾಸವಾಗಿ ಬೆನ್ನಟ್ಟಿತು. 11 ಬಾಲ್ ಬಾಕಿ ಇರುವಂತೆ ಗೆಲುವು ಸಾಧಿಸಿತು. ನಾಯಕ ಕೇನ್ ವಿಲಿಯಮ್ಸನ್ ಅಜೇಯ 40 ರನ್ ಗಳಿಸಿದರು. ಡೆವೋನ್ ಕಾನ್ವೇ ಅಜೇಯ 36 ರನ್ ಗಳಿಸಿದರು. ಅಫ್ಘಾನಿಸ್ತಾನದ ಬೌಲಿಂಗ್ ಟ್ರಂಪ್ ಕಾರ್ಡ್ ರಷೀದ್ ಖಾನ್ ಒಂದು ವಿಕೆಟ್ ಗಳಿಸಿ ಟಿ20 ಕ್ರಿಕೆಟ್​ನಲ್ಲಿ ಹೊಸ ಮೈಲಿಗಲ್ಲು ಮುಟ್ಟಿದರು. ಟಿ20 ಕ್ರಿಕೆಟ್​ನಲ್ಲಿ 400 ವಿಕೆಟ್ ಗಡಿ ಮುಟ್ಟಿದ ವಿಶ್ವದ ನಾಲ್ಕನೇ ಬೌಲರ್ ಎನಿಸಿದರು.

    ನಜೀಬುಲ್ಲಾ ಆಟ ಅಫ್ಘಾನಿಸ್ತಾನಕ್ಕೆ ಜೀವ: 

    ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟ್ ಮಾಡಿದ ಅಫ್ಘಾನಿಸ್ತಾನ್ ಆರಂಭಿಕ ಆಘಾತ ಅನುಭವಿಸಿತು. ಇಡೀ ಟೂರ್ನಿಯಲ್ಲಿ ಅಫ್ಘಾನಿಸ್ತಾನಕ್ಕೆ ಮೇಲಿನ ಕ್ರಮಾಂಕದ ಅಸ್ಥಿರತೆಯೇ ಹೆಚ್ಚಾಗಿ ಕಾಡಿದ್ದು. ಈ ಪಂದ್ಯದಲ್ಲೂ ಅದೇ ಮುಂದುವರಿಯಿತು. ಹಜ್ರತುಲ್ಲಾ ಜಜೈ, ಮೊಹಮ್ಮದ್ ಶಹಜಾದ್, ರಹಮುಲ್ಲಾ ಗುರ್ಬಜ್ ಬೇಗ ಪೆವಿಲಿಯನ್​ಗೆ ಮರಳಿದರು.

    ಆದರೆ, ನಜೀಬುಲ್ಲಾ ಜಡ್ರನ್ ಅವರು ಉತ್ತಮವಾಗಿ ಅಫ್ಘನ್ ಇನ್ನಿಂಗ್ಸ್​ಗೆ ಜೀವ ತುಂಬಿದರು. ಆಕರ್ಷಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಜಡ್ರಾನ್ 48 ಬಾಲ್​ನಲ್ಲಿ 73 ರನ್ ಗಳಿಸಿದರು. ಇದರಿಂದಾಗಿ ತಂಡ 124 ರನ್ ಗಳಿಸಲು ಸಾಧ್ಯವಾಯಿತು.

    ಪಂದ್ಯ ಗೆದ್ದರೂ ಸೆಮಿಫೈನಲ್​ಗೆ ಏರದ ಸೌತ್ ಆಫ್ರಿಕಾ:

    ನಿನ್ನೆ ಮೊದಲ ಗುಂಪಿನಲ್ಲಿ ಎರಡು ನಿರ್ಣಾಯಕ ಪಂದ್ಯಗಳು ನಡೆದವು. ಮೊದಲ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಆಸ್ಟ್ರೇಲಿಯಾ 8 ವಿಕೆಟ್​ಗಳಿಂದ ಜಯಭೇರಿ ಭಾರಿಸಿತು. ಎರಡನೇ ಪಂದ್ಯದಲ್ಲಿ ಸೌತ್ ಆಫ್ರಿಕಾ ತಂಡ ಇಂಗ್ಲೆಂಡ್ ವಿರುದ್ಧ ದೊಡ್ಡ ಅಂತರದ ಗೆಲುವು ಸಾಧಿಸುವುದು ಅನಿವಾರ್ಯವಾಗಿತ್ತು. ಆದರೆ, 10 ರನ್​ಗಳ ಅಂತರ ಗೆಲುವಿಗಷ್ಟೇ ತೃಪ್ತಿಪಟ್ಟುಕೊಂಡಿತು. ಮೊದಲು ಬ್ಯಾಟ್ ಮಾಡಿದ ಹರಿಣಗಳ ಪಡೆ 189 ರನ್ ಕಲೆಹಾಕಿತು. ಸೆಮಿಫೈನಲ್ ತಲುಪಬೇಕಾದರೆ ಇಂಗ್ಲೆಂಡನ್ನು 135 ರನ್​ಗಳಿಗೆ ಸೀಮಿತಗೊಳಿಸಬೇಕಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಕೊನೆಗೆ ಅಂತಿಮವಾಗಿ ಗೆಲುವಿನ ನಗೆಯೊಂದಿಗೆ ದಕ್ಷಿಣ ಆಫ್ರಿಕಾಗೆ ತನ್ನ ವಿಶ್ವಕಪ್ ಪಯಣ ಅಂತ್ಯಗೊಳಿಸಿದ ಸಮಾಧಾನ ಸಿಕ್ಕಿತು. ಸೌತ್ ಆಫ್ರಿಕಾದ ವೇಗದ ಬೌಲರ್ ರಬಡ ಹ್ಯಾಟ್ರಿಕ್ ಗಳಿಸಿದ ಖುಷಿ ಪಡೆದರು.

    ಇದನ್ನೂ ಓದಿ: T20 World Cup 2022- ಮುಂದಿನ ವಿಶ್ವಕಪ್ ಸೂಪರ್-12ಗೆ ಈ 8 ತಂಡಗಳಿಗೆ ಪ್ರವೇಶ; ವಿಂಡೀಸ್​ಗಿಲ್ಲ ಭಾಗ್ಯ

    ಸೆಮಿಫೈನಲ್​ಗೆ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ: ಮೊದಲ ಗುಂಪಿನಲ್ಲಿ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಅಗ್ರಸ್ಥಾನ ಗಳಿಸಿ ಸೆಮಿಫೈನಲ್ ಪ್ರವೇಶ ಮಾಡಿವೆ. ಈ ಗುಂಪಿನಲ್ಲಿ ಇಂಗ್ಲೆಂಡ್, ಆಸ್ಟ್ರೇಲಿಯಾ ಮತ್ತು ಸೌತ್ ಆಫ್ರಿಕಾ ತಂಡಗಳು ಎಂಟು ಅಂಕ ಗಳಿಸಿದವಾದರೂ ಇಂಗ್ಲೆಂಡ್ ಅಧಿಕ ರನ್ ರೇಟ್ ಕಾರಣದಿಂದ ಟಾಪರ್ ಆಯಿತು. ಸೌತ್ ಆಫ್ರಿಕಾ ಕಡಿಮೆ ರನ್ ರೇಟ್ ಕಾರಣ ನಾಕೌಟ್ ಪ್ರವೇಶದಿಂದ ವಂಚಿತವಾಯಿತು.

    ಸೆಮಿಫೈನಲ್ ಎದುರಾಳಿಗಳು:

    ಎರಡನೇ ಗುಂಪಿನಲ್ಲಿ ಪಾಕಿಸ್ತಾನ್ ಮತ್ತು ನ್ಯೂಜಿಲೆಂಡ್ ತಂಡಗಳು ಸೆಮಿಫೈನಲ್ ಪ್ರವೇಶಿಸಿವೆ. ಸ್ಕಾಟ್ಲೆಂಡ್ ವಿರುದ್ಧ ಪಾಕಿಸ್ತಾನ್ ಗೆಲುವು ಸಾಧಿಸಿದರೆ ಅಗ್ರಸ್ಥಾನ ಪಡೆಯುತ್ತದೆ. ಆಗ ಸೆಮಿಫೈನಲ್​ನಲ್ಲಿ ಇಂಗ್ಲೆಂಡ್ ವರ್ಸಸ್ ನ್ಯೂಜಿಲೆಂಡ್, ಹಾಗೂ ಪಾಕಿಸ್ತಾನ್ ವರ್ಸಸ್ ಆಸ್ಟ್ರೇಲಿಯಾ ಮಧ್ಯೆ ಸೆಮಿಫೈನಲ್ ಪಂದ್ಯಗಳು ನಡೆಯಲಿವೆ.

    ಇದನ್ನೂ ಓದಿ: R Ashwin- ಆರ್ ಅಶ್ವಿನ್ ಯಶಸ್ಸಿನ ಗುಟ್ಟೇನು? ಟಿ20 ಬೌಲರ್ ಆಗಿ ರೂಪುಗೊಂಡ ಕಥೆ ರೋಚಕ

    ಸ್ಕೋರು ವಿವರ:

    ಅಫ್ಘಾನಿಸ್ತಾನ್ 20 ಓವರ್ 124/8
    (ನಜೀಬುಲ್ಲಾ ಜಡ್ರಾನ್ 73, ಗುಲ್ಬದಿನ್ ನಯೀಬ್ 15, ಮೊಹಮ್ಮದ್ ನಬಿ 14 ರನ್ – ಟ್ರೆಂಟ್ ಬೌಲ್ಟ್ 17/3, ಟಿಮ್ ಸೌದಿ 24/2)

    ನ್ಯೂಜಿಲೆಂಡ್ 18.1 ಓವರ್ 125/2
    (ಕೇನ್ ವಿಲಿಯಮ್ಸನ್ ಅಜೇಯ 40, ಡೆವೋನ್ ಕಾನ್​ವೇ ಅಜೇಯ 36, ಮಾರ್ಟಿನ್ ಗಪ್ಟಿಲ್ 28, ಡರಿಲ್ ಮಿಚೆಲ್ 17 ರನ್)
    Published by:Vijayasarthy SN
    First published: